For Quick Alerts
  ALLOW NOTIFICATIONS  
  For Daily Alerts

  ಜಗ್ಗೇಶ್ ಸಾರಥ್ಯದ 'ಮೇಲುಕೋಟೆ ಮಂಜ' ಬರ್ತಾವ್ನೆ !

  By Bharath Kumar
  |

  'ಎದ್ದೇಳು ಮಂಜುನಾಥ', 'ಮಂಜುನಾಥ ಬಿ.ಎ.ಎಲ್.ಎಲ್.ಬಿ' ಚಿತ್ರಗಳ ನಂತರ ನವರಸ ನಾಯಕ ಜಗ್ಗೇಶ್ 'ಮೇಲುಕೋಟೆ ಮಂಜ'ನ ಅವತಾರವೆತ್ತಿದ್ದರು. ಆದ್ರೆ, ಎರಡು ವರ್ಷ ಕಳೆಯುತ್ತಾ ಬಂದರೂ 'ಮೇಲುಕೋಟೆ ಮಂಜ'ನ ದರ್ಶನವಾಗಲಿಲ್ಲ ಅಲ್ವಾ ಅಂತ ಜಗ್ಗೇಶ್ ಅಭಿಮಾನಿ ಬಳಗ ಕೇಳುತ್ತಲೇ ಇತ್ತು.

  ಈಗ, ಜಗ್ಗೇಶ್ ಅಭಿಮಾನಿಗಳ ಈ ಪ್ರಶ್ನೆಗೆ ಉತ್ತರ ಸಿಗುವ ಟೈಮ್ ಬಂದಿದೆ. ಹೌದು, ಸೆಟ್ಟೇರಿದಾಗಿನಿಂದಲು ಕುತೂಹಲ ಹುಟ್ಟುಹಾಕಿದ್ದ 'ಮೇಲುಕೋಟೆ ಮಂಜ' ಚಿತ್ರ ರಿಲೀಸ್ ಗೆ ರೆಡಿಯಾಗಿದೆ.[ಜಗ್ಗೇಶ್ ಆಕ್ಷನ್ ಕಟ್ ನಲ್ಲಿ 'ಮೇಲುಕೋಟೆ ಮಂಜ' ]

  'ಮೇಲುಕೋಟೆ ಮಂಜ' ಸೆನ್ಸಾರ್ ಮಂಡಳಿಯಿಂದ ಪಾಸಾಗಿದ್ದು, ಬೆಳ್ಳಿತೆರೆಗೆ ಬರಲು ದಿನಗಣನೆ ಶುರುವಾಗಿದೆ. ಇಷ್ಟು ದಿನ ಜಗ್ಗೇಶ್ ಅವರನ್ನ 'ಮೇಲುಕೋಟೆ ಮಂಜ' ಅವರತಾರದಲ್ಲಿ ನೋಡಬೇಕು ಅಂತ ಕಾದಿದ್ದ ಪ್ರೇಕ್ಷಕರಿಗೆ ಈ ಮೂಲಕ ಗುಡ್ ನ್ಯೂಸ್ ಸಿಕ್ಕಿದೆ. ಮುಂದೆ ಓದಿ....

  ಸೆನ್ಸಾರ್ ಮುಗಿಸಿದ 'ಮೇಲುಕೋಟೆ ಮಂಜ'

  ಸೆನ್ಸಾರ್ ಮುಗಿಸಿದ 'ಮೇಲುಕೋಟೆ ಮಂಜ'

  ಸೈಲಾಂಟ್ ಆಗಿ ಶೂಟಿಂಗ್ ಮುಗಿಸಿರುವ 'ಮೇಲುಕೋಟೆ ಮಂಜ' ಸಿನಿಮಾ, ಸೆನ್ಸಾರ್ ಮಂಡಳಿಯಿಂದ ಕ್ಲೀನ್ ಚೀಟ್ ಪಡೆದಿದೆ. ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ.

  ಜಗ್ಗೇಶ್ ನಟನೆ-ನಿರ್ದೇಶನ

  ಜಗ್ಗೇಶ್ ನಟನೆ-ನಿರ್ದೇಶನ

  'ಮೇಲುಕೋಟೆ ಮಂಜ' ಚಿತ್ರದಲ್ಲಿ ಜಗ್ಗೇಶ್ ನಾಯಕ ನಟನಾಗಿ ಅಭಿನಯಿಸುವುದರ ಜೊತೆಗೆ ಡೈರೆಕ್ಷನ್ ಕ್ಯಾಪ್ ಕೂಡ ತೊಟ್ಟಿದ್ದಾರೆ. ಈ ಮೊದಲು ಜಗ್ಗೇಶ್ ಅವರ ಮಗ ಗುರುರಾಜ್ ಅಭಿನಯಿಸಿದ್ದ 'ಗುರು' ಚಿತ್ರವನ್ನ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದರು. ಈಗ 'ಗುರು' ಚಿತ್ರದ ನಂತರ ಮತ್ತೆ ಆಕ್ಷನ್ ಕಟ್ ಹೇಳಿದ್ದು, ಇದು ಜಗ್ಗೇಶ್ ನಿರ್ದೇಶನದ ಎರಡನೇ ಸಿನಿಮಾವಾಗಿದೆ.

  ಪೂರ್ಣ ಪ್ರಮಾಣದ ಜಗ್ಗೇಶ್ ಸಿನಿಮಾ

  ಪೂರ್ಣ ಪ್ರಮಾಣದ ಜಗ್ಗೇಶ್ ಸಿನಿಮಾ

  'ಮೇಲುಕೋಟೆ ಮಂಜ' ಜಗ್ಗೇಶ್ ವೃತ್ತಿ ಜೀವನದಲ್ಲಿ ತುಂಬಾ ವಿಶೇಷವಾದ ಸಿನಿಮಾ. ಈ ಚಿತ್ರದಲ್ಲಿ ಜಗ್ಗೇಶ್ ನಟ ಹಾಗೂ ನಿರ್ದೇಶನ ಮಾತ್ರವಲ್ಲ, ಕಥೆ-ಚಿತ್ರಕಥೆ-ಸಂಭಾಷಣೆ ಹೀಗೆ ಎಲ್ಲವೂ ಜಗ್ಗೇಶ್ ಅವರ ಕೈ ಚಳಕದಲ್ಲಿ ಮೂಡಿದೆ.

  ಐಂದ್ರಿತಾ ರೈ ನಾಯಕಿ

  ಐಂದ್ರಿತಾ ರೈ ನಾಯಕಿ

  ಇದೇ ಮೊದಲ ಬಾರಿಗೆ ನಟಿ ಐಂದ್ರಿತಾ ರೈ ಜಗ್ಗೇಶ್ ಅವರ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಔಟ್ ಅಂಡ್ ಔಟ್ ಕಾಮಿಡಿ ಸಬ್ಜೆಕ್ಟ್ ಹೊಂದಿರುವ ಈ ಚಿತ್ರದಲ್ಲಿ ಐಂದ್ರಿತಾ ರೈ ಅವರ ಗ್ಲಾಮರ್ ಇದೆ..

  ಪವರ್ ಸ್ಟಾರ್ ಸಾಂಗ್

  ಪವರ್ ಸ್ಟಾರ್ ಸಾಂಗ್

  ಈ ಚಿತ್ರಕ್ಕೆ ಗಿರಿಧರ್ ದಿವಾನ್ ಅವರು ಸಂಗೀತ ನೀಡಿದ್ದಾರೆ. ವಿಶೇಷ ಅಂದ್ರೆ 'ಮೇಲುಕೋಟೆ ಮಂಜ' ಚಿತ್ರದ ಒಂದು ಹಾಡಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದ್ವನಿಯಾಗಿದ್ದಾರೆ.

  ಇತರೆ ಕಲಾವಿದರು

  ಇತರೆ ಕಲಾವಿದರು

  ಜಗ್ಗೇಶ್, ಐಂದ್ರಿತಾ ರೈ ಜೊತೆ ರಂಗಾಯಣ ರಘು, ಸಾಧುಕೋಕಿಲ, ಕುರಿ ಪ್ರತಾಪ್ ಮುಂತಾದರು ಇದ್ದಾರೆ. ಇನ್ನೂ ದಾಸರಿ ಸೀನು ಛಾಯಾಗ್ರಹಣ, ಕೆ.ಎಂ.ಪ್ರಕಾಶ್‌ ಸಂಕಲನ, ಥ್ರಿಲ್ಲರ್‌ ಮಂಜು ಸಾಹಸ ನಿರ್ದೇಶನ, ತ್ರಿಭುವನ್, ಮಾಲೂರು ಶ್ರೀನಿವಾಸ್‌ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

  ರಿಲೀಸ್ ಯಾವಾಗ

  ರಿಲೀಸ್ ಯಾವಾಗ

  ಶ್ರೀಕೊಂಡದ ಬೀರೇಶ್ವರ ಫಿಲಂಸ್‌ ಲಾಂಛನದಲ್ಲಿ ಆರ್‌.ಕೃಷ್ಣ ಅವರು ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ, ಡಿಸೆಂಬರ್ ತಿಂಗಳಲ್ಲಿ ಜಗ್ಗೇಶ್ ಅವರ 'ಮೇಲುಕೋಟೆ ಮಂಜ' ಚಿತ್ರಮಂದಿರಕ್ಕೆ ಬರುವ ಸಾದ್ಯತೆಯಿದೆ ಎನ್ನಲಾಗುತ್ತಿದೆ.

  English summary
  Navarasa Nayaka Jaggesh Directed 'Melukote Manja' is all set for release in December. Aindrita Ray is paired opposite Jaggesh in the Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X