ಸಹೋದರಿ ಲಗ್ನ ಮಾಡಿ ಸಂಭ್ರಮಿಸಿದ ಮೇಘಾ ಶೆಟ್ಟಿ: "ಅಕ್ಕ ನಿನ್ನ ಮದುವೆ ಯಾವಾಗ?" ಎಂದ ಫ್ಯಾನ್ಸ್

'ಜೊತೆಜೊತೆಯಲಿ' ಧಾರಾವಾಹಿ ಮೂಲಕ ಕನ್ನಡಿಗರ ಮನೆ ಮಾತಾಗಿರುವ ನಟಿ ಮೇಘಾ ಶೆಟ್ಟಿ. ಅನುಸಿರಿಮನೆ ಪಾತ್ರದಲ್ಲಿ ವರ್ಷಾನುಗಟ್ಟಲೇ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದ ಮೇಘಾ ಶೆಟ್ಟಿ ಈಗ ಸಿನಿಮಾಗಳಲ್ಲಿಯೂ ಬ್ಯೂಸಿಯಾಗಿದ್ದಾರೆ. ಸದ್ಯ ಕಿರುತೆರೆಯಿಂದ ದೂರವಿರುವ ನಟಿ ಸಿನಿಮಾಗಳ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ.

ವೃತ್ತಿ ಜೀವನ ಒಂದು ಕಡೆಯಾದರೆ, ಇನ್ನೊಂದು ಕಡೆ ವೈಯಕ್ತಿಕ ಜೀವನಕ್ಕೂ ಸಮಯ ಕೊಟ್ಟಿದ್ದಾರೆ. ಸದ್ಯ ಸಹೋದರಿ ಮದುವೆ ಸಂಭ್ರಮದಲ್ಲಿ ಮೇಘಾ ಶೆಟ್ಟಿ ಬ್ಯುಸಿಯಾಗಿದ್ದಾರೆ. ಹೌದು ಸ್ಯಾಂಡಲ್‌ವುಡ್‌ನ ಚೆಲುವೆ ಮೇಘಾ ಶೆಟ್ಟಿ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು. ಇತ್ತೀಚೆಗೆ ಸಹೋದರಿ ನಿಶಾ ಶೆಟ್ಟಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

Jothe Jotheyali Actress Megha Shetty sister Nisha Shetty got married video went viral

ಇತ್ತೀಚೆಗೆ ಮೇಘಾ ಶೆಟ್ಟಿಯ ಹಿರಿಯ ಸಹೋದರಿ ನಿಶಾ ಶೆಟ್ಟಿ ವಿವಾಹ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆದಿದ್ದು, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಗೂ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ಮದುವೆ ಸಮಾರಂಭಕ್ಕಾಗಿ ಸಿನಿಮಾದಿಂದ ಕೊಂಚ ಬ್ರೇಕ್ ಕೊಟ್ಟಿದ್ದು, ಮತ್ತೆ ಸಿನಿಮಾ ಮರಳಲಿದ್ದಾರೆ. ಸದ್ಯ ಸಹೋದರಿ ನಿಶಾ ಶೆಟ್ಟಿಯ ಮದುವೆ ಸಂಭ್ರಮದಲ್ಲಿ ಓಡಾಡಿಕೊಂಡು ಇದ್ದಾರೆ. ಈಗಾಗಲೇ ವರದಿಯಾಗಿರುವ ಪ್ರಕಾರ, ನಿಶಾ ಶೆಟ್ಟಿಯ ಮದುವೆ ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆದಿದೆ ಎನ್ನಲಾಗಿದೆ.

ಮೇಘಾ ಶೆಟ್ಟಿ ಸಹೋದರಿಯ ಮದುವೆಯನ್ನು ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮಾಡಲಾಗಿದೆ. ಪ್ರಚಾರವಿಲ್ಲದೆ ಅದ್ಧೂರಿಯಾಗಿ ಮದುವೆ ಸಮಾರಂಭ ನಡೆದಿದ್ದು, ಅಭಿಮಾನಿಗಳು ತಮ್ಮ ಮದುವೆ ಯಾವಾಗ ಎಂದು ಪ್ರಶ್ನೆ ಮಾಡುತ್ತಿದ್ದಾರೆ. "ನೀವು ಯಾವಾಗ ಮದುವೆ ಆಗೋದು ಸಿಸ್ಟರ್" ಎಂದು ಒಬ್ಬರು ಪ್ರಶ್ನೆ ಮಾಡಿದ್ದರೆ, ಮತ್ತೊಬ್ಬರು "ಎಲ್ಲರಿಗಿಂತ ನೀವೇ ಮುದ್ದಾಗಿ ಕಾಣಿಸುತ್ತಿದ್ದೀರ" ಅಂತ ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

ಮೇಘಾ ಶೆಟ್ಟಿ ಸಹೋದರಿ ಮದುವೆ ಸಮಾರಂಭಕ್ಕೆ ಗೌರಿಶಂಕರ ಧಾರಾವಾಹಿ ತಂಡ ಆಗಮಿಸಿ ಶುಭ ಕೋರಿದೆ. ಉಳಿದಂತೆ ಚಿತ್ರರಂಗ ಹಾಗೂ ಕಿರುತೆರೆಯ ಕಲಾವಿದರು ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ನಟಿ ಶರಣ್ಯಾ ಶೆಟ್ಟಿ, ಯಶವಂತ್, ವಿದ್ಯಾಮೂರ್ತಿ, ಕಾವ್ಯಾ ರಮೇಶ್ ಸೇರಿದಂತೆ ಕೆಲವರಷ್ಟೇ ಈ ಮದುವೆ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ.

ಸದ್ಯ ಮೇಘಾ ಶೆಟ್ಟಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಆಫ್ಟರ್ ಆಪರೇಷನ್ ಲಂಡನ್ ಕೆಫೆ' , 'ಚೀತಾ' ಹಾಗೂ 'ಗ್ರಾಮಾಯಣ'ದಂತಹ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಳು ಇನ್ನೂ ಬಿಡುಗಡೆಯಾಗಬೇಕಿವೆ. ಇನ್ನು ಕೆಲವು ಸಿನಿಮಾಗಳಿಗೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ.

More from Filmibeat

English summary
Actress Megha Shetty sister Nisha Shetty got married:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X