12 ಸೆಕೆಂಡ್ 'ಏಕ್ ಲವ್ ಯಾ' ಟೀಸರ್‌ನಲ್ಲಿ ಏನೇನಿದೆ? ರಿಲೀಸ್‌ಗೆ ಪ್ರೇಮ್ ಮಾಸ್ಟರ್ ಪ್ಲ್ಯಾನ್ ಏನು?

ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾ 'ಏಕ್ ಲವ್ ಯಾ' ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಒಂದು ತಿಂಗಳಿನಿಂದಲೇ ಈ ಸಿನಿಮಾವನ್ನು ಭರ್ಜರಿ ಪ್ರಚಾರ ಮಾಡಿಕೊಂಡೇ ಬಂದಿದ್ದರು. ಇನ್ನೇನು ರಿಲೀಸ್‌ಗೆ ಕೆಲವೇ ದಿನಗಳ ಬಾಕಿ ಉಳಿದಿದೆ ಎನ್ನುವಾಗಲೇ ಟೀಸರ್‌ ಒಂದನ್ನು ರಿಲೀಸ್ ಮಾಡಿದ್ದಾರೆ. ಕೇವಲ 12 ಸೆಕೆಂಡ್‌ಗಳ ಟೀಸರ್ ಬಿಟ್ಟು ಪ್ರೇಕ್ಷಕರಿಗೆ ಮತ್ತಷ್ಟು ಕುತೂಹಲವನ್ನು ಕೆರಳಿಸಿದ್ದಾರೆ.

ಫೆಬ್ರವರಿ 21 ರಂದು ಜೋಗಿ ಪ್ರೇಮ್ 'ಏಕ್ ಲವ್ ಯಾ' ಸಿನಿಮಾದ ಟೀಸರ್ ರಿಲೀಸ್ ಮಾಡಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಇನ್ನೂ ಮೂರು ದಿನ ಬಾಕಿ ಉಳಿದಿದ್ದು, ಕುತೂಹಲವನ್ನು ದುಪ್ಪಟ್ಟು ಮಾಡಿದೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಚಿತ್ರರಂಗಕ್ಕೆ ಇದೇ ಮೊದಲ ಬಾರಿಗೆ ಕಾಲಿಡುತ್ತಿರುವ ರಾಣಾ ಹಾಗೂ ರೀಷ್ಮಾ ನಾಣಯ್ಯ ಪಾತ್ರಗಳು ಕೇವಲ ಹಾಡುಗಳ ಮೂಲಕವೇ ಪ್ರೇಕ್ಷಕರನ್ನು ಸೆಳೆದಿತ್ತು. ಈಗ ಟೀಸರ್ ಮೂಲಕ ಸಿನಿಪ್ರಿಯರನ್ನು ಕುತೂಹಲ ಹೆಚ್ಚಿಸಲು ಸಜ್ಜಾಗಿದ್ದಾರೆ.

ಕನ್ನಡದ ಅತೀ ಚಿಕ್ಕ ಟೀಸರ್

ಕನ್ನಡದ ಅತೀ ಚಿಕ್ಕ ಟೀಸರ್

ನಿರ್ದೇಶಕ ಪ್ರೇಮ್ ಸ್ಟ್ರಾಟಜಿನೇ ಹಾಗೆ. ಸಿನಿಮಾ ಬಗ್ಗೆ ಟೀಸರ್‌ನಲ್ಲಾಗಲಿ, ಟ್ರೈಲರ್‌ನಲ್ಲಾಗಿ ಬಿಟ್ಟು ಕೊಡುವುದಿಲ್ಲ. ಈ ಹಿಂದೆ ನಿರ್ದೇಶಿಸಿದ್ದ 'ದಿ ವಿಲನ್' ಸಿನಿಮಾದ ಟ್ರೈಲರ್ ಕೂಡ ರಿಲೀಸ್ ಮಾಡಿರಲಿಲ್ಲ. ಶಿವಣ್ಣ ಹಾಗೂ ಸುದೀಪ್ ಕ್ಯಾರೆಕ್ಟರ್ ಟೀಸರ್ ಕೊಟ್ಟು ಸುಮ್ಮನಾಗಿಸಿದ್ದರು. 'ಏಕ್ ಲವ್ ಯಾ' ಸಿನಿಮಾದ ಟೀಸರ್ ಕೂಡ ಹಾಗೇ ಇದೆ. 26 ಸೆಕೆಂಡ್ ಟೀಸರ್ ವಿಜ್ಯೂವಲ್ಸ್ ಇರುವುದು ಕೇವಲ 12 ಸೆಕೆಂಡ್. ಇದರಲ್ಲೇ ಹೀರೊ ರಾಣನ ಮಾಸ್ ಲುಕ್ ಅನ್ನು ತೋರಿಸಿದ್ದಾರೆ. ವಿಶೇಷ ಅಂದರೆ, ಈ ಟೀಸರ್‌ನಲ್ಲಿ ಸಿನಿಮಾ ಹೊಸ ಪಾತ್ರವನ್ನು ಪರಿಚಯಿಸಿದ್ದಾರೆ. ಶಿಷ್ಯ ದೀಪಿಕ್ ಬಹಳ ದಿನಗಳ ಬಳಿಕ ಮತ್ತೆ ಸಿನಿಮಾಗೆ ಎಂಟ್ರಿಕೊಟ್ಟಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ದಿನಕ್ಕೊಂದು ಸ್ಮಾಲ್ ಟೀಸರ್ ರಿಲೀಸ್

ಇಂದು (ಫೆ 21) ರಿಲೀಸ್ ಮಾಡಿರುವ 12 ಸೆಕೆಂಡುಗಳ ಒಂದು ಟೀಸರ್ ಅಷ್ಟೇ ಅಲ್ಲ. ಇನ್ನೂ ಎರಡು ದಿನ ಎರಡು ಇಂತಹದ್ದೇ ಚಿಕ್ಕ ಟೀಸರ್ ರಿಲೀಸ್ ಆಗಲಿದೆ. "ಏಕ್ ಲವ್ ಯಾ ಅಂತ ತಕ್ಷಣ ಎಲ್ಲರೂ ಮ್ಯೂಸಿಕಲ್ ಲವ್ ಸ್ಟೋರಿ, ಲವ್, ಎಮೊಷನ್ಸ್ ಅಷ್ಟೇ ಅಲ್ಲ. ಇದರಲ್ಲಿ ಆಕ್ಷನ್ ಥ್ರಿಲ್ಲರ್ ಕೂಡ ಇದೆ ಅನ್ನುವುದನ್ನು ತೋರಿಸಬೇಕಿತ್ತು. ಮಾಸ್ ಆಡಿಯನ್ಸ್‌ಗೂ ಈ ಸಿನಿಮಾ ಇಷ್ಟ ಆಗುತ್ತೆ ಅನ್ನುವ ಕಾರಣಕ್ಕೆ ಬಿಟ್ಟದ್ದೇವೆ. ನಾಳೆ ನಾಡಿದ್ದು, ಇನ್ನೂ ಎರಡು ಟೀಸರ್ ರಿಲೀಸ್ ಆಗುತ್ತೆ. ಇದರ ಜೊತೆ ಒಂದು ಸ್ನೀಕ್-ಪೀಕ್ ಅನ್ನು ಬಿಡುಗಡೆ ಮಾಡಬೇಕು ಅಂತ ಪ್ರೇಮ್ ಆಲೋಚನೆ ಮಾಡುತ್ತಿದ್ದಾರೆ. ಅದು ನಾಳೆ (ಫೆ.22) ಗೊತ್ತಾಗುತ್ತೆ." ಎಂದು ಫಿಲ್ಮಿ ಬೀಟ್‌ಗೆ 'ಏಕ್ ಲವ್ ಯಾ' ಸಿನಿಮಾಗೆ ಡೈಲಾಗ್ ಹಾಗೂ ಸಾಹಿತ್ಯ ರಚಿಸಿರುವ ವಿಜಯ್ ಈಶ್ವರ್ ತಿಳಿಸಿದ್ದಾರೆ.

ವಿದೇಶದಲ್ಲಿ ಎಲ್ಲೆಲ್ಲಿ ಸಿನಿಮಾ ರಿಲೀಸ್

ವಿದೇಶದಲ್ಲಿ ಎಲ್ಲೆಲ್ಲಿ ಸಿನಿಮಾ ರಿಲೀಸ್

'ಏಕ್ ಲವ್ ಯಾ' ಸಿನಿಮಾ ಬಿಡುಗಡೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಫೆ. 24ರಂದು ಕರ್ನಾಟಕದ ಸುಮಾರು 300ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅಷ್ಟೇ ಅಲ್ಲ, ತಮಿಳುನಾಡಿನಲ್ಲಿಯೂ ಬಿಡುಗಡೆಯಾಗಲಿದೆ. ಹೊಸೂರು, ಚೆನ್ನೈ ಸೇರಿದಂತೆ ಹಲವೆಡೆ ಸಿನಿಮಾ ರಿಲೀಸ್ ಆಗಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ವಿದೇಶದಲ್ಲೂ ಏಕಕಾಲಕ್ಕೆ ರಿಲೀಸ್ ಆಗಲಿದೆ. ಸದ್ಯ ಯುಎಸ್‌ಎನಲ್ಲಿ ಬಿಡುಗಡೆಯಾಗಲಿದ್ದು, ಕೆನಡಾ ಹಾಗೂ ಆಸ್ಟ್ರೇಲಿಯಾದಲ್ಲಿ ಮಾತುಕತೆ ನಡೆಯುತ್ತಿದೆ.

ವಾರದ ಬಳಿಕ ತೆಲುಗು ವರ್ಷನ್ ರಿಲೀಸ್

ವಾರದ ಬಳಿಕ ತೆಲುಗು ವರ್ಷನ್ ರಿಲೀಸ್

'ಏಕ್ ಲವ್ ಯಾ' ಸಿನಿಮಾವನ್ನು ಪ್ರೇಮ್ ತೆಲುಗಿನಲ್ಲೂ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. 'ಏಕ್ ಲವ್ ಯಾ' ತೆಲುಗಿಗೆ ಈಗಾಗಲೇ ಡಬ್ ಆಗಿದ್ದು, ಒಂದು ವಾರದ ಬಳಿಕ ಬಿಡುಗಡೆ ಮಾಡುವುದಕ್ಕೆ ಪ್ರೇಮ್ ನಿರ್ಧರಿಸಿದ್ದಾರೆ. ತೆಲುಗು ಚಿತ್ರರಂಗದ ಪ್ರಮುಖ ವ್ಯಕ್ತಿಯೊಬ್ಬರು ಈ ಸಿನಿಮಾ ಬಿಡುಗಡೆಗೆ ಬೆನ್ನುಲುಭಾಗಿ ನಿಲ್ಲಲಿದ್ದಾರೆ ಎನ್ನಲಾಗಿದೆ. ಕರ್ನಾಟಕದಲ್ಲಿ ಸಿಕ್ಕ ರೆಸ್ಪಾನ್ಸ್ ಬಳಿಕ ಪ್ರೇಮ್ ತೆಲುಗು ಬಿಡುಗಡೆ ಬಗ್ಗೆ ಸ್ಟ್ರಾಟಜಿ ಮಾಡಬಹುದು.

More from Filmibeat

English summary
Jogi Prem directed Rachita Ram and Raana Starrer Ek Love Ya teaser released. This 12 seconds teaser Prem showing Raana's mass look.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X