ಸೂತಕದ ನಡುವೆ ಒಂದು ಖುಷಿ ಸುದ್ದಿ ಹಂಚಿಕೊಂಡ 'ಬೆಲ್ ಬಾಟಂ' ನಿರ್ದೇಶಕ ಜಯತೀರ್ಥ

ಜಯತೀರ್ಥ ನಿರ್ದೇಶನದ, ರಿಷಬ್ ಶೆಟ್ಟಿ, ಹರಿಪ್ರಿಯಾ ಅಭಿನಯದ 'ಬೆಲ್ ಬಾಟಂ' ಗೆದ್ದ ಸಂಭ್ರಮದಲ್ಲಿ ಚಿತ್ರತಂಡ ಅದರ ಎರಡನೆಯ ಭಾಗವನ್ನೂ ಆರಂಭಿಸಿತ್ತು. ಈಗ ಕೊರೊನಾ ವೈರಸ್ ಪಿಡುಗಿನ ಕಾರಣದಿಂದ ಚಿತ್ರೀಕರಣ ಸ್ಥಗಿತಗೊಂಡಿದೆ. ಈ ನಡುವೆ ನಿರ್ದೇಶಕ ಜಯತೀರ್ಥ ಸಂತಸದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.

Recommended Video

ಕೊರೊನಾದಿಂದ ಸರಳ ವಿವಾಹವಾಗಲು ಮುಂದಾದ ನಿಖಿಲ್ | Nikhil weds Revathi | Filmibeat kannada

ಈಗಿನ ಪರಿಸ್ಥಿತಿಯಲ್ಲಿ ಮನರಂಜನೆಯ ಕುರಿತು ಜನರಿಗೆ ಆಸಕ್ತಿಗಳಿಲ್ಲ. ಕೊರೊನಾ ವೈರಸ್ ಎಂಬಮಹಾಮಾರಿ ಎಲ್ಲರಲ್ಲಿಯೂ ಆತಂಕ ಮೂಡಿಸಿದೆ. ಸಿನಿಮಾ,ಕ್ರೀಡೆಯ ಮನರಂಜನೆಗಳು ಈ ವೇಳೆ ಬೇಕಾಗಿಲ್ಲ ಎನ್ನುವ ಮನಸ್ಥಿತಿ ಉಂಟಾಗಿದೆ. ಇದನ್ನು ನಿರ್ದೇಶಕ ಜಯತೀರ್ಥ ಸೂತಕದ ಛಾಯೆ ಎಂದೇ ವ್ಯಾಖ್ಯಾನಿಸಿದ್ದಾರೆ. ಆದರೆ ಈ ಸಂಕಷ್ಟದ ನಡುವೆಯೇ ಸಂಭ್ರಮಿಸುವ ಸಂಗತಿಯೊಂದಿದೆ ಎಂದು ತಿಳಿಸಿದ್ದಾರೆ.

ಮುಂಬೈನ ಸಸಿಸಿಎಫ್‌ಎ ಗೌರವ

ಮುಂಬೈನ ಸಸಿಸಿಎಫ್‌ಎ ಗೌರವ

ಕಳೆದ ವರ್ಷ ಬಿಡುಗಡೆಯಾಗಿದ್ದ 'ಬೆಲ್ ಬಾಟಂ' ಚಿತ್ರ ಮುಂಬೈನ ಪ್ರತಿಷ್ಠಿತ 'ಕ್ರಿಟಿಕ್ಸ್ ಚಾಯ್ಸ್ ಫಿಲಮ್ ಅವಾರ್ಡ್'ನ (ಸಿಸಿಎಫ್ಎ) ಮೂರು ಪ್ರಮುಖ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಇದರಿಂದ ಬೆಲ್ ಬಾಟಂ ಮತ್ತೊಂದು ಗರಿಯನ್ನು ಮುಡಿಗೇರಿಸಿಕೊಂಡಂತೆ ಆಗಿದೆ.

ಸೂತಕದ ಮಧ್ಯೆ ಸಂಭ್ರಮ

ಸೂತಕದ ಮಧ್ಯೆ ಸಂಭ್ರಮ

'ಪ್ರಿಯರೇ.. ಸೂತಕದ ಮಧ್ಯೆಯೂ ಸಂಭ್ರಮ.. ಸಧ್ಯಕ್ಕೆ ಅನಿವಾರ್ಯ ಆಗಿದೆ.. ಏಕೆಂದರೆ ಅದು ನನ್ನ ವೃತ್ತಿ ಧರ್ಮ.. We are in show business ಈ ಕಾರಣದಿಂದ ನಿಮಗೆ ತಿಳಿಸಬೇಕಾದ good news ಇದೆ. ಮುಂಬೈನ Critics Choice Fiilm Awardನ ಈ ಸಲದ ಪ್ರಮುಖ 3 ಪ್ರಶಸ್ತಿಗಳನ್ನು ಬೆಲ್ ಬಾಟಂ ತನ್ನದಾಗಿಸಿಕೊಂಡಿದೆ ಎಂದು ಜಯತೀರ್ಥ ತಿಳಿಸಿದ್ದಾರೆ.

ಮೂರು ಪ್ರಶಸ್ತಿಗಳು

ಮೂರು ಪ್ರಶಸ್ತಿಗಳು

ಕನ್ನಡ ವಿಭಾಗದಲ್ಲಿ 'ಬೆಲ್ ಬಾಟಂ'ಗೆ ಅತ್ತುತ್ತಮ ನಿರ್ದೇಶಕ ಪ್ರಶಸ್ತಿ ಜಯತೀರ್ಥ ಅವರಿಗೆ ಒಲಿದಿದೆ. 'ಬೆಲ್ ಬಾಟಂ' ಚಿತ್ರಕ್ಕೆ ಕಥೆ ಹೊಸೆದ ಖ್ಯಾತ ಕಥೆಗಾರ ಟಿ.ಕೆ. ದಯಾನಂದ್ ಅವರಿಗೆ ಅತ್ಯುತ್ತಮ ಕಥೆ ಪ್ರಶಸ್ತಿ ದೊರಕಿದೆ. ಹಾಗೂ ಅತ್ಯುತ್ತಮ ಚಿತ್ರ ಪ್ರಶಸ್ತಿ ಕೂಡ 'ಬೆಲ್ ಬಾಟಂ'ಗೆ ದೊರಕಿದೆ.

ರಿಷಿ, ಬಿ. ಜಯಶ್ರೀ ಅವರಿಗೆ ಪ್ರಶಸ್ತಿ

ರಿಷಿ, ಬಿ. ಜಯಶ್ರೀ ಅವರಿಗೆ ಪ್ರಶಸ್ತಿ

ಇದರ ನಡುವೆ ಹೇಮಂತ್ ರಾವ್ ನಿರ್ದೇಶನದ 'ಕವಲುದಾರಿ' ಚಿತ್ರದ ನಟನೆಗೆ ರಿಷಿ ಮತ್ತು ಪಿ. ಶೇಷಾದ್ರಿ ನಿರ್ದೇಶನದ 'ಮೂಕಜ್ಜಿಯ ಕನಸುಗಳು' ಚಿತ್ರದ ಅಭಿನಯಕ್ಕೆ ಹಿರಿಯ ನಟಿ ಬಿ. ಜಯಶ್ರೀ ಅವರಿಗೆ ಅತ್ಯುತ್ತಮ ನಟ-ನಟಿ ಪ್ರಶಸ್ತಿ ದೊರಕಿವೆ.

ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರಶಸ್ತಿ

ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರಶಸ್ತಿ

ಈ ತಿಂಗಳ ಆರಂಭದಲ್ಲಿ ಅಂತ್ಯಗೊಂಡ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕೂಡ ಬೆಲ್ ಬಾಟಂಗೆ ಪ್ರಶಸ್ತಿ ಒಲಿದಿತ್ತು. ಜನಪ್ರಿಯ ಚಿತ್ರ ವಿಭಾಗದಲ್ಲಿ ಎರಡನೆಯ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು 'ಬೆಲ್ ಬಾಟಂ' ಪಡೆದುಕೊಂಡಿತ್ತು.

More from Filmibeat

English summary
Jayathirtha directed Kannada movie Bell Bottom has bagged 3 major awards from Mumbai's CCFA.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X