"ಟಾಕ್ಸಿಕ್' ಟೀಸರ್‌ನ ಮಜಾ ತೆಗೆದುಕೊಂಡವ್ರು ಜೆಡಿಎಸ್ ಪಕ್ಷದವರು"; ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್

ರಾಕಿಂಗ್ ಸ್ಟಾರ್ ಯಶ್ ನಟಿಸಿರುವ ಬಹು ನಿರೀಕ್ಷೆಯ ಸಿನಿಮಾ 'ಟಾಕ್ಸಿಕ್' ಟೀಸರ್ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಇನ್ನು ಕೆಲವರು 'ಟಾಕ್ಸಿಕ್' ವಿರುದ್ಧ ದೂರುಗಳನ್ನು ದಾಖಲಿಸುತ್ತಿದ್ದಾರೆ. 'ಟಾಕ್ಸಿಕ್' ಟೀಸರ್‌ನಲ್ಲಿ ಬರುವ ಒಂದು ದೃಶ್ಯ ಈ ಟೀಕೆ-ಟಿಪ್ಪಣಿಗಳಿಗೆ ಎಡೆ ಮಾಡಿಕೊಟ್ಟಿದೆ. ಯುವ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಗ್ಲೋಬಲ್‌ ಲೆವಲ್‌ನಲ್ಲಿ ರಿಲೀಸ್ ಮಾಡುವುದಕ್ಕೆ ರಾಕಿ ಭಾಯ್ ಸ್ಕೆಚ್ ಹಾಕಿದ್ದಾರೆ.

ಕೆಲವರು ಸೆನ್ಸಾರ್ ಬೋರ್ಡ್ ಅನ್ನು ದೂರಿದ್ದಾರೆ. ಆದರೆ, ಚಿತ್ರತಂಡ ಹಾಗೂ ಯಶ್ ಮಾತ್ರ ಇದ್ಯಾವುದಕ್ಕೂ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿಲ್ಲ. 'ಟಾಕ್ಸಿಕ್' ಟೀಸರ್‌ನಿಂದ ಹಸಿಬಿಸಿ ದೃಶ್ಯಗಳಲ್ಲಿ ನಟಿಸಿದ್ದ ನಟಿಯೂ ಕೂಡ ವೈರಲ್ ಆಗಿದ್ದಾಯ್ತು, 'ಕೆಜಿಎಫ್ 2'ನ ಡೈಲಾಗ್ "ವೈಲೆಂಟ್.. ವೈಲೆಂಟ್" ಫೇಮಸ್ ಆದಂತೆ. 'ಟಾಕ್ಸಿಕ್' ಟೀಸರ್‌ನಲ್ಲಿ "ಡ್ಯಾಡಿ ಹೋಮ್" ವೀಕ್ಷಕರಿಗೆ ಕಿಕ್ ಕೊಟ್ಟಿದೆ.

Journalist Chakravarthy Chandrachood claims JDs Party members took Yash Toxic teaser advantage

'ಟಾಕ್ಸಿಕ್' ಟೀಸರ್‌ನ ವಿಜ್ಯೂವಲ್ಸ್ ಚೆನ್ನಾಗಿದೆ. ಮೇಕಿಂಗ್ ಕೂಡ ಅಷ್ಟೇ ಸಖತ್ ಆಗಿದೆ. ಆದರೆ, ಹಸಿಬಿಸಿ ದೃಶ್ಯಗಳ ಸೀನ್‌ಗಳಿಗೆ ಮಾತ್ರ ಕಿರಿಕ್ ಶುರುವಾಗಿದೆ. ಇನ್ನೊಂದು ಕಡೆ ರಾಜಕೀಯ ಪಕ್ಷಗಳ ಮುಖಂಡರು ಟೀಸರ್ ಅನ್ನು ಬಳಸಿಕೊಂಡಿದ್ದಾರೆ. ಇನ್ನು ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆಮ್ ಆದ್ಮಿ ಪಕ್ಷದ ಮುಖಂಡರು ದೂರನ್ನು ಸಲ್ಲಿಸಿದ್ದಾರೆ. ಈ ಬಗ್ಗೆ ಪತ್ರಕರ್ತರಾಗಿರುವ ಚಕ್ರವರ್ತಿ ಚಂದ್ರಚೂಡ ತಮ್ಮ ಯೂಟ್ಯೂಬ್ ಚಾನೆಲ್ 'ಚಕ್ರವರ್ತಿ ಅಖಾಡ'ದಲ್ಲಿ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಟಾಕ್ಸಿಕ್ ಟೀಸರ್ ಅನ್ನು ಬಳಸಿಕೊಂಡಿದ್ದು ಜೆಡಿಎಸ್ ಎಂದು ಹೇಳಿದ್ದಾರೆ. ಅಷ್ಟಕ್ಕೂ ಹೀಗೆ ಹೇಳಿದ್ದರ ಹಿಂದಿನ ಅರ್ಥವೇನು? ತಿಳಿಯುವುದಕ್ಕೆ ಮುಂದೆ ಓದಿ.

'ಟಾಕ್ಸಿಕ್' ಸಿನಿಮಾದ ಟೀಸರ್‌ನಿಂದ ಮಹಿಳೆಯರಿಗೆ ಅವಮಾನವಾಗಿದೆ ಎಂಬ ಟೀಕೆಗಳು ಕೇಳಿ ಬರುತ್ತಿವೆ. ಹಾಗೇ ದೂರಗಳು ದಾಖಲಾಗುತ್ತಿವೆ. ಈ ಬಗ್ಗೆ ಸೆನ್ಸಾರ್ ಮಂಡಳಿಯಿಂದ ಹಿಡಿದು ದೂರು ನೀಡಿದವರಿಗೆ ತರಾಟೆ ತೆಗೆದುಕೊಂಡಿದೆ. ರಾಜಕೀಯ ಮುಖಂಡರು ತಮ್ಮ ಅಜೆಂಡಾಗೆ ಬಳಸಿಕೊಂಡರು ಎಂದು ಹಿರಿಯ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ ಹೇಳಿದ್ದಾರೆ.

"ಧರಂಧರ್‌ನಿಂದ ಬಿಜೆಪಿ ಪಕ್ಷದವರು ಏನು ಮಾಡಬೇಕೋ ಅದನ್ನು ಮಾಡುತ್ತಾರೆ. ಕಾಂಗ್ರೆಸ್ ಪಕ್ಷದವರು ಏನು ಮಾಡಬೇಕೋ ಅದನ್ನು ಮಾಡುತ್ತಾರೆ. ಇವತ್ತು ಸಿನಿಮಾ ಕೂಡ ರಾಜಕೀಯದ ಅಜೆಂಡಾ ಹಾಗೂ ಬ್ಯುಸಿನೆಸ್‌ನ ಒಂದು ಭಾಗವಾಗಿದೆ. ಹೀಗಾಗಿ ಜಗತ್ತು ಡಿಜಿಟಲ್ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಹೀಗೆ ಆಡುವುದು ಕೂಡ ಟಾಕ್ಸಿಕ್ ಅಂತಹ ಒಂದು ವಿಷಯ. ಇದರಿಂದ ಯಶ್‌ಗೆ ಯಾವುದೇ ತೊಂದರೆ ಆಗುವುದಿಲ್ಲ. ಅವರ ಇಮೇಜ್‌ಗೆ ಧಕ್ಕೆ ಆಗುವುದಿಲ್ಲ. ಇದನ್ನೆಲ್ಲ ಅವರು ಮೀರಿದ್ದಾರೆ. ಇವೆಲ್ಲವನ್ನೂ ಕೇಳಿಸಿಕೊಳ್ಳುವುದಕ್ಕೆ ಆಗದಷ್ಟು ಅವರು ದೂರಕ್ಕೆ ಹೋಗಿ ಆಗಿದೆ" ಎನ್ನುತ್ತಾರೆ ಚಕ್ರವರ್ತಿ ಚಂದ್ರಚೂಡ್.

Journalist Chakravarthy Chandrachood claims JDs Party members took Yash Toxic teaser advantage

ಇನ್ನು ಟಾಕ್ಸಿಕ್ ಟೀಸರ್‌ ಅನ್ನು ಸಮರ್ಥವಾಗಿ ಜೆಡಿಎಸ್‌ ಪಕ್ಷದವರು ಬಳಸಿಕೊಂಡಿದ್ದಾರೆ ಎಂದೂ ಹೇಳಿದ್ದಾರೆ. "ಈ ವಿವಾದದಿಂದ ಮಜಾ ತೆಗೆದುಕೊಂಡವರು ಜೆಡಿಎಸ್ ಪಕ್ಷದವರು. ಡ್ಯಾಡಿ ಹೋಮ್ ಅಂತ ಒಂದು ವಿಡಿಯೋ ಬಿಟ್ಟರು. ಕುಮಾರಸ್ವಾಮಿಯವರನ್ನು ಹೋಲುವಂತಹ ಎಐ ವಿಡಿಯೋ ಮಾಡಿ ಬಿಟ್ಟರು. ನಿಜ ಹೇಳ್ತೀನಿ. ಇದು ರೀ ರಾಜಕಾರಣ ಅಂದರೆ, ಸಿನಿಮಾ ದೃಶ್ಯವನ್ನು ತಂದು ಆ ಕಡೆ ಸಿದ್ಧರಾಮಯ್ಯ ಅವರನ್ನು ಇಟ್ಟು, ಇತ್ತ ಡಿಕೆ ಶಿವಕುಮಾರ್ ಅವರನ್ನು ನಿಲ್ಲಿಸಿದ್ದರು. ಸದ್ಯ ಡ್ಯಾಡಿ ಹಿಂದೆ ಸಕ್ಕರೆ ಅಂತ ಸೇರಿಸಲಿಲ್ಲ. ಅದೊಂದು ವಿವಾದ ಆಗಿರೋದು." ಎಂದಿದ್ದಾರೆ.

ಇನ್ನು ಜೆಡಿಎಸ್ ಪಕ್ಷದವರಿ ಟಾಕ್ಸಿಕ್ ಟೀಸರ್ ಬಳಸಿಕೊಂಡು ಕಾಂಗ್ರೆಸ್‌ ಪಕ್ಷವನ್ನು ಆಡಿಕೊಂಡರು. ಅದೇ ಕಾಂಗ್ರೆಸ್ ಪಕ್ಷದವರು ತಿರುಗೇಟು ಕೊಡುವುದಕ್ಕೊಂದು ವಿಡಿಯೋ ಮಾಡಿ ಬಿಟ್ಟಿದ್ದಾರೆ. "ಕುಮಾರಸ್ವಾಮಿ ನಿಜಕ್ಕೂ ಗುಡ್ ಡ್ಯಾಡಿ.. ಆದರೆ, ಕಾಂಗ್ರೆಸ್‌ನವರೂ ಜೆಡಿಎಸ್ ಪಕ್ಷಕ್ಕೆ ಪ್ರತಿಕ್ರಿಯೆ ನೀಡಲು ಒಂದು ವಿಡಿಯೋ ಮಾಡಿದರು. ಕುಮಾರಸ್ವಾಮಿ ಮಲಗಿದ್ದಾಗ ಕನಸಿನಲ್ಲಿ ಡ್ಯಾಡಿ ಹೋಮ್ ಅಂತ ಅನಿಸುತ್ತೆ. ರಿಯಾಲಿಟಿ ಏನು ಅಂದರೆ, ಜನರು ಜೆಡಿಎಸ್ ಅನ್ನು ಬಿಟ್ಟು ಹೋಗುತ್ತಿದ್ದಾರೆ. ನಿಜ ಜೀವನದಲ್ಲಿ ನಡೆಯೋದು ಸಿನಿಮಾ ಆಗುತ್ತಿತ್ತು. ಈಗ ಸಿನಿಮಾದಲ್ಲಿ ನಡೆಯೋದನ್ನು ರಾಜಕಾರಣಕ್ಕೆ ತರುತ್ತಿದ್ದಾರೆ." ಎಂದು ಚಕ್ರವರ್ತಿ ಚಂದ್ರಚೂಡ್ ತಮ್ಮ ಯೂಟ್ಯೂಬ್‌ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಸಿನಿಮಾವನ್ನು ರಾಜಕೀಯ ಪಕ್ಷದವರು ಬಳಿಸಿಕೊಂಡು ಸಮಾಜವನ್ನು ಸ್ವಾಸ್ಥ್ಯವನ್ನು ಕೆಡಿಸುತ್ತಿದ್ದಾರೆಂದು ಹೇಳಿದ್ದಾರೆ. "ಇದು ಮುಂದೊಂದು ದಿನ ಬೆತ್ತಲೆಯಾಗಿದ್ದವರ ಬಟ್ಟೆಗಳಲ್ಲಿ ತೂತುಗಳನ್ನು ಹುಡುಕುವ ಸಂದರ್ಭ ಬರುತ್ತೆ. ಅದರ ಮುನ್ಸೂಚನೆಯಿದು. ನಿಮ್ಮ ತಲೆಯಲ್ಲಿರುವ ಟಾಕ್ಸಿಕ್ ಅನ್ನು ತೆಗೆದು ಹಾಕಿ. ಸಿನಿಮಾದಲ್ಲಿ ಇರೊದನ್ನಲ್ಲ." ಎಂದು ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

More from Filmibeat

English summary
Journalist Chakravarthy Chandrachood claims JDs Party members took Yash Toxic teaser advantage.
Read more about: yash toxic teaser
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X