ಎಲಾನ್ ಮಸ್ಕ್‌ಗೆ ಜೈ ಅಂದಿದ್ದು ನೀನಾಸಂ ಸತೀಶ್ ಒಬ್ಬರೇನಾ?

ರಾಜಕೀಯ ಮುಖಂಡರು, ಸಿನಿಮಾ ತಾರೆಯರು ಹಾಗೂ ಕ್ರೀಡಾಪಟುಗಳ ಟ್ವಿಟರ್ ಖಾತೆಗಳ ಬ್ಲೂ ಟಿಕ್ ಇದ್ದಕ್ಕಿದಂತೆ ಮಾಯವಾಗಿದೆ. ಕೆಲವರು ನಾವು ಹಣ ಪಾವತಿಸಿದ್ದರೂ ನಮ್ಮ ಅಕೌಂಟ್ ಆಕ್ಟೀವ್ ಆಗಿದ್ದರೂ ಯಾಕೆ ಬ್ಲೂಟಿಕ್ ತೆಗೆದರು? ಎನ್ನುವ ಗೊಂದಲದಲ್ಲಿದ್ದಾರೆ. ಇದೆಲ್ಲದರ ನಡುವೆ ಕೆಲ ತಾರೆಯರ ಟ್ವಿಟರ್ ಬ್ಲೂ ಟಿಕ್ ಮಾತ್ರ ಮೊದಲಿನಂತೆಯೇ ಉಳಿಸಿಕೊಂಡಿದ್ದಾರೆ.

ಬಹಳ ದಿನಗಳಿಂದ ಟ್ವಿಟರ್ ಹಣ ಪಾವತಿಸಿ ಟ್ವಿಟರ್ ಬ್ಲೂ ಟಿಕ್ ಉಳಿಸಿಕೊಳ್ಳುವಂತೆ ಹೇಳಿತ್ತು. ಇತ್ತೀಚೆಗೆ ಮತ್ತೊಮ್ಮೆ ಎಚ್ಚರಿಸಿತ್ತು. ಆದರೂ ಕೂಡ ಸಬ್ ಸ್ಕ್ರೈಬ್ ಮಾಡಿಕೊಳ್ಳದವರ ಟ್ವಿಟರ್ ಖಾತೆಯಲ್ಲಿ ಎದ್ದು ಕಾಣುತ್ತಿದ್ದ ನೀಲಿ ಚಿಹ್ನೆ ಮಾಯವಾಗಿದೆ. ಇದರಿಂದ ತಾರೆಯರ ಟ್ವಿಟರ್ ಖಾತೆ ಈಗ ಹೊಸದಾಗಿ ಕಾಣಿಸುತ್ತಿದೆ. ಅಮಿತಾಬ್ ಬಚ್ಚನ್, ರಜನಿಕಾಂತ್, ಚಿರಂಜೀವಿ ಸೇರಿದಂತೆ ಭಾರತದ ಸೂಪರ್ ಸ್ಟಾರ್‌ಗಳ ಟ್ವಿಟ್ಟರ್‌ ಖಾತೆಯ ಬ್ಲೂಟಿಕ್ ಮಾಯವಾಗಿದೆ. ಸಲ್ಲು, ಶಾರುಕ್, ಯಶ್, ದರ್ಶನ್, ಸುದೀಪ್, ರಮ್ಯಾ ಹೀಗೆ ಟ್ವಿಟರ್‌ನಲ್ಲಿ ಬಹಳ ಆಕ್ವೀಟ್ ಆಗಿದ್ದವರ ಖಾತೆ ಬ್ಲೂ ಟಿಕ್ ಇಲ್ಲದಂತಾಗಿದೆ.

 Jr NTR, Kamal Haasan, Mahesh babu, Sathish Ninasam : celebrities those who Still kept twitter blue tick

ತೆಲುಗು ನಟರಾದ ಜ್ಯೂ. ಎನ್, ಮಹೇಶ್ ಬಾಬು, ರಾಮ್‌ಚರಣ್ ಪತ್ನಿ ಉಪಾಸನಾ ಕೋನಿದೇಲ, ತಮಿಳು ನಟ ಕಮಲ್ ಹಾಸನ್, ಕನ್ನಡ ನಟ ನೀನಾಸಂ ಸತೀಶ್ ಸೇರಿದಂತೆ ಕೆಲವರು ಮಾತ್ರ ಟ್ವಿಟ್ಟರ್‌ ಬ್ಲೂ ಟಿಕ್ ಉಳಿಸಿಕೊಂಡಿದ್ದಾರೆ. ನಟಿ ಖುಷ್ಬು ಸುಂದರ್ ಟ್ವೀಟ್ ಮಾಡಿ ನನ್ನ ಅಕೌಂಟ್ ಆಕ್ಟೀವ್ ಆಗಿ ಇದ್ದರು ಯಾಕೆ ಟ್ವಿಟ್ಟರ್ ಬ್ಲೂ ಟಿಕ್ ಹೋಯ್ತು ಎಂದು ಕೇಳಿದ್ದಾರೆ. ಬಹುಭಾಷಾ ನಟ ಪ್ರಕಾಶ್‌ ರಾಜ್ ಟ್ವೀಟ್ ಮಾಡಿ ಬೈ ಬೈ ಬ್ಲೂಟಿಕ್ ಎಂದಿದ್ದಾರೆ.

ಟಾಲಿವುಡ್‌ನಲ್ಲಿ ಚಿರಂಜೀವಿ ಹಾಗೂ ಪುತ್ರ ರಾಮ್‌ಚರಣ್ ಟ್ವಿಟ್ಟರ್ ಬ್ಲೂ ಟಿಕ್ ಹೋಗಿದೆ. ಆದರೆ ಚರಣ್ ಪತ್ನಿ ಉಪಾಸನಾ ಟ್ವಿಟ್ಟರ್ ಖಾತೆ ಬ್ಲೂ ಟಿಕ್ ಉಳಿದುಕೊಂಡಿದೆ. ಇನ್ನು ನಿರ್ದೇಶಕ ಎಸ್‌. ಎಸ್‌ ರಾಜಮೌಳಿ ಟ್ವಿಟರ್ ಖಾತೆಯಲ್ಲೂ ನೀಲಿ ಚಿಹ್ನೆ ಮಿರಿ ಮಿರಿ ಮಿಂಚುತ್ತಿದೆ. ಪವನ್ ಕಲ್ಯಾಣ್, ಸಮಂತಾ, ಅಲ್ಲು ಅರ್ಜುನ್ ಸೇರಿದಂತೆ ಬಹುತೇಕ ತೆಲುಗು ತಾರೆಯರ ಟ್ವಿಟ್ಟರ್ ಬ್ಲೂ ಟಿಕ್ ಕಾಣಿಸುತ್ತಿಲ್ಲ.

 Jr NTR, Kamal Haasan, Mahesh babu, Sathish Ninasam : celebrities those who Still kept twitter blue tick

ತಮಿಳು ಸೂಪರ್ ಸ್ಟಾರ್‌ಗಳಾದ ಕಮಲ್ ಹಾಸನ್, ಸೂರ್ಯ ಟ್ವಿಟ್ಟರ್ ಚಂದಾದಾರಗಿದ್ದಾರೆ. ಹಣ ಪಾವತಿಸಿ ತಮ್ಮ ಟ್ವಿಟ್ಟರ್ ಚೆಕ್‌ ಮಾರ್ಕ್‌ ಆಫ್ ಆಗದಂತೆ ನೋಡಿಕೊಂಡಿದ್ದಾರೆ. ರಜನಿಕಾಂತ್, ದಳಪತಿ ವಿಜಯ್ ಸೇರಿದಂತೆ ಹಲವರ ಟ್ವಿಟ್ಟರ್ ಬ್ಲೂಟಿಕ್ ದಿಢೀರ್ ಕಣ್ಮರೆಯಾಗಿದೆ.

ಇನ್ನು ಬಾಲಿವುಡ್‌ನಲ್ಲಿ ಅಮಿತಾಬ್ ಬಚ್ಚನ್, ಶಾರುಕ್ ಖಾನ್, ಸಲ್ಮಾನ್ ಖಾನ್, ಆಲಿಯಾ ಭಟ್, ದೀಪಿಕಾ ಪಡುಕೋಣೆ ಸೇರಿದಂತೆ ಬಹುತೇಕ ಸ್ಟಾರ್ ನಟರು ಇದೇ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಒಮ್ಮೆ ಟ್ವಿಟ್ಟರ್ ನಿಷೇಧ ಹೇರಿ ನಟಿ ಕಂಗನಾ ರಣಾವತ್ ಟ್ವಿಟರ್ ಖಾತೆ ಡಿಲೀಟ್ ಆಗಿತ್ತು. ಇತ್ತೀಚೆಗೆ ಆಕೆ ಮತ್ತೆ ಟ್ವಿಟ್ಟರ್ ಜಾಲತಾಣಕ್ಕೆ ವಾಪಸ್ ಆಗಿದ್ದರು. ಸದ್ಯ ಆಕೆಯ ಟ್ವಿಟ್ಟರ್ ಖಾತೆ ಬ್ಲೂಟಿಕ್ ಉಳಿದುಕೊಂಡಿದೆ.

 Jr NTR, Kamal Haasan, Mahesh babu, Sathish Ninasam : celebrities those who Still kept twitter blue tick

ಸ್ಯಾಂಡಲ್‌ವುಡ್‌ನಲ್ಲಿ ಯಶ್, ದರ್ಶನ್, ಸುದೀಪ್, ಉಪೇಂದ್ರ, ರಮ್ಯಾ ಸೇರಿದಂತೆ ಬಹುತೇಕ ತಾರೆಯರ ಟ್ವಿಟ್ಟರ್ ಬ್ಲೂಟಿಕ್ ಮಾಯವಾಗಿದೆ. ಕೆಲ ದಿನಗಳಿಂದ ನಟ ಧನಂಜಯ ಟ್ವಿಟರ್ ಬ್ಲೂಟಿಕ್ ಕಾಣಿಸುತ್ತಿರಲಿಲ್ಲ. ಆದರೆ ನಟ ನೀನಾಸಂ ಸತೀಶ್ ಖಾತೆಯ ಬ್ಲೂಟಿಕ್ ಮಾತ್ರ ಕಂಗೊಳಿಸುತ್ತಿದೆ. ಕಲಾವಿದರು ಕೂಡಲೇ ಟ್ವಿಟ್ಟರ್‌ಗೆ ಸಬ್‌ಸ್ಕ್ರೈಬ್‌ ಆಗಿ ಟ್ವಿಟ್ಟರ್ ಬ್ಲೂ ಟಿಕ್ ಮರಳಿ ಪಡೆಯುತ್ತಾರಾ ಅನ್ನೋದನ್ನು ಕಾದು ನೋಡಬೇಕು.

More from Filmibeat

English summary
Jr NTR, Kamal Haasan, Mahesh babu: celebrities those who Still kept twitter blue tick. few celebrities paying Twitter to keep their blue tick. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X