ಜೂ.ಎನ್‌ಟಿಆರ್ ಅಮ್ಮ ಮಗನಿಗೆ ನಾನು ಕನ್ನಡಿಗರ ಮುಂದೆ ತಲೆ ತಗ್ಗಿಸುವ ಕೆಲಸ ಮಾಡಬೇಡ ಎಂದಿದ್ದೇಕೆ?
'RRR' ಸಿನಿಮಾ ದೇಶದ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಿದೆ. ಟ್ರೈಲರ್ ರಿಲೀಸ್ ಆಗಿದ್ದೇ ಆಗಿದ್ದು ಸಿನಿಪ್ರಿಯರು ಫುಲ್ ಥ್ರಿಲ್ ಆಗಿದ್ದಾರೆ. ಅದರಲ್ಲೂ ಕನ್ನಡದಲ್ಲಿ RRR ಟ್ರೈಲರ್ ನೋಡಿದ ಮೇಲಂತೂ ಸಿನಿಮಾ ನೋಡಲು ಕನ್ನಡಿಗರು ತುದಿಗಾಲಲ್ಲಿ ನಿಂತಿದ್ದಾರೆ. ಯಾಕಂದ್ರೆ, ಈ ಬಾರಿ ರಾಜಮೌಳಿ ಕನ್ನಡ ಭಾಷೆಯ ಮೇಲೂ ಕಣ್ಣಿಟ್ಟಿದ್ದಾರೆ. ಕರ್ನಾಟಕ ಮಾರುಕಟ್ಟೆ ಕೂಡ ಈಗ ದೊಡ್ಡದಾಗುತ್ತಿದೆ. ಹೀಗಾಗಿ ಕನ್ನಡದಲ್ಲೂ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ.
Recommended Video
'RRR' ಸಿನಿಮಾದ ಟ್ರೈಲರ್‌ನ ಮತ್ತೊಂದು ಹೈಲೆಟ್ ಅಂದರೆ, ಜೂ.ಎನ್‌ಟಿಆರ್. ಯಂಗ್ ಟೈಗರ್ ಸ್ವತಃ ತಾವೇ ಕನ್ನಡದಲ್ಲಿ ಡಬ್ ಮಾಡಿದ್ದಾರೆ. ಎನ್‌ಟಿಆರ್ ಸ್ವಲ್ಪ ಕಷ್ಟ ಪಟ್ಟು ಕನ್ನಡ ಮಾತಾಡಿದ್ದರೂ, ಅವರ ಪ್ರಯತ್ನಕ್ಕೆ ಕನ್ನಡಿಗರು ಭೇಷ್ ಅಂದಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇಂದು (ಡಿಸೆಂಬರ್10) ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಜೂ.ಎನ್‌ಟಿಆರ್ ಕನ್ನಡದಲ್ಲಿಯೇ ಮಾತಾಡಿದ್ದಾರೆ. ಅವರ ತಾಯಿ ಕನ್ನಡಿಗರ ಮುಂದೆ ತಲೆ ತಗ್ಗಿಸುವಂತಹ ಕೆಲಸ ಮಾಡಬೇಡ ಅಂದಿದ್ದನ್ನು ನೆನಪಿಸಿಕೊಂಡಿದ್ದಾರೆ.

ತಲೆ ತಗ್ಗಿಸುವ ಕೆಲಸ ಮಾಡಬೇಡ ಎಂದಿದ್ದ ಜೂ.ಎನ್‌ಟಿಆರ್ ತಾಯಿ
RRR ಟ್ರೈಲರ್‌ನಲ್ಲಿ ಕನ್ನಡದಲ್ಲಿಯೇ ಡಬ್ಬಿಂಗ್ ಮಾಡಿರುವ ಜೂ.ಎನ್‌ಟಿಆರ್‌ಗೆ ಕನ್ನಡ ಚೆನ್ನಾಗಿಯೇ ಗೊತ್ತು. ಜೂ.ಎನ್‌ಟಿಆರ್ ತಾಯಿ ಕನ್ನಡದವರು ಹೀಗಾಗಿ ಅಲ್ಲಿ ನಮ್ಮವರು ಇದ್ದಾರೆ. ತಲೆ ತಗ್ಗಿಸುವ ಹಾಗೆ ಮಾಡಬೇಡ ಅಂತ ಹೇಳಿದ್ದರಂತೆ. ಅದಕ್ಕೆ ತುಂಬಾ ಕೇರ್‌ಫುಲ್ ಆಗಿ RRR ಚಿತ್ರಕ್ಕೆ ಯಂಗ್ ಟೈಗರ್ ಡಬ್ಬಿಂಗ್ ಮಾಡಿದ್ದೇನೆ ಎಂದಿದ್ದಾರೆ. "ಇಲ್ಲಾ ರೀ.. ಅಮ್ಮ ಈ ವಿಷಯದಲ್ಲಿ ನನಗೆ ತೊಂದರೆ ಮಾಡಿಲ್ಲ. ಆದರೆ, ಕೇರ್‌ಫುಲ್ ಆಗಿ ಮಾಡು ನೀನು. ನಮ್ಮವರು ಇದ್ದಾರೆ ಅಲ್ಲಿ. ನಾನು ತಲೆ ತಗ್ಗಿಸುವ ಹಾಗೆ ಮಾಡಬೇಡ ನೀನು. ಕನ್ನಡದಲ್ಲಿ ಮಾತಾಡದೇ ಇದ್ದರೂ ಪರವಾಗಿಲ್ಲ. ಮಾತಾಡದೇ ಇದ್ದರೂ ಚೆನ್ನಾಗಿರುತ್ತೆ ಎಂದು ಹೇಳಿದ್ದರು" ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಕನ್ನಡ ಡಬ್ ಮಾಡಲು ನೆರವಾಗಿದ್ದು ವರದರಾಜ್
RRR ಟ್ರೈಲರ್‌ನಲ್ಲಿ ಜೂ.ಎನ್‌ಟಿಆರ್ ಕನ್ನಡದಲ್ಲೇ ಡಬ್ ಮಾಡಿದ್ದು, ಕನ್ನಡಿಗರ ಹೆಮ್ಮೆಗೆ ಪಾತ್ರವಾಗಿದೆ. ಜೂ.ಎನ್‌ಟಿಆರ್ ಈ ಪ್ರಯತ್ನಕ್ಕೆ ಕನ್ನಡಿಗರು ಹಾಡಿ ಹೊಗಳಿದ್ದಾರೆ. RRR ಡಬ್ಬಿಂಗ್ ಯಂಗ್ ಟೈಗರ್‌ಗೆ ಕನ್ನಡಿಗ ವರದರಾಜ್ ಸಹಾಯ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ. "ವರದರಾಜ್ ಅವರು ಇದ್ದರು. ಅವರು ನನಗೆ ಸಹಾಯ ಮಾಡಿದರು. ಚೆನ್ನಾಗೇ ಸಹಾಯ ಮಾಡಿದರು. ಒಬ್ಬ ಗುರುವಾಗಿ ನನಗೆ ಸಹಾಯ ಮಾಡಿದರು. ತುಂಬಾನೇ ಸಹಾಯ ಮಾಡಿದರು. ಅದರ ಫಲಿತಾಂಶವೇ ಇದು. "

ಇಡೀ ಸಿನಿಮಾ ಯಂಗ್ ಟೈಗರ್ ಡಬ್ಬಿಂಗ್
ಕೇವಲ RRR ಟ್ರೈಲರ್‌ನಲ್ಲಿ ಮಾತ್ರ ನಿಮ್ಮ ಧ್ವನಿ ಇರುತ್ತಾ..? ಇಲ್ಲಾ ಸಿನಿಮಾದುದ್ದಕ್ಕೂ ನಿಮ್ಮ ಧ್ವನಿ ಇರುತ್ತಾ? ಎಂದು ಕೇಳಿದ್ದರು. ಅದಕ್ಕೆ ಜೂ.ಎನ್‌ಟಿಆರ್ ಇಡೀ ಸಿನಿಮಾದಲ್ಲಿ ನನ್ನದೇ ಧ್ವನಿ ಇರುತ್ತೆ ಎಂದು ಹೇಳಿದ್ದಾರೆ. ಇದು ಕನ್ನಡ ಸಿನಿಪ್ರಿಯರಲ್ಲಿ ಸಿನಿಮಾ ಬಗ್ಗೆ ಮತ್ತಷ್ಟು ಕುತೂಹಲ ಕೆರಳಿಸಿದೆ. ಸಿನಿಮಾ ನೋಡುವ ತವಕ ಹೆಚ್ಚಾಗಿದೆ. ಜನವರಿ 7ಕ್ಕೆ ಸಿನಿಮಾ ನೋಡಲೇ ಬೇಕು ಅಂತ ಕಾದು ಕೂತಿದ್ದಾರೆ.

ಜೂ.ಎನ್‌ಟಿಆರ್ ಅಮ್ಮನ ಹುಟ್ಟೂರು ಕುಂದಾಪುರ
ಕರ್ನಾಟಕದ ಕುಂದಾಪುರ ಜೂ.ಎನ್‌ಟಿಆರ್ ಅಮ್ಮ ಶಾಲಿನಿ ಹುಟ್ಟಿ ಬೆಳೆದ ಊರು. ಈ ಮಾತನ್ನು ಸ್ವತಃ ಜೂ.ಎನ್‌ಟಿಆರ್ ಪ್ರಶಸ್ತಿ ಸಮಾರಂಭದಲ್ಲಿ ಹೇಳಿದ್ದರು. " ನನ್ನ ತಾಯಿ ಕುಂದಾಪುರ ಮೂಲದವರು. ನನ್ನ ತಾತ ಎನ್‌ಟಿಆರ್ ಕುಟುಂಬದಂತೆ, ನನ್ನ ಅಮ್ಮನ ಕುಟುಂಬ ಕೂಡ ತುಂಬಾನೇ ದೊಡ್ಡದು. ನಾನು ಕುಂದಾಪುರಕ್ಕೆ ಆಗಾಗ ಬರುತ್ತೇನೆ. ಕರ್ನಾಟಕ ಮತ್ತು ಕನ್ನಡ ನನ್ನ ಜೀವನದ ಬಹು ಮುಖ್ಯ ಅಂಗ." ಎಂದು ಜೂ.ಎನ್‌ಟಿಆರ್ ವೇದಿಕೆ ಮೇಲೆ ಹೇಳಿದ್ದರು.


Click it and Unblock the Notifications











