ರಿಲೀಸ್ ಯಾವಾಗಲೋ ಗೊತ್ತಿಲ್ಲ, 3ನೇ ಸಾಂಗ್ ರಿಲೀಸ್ ಡೇಟ್ ಘೋಷಿಸಿದ ಜೋಗಿ ಪ್ರೇಮ್;'ಕೆಡಿ' ಅಡ್ಡಾದಲ್ಲಿ ಏನಾಗ್ತಿದೆ?
ಸ್ಯಾಂಡಲ್‌ವುಡ್‌ನ ಮತ್ತೊಂದು ಬಿಗ್ ಬಜೆಟ್ ಸಿನಿಮಾ 'ಕೆಡಿ'. ಈ ಮಲ್ಟಿಸ್ಟಾರರ್ ಸಿನಿಮಾದ ರಿಲೀಸ್ ಡೇಟ್ ಧ್ರುವ ಸರ್ಜಾ ಅಭಿಮಾನಿಗಳಿಗೆ ಮರೀಚಿಕೆಯಾಗಿದೆ. ಇದು ಧ್ರುವ ಸರ್ಜಾ ನಟಿಸುತ್ತಿರುವ 2ನೇ ಪ್ಯಾನ್ ಇಂಡಿಯಾ ಸಿನಿಮಾ. ಇನ್ನೊಂದು ಕಡೆ ಜೋಗಿ ಪ್ರೇಮ್ ನಿರ್ದೇಶಿಸುತ್ತಿರುವ ಮೊದಲ ಸಿನಿಮಾ. ಹೀಗಾಗಿ ಇವರಿಬ್ಬರ ಕಾಂಬಿನೇಷನ್‌ನಲ್ಲಿ ರಿಲೀಸ್ ಆಗಬೇಕಿರುವ ಸಿನಿಮಾ ನೋಡುವುದಕ್ಕೆ ಸಿನಿ ಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ.
ಜೋಗಿ ಪ್ರೇಮ್ ಸಿನಿಮಾ ರಿಲೀಸ್ ಮುನ್ನ ಸಿಕ್ಕಾಪಟ್ಟೆ ಹೈಪ್ ಆಗುತ್ತೆ. ಪ್ರೇಕ್ಷಕರನ್ನು ಹೇಗೆ ಥಿಯೇಟರ್‌ಗೆ ಕರೆಸಬೇಕು ಅನ್ನೋದು ಚೆನ್ನಾಗಿ ಗೊತ್ತಿದೆ. ಈ ಹಿಂದೆ ಜೋಗಿ ಪ್ರೇಮ್ ನಿರ್ದೇಶಿಸಿದ ಸಿನಿಮಾಗಳೆಲ್ಲವೂ ಹೀಗೆ ದೊಡ್ಡ ಮಟ್ಟದಲ್ಲಿ ಹೈಪ್ ಆದ್ಮೇಲೆ ಬಿಡುಗಡೆಯಾಗಿವೆ. ಆದರೆ, 'ಕೆಡಿ' ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ತಮ್ಮ ಪ್ರಚಾರ ತಂತ್ರವನ್ನು ಬದಲಾಯಿಸಿಕೊಂಡಂತೆ ಇದೆ.

'ಕಾಂತಾರ ಚಾಪ್ಟರ್ 1' ಬಳಿಕ ಕನ್ನಡ ಚಿತ್ರರಂಗದಿಂದ ರಿಲೀಸ್ ಆಗುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ. ರವಿಚಂದ್ರನ್, ಶಿಲ್ಪಾ ಶೆಟ್ಟಿ, ಸಂಜಯ್ ದತ್ ಅಂತಹ ದಿಗ್ಗಜರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹೀಗಾಗಿ 'ಕೆಡಿ' ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಗಮನ ಸೆಳೆಯೋದು ಗ್ಯಾರಂಟಿ. ಅದಕ್ಕೆ ಜೋಗಿ ಪ್ರೇಮ್ ಮಾಸ್ಟರ್‌ಪ್ಲ್ಯಾನ್ ಮಾಡಿದಂತೆ ಇದೆ. ಹಾಡುಗಳ ಮೂಲಕವೇ ಆರಂಭದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಸದ್ಯ ಈ ಸಿನಿಮಾದ ಮೂರನೇ ಹಾಡಿನ ರಿಲೀಸ್ ಡೇಟ್ ಅನೌನ್ಸ್ ಆಗಿದೆ.
'ಕೆಡಿ' ಸಿನಿಮಾವನ್ನು ಮುಗಿಸುವುದಕ್ಕೆ ಜೋಗಿ ಪ್ರೇಮ್ ಹೆಚ್ಚು ಕಡಿಮೆ ಮೂರು ವರ್ಷಗಳನ್ನು ತೆಗೆದುಕೊಂಡಿದ್ದರು. ಈಗ ಸಿನಿಮಾ ಕಂಪ್ಲೀಟ್ ಆದರೂ ಸಿನಿಮಾ ಬಿಡುಗಡೆ ಬಗ್ಗೆ ಸುಳಿವಿಲ್ಲ. ಹಾಗಂತ ಧ್ರುವ ಸರ್ಜಾ ಅಭಿಮಾನಿಗಳು ತಲೆಕೆಡಿಸಿಕೊಳ್ಳ ಬೇಕಿಲ್ಲ. ಅವರ ಬೇಸರ ಹೋಗಲಾಡಿಸುವುದಕ್ಕೆ ಜೋಗಿ ಪ್ರೇಮ್ ಸಿನಿಮಾದ "ಅಣ್ತಮ್ಮ ಜೋಡೆತ್ತು ಕಣೋ.. ಜೀವನವನ್ನು ಸಮವಾಗಿ ಎಳೀಬೇಕು ಕಣೋ.." ಎನ್ನುವ ಮೂರನೇ ಹಾಡನ್ನು ರಿಲೀಸ್ ಮಾಡುವುದಕ್ಕೆ ಮುಂದಾಗಿದ್ದಾರೆ.
ಅಂದ್ಹಾಗೆ 'ಕೆಡಿ' ಸಿನಿಮಾದ ಈ ಹಾಡನ್ನು ಹೊಸ ವರ್ಷದ ಸಂಭ್ರಮದಲ್ಲಿರುವ ಸಿನಿ ಪ್ರಿಯರಿಗಾಗಿ ಬಿಡುಗಡೆ ಮಾಡಲಾಗುತ್ತಿದೆ. ಕ್ರಿಸ್‌ಮಸ್ ಮುಗಿದ ಮಾರನೇ ದಿನ ಅಂದರೆ, ಡಿಸೆಂಬರ್ 26ರಂದು 'ಕೆಡಿ' ಸಿನಿಮಾದ 3ನೇ ಹಾಡು ಕನ್ನಡ ಸೇರಿದಂತೆ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಈ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಕನ್ನಡದಲ್ಲಿ "ಅಣ್ತಮ್ಮ ಜೋಡೆತ್ತು ಕಣೋ.." ಅಂತ ಶುರುವಾಗು ಈ ಹಾಡನ್ನು ಸ್ವತ: ಜೋಗಿ ಪ್ರೇಮ್ ಅವರೇ ಹಾಡಿದ್ದಾರೆ. ಮಂಜು ಗೌಡ ಸಾಹಿತ್ಯ ರಚಿಸಿದ್ದಾರೆ.
ಹಾಗೇ ಹಿಂದಿಯಲ್ಲಿ "ಭಾಯ್ ಭಾಯ್.." ಎಂದು ಆರಂಭ ಆಗುತ್ತಿದ್ದು, ಜಾವಿದ್ ಅಲಿ ಈ ಹಾಡನ್ನು ಹಾಡಿದ್ದಾರೆ. ಇನ್ನು ತೆಲುಗಿನಲ್ಲಿ "ಧಮ್ಮುನ್ನ ಅಣ್ತಮ್ಮುಲು.." ಎಂದು ಶುರುವಾಗುತ್ತೆ. ಇದನ್ನು ತೆಲುಗಿನ ಜನಪ್ರಿಯ ಗಾಯಕ ಸಿದ್ ಶ್ರೀರಾಮ್ ಹಾಡಿದ್ದಾರೆ. " ಕಾಳೈಂಗ ಪೋಲ್ ಅನ್ನನ್ಮಾರಾವ್.." ಎಂದು ತಮಿಳಿನಲ್ಲಿ ಶುರುವಾಗುವ ಈ ಹಾಡನ್ನು ಕೂಡ ಸಿದ್ ಶ್ರೀರಾಮ್ ಅವರೇ ಹಾಡಿದ್ದಾರೆ. ಇನ್ನು ಮಲಯಾಳಂನಲ್ಲಿ ಇದೇ ಹಾಡನ್ನು ಜೇಸುದಾಸ್ ಹಾಡಿದ್ದಾರೆ.
ಅರ್ಜುನ್ ಜನ್ಯ ಕಂಪೋಸ್ ಮಾಡಿರುವ ಈ ಹಾಡು ಹೊಸ ವರ್ಷ ಎಂಜಾಯ್ ಮಾಡುವುದಕ್ಕೆ ಸ್ಕೆಚ್ ಹಾಕಿರುವವರಿಗೆ ಕಿಕ್ ಕೊಡಲಿದೆ. ಇದೇನೆ ಇದ್ದರೂ 'ಕೆಡಿ' ರಿಲೀಸ್ ಬಗ್ಗೆ ಮಾತ್ರ ಜೋಗಿ ಪ್ರೇಮ್ ಮಾತಾಡುತ್ತಿಲ್ಲ. ಹೆಚ್ಚು ಕಡಿಮೆ ಮೂರು ವರ್ಷಗಳಿಂದ ನಿರ್ಮಾಣ ಮಾಡುತ್ತಿರುವ ಈ ಸಿನಿಮಾ ಬಿಡುಗಡೆ ಬಗ್ಗೆ ಇನ್ನೂ ಕ್ಲಾರಿಟಿ ಸಿಕ್ಕಿಲ್ಲ. ಕೆವಿಎನ್ ಸಂಸ್ಥೆ ಕೂಡ ಇನ್ನೂ ಸುಳಿವು ಬಿಟ್ಟು ಕೊಟ್ಟಿಲ್ಲ. ಒಂದು ಲೆಕ್ಕಾಚಾರದ ಪ್ರಕಾರ ಈ ಸಿನಿಮಾ ಏಪ್ರಿಲ್, ಮೇ ವೇಳೆಗೆ ರಿಲೀಸ್ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.


Click it and Unblock the Notifications











