'ಕೆಡಿ' ಒಂದೇ ಅಲ್ಲ.. ಜೋಗಿ ಪ್ರೇಮ್ ನಿರ್ದೇಶಿಸಿದ ಸಿನಿಮಾಗಳು ವಿವಾದಕ್ಕೆ ಸಿಲುಕಿದ್ದೇ ಹೆಚ್ಚು?

ಜೋಗಿ ಪ್ರೇಮ್ ನಿರ್ದೇಶಿಸಿದ 'ಕೆಡಿ' ಸಿನಿಮಾದ ಹಾಡು ವಿವಾದಕ್ಕೆ ಸಿಲುಕಿದೆ. ಇತ್ತೀಚೆಗಷ್ಟೇ ಅದ್ಧೂರಿಯಾಗಿ ಈ ಹಾಡನ್ನು 'ಕೆಡಿ ದಿ ಡೆವಿಲ್' ತಂಡ ರಿಲೀಸ್ ಮಾಡಿತ್ತು. ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರಿಂದ 5 ಭಾಷೆಗಳಲ್ಲೂ ನಾಲ್ಕನೇ ಸಾಂಗ್ ರಿಲೀಸ್ ಆಗಿತ್ತು. ಬಾಲಿವುಡ್ ನಟಿ ನೂರಾ ಫತೇಹಿ ಹಾಗೂ ಸಂಜಯ್ ದತ್ ಕಾಂಬಿನೇಷನ್‌ನಲ್ಲಿ ಶೂಟ್ ಆಗಿರುವ ಹಾಡೀಗ ವಿವಾದದ ಸುಳಿಗೆ ಸಿಲುಕಿದೆ.

"ಸರಸೆ ನಿನ್ನ ಸೆರಗ.." ಹಾಡಿನ ಸಾಹಿತ್ಯಕ್ಕೆ ಕನ್ನಡ ಅಷ್ಟೇ ಅಲ್ಲ ನಾಲ್ಕೂ ಭಾಷೆಗಳಲ್ಲಿಯೂ ವಿರೋಧ ವ್ಯಕ್ತವಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶದಿಂದ ನೆಟ್ಟಿಗರು ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಡಬಲ್ ಮೀನಿಂಗ್ ಸಾಹಿತ್ಯವಿರುವ ಹಾಡಿನ ಜನರಷ್ಟೇ ಅಲ್ಲ, ಬಾಲಿವುಡ್‌ನ ಗಾಯಕರು ಕೂಡ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಇನ್ನೂ ಜೋಗಿ ಪ್ರೇಮ್ ಪ್ರತಿಕ್ರಿಯೆ ನೀಡಿಲ್ಲ.

Jogi Preeti Yake Bhoomi Melide Raj The Show Man to KD The Devil Prem movie controversies

ಹಾಗಂತ ಜೋಗಿ ಪ್ರೇಮ್‌ಗೆ ಈ ವಿವಾದ ಹೊಸದೇನು ಅಲ್ಲ. ಈ ಹಿಂದೆ ಅವರು ನಿರ್ದೇಶಿಸಿದ ಸಿನಿಮಾಗಳು ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದವು. ಜೋಗಿಯಿಂದ ಹಿಡಿದು ದಿ ವಿಲನ್‌ವರೆಗೂ ಒಂದಲ್ಲ ಒಂದು ವಿವಾದ ಇವರ ಸಿನಿಮಾಗಳಿಗೆ ಸುತ್ತಿಕೊಳ್ಳುತ್ತಲೇ ಇದೆ. ಕೆಲವರು ಇದನ್ನು ಪಬ್ಲಿಸಿಟಿ ಗಿಮಿಕ್ ಅಂತಲೂ ಕಾಮೆಂಟ್ ಮಾಡಿದ್ದು ಇದೆ. ಹಾಗಿದ್ದರೆ, ಕೆಡಿ ಮುನ್ನ ಆದ ವಿವಾದಗಳೇನು? ತಿಳಿಯುವುದಕ್ಕೆ ಮುಂದೆ ಓದಿ.

'ಜೋಗಿ' - ಬಿನ್‌ ಲ್ಯಾಡನ್ ಸಾಂಗ್

ಪ್ರೇಮ್‌ ವೃತ್ತಿ ಬದುಕಿನಲ್ಲಿ ಅತೀ ದೊಡ್ಡ ಸಕ್ಸಸ್ ಕೊಟ್ಟ ಸಿನಿಮಾ 'ಜೋಗಿ'. ಕನ್ನಡ ಚಿತ್ರರಂಗದ ಬಾಕ್ಸಾಫೀಸ್ ದಾಖಲೆಗಳನ್ನು ಉಡೀಸ್ ಮಾಡಿದ್ದ ಸಿನಿಮಾವಿದು. ಶಿವಣ್ಣ ವೃತ್ತಿ ಬದುಕಿನ ಮೆಗಾ ಬ್ಲಾಕ್ಸರ್‌ ಸಿನಿಮಾಗಳಲ್ಲಿ ಇದೂ ಒಂದು. ಈ ಸಿನಿಮಾದಲ್ಲೂ ಪ್ರೇಮ್ ಐಟಂ ಸಾಂಗ್ ಅನ್ನು ಇಟ್ಟಿದ್ದರು. "ಬಿನ್ ಲ್ಯಾಡನ್ನು ನನ್ನ ಮಾವ" ಬಿಡುಗಡೆ ವೇಳೆ ವಿವಾದ ಹೊತ್ತಿಕೊಂಡಿತ್ತು. ಅಂತರಾಷ್ಟ್ರೀಯ ಭಯೋತ್ಪಾದಕ ಬಿಗ್ ಲ್ಯಾಡನ್‌ ಹೆಸರನ್ನು ಬಳಸಿದ್ದಕ್ಕೆ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಈ ಹಾಡಿನಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಎಂ ಕೃಷ್ಣ ಹಾಗೂ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಹೆಸರನ್ನು ಉಲ್ಲೇಖ ಮಾಡಲಾಗಿತ್ತು. ಇದು ಕೆಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ, ತೀವ್ರ ಸ್ವರೂಪ ಪಡೆದುಕೊಂಡಿಲ್ಲ.

'ಪ್ರೀತಿ ಏಕೆ ಭೂಮಿ ಮೇಲಿದೆ?'

'ಜೋಗಿ' ಬಳಿಕ ಪ್ರೇಮ್ ಹೀರೊ ಆದ ಸಿನಿಮಾ 'ಪ್ರೀತಿ ಏಕೆ ಭೂಮಿ ಮೇಲಿದೆ?. ಈ ಸಿನಿಮಾದ "ಸುಳ್ಳೆ ಸುಳ್ಳು" ಹಾಡು ಕೂಡ ವಿವಾದಕ್ಕೆ ಸಿಲುಕಿತ್ತು. ಪ್ರೇಮ್ ಸಾಹಿತ್ಯವಿದ್ದ ಈ ಹಾಡಿನ ಒಂದು ಸಾಲು ಶ್ರೀರಾಮ ಸೇನೆಯ ನಿದ್ದೆ ಕೆಡಿಸಿತ್ತು. ಇದರಲ್ಲಿ "ರಾಮ ಹನುಮ ಸುಳ್ಳು.. ಸೀತಾ ಮಾತ ಸುಳ್ಳು.. ರಾವಣ ಕದ್ದಿದ್ದು ಸುಳ್ಳು.. ಲಂಕಾ ಸುಟ್ಟಿದ್ದು ಸುಳ್ಳು.." ಎಂದು ಬರೆಯಲಾಗಿತ್ತು. ಈ ಹಾಡಿನ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ಸೆನ್ಸಾರ್ ಅಧಿಕಾರಿಗಳ ವಿರುದ್ಧವೂ ಶ್ರೀರಾಮ ಸೇನೆ ಸಿಡಿದೆದ್ದಿತ್ತು.

Jogi Preeti Yake Bhoomi Melide Raj The Show Man to KD The Devil Prem movie controversies

'ಡಿಕೆ'- ವಿವಾದ

ಪ್ರೇಮ್ ನಾಯಕನಾಗಿ ನಟಿಸಿದ ಮತ್ತೊಂದು ಸಿನಿಮಾ 'ಡಿಕೆ' ಕೂಡ ವಿವಾದಕ್ಕೆ ಸಿಲುಕಿತ್ತು. ಟೈಟಲ್‌ ನೋಡಿ ಇದು ಡಿಕೆ ಶಿವಕುಮಾರ್ ಲೈಫ್‌ ಸ್ಟೋರಿ ಅಂತ ಗುಲ್ಲೆದ್ದಿತ್ತು. ಬಳಿಕ ಎಚ್‌ಡಿಕೆ ಹಾಗೂ ರಾಧಿಕಾ ಕುಮಾರಸ್ವಾಮಿ ಲವ್ ಸ್ಟೋರಿ ಅಂತನೂ ಹಬ್ಬಿತ್ತು. ಅದಕ್ಕೆಲ್ಲ ಕ್ಲಾರಿಟಿ ಕೊಟ್ಟ ಜೋಗಿಗೆ ಶಾಕ್ ಕಾದಿತ್ತು. ಬಾಲಿವುಡ್‌ನಿಂದ ಸನ್ನಿ ಲಿಯೋನ್‌ನ ಕರ್ಕೊಂಡು "ಸೇಸಮ್ಮ" ಮಾಡಿದ್ದರು. ಅದರೂ ಈ ಹಾಡು ವಿವಾದಕ್ಕೆ ಸಿಗಲಿಲ್ಲ. "ಇಂಡಿಯಾ-ಪಾಕಿಸ್ತಾನ ಒಂದಾಗೊಯ್ತಲ್ಲಪ್ಪೋ" ಹಾಡು ಚಿಕ್ಕದಾಗಿ ವಿವಾದದ ಕಿಡಿ ಹೊತ್ತಿಸಿತ್ತು.

'ದಿ ವಿಲನ್'- ವಿವಾದ

ಶಿವಣ್ಣ ಹಾಗೂ ಕಿಚ್ಚ ಸುದೀಪ್ ಇಬ್ಬರು ಸೂಪರ್‌ಸ್ಟಾರ್‌ಗಳನ್ನು ಒಟ್ಟಿಗೆ ಸೇರಿಸಿ 'ದಿ ವಿಲನ್' ಸಿನಿಮಾ ಮಾಡಿದ್ದರು. ರಿಲೀಸ್ ಆದ್ಮೇಲೆ ಇಬ್ಬರು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಸಿನಿಮಾದ ಒಂದು ದೃಶ್ಯದಲ್ಲಿ ಕಿಚ್ಚ ಸುದೀಪ್ ಸೆಂಚುರಿ ಸ್ಟಾರ್‌ ಶಿವಣ್ಣ ಹೊಡೆಯುವ ದೃಶ್ಯವಿದೆ. ಆದರೆ, ಶಿವಣ್ಣ ಮಾತ್ರ ಸುದೀಪ್ ಮೇಲೆ ಕೈ ಮಾಡುವುದಿಲ್ಲ. ಇದು ಶಿವಣ್ಣ ಅಭಿಮಾನಿಗಳ ನಿದ್ದೆ ಕೆಡಿಸಿತ್ತು. ಆ ವೇಳೆ ಸುದೀಪ್ "ಶಿವಣ್ಣ ಏನು ದಡ್ಡರೇ..?? ಕಥೆ ಕೇಳಿನೇ ಶಿವಣ್ಣ ಸಿನಿಮಾ ಒಪ್ಪಿದ್ದು ಎಂದು ಹೇಳಿದ್ದರು. ಆ ಬಳಿಕವನ್ನೂ ಶಿವಣ್ಣ ಫ್ಯಾನ್ಸ್ ಕಿಡಿ ಕಾರಿದ್ದರು. ಆಗ ಜೋಗಿ ಪ್ರೇಮ್ ಸಿನಿಮಾವನ್ನು ಸಿನಿಮಾತರ ನೋಡಿ ಎಂದಿದ್ದರು. ಈಗ 'ಕೆಡಿ' ಹಾಡು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತಿದೆ.

More from Filmibeat

English summary
Jogi, Preeti Yake Bhoomi Melide, Raj The Show Man to KD The Devil Prem movie controversies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X