"ಪ್ರೇಮ್ ಮಂಡ್ಯದಿಂದ ಬಂದೋರು.. 'ಆರು' & 'ಹಾರು' ಹೇಳುವುದಕ್ಕೆ ಬರೋದಿಲ್ಲ"; ನಟಿ ರಕ್ಷಿತಾ ಪ್ರೇಮ್

ಪ್ರೇಮ್ ಹಾಗೂ ರಕ್ಷಿತಾರದ್ದು ಸ್ಯಾಂಡಲ್‌ವುಡ್‌ನ ಜನಪ್ರಿಯ ತಾರಾ ಜೋಡಿ. ಇಬ್ಬರು ಮದುವೆ ಆಗುತ್ತಾರೆ ಅನ್ನೋ ವಿಷಯ ಹೊರಬಿದ್ದಾಗ, ಈ ಜೋಡಿ ಬಗ್ಗೆ ಅನುಮಾನ ಪಟ್ಟವರೇ ಹಲವರು. ಜೋಗಿ ಪ್ರೇಮ್ ಪಕ್ಕ ಮಂಡ್ಯದ ಹೈದ. ಅದೇ ರಕ್ಷಿತಾ, ಕುಂದಾಪುರದವರಾದರೂ ಬೆಂಗಳೂರು ಹುಡುಗಿ. ಇಬ್ಬರ ಲೈಫ್ ಸ್ಟೈಲ್ ಬೇರೆನೇ ಇತ್ತು.

ಈ ಕಾರಣಕ್ಕೆ ಪ್ರೇಮ್ ಹಾಗೂ ರಕ್ಷಿತಾ ಮದುವೆ ಆಗೋ ಸುದ್ದಿ ಕೇಳಿ ಗೊಂದಲಕ್ಕೆ ಒಳಗಾಗಿದ್ದವರೇ ಹೆಚ್ಚು. ಆದ್ರೀಗ ಈ ಜೋಡಿಯ ಕೌಟುಂಬಿಕ ಜೀವನ ತುಂಬಾನೇ ಸೊಗಸಾಗಿದೆ. ಆರಾಮಾಗಿ ನೆಮ್ಮದಿಯ ಜೀವನ ಸಾಗಿಸಿಕೊಂಡು ಹೊರಟಿದ್ದಾರೆ. ಇತ್ತೀಚೆಗೆ ರ್‍ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿರುವ ರಕ್ಷಿತಾ ಮಜವಾದ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

Jogi Prem doesn t know the difference between Aaru and Haaru says wife Rakshita Prem

ಪ್ರೇಮ್ ಕನಸುಗಳು ದೊಡ್ಡದು. ಯಾವಾಗಲೂ ದೊಡ್ಡದನ್ನೇ ಯೋಚನೆ ಮಾಡುತ್ತಿರುತ್ತಾರೆ. ಅದಕ್ಕೆ ಆಗಾಗ ತಪ್ಪುಗಳನ್ನು ಮಾಡುತ್ತಾರೆ. ಇಷ್ಟೇ ಅಲ್ಲದೆ ಮಂಡ್ಯದಿಂದ ಬಂದಿದ್ದರಿಂದ ಪ್ರೇಮ್‌ಗೆ ಆರು ಮತ್ತು ಹಾರು ಪದಗಳನ್ನು ಹೇಳುವುದಕ್ಕೆ ಕಷ್ಟ ಪಡುತ್ತಾರೆಂದು ಹೇಳಿದ್ದಾರೆ. ಈ ಸಂದರ್ಶನದ ಚಿಕ್ಕ ತುಣುಕು ಇಲ್ಲಿದೆ.

ಪತಿ ಪ್ರೇಮ್ ಮಾತಾಡುವಾಗ ಯಾಕೆ ಜಾಸ್ತಿ ತಪ್ಪುಗಳನ್ನು ಮಾಡುತ್ತಾರೆ ಅನ್ನೋದನ್ನು ರಕ್ಷಿಯಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. "ಪ್ರೇಮ್ ಯಾವತ್ತು ಸಣ್ಣದಾಗಿ ಮಾಡಿದ್ದಾರೆ. ಏನು ಮಾಡಿದರೂ ದೊಡ್ಡದಾಗಿ ಮಾಡಬೇಕು ಅಂತ ಹೇಳ್ತಾರೆ ಪ್ರೇಮ್. ಸಿನಿಮಾಗಳು ದೊಡ್ಡದಾಗಿರಬೇಕು. ಅದಕ್ಕೆ ಆಗಾಗ ಮಾತಾಡುತ್ತಿರುವಾಗ ತಪ್ಪುಗಳು ಮಾಡೋದು ಜಾಸ್ತಿ. ಯಾಕಂದ್ರೆ, ಅವರ ತಲೆಯಲ್ಲಿ ಪ್ರತಿಯೊಂದು ದೊಡ್ಡದು. ಅದಕ್ಕೆ ಅವರಿಗೆ ನಾನು ನಿಧಾನಕ್ಕೆ ಮಾತಾಡಿ ಅಂತ ಹೇಳೋದು." ಎಂದು ರಕ್ಷಿತಾ ಹೇಳಿದ್ದಾರೆ.

ಜೋಗಿ ಪ್ರೇಮ್ ಹಿಂದೊಮ್ಮೆ ಮಾತಾಡುವಾಗ "ಹಾರು ಜನ ಹೀರೊಗಳನ್ನು ಹಾಕೊಂಡು ಸಿನಿಮಾ ಮಾಡ್ತಿದ್ದೀನಿ" ಎಂದಿದ್ದರು. ಅದು ಇಂದಿಗೂ ಟ್ರೋಲ್ ಆಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ 'ಯುಐ' ಸಿನಿಮಾದ ಹಾಡಿನಲ್ಲಿ ಸೇರಿಸಿದ್ದಾರೆ. ಈ ಬಗ್ಗೆನೂ ರಕ್ಷಿತಾ ಪ್ರೇಮ್ ಮಾತಾಡಿದ್ದಾರೆ.

Jogi Prem doesn t know the difference between Aaru and Haaru says wife Rakshita Prem

"ಅವರಿಗೆ ಬದುಕಿನ ಬಗ್ಗೆ ಸಿಕ್ಕಾಪಟ್ಟೆ ಉತ್ಸಾಹವಿದೆ. ಅದಕ್ಕೆ ಅವರು ತುಂಬಾ ಮಿಸ್ಟೇಕ್ ಮಾಡುತ್ತಾರೆ. ಅದಕ್ಕೆ ಹಾರು ಜನ ಹೀರೊಗಳು ಅಂದಿದ್ದು. ಯಾಕಂದ್ರೆ, ಅವನು ಮಂಡ್ಯದಿಂದ ಬಂದಿರೋದು. ಆರು, ಹಾರು ಹೇಳುವುದಕ್ಕೆ ಬರೋದಿಲ್ಲ. ಅದರ ಬಗ್ಗೆ ಹಾಡು ಕೂಡ ಮಾಡಿದ್ದಾರೆ. " ಎಂದು ರಕ್ಷಿತಾ ಪ್ರೇಮ್ ಹೇಳಿದ್ದಾರೆ.

ಇದೇ ಸಂದರ್ಶನದಲ್ಲಿ ಪ್ರೇಮ್ ಬಗ್ಗೆ ಯಾರಾದರೂ ಮಾತಾಡಿದರೆ ಕೋಪ ಬರುತ್ತೆ ಎಂದು ಅಸಮಧಾನ ಹೊರಹಾಕಿದ್ದಾರೆ. "ನನಗೆ ನನ್ನ ಬಗ್ಗೆ ಯಾರಾದರೂ ಮಾತಾಡಿದಾಗ ಕೋಪ ಬರೋದಿಲ್ಲ. ನಾನು ತುಂಬಾ ಆರಾಮಾಗಿ ತೆಗೆದುಕೊಂಡು ಹೋಗುತ್ತಿರುತ್ತೇನೆ. ಪ್ರೇಮ್ ಬಗ್ಗೆ ಮಾತಾಡಿದಾಗ ಕೋಪ ಬರುತ್ತೆ. ಯಾಕಂದರೆ, ಪ್ರೇಮ್ ಉದ್ದೇಶ ತಪ್ಪಾಗಿರಲ್ಲ. ಅವರದ್ದೊಂದು ಅದ್ಭುತ ಆತ್ಮ. ತುಂಬಾನೇ ಕ್ರಿಯೇಟಿವ್." ಎಂದು ಹೇಳಿದ್ದಾರೆ.

ಹಾಗೇ ಪತಿ ಪ್ರೇಮ್ ಮ್ಯೂಸಿಕ್ ಸೆನ್ಸ್ ಬಗ್ಗೆನೂ ಹೆಮ್ಮೆ ವ್ಯಕ್ತಪಡಿಸಿದ್ದಾರೆ. "ನಮ್ಮ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಲೇಖಕರು ಹಾಗೂ ಸಂಗೀತ ನಿರ್ದೇಶಕರು ಇದ್ದಾರೆ. ನನ್ನ ಪ್ರಕಾರ, ಪ್ರೇಮ್‌ ಬೆಸ್ಟ್‌ ಮ್ಯೂಸಿಕ್ ಕೊಟ್ಟಿದ್ದಾರೆ. ಅದು ಪ್ರೇಕ್ಷಕರನ್ನು ಹೃದಯವನ್ನು ತಟ್ಟಿದೆ. ನಾನು ಮದುವೆ ಆಗಿದ್ದೀನಿ ಅಂತಲ್ಲ. ಮದುವೆ ಆಗುವುದಕ್ಕಿಂತ ಮುನ್ನ ಬೆಸ್ಟ್ ಮ್ಯೂಸಿಕ್, ಲಿರಿಕ್ಸ್ ಕೊಟ್ಟಿದ್ದಾರೆ. ನಾನಷ್ಟೇ ಅಲ್ಲ. ತುಂಬಾ ಜನ ಹೇಳಿದ್ದಾರೆ." ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

More from Filmibeat

English summary
Jogi Prem has problem pronouncing Aa and Ha because he is from Mandya says Rakshita Prem
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X