CCL ಪಂದ್ಯದ ವೇಳೆ ಕಿಚ್ಚ ಸುದೀಪ್ ಕೆಟ್ಟ ಪದ ಬಳಕೆ.. ಅದಕ್ಕೆ ಜೋಗಿ ಪ್ರೇಮ್ ಕಾರಣ
ಕಿಚ್ಚ ಸುದೀಪ್ ಸ್ಯಾಂಡಲ್‌ವುಡ್‌ನ ಪ್ರಬುದ್ಧ ನಟ. ಒಂದೊಂದು ಪದವನ್ನು ಅಳೆದು ತೂಗಿ ಮಾತಾಡುತ್ತಾರೆ. ಒಂದೊಂದು ಪದವೂ ತೂಕದಿಂದ ಕೂಡಿರುತ್ತೆ. ಹೀಗಾಗಿ ಕಿಚ್ಚ ಸುದೀಪ್ ಮಾತುಗಳನ್ನು ಯಾರೂ ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಕಿಚ್ಚನ ಮಾತುಗಳಿಗೆ ಒಂದು ಗತ್ತು ಇದೆ. ಹಾಗೇ ಇಡೀ ಚಿತ್ರರಂಗ ಸೇರಿದಂತೆ ಅಭಿಮಾನಿಗಳು ಕೂಡ ಗೌರವದಿಂದ ಕಾಣುತ್ತಾರೆ.
ಬಿಗ್ ಬಾಸ್ ಮುಗಿಸಿ, ಸಿಸಿಎಲ್ ಪಂದ್ಯಗಳಲ್ಲಿ ಬ್ಯುಸಿಯಾಗಿರುವ ಕಿಚ್ಚ ಸುದೀಪ್ ವಿಡಿಯೋ ಒಂದು ವೈರಲ್ ಆಗಿತ್ತು. ಪಂದ್ಯದ ವೇಳೆ ಕಿಚ್ಚ ಸುದೀಪ್ ತನ್ನ ಸಹ ಆಟಗಾರರಿಗೆ ಕೆಟ್ಟ ಪದಗಳಲ್ಲಿ ಬೈಯ್ಯುತ್ತಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಪದಗಳನ್ನು ಬಳಸಿದ್ದಕ್ಕೆ ಕಿಚ್ಚ ಸುದೀಪ್ ಕ್ಲಾರಿಟಿ ಕೊಟ್ಟಿದ್ದಾರೆ.

ರಾಜ್ ಬಿ ಶೆಟ್ಟಿ ನಟನೆಯ 'ರಕ್ಕಸಪುರದೊಳ್' ಸಿನಿಮಾ ಇವೆಂಟ್‌ನಲ್ಲಿ ಕಿಚ್ಚ ಸುದೀಪ್ ಅತಿಥಿಯಾಗಿ ಆಗಮಿಸಿದ್ದರು. ಇದೇ ವೇಳೆ ಜೋಗಿ ಪ್ರೇಮ್ ಕೂಡ ಅತಿಥಿಯಾಗಿ ಬಂದಿದ್ದರು. ಈ ವೇಳೆ ಸಿಸಿಎಲ್ ಪಂದ್ಯದ ವೇಳೆ ಕೆಟ್ಟ ಪದವನ್ನು ಬಳಸಿದ್ದಕ್ಕೆ ಜೋಗಿ ಪ್ರೇಮ್ ಅವರೇ ಕಾರಣ. ಅವರೇ ನಮ್ಮ ಗುರುಗಳು ಎಂದು ಹೇಳಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.
ಮೊದಲಿಗೆ 'ರಕ್ಕಸಪುರದೊಳ್' ಸಿನಿಮಾವನ್ನು ನಿರ್ಮಾಣ ಮಾಡಿರುವ ರವಿವರ್ಮಾ ಅವರ ಬಗ್ಗೆ ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡರು. "96-97 ಆಗ ನನ್ನ ತರಾನೇ ಚಿತ್ರರಂಗಕ್ಕೆ ಕನಸುಗಳನ್ನು ಹೊತ್ತುಕೊಂಡು ಬಂದತಹ ಒಬ್ಬ ಹುಡುಗ ರವಿ ವರ್ಮ. ನಾವಿಬ್ಬರೂ ಒಟ್ಟೊಟ್ಟಿಗೆ ಚಿತ್ರರಂಗಕ್ಕೆ ಬಂದಿದ್ದು. ಬೈಕ್, ಕಾರು ಜಂಪ್ಸ್ ಎನೇ ಇದ್ದರೂ ಇವರೇ ಮಾಡುತ್ತಿದ್ದರು. ಚಂದು ಸಿನಿಮಾದ ಶೂಟಿಂಗ್‌ನಲ್ಲಿ ನೀವೇನು ಗ್ರೌಂಡ್‌ನಲ್ಲಿ ಡೈಲಾಗ್ ಹೇಳಿದ್ರಲ್ಲ. ಅದಕ್ಕಿಂತ ಕೆಟ್ಟದಾಗಿ ಬೈಸಿಕೊಂಡಿದ್ದಾರೆ. ಚಂದು ಸಿನಿಮಾ ಟೈಮ್‌ನಲ್ಲಿ ಬಹುತೇಕ ಇವರು ಜೀವ ಕಳೆದುಕೊಳ್ಳುತ್ತಿದ್ದರು. ನನ್ನ ಕಣ್ಣ ಎದುರಿಗೆ ಬೈಕ್ ಜಂಪ್ ಓವರ್ ಆಗಿ ಮಾಡುವುದಕ್ಕೆ ಹೋಗಿ ಬಾಕ್ಸ್ ಮಿಸ್ ಆಗಿ ಲಾಸ್ಟ್ ಎಡ್ಜ್‌ನಲ್ಲಿ ಬಿದಿದ್ದರು. ಅವರನ್ನು ಬಿದ್ದಿದ್ದು ಎದ್ದಿದ್ದು ಎಲ್ಲವನ್ನೂ ನೋಡಿದ್ದೇನೆ." ಎಂದು ರವಿವರ್ಮ ಅವರ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ರು.
ಇದಾದ ಬಳಿಕ ತನಗೆ ಬೈಗುಳಗಳನ್ನು ಕಲಿಸಿಕೊಟ್ಟಿದ್ದೇ ಜೋಗಿ ಪ್ರೇಮ್ ಎಂದು ಹೇಳಿದ್ದಾರೆ. "ಪ್ರೇಮ್ ವಿಚಾರಕ್ಕೆ ಬರುತ್ತೇನೆ. ಅವರು ಬಂದು ಈಗೇನು ನನಗೆ ಹೇಳಿದರು. ಅವರೇನೋ ಆವೇಶದಲ್ಲಿ ಹೇಳುತ್ತಿದ್ದರು ಅಂತ. ಆವೇಶದಲ್ಲೇನು ಹೇಳುತ್ತಿರಲಿಲ್ಲ. ಕಥೆ ಹೇಳುವಾಗ ಅಮ್ಮ, ಅಕ್ಕ ಎಲ್ಲರನ್ನೂ ತರುತ್ತಾರೆ. ನಮಗೆ ಕಥೆ ಕೇಳಬೇಕೋ.. ಬೈಗುಳಗಳನ್ನು ಕೇಳಬೇಕೋ ಗೊತ್ತಾಗಲ್ಲ. ಕೆಲವೊಮ್ಮೆ ನನಗೆ ಬೈಯ್ಯುತ್ತಿದ್ದಾರಾ ಅಂತ ಅನಿಸುತ್ತಿತ್ತು. ಒಮ್ಮೆ ಕಥೆ ಮುಗಿಯುವ ತನಕ ತಡೆದುಕೊಂಡೆ. ಪ್ರೇಮ್‌ದು ಒಂದು ಸ್ಟೈಲ್ ಇದೆ. ಅವರು ಕಥೆ ಹೇಳುವಾಗ ಬಿಲ್ಡಪ್ ಜಾಸ್ತಿ. ಒಂದು ಡೈಲಾಗ್ ಹೇಳ್ತಾರೆ. ಕಂಟಿನ್ಯೂ ಮಗಾ ಅಂತಾರೆ. ನನಗ ಡೈಲಾಗ್ ಕೇಳಬೇಕೋ.. ಕಥೆ ಹೇಳಬೇಕೋ.. ಗೊತ್ತಾಗಲ್ಲ" ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ಹಾಗೇ ಸಿಸಿಎಲ್ ಪಂದ್ಯದ ವೇಳೆ ಕೆಟ್ಟ ಪದವನ್ನು ಬಳಸಿದ್ದಕ್ಕೂ ಜೋಗಿ ಪ್ರೇಮ್ ಅವರೇ ಕಾರಣವೆಂದು ಹೇಳಿದ್ದಾರೆ. "ಮೊನ್ನೆ ನನ್ನದು ರೀಲ್ ಏನು ಬಂತು.. ಅದಕ್ಕೆ ನನ್ನ ಗುರುಗಳು ಪ್ರೇಮ್. ನೋಡಿ ಈ ಡೈಲಾಗ್ ಅನ್ನು ಮೊದಲ ಬಾರಿ ಸೆಲೆಬ್ರೆಟ್ ಮಾಡಿದ ವ್ಯಕ್ತಿ ಇವರು ತಾನೆ. ನಾಳೆ ಸೆಮಿಫೈನಲ್‌ನಲ್ಲಿ ಏನಾದರೂ ಪದಗಳು ಬಂದರೆ, ಅದಕ್ಕೆ ಇವರೇ ಪ್ರೇರಣೆ. ಅದರಲ್ಲಿ ನಮ್ಮದೇನು ಇರೋದಿಲ್ಲ." ಎಂದು ಕಿಚ್ಚ ಸುದೀಪ್ ಜೋಗಿ ಪ್ರೇಮ್ ಕಡೆಗೆ ಬೊಟ್ಟು ಮಾಡಿ ತೋರಿಸಿದ್ದಾರೆ. ಇದಕ್ಕೆ ಪ್ರೇಮ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಕಿಚ್ಚನ ಆರೋಪಕ್ಕೆ ಅಲ್ಲೇ ವೇದಿಕೆ ಮೇಲಿದ್ದ ಜೋಗಿ ಪ್ರೇಮ್ ಕೂಡ ಸ್ಪಷ್ಟನೆ ಕೊಟ್ಟಿದ್ದಾರೆ. "ನಾನು ಬರಬೇಕಾದರೆ ಒಂದು ರೀಲ್ ನೋಡಿದೆ. ಕರ್ನಾಟಕದಲ್ಲಿ ಫುಲ್ ಫೇಮಸ್ ಅದೇನೆ ಈಗ. ರವಿ (ನಿರ್ದೇಶಕ) ಒಮ್ಮೆ ವಿಲನ್ ಸಿನಿಮಾದ ಕಥೆಯನ್ನು ಡಾರ್ಲಿಂಗ್‌ಗೆ (ಕಿಚ್ಚ) ಹೇಳುತ್ತಿದ್ದ. ಆಗ ಕಿಚ್ಚ ಸುದೀಪ್ ಒಬ್ಬರೂ ರೆಸ್ಪೆಕ್ಟ್ ಇಲ್ಲದೆ ಮಾತಾಡುತ್ತಾರೆ ಅಂತ ನನಗೆ ಬೈದರು. ಈಗ ಈ ವೈರಲ್ ವಿಡಿಯೋ ನೋಡಿ ನನಗೆ ಖುಷಿ ಆಯ್ತು. ಸದ್ಯ ನಮ್ಮ ರೂಟ್‌ಗೆ ಬಂದ್ರಲ್ಲ ಅಂತ ಖುಷಿ ಆಯ್ತು. ನಾನು ಕೊನೆವರೆಗೂ ನಿಮಗೆ ಬಿಗ್ ಫ್ಯಾನ್. ಅದರಲ್ಲೂ ಆ ಡೈಲಾಗ್‌ಗೆ ನಾನು ಬಿಗ್ ಫ್ಯಾನ್" ಎಂದು ಕಿಚ್ಚನಿಗೆ ಜೋಗಿ ಪ್ರೇಮ್ ಹೇಳಿದ್ದಾರೆ.


Click it and Unblock the Notifications










