Megha Shetty: 'ಆಪರೇಷನ್ ಲಂಡನ್ ಕೆಫೆ'ಯಲ್ಲಿ ಮೇಘಾ ಶೆಟ್ಟಿ.. ಸೀರಿಯಲ್ ಬಿಟ್ಮೇಲೆ ಎಲ್ಲಿಗೆ ಬಂತು ಸಿನಿಮಾ?

ಕಿರುತೆರೆಯಲ್ಲಿ ಮೇಘಾ ಶೆಟ್ಟಿ ಜನಪ್ರಿಯ ನಟಿ. 'ಜೊತೆ ಜೊತೆಯಲಿ' ಧಾರಾವಾಹಿ ಮೂಲಕ ಕರ್ನಾಟಕದ ಮನೆಮಾತಾದವರು. ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ಅವರ ಜನಪ್ರಿಯತೆಗೆ ಮರುಳಾಗಿದ್ದ ಸಿನಿಮಾ ಮಂದಿ ಆಫರ್ ಕೊಟ್ಟಿದ್ದರು. ಇದೇ ವೇಳೆ ಕೆಲವು ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಈಗ 'ಜೊತೆ ಜೊತೆಯಲಿ' ಧಾರಾವಾಹಿ ಮುಗಿಯುತ್ತಿದ್ದಂತೆ ಸಿನಿಮಾ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ಧಾರಾವಾಹಿಯಲ್ಲಿ ನಟಿಸುವಾಗ ಒಪ್ಪಿಕೊಂಡು ಸಿನಿಮಾವೊಂದನ್ನು ಮೇಘಾ ಶೆಟ್ಟಿ ಮುಗಿಸಿದ್ದಾರೆ. ಆ ಸಿನಿಮಾ ಇದೇ ವರ್ಷ ಬಿಡುಗಡೆಯಾಗುವ ಸಾಧ್ಯತೆಯಿದೆ.

Jothe Jotheyali fame Megha Shetty movie Operation London Cafe Shooting completed

ಮೇಘಾ ಶೆಟ್ಟಿ ನಟಿಸುತ್ತಿರುವ ಆ ಆಕ್ಷನ್ ಪ್ಯಾಕ್ ಸಿನಿಮಾ ಮತ್ಯಾವುದೂ ಅಲ್ಲ 'ಆಪರೇಷನ್ ಲಂಡನ್ ಕೆಫೆ'. ಹಾಗಂತ ಕೇವಲ ಕನ್ನಡ ಭಾಷೆಯಲ್ಲಷ್ಟೇ ಅಲ್ಲ ಮರಾಠಿ, ಹಿಂದಿ, ತೆಲುಗು, ತಮಿಳು, ಹಾಗೂ ಮಲಯಾಳಂ ಭಾಷೆಯಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಕವೀಶ್ ಶೆಟ್ಟಿ ಹಾಗೂ ಮೇಘಾ ಶೆಟ್ಟಿ ಕಾಂಬಿನೇಷನ್‌ನಲ್ಲಿ ಬರುತ್ತಿರೋ ಈ ಸಿನಿಮಾದ ಶೂಟಿಂಗ್ ಬಹುತೇಕ ಮುಗಿದೆ.

ಇಂದು (ಆಗಸ್ಟ್ 4) ನಟಿ ಮೇಘಾ ಶೆಟ್ಟಿ 25ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ 'ಆಪರೇಷನ್ ಲಂಡನ್ ಕೆಫೆ' ಚಿತ್ರತಂಡ ಮೇಘಾ ಶೆಟ್ಟಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ. ಈ ವರ್ಷ ತೆರೆ ಕಾಣುತ್ತಿರುವ ಸಿನಿಮಾಗಳ ಪೈಕಿ ಕುತೂಹಲ ಮೂಡಿಸಿರುವ ಸಿನಿಮಾವಿದು. ಸದ್ಯ ಈ ಸಿನಿಮಾದ ಡಬ್ಬಿಂಗ್ ಕೆಲಸಗಳು ಆರಂಭ ಆಗಿವೆ.

'ಆಪರೇಷನ್ ಲಂಡನ್ ಕೆಫೆ' ಸಿನಿಮಾವನ್ನು ವಿಜಯ್ ಕುಮಾರ್ ಶೆಟ್ಟಿ ಹವರಾಲ್ ರಮೇಶ್ ಕೊಠಾರಿ ಮತ್ತು ದೀಪಕ್ ರಾಣೆ ಅದ್ದೂರಿಯಾಗಿ ನಿರ್ಮಿಸುತ್ತಿದ್ದಾರೆ. ಕವೀಶ್ ಶೆಟ್ಟಿ ಹಾಗೂ ಮೇಘಾ ಶೆಟ್ಟಿಯ ಈ ಸಿನಿಮಾವನ್ನು ಸಡಗರ ರಾಘವೇಂದ್ರ ನಿರ್ದೇಶನ ಮಾಡುತ್ತಿದ್ದಾರೆ. ಡಿ. ನಾಗಾರ್ಜುನ್ ಕ್ಯಾಮರಾ, ಪ್ರಾನ್ಷು ಝಾ ಮ್ಯೂಸಿಕ್, ಕೆ. ಎಂ ಪ್ರಕಾಶ್ ಎಡಿಟಿಂಗ್ ಇದೆ. ಮೇಘಾ ಶೆಟ್ಟಿ ಜೊತೆ ಮರಾಠಿಯ ಹೆಸರಾಂತ ಶಿವಾನಿ ಸುರ್ವೆ, ವಿರಾಟ್ ಮಡಕೆ, ಅರ್ಜುನ್ ಕಾಪಿಕ್ಕಾಡ್, ಬಿ. ಸುರೇಶ್ ಸೇರಿದಂತೆ ದಿಗ್ಗಜರೇ ನಟಿಸಿದ್ದಾರೆ.

Jothe Jotheyali fame Megha Shetty movie Operation London Cafe Shooting completed

'ಜೊತೆ ಜೊತೆಯಲಿ' ಧಾರಾವಾಹಿ ಮುಗಿಯುತ್ತಿದ್ದಂತೆ ಮೇಘಾ ಶೆಟ್ಟಿ ಸಿನಿಮಾಗಳ ಕಡೆಗೆ ಹೆಚ್ಚು ಗಮನ ಹರಿಸುವುದಾಗಿ ಹೇಳಿದ್ದರು. ಧನ್ವೀರ್ ಅಭಿನಯದ 'ಕೈವಾ' ಸಿನಿಮಾ ನಟಿಸುತ್ತಿದ್ದಾರೆ. ಅಲ್ಲದೆ ಮತ್ತಷ್ಟು ಕಥೆಗಳನ್ನು ಕೇಳುತ್ತಿದ್ದು, ಹೊಸ ಸಿನಿಮಾವನ್ನು ಒಪ್ಪಿಕೊಂಡಿಲ್ಲ.

ಆದರೆ, 'ಆಪರೇಷನ್ ಲಂಡನ್ ಕೆಫೆ' ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಈ ಸಿನಿಮಾ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬೇರೆ ಬೇರೆ ಭಾಷೆಯಲ್ಲಿ ಈ ಸಿನಿಮಾಗೆ ಯಾವ ರೀತಿ ರೆಸ್ಪಾನ್ಸ್ ಸಿಗುತ್ತೆ ಅನ್ನೋ ಕುತೂಹಲವಿದೆ. ಈ ಸಿನಿಮಾ ಗೆದ್ದರೆ ಮೇಘಾ ಶೆಟ್ಟಿ ಸಿನಿ ಜರ್ನಿಗೆ ಹೊಸ ದಾರಿ ಸಿಕ್ಕಂತಾಗುತ್ತೆ.

More from Filmibeat

English summary
Kannada actress Megha Shetty movie Operation London Cafe
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X