Darshan-Jogi Prem: 'ಕರಿಯ' ಸೆಟ್ಟಿಗೆ ಬರಲ್ಲ ಅಂತ ಹಠ ಹಿಡಿದಿದ್ದ ದರ್ಶನ್.. ಅಂದು ಪ್ರೇಮ್ ಮೇಲೆ ಮುನಿಸಿಕೊಂಡಿದ್ದೇಕೆ?
ಆಗತಾನೇ ದರ್ಶನ್ ಚೊಚ್ಚಲ ಸಿನಿಮಾ 'ಮೆಜೆಸ್ಟಿಕ್' ಹಿಟ್ ಆಗಿತ್ತು. ಕನ್ನಡ ಚಿತ್ರರಂಗಕ್ಕೆ ದಾಸ ರಗಡ್ ಎಂಟ್ರಿ ಕೊಟ್ಟಾಗಿತ್ತು. ಎರಡನೇ ಸಿನಿಮಾ ಕೂಡ ಗ್ಯಾಂಗ್‌ಸ್ಟರ್ ಹಿನ್ನೆಲೆಯುಳ್ಳ ಸಿನಿಮಾವನ್ನೇ ಆಯ್ಕೆ ಮಾಡಿಕೊಂಡಿದ್ದರು. ಅದುವೇ 'ಕರಿಯ'. ಈ ಸಿನಿಮಾ ಜೋಗಿ ಪ್ರೇಮ್‌ಗೆ ಚೊಚ್ಚಲ ಸಿನಿಮಾ.
'ಕರಿಯ' ಗ್ಯಾಂಗ್‌ಸ್ಟರ್ ಸಿನಿಮಾ ಆಗಿದ್ದರೂ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದಿತ್ತು. ದರ್ಶನ್ ಹಾಗೂ ಪ್ರೇಮ್ ಕರಿಯರ್ ಅನ್ನೇ ಬದಲಿಸಿದ ಸಿನಿಮಾವಿದು. ಹೀಗಾಗಿ ಈ ಸಿನಿಮಾ ಮೇಲೆ ಇವರಿಬ್ಬರಿಗೂ ವಿಶೇಷವಾದ ಕಾಳಜಿಯಿದೆ. ಆದರೆ, ಈ ಸಿನಿಮಾ ಬಳಿಕ ಈ ಜೋಡಿ ಮತ್ತೆ ಒಟ್ಟಿಗೆ ಸಿನಿಮಾ ಮಾಡಲೇ ಇಲ್ಲ.

ಒಂದು ಕಾಂಬಿನೇಷನ್‌ನಲ್ಲಿ ಸಿನಿಮಾ ಹಿಟ್ ಆಯ್ತು ಅಂದರೆ, ಅದೇ ಜೋಡಿ ಮತ್ತೊಂದು ಸಿನಿಮಾ ಮಾಡುತ್ತೆ. 'ಕರಿಯ' ಅಂತ ಒಂದು ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟ ಜೋಡಿ ಮತ್ಯಾಕೆ ಇನ್ನೊಂದು ಸಿನಿಮಾ ಮಾಡಿಲ್ಲ. ಇಷ್ಟೊಂದು ಸಮಯ ತೆಗೆದುಕೊಂಡಿದ್ದು ಯಾಕೆ? ಅನ್ನೋದರ ಹಿಂದೊಂದು ಕಥೆಯಿದೆ. ಅದೇನು? ಅಂತ ತಿಳಿಯೋಕೆ ಮುಂದೆ ಓದಿ.
ಕನ್ನಡದ ಗ್ಯಾಂಗ್‌ಸ್ಟರ್ ಸಿನಿಮಾ 'ಕರಿಯ'
'ಓಂ' ಅಂತಹ ಗ್ಯಾಂಗ್‌ಸ್ಟರ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತೆ ಅನ್ನೋದು ಪ್ರೋವ್ ಮಾಡಿತ್ತು. ಜೋಗಿ ಪ್ರೇಮ್ ಕೂಡ ತಮ್ಮ ಚೊಚ್ಚಲ ನಿರ್ದೇಶನದಲ್ಲೇ ಗ್ಯಾಂಗ್‌ಸ್ಟರ್ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಇದಕ್ಕೆ ಲವ್‌ಸ್ಟೋರಿಯನ್ನು ಸೇರಿಸಿ ತೆರೆಮೇಲೆ ತಂದಿದ್ದರು. ಮೊದಲು ಸಿನಿಮಾ ರಿಲೀಸ್ ಮಾಡಿದಾಗ ಜನರು ಥಿಯೇಟರ್‌ಗೆ ಬಂದು ಸಿನಿಮಾ ನೋಡಲೇ ಇಲ್ಲ. ಎರಡನೇ ಬಾರಿ ರಿಲೀಸ್ ಮಾಡಿದಾಗ ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡಿತ್ತು.

ಒಂದು ವರ್ಷ ಥಿಯೇಟರ್‌ನಲ್ಲಿ 'ಕರಿಯ' ಸದ್ದು
ಮೊದಲ ಬಾರಿ ರಿಲೀಸ್ ಆದಾಗ 'ಕರಿಯ' ಓಡಲಿಲ್ಲ. ಇದರಿಂದ ನಿರ್ಮಾಪಕ ಆನೇಕಲ್ ಬಾಲರಾಜ್ ಸಿನಿಮಾವನ್ನು ಮಾರುವುದಕ್ಕೆ ನಿರ್ಧರಿಸಿದ್ದರು. ಎರಡನೇ ಬಾರಿ ರಿಲೀಸ್ ಮಾಡಲು ಮುಂದೆ ಬಂದ ವಿತರಕರು ಹೆಚ್ಚು ಪ್ರಚಾರ ಮಾಡಿದ್ರು. ಹಾಡುಗಳು ಹಾಗೂ ಸ್ಕ್ರೀನ್ ಪ್ಲೇಯಿಂದಾಗಿ ಪ್ರೇಕ್ಷಕರು ಮತ್ತೆ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿದ್ರು. ಕೆಲವು ಚಿತ್ರ ಮಂದಿರಗಳಲ್ಲಿ ಒಂದು ವರ್ಷ ಪ್ರದರ್ಶನ ಕಂಡಿತ್ತು. ಇಷ್ಟು ದೊಡ್ಡ ಹಿಟ್ ಕೊಟ್ಟ ಜೋಡಿ ಮತ್ತೊಂದು ಸಿನಿಮಾ ಒಪ್ಪಿಕೊಳ್ಳುವುದಕ್ಕೆ ಬರೋಬ್ಬರಿ 20 ವರ್ಷ ತೆಗೆದುಕೊಂಡರು.
ಪ್ರೇಮ್-ದರ್ಶನ್ ನಡುವೆ ಮುನಿಸೇಕೆ?
ಪ್ರೇಮ್ ಮೊದಲ ಸಿನಿಮಾದಲ್ಲಿಯೇ ರಿಯಲ್ ರೌಡಿಗಳನ್ನು ಹಾಕೊಂಡು ಸಿನಿಮಾ ಮಾಡಿದ್ದರು. ರಿಯಲ್ ಲೈಫ್ ರೌಡಿಗಳ ದೃಶ್ಯಗಳನ್ನು ಚಿತ್ರೀಕರಿಸುವಾಗ ಹಲವು ಅಡೆ ತಡೆಗಳಾಗುತ್ತಿದ್ದವು. 'ಕರಿಯ' ಸಿನಿಮಾ ಶೂಟಿಂಗ್ ಮಾಡುವಾಗ ದರ್ಶನ್ ಹಾಗೂ ಪ್ರೇಮ್ ನಡುವೆ ಕ್ಲ್ಯಾಶ್ ಆಗಿತ್ತು. ಸಿನಿಮಾದಲ್ಲಿ ರಿಯಲ್ ಲೈಫ್ ರೌಡಿ ರಾಜೇಂದ್ರ ಅರೆಸ್ಟ್ ಆಗಿದ್ದರು. ಆ ವೇಳೆ ಶೂಟಿಂಗ್ ತಡವಾಗಿತ್ತು. ಇದೇ ಸಂದರ್ಭದಲ್ಲಿ ದರ್ಶನ್ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದರು. ಆಗ ಡೇಟ್ ಕ್ಲ್ಯಾಶ್ ಆಗುತ್ತಿತ್ತು. ಈ ವಿಚಾರಕ್ಕೆ ಇಬ್ಬರ ನಡುವೆ ಕ್ಲ್ಯಾಶ್ ಆಗಿತ್ತು.
ಎರಡನೇ ಸಿನಿಮಾ 20 ವರ್ಷ ಗ್ಯಾಪ್
ರೌಡಿ ರಾಜೇಂದ್ರ ರಿಲೀಸ್ ಆದ ಕೂಡಲೇ ಸಿನಿಮಾ ಶೂಟಿಂಗ್ ಮುಗಿಸಬೇಕು ಅನ್ನೋ ಒತ್ತಡದಲ್ಲಿ ಪ್ರೇಮ್ ಇದ್ದರು. ಅತ್ತ ಇನ್ನೊಂದು ಸಿನಿಮಾ ಜೊತೆ ದರ್ಶನ್ ಡೇಟ್ ಕ್ಲ್ಯಾಶ್ ಆಗಿತ್ತು. ಹೀಗಾಗಿ ಇಬ್ಬರ ನಡುವೆ ಇದೇ ವಿಚಾರಕ್ಕೆ ಮುನಿಸಿಕೊಂಡಿದ್ದರು. ಅಲ್ಲಿಂದ ಮತ್ತೊಂದು ಸಿನಿಮಾ ಅನೌನ್ಸ್ ಮಾಡುವುದಕ್ಕೆ ಬರೋಬ್ಬರಿ 20 ವರ್ಷಗಳನ್ನು ತೆಗೆದುಕೊಂಡಿದ್ದಾರೆ.


Click it and Unblock the Notifications











