"ನಾನು ಕ್ರಿಯೇಟರ್ ಅಲ್ಲ.. ನಾನೊಬ್ಬ ಕಳ್ಳ"; ಜೋಗಿ ಪ್ರೇಮ್
ಕನ್ನಡದ ಬಿಗ್ ಬಜೆಟ್ ಸಿನಿಮಾ 'ಕೆಡಿ ದಿ ಡೆವಿಲ್' ಇದೇ ವಾರ ರಿಲೀಸ್ ಆಗುತ್ತಿದೆ. ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ಸಂಜಯ್ ದತ್, ಶಿಲ್ಪಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಈಗಾಗಲೇ ಈ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ. ಹೀಗಾಗಿ ಕೊನೆಯ ಹಂತದ ಪ್ರಚಾರದಲ್ಲಿ ನಿರ್ದೇಶಕ ಜೋಗಿ ಪ್ರೇಮ್ ಫುಲ್ ಬ್ಯುಸಿಯಾಗಿದ್ದಾರೆ. 'ಕೆಡಿ' ಸಿನಿಮಾದ ಬಗ್ಗೆ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.
'ಕೆಡಿ ದಿ ಡೆವಿಲ್' ಇಡೀ ಸಿನಿಮಾವೇ ಒಂದು ದೊಡ್ಡ ಟ್ರೈಲರ್ ಇದ್ದಂತೆ. ಸಿನಿಮಾ ನೋಡಿ ಬಂದವರು ಕಥೆಯನ್ನು ಅವರೇ ಹೆಣೆದುಕೊಳ್ಳಬೇಕು ಎಂದು ಹೇಳಿ ಅಚ್ಚರಿ ಮೂಡಿಸಿದ್ದರು. ಇನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿರುವ ಈ ಸಿನಿಮಾ ಕರ್ನಾಟಕದಾದ್ಯಂತ ಅದ್ಧೂರಿಯಾಗಿ ಏಪ್ರಿಲ್ 30ರಂದು ಬಿಡುಗಡೆ ಮಾಡುತ್ತಿದೆ.

ಜೋಗಿ ಪ್ರೇಮ್ ಇತ್ತೀಚೆಗೆ ರಾಜ್ ನ್ಯೂಸ್‌ಗೆ ಸಂದರ್ಶನವನ್ನು ನೀಡಿದ್ದರು. ಈ ವೇಳೆ ಸಿನಿಮಾದಲ್ಲಿ ಬರುವ ರೀಷ್ಮಾ ನಾಣಯ್ಯ ಪಾತ್ರದ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ರೀಷ್ಮಾ ನಾಣಯ್ಯ ಪಾತ್ರಕ್ಕೆ ಮಚ್ಚು ಲಕ್ಷ್ಮಿ ಅನ್ನೋ ಹೆಸರು ಹೇಗೆ ಹುಟ್ಟಿಕೊಳ್ತು ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಈ ವೇಳೆ "ನಾನು ಕ್ರಿಯೇಟರ್ ಅಲ್ಲ.. ನಾನೊಬ್ಬ ಕಳ್ಳ" ಎಂದು ಹೇಳಿಕೊಂಡಿದ್ದಾರೆ. ಅದ್ಯಾಕೆ ಹೀಗಂದ್ರು ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಜೋಗಿ ಪ್ರೇಮ್ ಸಿನಿಮಾ ಬಿಡುಗಡೆಗೂ ಮುನ್ನವೇ ಸಿಕ್ಕಾಪಟ್ಟೆ ಹೈಪ್ ಮಾಡುತ್ತವೆ. ಪ್ರೇಕ್ಷಕರನ್ನು ಥಿಯೇಟರ್‌ಗೆ ಬರುವಂತೆ ಒತ್ತಡ ಹಾಗುತ್ತವೆ. ಹಾಗೇ 'ಕೆಡಿ' ಕೂಡ ಅಂತಹದ್ದೇ ಒಂದು ವೈಬ್ ಅನ್ನು ಕ್ರಿಯೇಟ್ ಮಾಡಿದೆ. ಆದರೆ, ಏಪ್ರಿಲ್ 30ರಂದು ಸಿನಿಮಾದ ಅಸಲಿಯತ್ತು ಏನು ಅನ್ನೋದು ಗೊತ್ತಾಗುತ್ತೆ. ಸದ್ಯ ಟ್ರೈಲರ್, ಹಾಡುಗಳು ಪ್ರೇಕ್ಷಕರಿಗೆ ಕಿಕ್ ಕೊಟ್ಟಿವೆ. ಅದರಲ್ಲೂ ಧ್ರುವ ಸರ್ಜಾ ಹಾಗೂ ರೀಷ್ಮಾ ನಾಣಯ್ಯ ಇಬ್ಬರ ಕೆಮಿಸ್ಟ್ರಿ ಇಂಟ್ರೆಸ್ಟಿಂಗ್ ಎನಿಸುತ್ತಿದೆ.
ಜೋಗಿ ಪ್ರೇಮ್ ರೀಷ್ಮಾ ನಾಣಯ್ಯ ಪಾತ್ರಕ್ಕೆ ಮಚ್ಚು ಲಕ್ಷ್ಮಿ ಅನ್ನೋ ಹೆಸರು ಹುಟ್ಟಿದ್ದೇಗೆ? ಅನ್ನೋದು ರಿವೀಲ್ ಮಾಡಿದ್ದಾರೆ. ಪ್ರೇಮ್‌ಗೆ ಬಹಳ ವರ್ಷಗಳಿಂದ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ತಮ್ಮ ಕುಟುಂಬದಲ್ಲಿ ಒಬ್ಬರಂತೆ ಇದ್ದ ಆ ವ್ಯಕ್ತಿ ಇತ್ತೀಚೆಗೆ ತೀರಿಕೊಂಡಿದ್ದಾರು. ಅವರಿಗೆ ಒಬ್ಬ ಗರ್ಲ್‌ಫ್ರೆಂಡ್ ಇದ್ದರು. ಯಾವಾಗಲೂ ಪ್ರೇಮ್ ಬಳಿಕ ತನ್ನ ಗೆಳತಿ ಬಗ್ಗೆ ಚರ್ಚೆ ಮಾಡುತ್ತಿದ್ದರು. ಆ ವೇಳೆ ಕುತೂಹಲಕ್ಕೆ ಪ್ರೇಮ್ ಆ ಹುಡುಗಿಯ ಹೆಸರನ್ನು ಕೇಳಿದ್ದರು. ಆಗ ಅವರು ಡ್ರೈವರ್ ಮಚ್ಚು ಲಕ್ಷ್ಮಿ ಎಂದು ಹೇಳಿದ್ದರು. ಅದೇ ಹೆಸರನ್ನು ರೀಷ್ಮಾ ನಾಣಯ್ಯ ಪಾತ್ರಕ್ಕೆ ಇಟ್ಟಿದ್ದಾಗಿ ಹೇಳಿದ್ದಾರೆ.

ರೀಷ್ಮಾ ನಾಣಯ್ಯ ಪಾತ್ರದ ಬಗ್ಗೆ ರಿವೀಲ್ ಮಾಡುವಾಗಲೇ "ನಾನೊಬ್ಬ ಕ್ರಿಯೇಟರ್ ಅಲ್ಲ.. ನಾನೊಬ್ಬ ಕಳ್ಳ" ಎಂದು ಹೇಳಿದ್ದಾರೆ. "ನನ್ನ ಡ್ರೈವರ್ ತೀರಿಕೊಂಡು ಎರಡು ಮೂರು ತಿಂಗಳಾಯ್ತು. ಅವನು ಒಂದು ಹುಡುಗಿಯನ್ನು ಲವ್ ಮಾಡಿದ್ದ. ಅವಳು ಶ್ರೀರಾಮಪುರದಲ್ಲಿ ಇದ್ದಳು. ಯಾಕೋ ಕೆಲಸಕ್ಕೆ ಬರಲಿಲ್ಲ ಅಂತ ಕೇಳಿದರೆ, ನಮ್ಮ ಹುಡುಗಿ ಬರುತ್ತೇನೆ ಅಂತ ಹೇಳಿದ್ದಾಳೆ ಅವಳಿಗೆ ಜೂಡಿದಾರ ಕೊಡಿಸಬೇಕು ಅಂತ ಹೇಳಿದ್ದ. ಆಗ ನಾನು ಯಾರೋ ಅವಳು ಅಂತ ಹೇಳಿದೆ. ಅದೇ ಸರ್ ಮಚ್ಚು ಲಕ್ಷ್ಮಿ ಅಂತ ಹೇಳಿದ. ಅದನ್ನೇ ರೀಷ್ಮಾ ನಾಣಯ್ಯ ಪಾತ್ರಕ್ಕೆ ಇಟ್ಟಿದ್ದೇನೆ. ನಾನು ಕ್ರಿಯೇಟರ್ ಅಲ್ಲ. ನಾನೊಬ್ಬ ಕಳ್ಳ. ನಾನು ಎಲ್ಲ ಹೇಳಿಕೊಳ್ಳುತ್ತೇನೆ. ನನಗೇನು ತೊಂದರೆ ಇಲ್ಲ." ಎಂದು ಪ್ರೇಮ್ ಹೇಳಿಕೊಂಡಿದ್ದಾರೆ.
ಮಚ್ ಲಕ್ಷ್ಮಿ ಅಂತ ಯಾಕೆ ಇಟ್ಟಿದ್ದೀವಿ ಅಂದರೆ, ಅವಳು ಮಾತಾಡುವ ರೀತಿ ಇದೆಯಲ್ಲ. ಅದಕ್ಕೆ ಇಟ್ಟಿದ್ದೇವೆ. ಸಿನಿಮಾ ನೋಡಿ ಹೊರ ಬಂದಾಗ ಈ ಪಾತ್ರವನ್ನು ನೋಡಿ ಏನು ಮಾಡಿದೆ ಈ ಹುಡುಗಿ ಅಂತ ಸಲ್ಯೂಟ್


Click it and Unblock the Notifications