ಕನ್ನಡ ಚಿತ್ರರಂಗಕ್ಕೆ ಪ್ರೇಮ್ ಪುತ್ರ ಸೂರ್ಯ; ಸೆಕೆಂಡುಗಳಲ್ಲಿ ಎಂಟ್ರಿ ಕೊಟ್ಟು ಎಗ್ಸಿಟ್

'ಕೆಡಿ ದಿ ಡೆವಿಲ್' ಸಿನಿಮಾ ಇಂದು (ಏಪ್ರಿಲ್ 30) ರಾಜ್ಯದಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದೆ. ಮೊದಲ ದಿನವೇ ಸುಮಾರು 1800ಕ್ಕೂ ಅಧಿಕ ಶೋಗಳು ಪ್ರದರ್ಶನ ಆಗುತ್ತಿವೆ. ಫಸ್ಟ್ ಡೇ ಫಸ್ಟ್ ಶೋ ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಮಾಸ್ ಪ್ರಿಯರಿಗೆ ಈ ಸಿನಿಮಾ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಅದರಲ್ಲೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗಂತೂ ಈ ಸಿನಿಮಾ ಸಖತ್ ಕಿಕ್ ಕೊಟ್ಟಿದೆ.

ಇದೂವರೆಗೂ ಜೋಗಿ ಪ್ರೇಮ್ ನಿರ್ದೇಶಿಸಿದ ಸಿನಿಮಾಗಳಲ್ಲಿ ಏನಾದರೂ ಸರ್ಪ್ರೈಸ್ ಇಟ್ಟೇ ಇಟ್ಟಿರುತ್ತಾರೆ. ಯಾವುದಾದರೂ ಒಂದು ಸ್ಪೆಷಲ್ ಕ್ಯಾರೆಕ್ಟರ್ ಅನ್ನು ಇಟ್ಟಿರುತ್ತಾರೆ. 'ಕೆಡಿ ದಿ ವಿಲನ್' ಸಿನಿಮಾದಲ್ಲೂ ಒಂದು ಸರ್ಪ್ರೈಸ್ ಇಟ್ಟಿದ್ದಾರೆ. ತಮ್ಮ ಪುತ್ರ ಸೂರ್ಯನನ್ನು ಈ ಸಿನಿಮಾ ಮೂಲಕ ಶಾರ್ಟ್ ಎಂಟ್ರಿ ಕೊಡಿಸಿದ್ದಾರೆ. ಹೀಗೆ ಬಂದು ಪ್ರೇಕ್ಷಕರಿಗೆ ಚಮಕ್ ಕೊಟ್ಟು ಹೋಗುವ ಪಾತ್ರವದರೂ ಸರ್ಪ್ರೈಸ್ ಎನಿಸಿದೆ.

Jogi Prem son Surya special entry in KD The Devil movie he will be seen in few seconds

ಸಿನಿಮಾ ಬಿಡುಗಡೆಗೂ ಮುನ್ನ ಚಿಕ್ಕದೊಂದು ಸುಳಿವನ್ನು ಪ್ರೇಮ್ ಕೊಟ್ಟಿರಲಿಲ್ಲ. ತಮ್ಮ ಮಗನ ಚಿತ್ರರಂಗದ ಪ್ರವೇಶದ ಬಗ್ಗೆ ಒಂದೇ ಒಂದು ಮಾತು ಕೂಡ ಆಡಿರಲಿಲ್ಲ. ರಕ್ಷಿತಾ ಪ್ರೇಮ್ ಕೂಡ ಸುಳಿವು ಕಟ್ಟಿರಲಿಲ್ಲ. ಈಗ ಇಬ್ಬರ ಅಭಿಮಾನಿಗಳಿಗೂ ಒಂದೊಳ್ಳೆ ಸರ್ಪ್ರೈಸ್ ಕೊಟ್ಟಿದ್ದಾರೆ. ಹಾಗಿದ್ದರೆ, ಪ್ರೇಮ್ ಪುತ್ರ ನಟಿಸಿದ ಪಾತ್ರ ಹೇಗಿದೆ? ಸೀನ್ ಏನು? ತಿಳಿಯುವುದಕ್ಕೆ ಮುಂದೆ ಓದಿ.

ಸಿನಿಮಾದಲ್ಲಿರುವ ಪ್ರತಿಯೊಂದು ಪಾತ್ರಗಳಿಗೂ ಪ್ರೇಮ್ ಬಿಲ್ಡಪ್ ಕೊಡುವುದರಲ್ಲಿ ಎತ್ತಿದ ಕೈ. ಅದರಲ್ಲೂ ಸಿನಿಮಾದ ಪ್ರಮುಖ ಪಾತ್ರಗಳಿಗೆ ಸಖತ್ ಬಿಲ್ಡಪ್ ಇದ್ದೇ ಇರುತ್ತೆ. ಹೀಗಾಗಿ ಮಾಸ್ ಪ್ರಿಯರು ಬೇಗನೇ ಕನೆಕ್ಟ್ ಆಗುತ್ತಾರೆ. 'ಕೆಡಿ ದಿ ವಿಲನ್‌'ನಲ್ಲೂ ಧ್ರುವ ಸೇರಿದಂತೆ ಸಿನಿಮಾ ಪ್ರಮುಖ ಪಾತ್ರಗಳಿಗೆ ಸಖತ್ ಆಗಿಯೇ ಬಿಲ್ಡಪ್ ಕೊಟ್ಟಿದ್ದಾರೆ. ಇನ್ನು ಪುತ್ರನ ಎಂಟ್ರಿ ಹೇಗಿರಬಹುದು ಅಂತ ಊಹಿಸಿ.

ಪ್ರೇಮ್ ತಮ್ಮ ಪುತ್ರನಿಗಾಗಿ ಒಂದು ಸೀನ್ ಕ್ರಿಯೇಟ್ ಮಾಡಿದ್ದಾರೆ. ಧ್ರುವ ಸರ್ಜಾ ಹಾಗೂ ಪುತ್ರ ಸೂರ್ಯ ನಡುವಿನ ಒಂದು ಸೀನ್ ಅವರ ಅಭಿಮಾನಿಗಳಿಗೆ ಸರ್ಪ್ರೈಸ್ ಎಲಿಮೆಂಟ್ ಆಗಿದೆ. ಕೆಲವೇ ಸೆಕೆಂಡುಗಳಲ್ಲಿ ಬಂದು ಹೋಗುವ ಸೂರ್ಯನ ಎಂಟ್ರಿಗೂ ಶಿಳ್ಳೆಗಳು ಬೀಳುತ್ತವೆ. ಇಬ್ಬರ ನಡುವೆ ಚಿಕ್ಕದೊಂದು ಡೈಲಾಗ್ ಕೂಡ ಇದೆ.

English summary
Jogi Prem son Surya special entry in KD The Devil movie he will be seen in few seconds.
Read more about: dhruva sarja prem kannada movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X