'ಕೆಡಿ' ಪಿಕ್ಚರೇ ಒಂದು ಟ್ರೈಲರ್.. ನೀವೇ ಸ್ಟೋರಿ ಬರ್ಕೋಬೇಕು"; ಜೋಗಿ ಪ್ರೇಮ್
ಜೋಗಿ ಪ್ರೇಮ್ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್‌ನಲ್ಲಿ ಬರುತ್ತಿರೋ 'ಕೆಡಿ ದಿ ಡೆವಿಲ್' (KD The Devil) ರಿಲೀಸ್‌ಗೆ ದಿನ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಕೆವಿಎನ್ ಪ್ರೊಡಕ್ಷನ್ ಅಡ್ವಾನ್ಸ್ ಬುಕಿಂಗ್ ಅನ್ನೂ ಓಪನ್ ಮಾಡಿದೆ. ಬೆಳಗ್ಗೆ ಆರು ಗಂಟೆಯಿಂದಲೇ ಫ್ಯಾನ್ಸ್ ಶೋ ಆರಂಭ ಆಗುತ್ತಿದೆ. ಧ್ರುವ ಫ್ಯಾನ್ಸ್ ಮುಗಿಬಿದ್ದು ಟಿಕೆಟ್‌ಗಳನ್ನು ಖರೀದಿ ಮಾಡುತ್ತಿದ್ದಾರೆ. ಏಪ್ರಿಲ್ 30ಕ್ಕೆ 'ಕೆಡಿ ದಿ ಡೆವಿಲ್' ಗ್ರ್ಯಾಂಡ್ ರಿಲೀಸ್ ಆಗಲಿದೆ.
'ಕೆಡಿ ದಿ ಡೆವಿಲ್' ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತೆ ಎಂದು ಹೇಳಲಾಗಿತ್ತು. ಆದ್ರೀಗ ಮೊದಲು ಕನ್ನಡದಲ್ಲಿ ರಿಲೀಸ್ ಮಾಡಿ, ಆ ಬಳಿಕ ಪರ ಭಾಷೆಯಲ್ಲಿ ರಿಲೀಸ್ ಮಾಡುವುದಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ನಿರ್ಧಾರಿಸಿದೆ. ಹೀಗಾಗಿ ಜೋಗಿ ಪ್ರೇಮ್ ಅಂಡ್ ಟೀಮ್ ಕನ್ನಡದಲ್ಲಿಯೇ ಸಿನಿಮಾ ಪ್ರಚಾರ ಮಾಡುತ್ತಿದೆ. ಈ ವೇಳೆ ಜೋಗಿ ಪ್ರೇಮ್ ಇಡೀ ಸಿನಿಮಾವೇ ಒಂದು ದೊಡ್ಡ ಟ್ರೈಲರ್‌ನಂತೆ ಇರುತ್ತೆ ಎಂದು ಹೇಳಿದ್ದಾರೆ.

ಟ್ರೈಲರ್ ಲಾಂಚ್ ಮಾಡುವ ಸಮಯದಲ್ಲೂ ಪ್ರೇಮ್ 'ಕೆಡಿ ದಿ ಡೆವಿಲ್' ಕೂಡ ಟ್ರೈಲರ್‌ನಂತೇ ಇರುತ್ತೆ ಎಂದಿದ್ದರು. ಅದಕ್ಕೆ ಇತ್ತೀಚೆಗೆ ಯೂಟ್ಯೂಬ್‌ಗಳಿಗೆ ನೀಡಿದ ಸಂದರ್ಶನದಲ್ಲಿ ಮತ್ತೆ ಹೇಳಿದ್ದಾರೆ. ಇಡೀ ಸಿನಿಮಾ ಟ್ರೈಲರ್ ಅಂತ ಹೇಳಿದ್ದು ಯಾಕೆ? ಸಿನಿಮಾ ನೋಡಿ ಬರುವ ಜನರೇ ಕಥೆಯನ್ನು ಯಾಕೆ ಹೆಣೆದುಕೊಳ್ಳಬೇಕು? ಅನ್ನೋ ವಿಷಯಗಳ ಬಗ್ಗೆ ಕನ್ನಡ ಪಿಕ್ಚರ್ ಯೂಟ್ಯೂಬ್‌ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಅದರ ಒಂದು ಝಲಕ್ ಇಲ್ಲಿದೆ.
'ಕೆಡಿ' ಪಿಕ್ಚರೇ ಟ್ರೈಲರ್
ಜೋಗಿ ಪ್ರೇಮ್ ನಿರ್ದೇಶಿಸಿದ 'ಕೆಡಿ' ಆರಂಭ ಆದಲ್ಲಿಂದ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದೆ. ಇತ್ತೀಚೆಗೆ ಹಾಡಿನ ಸಾಹಿತ್ಯದಿಂದ ವಿವಾದಕ್ಕೂ ಸಿಕ್ಕಿಕೊಂಡಿತ್ತು. ಆದರೂ ಅದೆಲ್ಲವನ್ನೂ ಪಕ್ಕಕ್ಕಿಟ್ಟು ಜೋಗಿ ಪ್ರೇಮ್ ಟ್ರೈಲರ್ ರಿಲೀಸ್ ಮಾಡಿದ್ದರು. ಅದೂ ಕೂಡ ಅಪ್‌ಲೋಡ್ ಮಾಡಿದಷ್ಟೇ ವೇಗವಾಗಿ ತೆಗೆದು ಹಾಕಲಾಗಿತ್ತು. ಇಷ್ಟೆಲ್ಲ ಅಡೆತಡೆ ಇದ್ದರೂ ಪ್ರೇಮ್ ಭರ್ಜರಿಯಾಗಿ ಪ್ರಚಾರವನ್ನು ಮಾಡುತ್ತಿದ್ದಾರೆ. ಈ ವೇಳೆ 'ಕೆಡಿ' ಇಡೀ ಸಿನಿಮಾ ಟ್ರೈಲರ್ ಇದ್ದಂತೆ ಎಂದಿದ್ದಾರೆ. "ಕೆಡಿ ಇದು ಸಿನಿಮಾ ಅಲ್ಲ. ಇದೊಂದು ಟ್ರೈಲರ್. ಈ ಪಿಕ್ಚರೇ ಟ್ರೈಲರ್. ಈಗ ನೀವು ಟ್ರೈಲರ್ ನೋಡಿದ್ದೀರಲ್ವಾ? ಇದು ಸ್ವಲ್ಪ ದೊಡ್ಡ ಟ್ರೈಲರ್. ಇದು ಎರಡೂವರೆ ಗಂಟೆ ಟ್ರೈಲರ್" ಎಂದು ಪ್ರೇಮ್ ಹೇಳಿದ್ದಾರೆ.
ನೀವೇ ಸ್ಟೋರಿ ಮಾಡಿಕೊಳ್ಳಬೇಕು
ಎಲ್ಲಕ್ಕಿಂತ ಹೆಚ್ಚಾಗಿ 'ಕೆಡಿ' ಸಿನಿಮಾ ನೋಡಿದ ಬಳಿಕ ಕಥೆಯನ್ನೇ ಹೆಣೆದುಕೊಳ್ಳಬೇಕು ಎಂದಿದ್ದಾರೆ. "ಪ್ರತಿ ಪಾತ್ರಕ್ಕೆ ಜಸ್ಟಿಫಿಕೇಷನ್ ಹೋಗುತ್ತೆ. ಸಿನಿಮಾ ನೋಡಿ ಹೊರಗೆ ಬರುವಾಗ ಕಥೆಯನ್ನು ನೀವೇ ಮಾಡಿಕೊಳ್ಳಬೇಕು. ನಾನು ಇಲ್ಲಿ ಸ್ಟೋರಿ ಟೆಲ್ಲರ್ ಅಲ್ಲ. ಈ ಸಿನಿಮಾನೇ ಟ್ರೈಲರ್. ಹೊರಗಡೆ ನೀವು ಬರುವಾಗ ಸ್ಟೋರಿಯನ್ನು ನೀವೇ ಮಾಡಿಕೊಳ್ಳಬೇಕು. ಪಾತ್ರಗಳು ಮಾತ್ರ ಕನೆಕ್ಟ್ ಆಗುತ್ತಲೇ ಇರುತ್ತವೆ. ಸ್ಕ್ರೀನ್ ಪ್ಲೇನಲ್ಲಿ ಬದಲಾಯಿಸೋಣ ಅಂತ ಅಷ್ಟೇ." ಎಂದು ಹೇಳಿದ್ದಾರೆ.

ದಾಕ್ ದೇವ ಅಲ್ಲ.. ಅದು ಡಾಕ್ ದೇವ
ಹಾಗೇ ಸಿನಿಮಾದ ಎಲ್ಲಾ ಪಾತ್ರಗಳು ಪವರ್‌ಫುಲ್ ಆಗಿವೆ ಎಂದು ಸುಳಿವು ನೀಡಿದ್ದಾರೆ. "ಕೆಡಿ ಹೆಸರೇ ಸತ್ಯವತಿ ಅಲ್ವಾ. ಸತ್ಯಕ್ಕೆ ದೂರವಾದ ಮಾತು ಅದು. ಇಲ್ಲಿ ಇರೋದೆಲ್ಲವೂ ಮೋಸ್ಟ್ ಪವರ್‌ಫುಲ್ ಪಾತ್ರಗಳು. ಕಾಳಿದಾಸ, ಡಾಕ್ ದೇವ ಕೂಡ ಅಷ್ಟೇ ಪವರ್‌ಫುಲ್ ಪಾತ್ರಗಳು. ಎಲ್ಲರೂ ತಿಳ್ಕೊಂಡಿದ್ದಾರೆ. ದಾಕ್ ದೇವ ಅಂತ. ಅದು ದಾಕ್ ಅಲ್ಲ. ಡಾಕ್ ದೇವ. ಡಾಕ್ ಅಂದರೆ, ಗರಡಿಯಲ್ಲಿ ಪಟ್ಟುಗಳನ್ನು ಹಾಕುತ್ತಾರೆ. ಅದನ್ನು ಡಾಕ್ ಅಂತ ಕರೆಯುತ್ತಾರೆ. ಅದು ಕುಸ್ತಿಯ ಒಂದು ಪಟ್ಟು. ಈ ಪಟ್ಟಿಗೆ ದೇವ ಫೇಮಸ್. ಅದಕ್ಕೆ ಡಾಕ್ ದೇವ ಅಂತ ಕರೆಯುತ್ತಾರೆ." ಎಂದಿದ್ದಾರೆ.
ಐ ಲವ್ ಯು ಹೇಳಿಸಿಲ್ಲ
"ಮಚ್ಚು ಲಕ್ಷ್ಮಿ ಪಾತ್ರದಲ್ಲಿ ರೀಷ್ಮಾ ಮಾಡಿದ್ದಾರೆ. ರೀಷ್ಮಾ ಹಾಗೂ ಧ್ರುವ ಪಾತ್ರ ಪವರ್‌ಪುಲ್ ಆಗಿದೆ. ನಾನು ಯಾರಿಂದಲೂ ಐ ಲವ್ ಯು ಅಂತ ಹೇಳಿಸಲೇ ಇಲ್ಲ. ಆದರೆ, ಇಲ್ಲಿ ಲವ್ ಸ್ಟೋರಿ ಇರುತ್ತೆ. ಇಲ್ಲಿ ಎಕ್ಸ್‌ಪ್ರೆಷನ್ ಇದೆ. ಹಾಗಾಗಿ ಮಚ್ಚು ಲಕ್ಷ್ಮಿ ಅನ್ನೋದು ಒಳ್ಳೆಯ ಪಾತ್ರ. ಮಂಜುಳ, ಮಾಲಾಶ್ರೀ ಅವರನ್ನು ನೆನಪಿಸುತ್ತೆ. ರವಿಚಂದ್ರನ್ ಅವರದ್ದು ಅಣ್ಣಯ್ಯಪ್ಪ ಪಾತ್ರ. ಈ ಪಾತ್ರವನ್ನು ಜನರೇ ರಿಲೇಟ್ ಮಾಡಿಕೊಳ್ಳಬೇಕು. ಧರ್ಮ ಪಾತ್ರದಲ್ಲಿ ರಮೇಶ್ ಸರ್ ಪಾತ್ರ ಅದ್ಭುತ." ಎಂದು ಪ್ರೇಮ್ ಹೇಳಿದ್ದಾರೆ.


Click it and Unblock the Notifications