Ganesh Chaturthi: 'ಕೆಡಿ' ತಂಡದಿಂದ ಗಣೇಶೋತ್ಸವ; ಧ್ರುವ, ರಮೇಶ್ ಅರವಿಂದ್, ಪ್ರೇಮ್ ಮಸ್ತ್ ಡ್ಯಾನ್ಸ್

ಈ ಬಾರಿ ಗಣೇಶ ಚತುರ್ಥಿ ಜೋರಾಗಿದೆ. ದೇಶದ ಮೂಲೆ ಮೂಲೆಯಲ್ಲಿ ಸಂಭ್ರಮ ಮನೆ ಮಾಡಿದೆ. ಜನರು ಗಣೇಶನನ್ನು ಭಕ್ತಿ ಪೂರ್ವಕವಾಗಿ ಮನೆಗಳಲ್ಲಿ, ಬೀದಿ ಬೀದಿಗಳಲ್ಲಿ ಬರಮಾಡಿಕೊಳ್ಳುತ್ತಿದ್ದಾರೆ. ಹಾಗೇ ಕನ್ನಡ ಚಿತ್ರರಂಗದಲ್ಲೂ ಗಣೇಶೋತ್ಸವ ಭರ್ಜರಿಯಾಗಿದೆ. ಅದರಲ್ಲೂ ಜೋಗಿ ಪ್ರೇಮ್ ನಿರ್ದೇಶಿಸುತ್ತಿರುವ 'ಕೆಡಿ' ಸಿನಿಮಾ ತಂಡ ಗಣೇಶ ಹಬ್ಬವನ್ನು ಆಚರಿಸಿದ ಸಂಭ್ರಮಿಸುತ್ತಿದೆ.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟಿಸುತ್ತಿರುವ ಈ ಪ್ಯಾನ್ ಇಂಡಿಯಾ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ಇನ್ನೇನು ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವ ಕೆವಿಎನ್‌ ಪ್ರೊಡಕ್ಷನ್‌ನಲ್ಲಿ ಜೋಗಿ ಪ್ರೇಮ್, ಧ್ರುವ ಸರ್ಜಾ, ರಮೇಶ್ ಅರವಿಂದ್, ಕೆವಿಎನ್ ಸಂಸ್ಥೆಯ ಮಾಲೀಕ ವೆಂಕಟ್ ಕೆ ನಾರಾಯಣ್ ಸೇರಿದಂತೆ ಇಡೀ ಗಣೇಶನನ್ನು ಕೂರಿ ಸಂಭ್ರಮ ಪಟ್ಟಿದ್ದಾರೆ.

Jogi Prem Dhruva Sarja Ramesh Aravind and KD Movie Team celebrated Ganesh Chaturthi

'ಕೆಡಿ' ಸಿನಿಮಾ ತಂಡ ಗಣೇಶ್ ಹಬ್ಬದ ಸಂಭ್ರಮದಲ್ಲಿ ಭಕ್ತಿ ಪೂರ್ವಕವಾಗಿ ಪೂಜೆ ಮಾಡಿ ಆಶೀರ್ವಾದ ಪಡೆದುಕೊಂಡಿದೆ. ಅಲ್ಲದೆ ಗಣೇಶನ ಮುಂದೆ ಹೆಜ್ಜೆ ಹಾಕಿದೆ. ರಮೇಶ್ ಅರವಿಂದ್, ಜೋಗಿ ಪ್ರೇಮ್, ಧ್ರುವ ಸರ್ಜಾ, ರೀಷ್ಮಾ ನಾಣಯ್ಯ ಸೇರಿದಂತೆ ನಿರ್ಮಾಪಕ ವೆಂಕಟ್ ಕೆ ನಾರಾಯಣ್ ಕೂಡ ಗಣೇಶನ ಮುಂದೆ ಹೆಜ್ಜೆ ಹಾಕಿದ್ದಾರೆ. ಚಿತ್ರತಂಡವೇ ಈ ಸಂಭ್ರಮದ ವಿಡಿಯೋವನ್ನು ರಿಲೀಸ್ ಮಾಡಿದೆ.

ಇಡೀ 'ಕೆಡಿ-ದಿ ಡೆವಿಲ್' ತಂಡ ವೈಟ್ ಅಂಡ್ ವೈಟ್‌ನಲ್ಲಿ ಸಾಂಪ್ರದಾಯಿಕ ಉಡುಗೆಯುಟ್ಟು ಗಣೇಶ ಹಬ್ಬವನ್ನು ಆಚರಿಸಿದೆ. ಪ್ರಕೃತಿಯ ವಾತಾವರಣವನ್ನು ಸೃಷ್ಟಿ ಮಾಡಿ, ಅದರ ಮಧ್ಯೆ ಗಣೇಶನನ್ನು ಕೂರಿಸಿರುವುದು ವಿಶೇಷ. ಜೊತೆ ಕೃಷ್ಣನಂತೆ ಕೊಳಲು ಹಿಡಿದ ಗಣೇಶನ ಮೂರ್ತಿಯನ್ನು ತಂದು ಕೂರಿಸಲಾಗಿದೆ. ಇದೇ ವೇಳೆ ಕೆಡಿ ಕಡೆಯಿಂದ ನಾಡಿನ ಸಮಸ್ತ ಜನತೆಗೆ ಗಣೇಶ ಹಬ್ಬದ ಶುಭಾಶಯಗಳನ್ನು ತಿಳಿಸಿದೆ.

Jogi Prem Dhruva Sarja Ramesh Aravind and KD Movie Team celebrated Ganesh Chaturthi

ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾ ಅಂದರೆ, ಅಲ್ಲೊಂದು ಸೆಲೆಬ್ರೆಷನ್ ಇದ್ದೇ ಇರುತ್ತೆ. ಸಿನಿಮಾ ಶುರುವಾದಲ್ಲಿಂದ ಬಿಡುಗಡೆವರೆಗೂ ಇಡೀ ಚಿತ್ರತಂಡ ಆಕ್ಟಿವ್ ಆಗಿ ಇರುತ್ತೆ. ಒಂದಲ್ಲ ಒಂದು ಕುತೂಹಲವನ್ನು ಪ್ರೇಕ್ಷಕರಿಗೆ ಎದುರು ತರುತ್ತಲೇ ಇರುತ್ತಾರೆ. 'ಕೆಡಿ' ಸಿನಿಮಾ ಕೂಡ ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡೆ ಸಿನಿಮಾಗಳಲ್ಲಿ ಒಂದು ಧ್ರುವ ಸರ್ಜಾ ಮತ್ತೊಂದು ಅಂಡರ್‌ವರ್ಲ್ಡ್‌ ಕಥೆಯನ್ನು ಹೇಳುವುದಕ್ಕೆ ಹೊರಟಿರೋ ಜೋಗಿ ಪ್ರೇಮ್ ಈ ಬಾರಿ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಬಹುದೇ ಎಂಬ ಅನುಮಾನವಿದೆ.

'ಕೆಡಿ' ಇದು ಜೋಗಿ ಪ್ರೇಮ್ ಹಾಗೂ ಧ್ರುವ ಸರ್ಜಾ ಅವರ ಮೊದಲ ಕಾಂಬಿನೇಷನ್‌. ಧ್ರುವ ಸರ್ಜಾ ಜೊತೆಗೆ ಬಾಲಿವುಡ್‌ನಿಂದ ಕಲಾವಿದರು ಈ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. 'ಕೆಜಿಎಫ್ 2' ಅಧೀರ ಸಂಜಯ್ ದತ್, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಾಗೇ ಈ ಸಿನಿಮಾದಲ್ಲಿ ದೊಡ್ಡ ಸ್ಟಾರ್ ಕಾಸ್ಟ್ ಇದ್ದು, ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತ್ತೆ ಅನ್ನೋದು ನಂಬಿಕೆಯಲ್ಲಿದ್ದಾರೆ.

ಕನ್ನಡದ ಮತ್ತೊಂದು ಶ್ರೀಮಂತ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ 'ಕೆಡಿ' ಸಿನಿಮಾವನ್ನು ಇದೇ ವರ್ಷ ಡಿಸೆಂಬರ್‌ನಲ್ಲಿ ರಿಲೀಸ್ ಮಾಡುವುದಕ್ಕೆ ಮುಂದೆ ಬಂದಿದೆ. ಡಿಸೆಂಬರ್ ಸ್ಯಾಂಡಲ್‌ವುಡ್ ಮಟ್ಟಿಗೆ ಲಕ್ಕಿ ತಿಂಗಳು. ಈ ತಿಂಗಳಲ್ಲಿ ರಿಲೀಸ್ ಮಾಡಿದ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗುತ್ತವೆ. ಈ ಕಾರಣಕ್ಕೆ 'ಕೆಡಿ' ಕೂಡ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯಬಹುದು ಅನ್ನೋ ನಿರೀಕ್ಷೆಯಿದೆ.

More from Filmibeat

English summary
Jogi Prem, Dhruva Sarja, Ramesh Aravind and KD – The Devil team celebrated Ganesh Festival:
Read more about: prem dhruva sarja filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X