ಅಪ್ಪು ಇಲ್ಲದ ಕರ್ನಾಟಕ ನನಗೆ ಶೂನ್ಯವಾಗಿ ಇರುತ್ತೆ: 'ಗೆಳೆಯ' ಹಾಡು ಇನ್ಮುಂದೆ ಎಲ್ಲೂ ಹಾಡಲ್ಲ
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಗೆಳೆಯರ ಬಳಗೆ ಹೇಗಿತ್ತು ಅನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅಪ್ಪು ಅಂದರೆ, ದಕ್ಷಿಣ ಭಾರತದ ಬಹುತೇಕ ಚಿತ್ರಮಂದಿರದ ತಾರೆಯರಿಗೆ ಅಚ್ಚು ಮೆಚ್ಚು. ಪುನೀತ್ ಕೂಡ ಅವರೊಂದಿಗೆ ಆತ್ಮೀಯವಾದ ಗೆಳೆತನವನ್ನು ಹೊಂದಿದ್ದರು. ಹೀಗಾಗಿ ಅಪ್ಪು ಅಗಲಿದಾಗ ದಕ್ಷಿಣ ಭಾರತೀಯ ಚಿತ್ರರಂಗದ ಎಲ್ಲಾ ಗಣ್ಯರು ಆಘಾತಕ್ಕೆ ಒಳಗಾಗಿ ಕಣ್ಣೀರು ಹಾಕಿದ್ದರು.
Recommended Video
ಸ್ನೇಹ ಜೀವಿ ಪುನೀತ್ ರಾಜ್‌ಕುಮಾರ್ ಹಾಗೂ ಜೂ.ಎನ್‌ಟಿರ್ ಇಬ್ಬರ ಸ್ನೇಹ ಕೂಡ ಅಷ್ಟೇ ಗಾಢವಾಗಿತ್ತು. ಸಿನಿಮಾ ಹೊರತುಪಡಿಸಿಯೂ ಅವರು ಆತ್ಮೀಯರಾಗಿದ್ದರು. ಅಣ್ಣಾವ್ರ ಕುಟುಂಬ ಹಾಗೂ ಎನ್‌ಟಿಆರ್ ಕುಟುಂಬ ಸ್ನೇಹ ನಾಲ್ಕೈದು ದಶಕಗಳಿಂದ ಮುಂದುವರೆದಿದೆ. ಆಗಾಗ ಇವರಿಬ್ಬರೂ ಒಟ್ಟಿಗೆ ಸೇರುತ್ತಿದ್ದದ್ದೂ ಕೂಡ ಇದೆ. ಹೀಗಾಗೇ ಇಂದು (ಡಿಸೆಂಬರ್ 10) RRR ಚಿತ್ರದ ಪ್ರಮೊಷನ್‌ಗೆ ಬಂದಿದ್ದಾಗ ಪುನೀತ್ ಬಗ್ಗೆ ಮತ್ತೆ ಭಾವುಕರಾಗಿ ಮಾತಾಡಿದ್ದಾರೆ.

ಅಪ್ಪು ಇಲ್ಲದ ಕರ್ನಾಟಕ ನನಗೆ ಶೂನ್ಯವಾಗಿ ಕಾಣುತ್ತೆ
RRR ಸಿನಿಮಾದ ಪ್ರಚಾರಕ್ಕೆಂದು ಜೂ.ಎನ್‌ಟಿಆರ್ ತಮ್ಮ ತಂಡದೊಂದಿಗೆ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಪುನೀತ್ ರಾಜ್‌ಕುಮಾರ್ ಹಾಗೂ ಅವರ ಗೆಳೆತನದ ಬಗ್ಗೆ ಮಾತಾಡಿಸಿದ್ದರು. ಆಗ ಜೂ.ಎನ್‌ಟಿಆರ್ ಭಾವುಕರಾಗಿ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. "ಇದು ನನಗೆ ತುಂಬಾ ಕಾಡುವ ವಿಷಯ. ಯಾಕಂದರೆ, ಪುನೀತ್ ಸರ್ ಅವರು ಇಲ್ಲದ ಕರ್ನಾಟಕ ನನಗೆ ಶೂನ್ಯವಾಗಿ ಇರುತ್ತೆ." ಎಂದು ಜೂ.ಎನ್‌ಟಿಆರ್ ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ.

ವೇದಿಕೆ ಮೇಲೆ ಗೆಳೆಯ ಹಾಡು ಹಾಡಲ್ಲ
ಬೆಂಗಳೂರಿಗೆ ಬಂದಿದ್ದ ಜೂ.ಎನ್‌ಟಿಆರ್ ಇದೇ ವೇದಿಕೆ ಮೇಲೆ ಮತ್ತೊಂದು ಶಪಥ ಕೂಡ ಮಾಡಿದ್ದಾರೆ. ಪುನೀತ್ ರಾಜ್‌ಕುಮಾರ್ ನಟಿಸಿದ 'ಚಕ್ರವ್ಯೂಹ' ಸಿನಿಮಾಗಾಗಿ ಗೆಳೆಯ ಗೆಳೆಯ ಹಾಡನ್ನು ಜೂ.ಎನ್‌ಟಿಆರ್ ಹಾಡಿದ್ದರು. ಅಪ್ಪು ಮೇಲಿನ ಸ್ನೇಹಕ್ಕಾಗಿಯೇ ಹೈದರಾಬಾದ್‌ನಿಂದ ಬಂದು ಈ ಹಾಡನ್ನು ಹಾಡಿದ್ದರು. ಈ ಹಾಡನ್ನು ಇನ್ನು ಯಾವುದೇ ವೇದಿಕೆ ಮೇಲೆ ಹಾಡುವುದಿಲ್ಲವೆಂದು ಜೂ.ಎನ್‌ಟಿಆರ್ ಹೇಳಿದ್ದಾರೆ. "ಅವರು ಎಲ್ಲೆ ಇರಲಿ. ಅವರ ಆಶೀರ್ವಾದ ನಮ್ಮ ಮೇಲೆ ಇರಬೇಕೆಂದು ಪ್ರಾರ್ಥನೆ ಮಾಡುತ್ತೇನೆ. ಈ ಹಾಡು ನಾನು ಯಾವತ್ತೂ ಹಾಡುವುದಿಲ್ಲ. ಇದೇ ಮೊದಲು.. ಇದೇ ಕೊನೆ." ಎಂದು ಹೇಳಿದ್ದಾರೆ.

ಅಪ್ಪು ಅಂತಿಮ ದರ್ಶನ ಪಡೆದಿದ್ದ ಜೂ.ಎನ್‌ಟಿಆರ್
ಅಕ್ಟೋಬರ್ 29, ಪುನೀತ್ ನಿಧನ ಸುದ್ದಿ ಮುಟ್ಟುತ್ತಿದ್ದಂತೆ ಜೂ.ಎನ್‌ಟಿಆರ್ ಬೆಂಗಳೂರಿಗೆ ಬಂದು ಅಂತಿಮ ದರ್ಶನ ಪಡೆದಿದ್ದರು. ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಸಮಾಧಾನದ ಮಾತುಗಳನ್ನು ಹೇಳಿದ್ದರು. ಗೆಳೆಯನ ಮೃತ ದೇಹದ ಮುಂದೆ ಯಂಗ್ ಟೈಗರ್ ಕಣ್ಣೀರು ಹಾಕಿದ್ದರು. ಈಗ ಮತ್ತೆ 'ಆರ್‌ಆರ್‌ಆರ್' ವೇದಿಕೆ ಮೇಲೆ ಬೆಂಗಳೂರಿನಲ್ಲಿ ಗೆಳೆಯನ್ನು ನೆನೆದು ಭಾವುಕರಾಗಿದ್ದಾರೆ.
ಶಿವಣ್ಣನಿಗೆ ನಾನಿದ್ದೇನೆ ಎಂದು ಜೂ.ಎನ್‌ಟಿಆರ್
ಪುನೀತ್ ರಾಜ್‌ಕುಮಾರ್‌ರನ್ನು ಜೂ.ಎನ್‌ಟಿಆರ್ ಸ್ನೇಹಿತ , ಸಹೋದರನಂತೆ ಕಾಣುತ್ತಿದ್ದರು. ಇತ್ತ ಅಪ್ಪು ಕೂಡ ಜೂ.ಎನ್‌ಟಿಆರ್ ಮೇಲೆ ಇದೇ ಭಾವನೆ ಹೊಂದಿದ್ದರು. ಪುನೀತ್ ನಿಧನದ ವೇಳೆ ದುಃಖದಲ್ಲಿದ್ದ ಶಿವಣ್ಣನನ್ನು ಬಿಗಿದಪ್ಪಿ ಸಮಾಧಾನ ಪಡಿಸಿದ್ದರು. ನಿಮಗೆ ನಾನಿದ್ದೇನೆ ಎಂದು ಹೇಳಿದ್ದರು. ಈ ಮಾತನ್ನು ಸ್ವತಃ ಶಿವರಾಜ್‌ಕುಮಾರ್ ಮಾಧ್ಯಮಗಳ ಮುಂದೆ ಹೇಳಿದ್ದರು. ಬೆಂಗಳೂರಿನಲ್ಲಿ ನಡೆದ RRR ಪ್ರಚಾರದ ಸಂದರ್ಭದಲ್ಲಿಯೂ ಜೂ.ಎನ್‌ಟಿಆರ್ ಅಪ್ಪು ಬಗ್ಗೆ ಭಾವುಕರಾಗಿ ಮಾತಾಡಿದ್ದಾರೆ.


Click it and Unblock the Notifications











