Devara Box Office: ಮೊದಲ ದಿನವೇ ಜೂ.ಎನ್‌ಟಿಆರ್ 'ದೇವರ' ಕಲೆಕ್ಷನ್ ₹100 ಕೋಟಿ? ಕರ್ನಾಟಕದಲ್ಲೆಷ್ಟು?

ಜೂ.ಎನ್‌ಟಿಆರ್ ನಟನೆಯ 'ದೇವರ' ಸಿನಿಮಾ ನಾಳೆ (ಸೆಪ್ಟೆಂಬರ್ 27) ಅದ್ಧೂರಿಯಾಗಿ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಒಂದು ದಿನ ಮುನ್ನವೇ ಅಮೆರಿಕದಲ್ಲಿ ಈ ಸಿನಿಮಾ ಪ್ರೀಮಿಯರ್ ಕೂಡ ಇದೆ. ಅಷ್ಟರಲ್ಲೇ 'ದೇವರ' ಮೊದಲ ದಿನ ಬಾಕ್ಸಾಫೀಸ್ ಲೆಕ್ಕಾಚಾರ ಹಾಕಲಾಗುತ್ತಿದೆ.

ಯಂಗ್ ಟೈಗರ್ ಅಭಿಮಾನಿಗಳು ಕಳೆದ ಆರೇಳು ತಿಂಗಳಿಂದ ಈ ಸಿನಿಮಾ ಬಿಡುಗಡೆಗಾಗಿ ಎದುರು ನೋಡಿದ್ದರು. ಕೊನೆಗೂ ಅವರ ಆಸೆಯಂತೆ 'ದೇವರ ಪಾರ್ಟ್ 1' ಸಿನಿಮಾ ಬಿಡುಗಡೆಯಾಗುತ್ತಿದೆ. RRR ಸಿನಿಮಾದ ಬಳಿಕ ಜೂ.ಎನ್‌ಟಿಆರ್‌ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು, ಸಿನಿಮಾ ಬಗ್ಗೆ ದೇಶ-ವಿದೇಶದಲ್ಲಿ ಕ್ರೇಜ್ ಕಮ್ಮಿಯೇನು ಇಲ್ಲ.

Jr NTR pan india movie Devara part 1 Box Office Day 1 prediction report

'ದೇವರ' ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿ ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಜೂ.ಎನ್‌ಟಿಆರ್ ಜೊತೆ ಬಾಲಿವುಡ್‌ ನಟಿ ಜಾಹ್ನವಿ ಕಪೂರ್, ನಟ ಸೈಫ್ ಅಲಿ ಖಾನ್ ಕೂಡ ನಟಿಸಿರುವುದು ಈ ಸಿನಿಮಾದ ಹೈಲೈಟ್. ಅಲ್ಲದೆ ಅಡ್ವಾನ್ಸ್ ಬುಕಿಂಗ್‌ಗೆ ಕೂಡ ಅದ್ಬುತ ರೆಸ್ಪಾನ್ಸ್ ಸಿಕ್ಕಿದ್ದು, ಟ್ರೇಡ್ ಎಕ್ಸ್‌ಪರ್ಟ್‌ಗಳು ಈಗಾಗಲೇ 100 ಕೋಟಿ ರೂಪಾಯಿ ಲೆಕ್ಕ ಹಾಕಿದ್ದಾರೆ. ಹಾಗಿದ್ದರೆ, ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಬಹುದು? ಕರ್ನಾಟಕದಲ್ಲಿ ಎಷ್ಟು? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ದೇವರ' ₹100 ಕೋಟಿ ಕಲೆಕ್ಷನ್?

ಜೂ.ಎನ್‌ಟಿಆರ್ 'ದೇವರ'ಗೆ ವಿಶ್ವದಾದ್ಯಂತ ಬೇಡಿಕೆಯಿದೆ. ಅದರಲ್ಲೂ ಎರಡು ತೆಲುಗು ರಾಜ್ಯಗಳು ಹಾಗೂ ಕರ್ನಾಟಕದಲ್ಲಿ ಕ್ರೇಜ್ ಜೋರಾಗಿದೆ. ಅಡ್ವಾನ್ಸ್ ಬುಕಿಂಗ್‌ಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಜೂ.ಎನ್‌ಟಿಆರ್ ಸಿನಿಮಾ ಮೊದಲ ದಿನ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ. ತೆಲುಗು ರಾಜ್ಯಗಳಿಂದ ಈ ಸಿನಿಮಾ 50 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದರೆ, ಬೇರೆ ಕಡೆಗಳಿಂದ 48 ಕೋಟಿ ರೂಪಾಯಿ ಗಳಿಕೆ ಮಾಡಲಿದೆ ಎನ್ನಲಾಗಿದೆ.

ಕರ್ನಾಟಕದಲ್ಲಿ ಎಷ್ಟು?

ಜೂ.ಎನ್‌ಟಿಆರ್‌ಗೆ ಕರ್ನಾಟಕದಲ್ಲೂ ಕ್ರೇಜ್ ಇದೆ. ಅದರಲ್ಲೂ ತೆಲುಗು ನಟನೊಬ್ಬ ಕರ್ನಾಟಕದ ಕನೆಕ್ಷನ್ ಇಟ್ಟುಕೊಂಡು ಕನ್ನಡಿಗರ ಮನಗೆದ್ದಿದ್ದಾರೆ. ಹೀಗಾಗಿ ತೆಲುಗು ಹಾಗೂ ಕನ್ನಡ ಸಿನಿಮಾಗಳು ಮೊದಲ ದಿನವೇ ಮುಗಿಬಿದ್ದು ಸಿನಿಮಾ ನೋಡಲಿದ್ದಾರೆ. ಕೆವಿಎನ್ ಪ್ರೊಡಕ್ಷನ್ ಈ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಣೆ ಮಾಡುತ್ತಿದ್ದು, ಮೊದಲ ದಿನ 8 ರಿಂದ 10 ಕೋಟಿ ರೂಪಾಯಿ (Gross) ಕಲೆಕ್ಷನ್ ಆಗಬಹುದು ಎಂದು ವಿತರಕರ ವಲಯದಲ್ಲಿ ಚರ್ಚೆಯಾಗುತ್ತಿದೆ.

ಬೇರೆ ರಾಜ್ಯಗಳ ಕಲೆಕ್ಷನ್ ಲೆಕ್ಕವೇನು?

'ದೇವರ' ಸಿನಿಮಾ ಬೇರೆ ರಾಜ್ಯಗಳ ಕಲೆಕ್ಷನ್ ಹೇಗಾಗುತ್ತೆ ಅನ್ನೋದ ಕುತೂಹಲವಿದೆ. ತಮಿಳುನಾಡು, ಕೇರಳ ಹಾಗೂ ಹಿಂದಿ ಬೆಲ್ಡ್‌ನಲ್ಲಿ ಈ ಸಿನಿಮಾ 10 ರಿಂದ 15 ಕೋಟಿ ರೂಪಾಯಿ ಆಸುಪಾಸಿನಲ್ಲಿ ಕಲೆಕ್ಷನ್ ಮಾಡಬಹುದೆಂಬ ನಿರೀಕ್ಷೆಯಿದೆ. ರಾಜಮೌಳಿಯ RRR ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿರುವ ಮೊದಲ ಜೂ.ಎನ್‌ಟಿಆರ್ ಸಿನಿಮಾ. ಈ ಕಾರಣಕ್ಕೆ ಸಿನಿಮಾ ಗಳಿಕೆ ಕುತೂಹಲ ಮೂಡಿಸಿದೆ.

ಸಿನಿಮಾದ ಹೈಲೈಟ್ಸ್ ಏನು?

ಜೂನಿಯರ್ ಎನ್‌ಟಿಆರ್ ಹಾಗೂ ಜಾಹ್ನವಿ ಕಪೂರ್ ಜೋಡಿ 'ದೇವರ' ಸಿನಿಮಾದ ಪ್ರಮುಖ ಅಟ್ರ್ಯಾಕ್ಷನ್. ಬಾಲಿವುಡ್ ನಟ ಸೈಫ್ ಅಲಿ ಖಾನ್, ಪ್ರಕಾಶ್ ರಾಜ್, ಶ್ರೀಕಾಂತ್, ಮುರಳಿ ಶರ್ಮಾ, ಕಲೈಅರಸನ್, ಚೈತ್ರಾ ರೈ, ಅಭಿಮನ್ಯು ಸಿಂಗ್ ಅಂತ ನಟರ ದೊಡ್ಡ ತಂಡವೇ ಇದೆ. ಕೊರಟಾಲ ಶಿವ ನಿರ್ದೇಶನ, ರತ್ನವೇಲು ಕ್ಯಾಮರಾವರ್ಕ್ ಹಾಗೂ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಈ ಸಿನಿಮಾಗಿದೆ.

More from Filmibeat

English summary
Jr.NTR pan india movie Devara part 1 Box Office Day 1 prediction report
Read more about: ntr box office filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X