Devara Box Office Day 6: ಗಾಂಧಿ ಜಯಂತಿಯಂದು 'ದೇವರ'ಗೆ ಭರ್ಜರಿ ಕಲೆಕ್ಷನ್; 6ನೇ ದಿನ ಗಳಿಸಿದ್ದೆಷ್ಟು?
ಟಾಲಿವುಡ್ ಸೂಪರ್‌ಸ್ಟಾರ್ ಜೂ.ಎನ್‌ಟಿಆರ್ 'ದೇವರ' ಬಾಕ್ಸಾಫೀಸ್‌ನಲ್ಲಿ ಮತ್ತೆ ಧೂಳೆಸುತ್ತಿದೆ. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಮೊದಲ ಮೂರು ದಿನ ಕಲೆಕ್ಷನ್ ಸಿನಿಮಾ ಮಂದಿಯನ್ನು ಬೆಚ್ಚಿ ಬೀಳಿಸಿತ್ತು. ಆದರೆ, ವಾರದ ಆರಂಭದಲ್ಲಿ ಕೊಂಚ ಇಳಿಕೆ ಕಂಡಿದ್ದರೂ, ನಿನ್ನೆ (ಅಕ್ಟೋಬರ್ 2) ಭರ್ಜರಿ ಕಲೆಕ್ಷನ್ ಮಾಡಿದೆ.
RRR ಸಿನಿಮಾ ಬಳಿಕ ಜೂ.ಎನ್‌ಟಿಆರ್ ಸಿನಿಮಾ ಮೇಲೆ ಇಡೀ ದೇಶವೇ ಕಣ್ಣಿಟ್ಟಿತ್ತು. ರಾಜಮೌಳಿ ಸಿನಿಮಾದಲ್ಲಿ ನಟಿಸಿದ ಬಳಿಕ ಹೀರೋಗಳು ಸೋಲಿನ ರುಚಿ ಕಾಣುತ್ತಿದ್ದರು. ಅದನ್ನು ಜೂ.ಎನ್‌ಟಿಆರ್ ಬ್ರೇಕ್ ಮಾಡಿದ್ದಾರೆ. 'ದೇವರ' ಬಾಕ್ಸಾಫೀಸ್ ಅನ್ನು ಬ್ರೇಕ್ ಮಾಡಿದ್ದು, 6ನೇ ದಿನವೂ ಉತ್ತಮ ಗಳಿಕೆ ಕಂಡಿದೆ.

ಗಾಂಧಿ ಜಯಂತಿ ಇದ್ದಿದ್ದರಿಂದ ಜನರು ಥಿಯೇಟರ್‌ಗೆ ಬಂದು ಸಿನಿಮಾ ನೋಡಿದ್ದಾರೆ. ಕೊನೆಯ ಎರಡರಿಂದ ಮೂರು ಶೋಗಳಿಂದ ಕಲೆಕ್ಷನ್‌ನಲ್ಲಿ ಏರಿಕೆಯಾಗಿದೆ. ಈ ಮೂಲಕ 'ದೇವರ' ಬಾಕ್ಸಾಫೀಸ್ ಗಳಿಕೆಯಲ್ಲಿ ಮತ್ತಷ್ಟು ಏರಿಕೆಯಾಗಿದೆ. ಮೊದಲ ವಾರ ಮುಗಿಯುವುದರೊಳಗೆ ಭಾರತದಲ್ಲಿ 200 ಕೋಟಿ ರೂಪಾಯಿಯ ಗಡಿ ದಾಟಿದೆ.
6ನೇ ದಿನದ ಕಲೆಕ್ಷನ್ ಎಷ್ಟು?
ಗಾಂಧಿ ಜಯಂತಿ (ಅಕ್ಟೋಬರ್ 2) 'ದೇವರ' ಸಿನಿಮಾಗೆ ಅಡ್ವಾಂಟೇಜ್ ಆಗಿದೆ. ಆರನೇ ದಿನ 'ದೇವರ' ನೋಡಲು ಜನರು ಥಿಯೇಟರ್‌ಗೆ ಬಂದಿದ್ದು ಗಳಿಕೆಯಿಂದ ಗೊತ್ತಾಗುತ್ತಿದೆ. ನಾಲ್ಕು ಹಾಗೂ ಐದನೇ ದಿನಕ್ಕಿಂತ ಆರನೇ ದಿನ ಹೆಚ್ಚು ಕಲೆಕ್ಷನ್ ಮಾಡಿದೆ. 6ನೇ ದಿನ ಈ ಸಿನಿಮಾ 20.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಇಂಡಸ್ಟ್ರಿ ಟ್ರ್ಯಾಕರ್ Sacnilk ವರದಿ ಮಾಡಿದೆ.

ಕರ್ನಾಟಕದಲ್ಲಿ ಎಷ್ಟು?
ಇನ್ನು ಕರ್ನಾಟಕದಲ್ಲೂ 'ದೇವರ' ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮೊದಲ ದಿನ 8 ರಿಂದ 10 ಕೋಟಿ ರೂ, ಎರಡನೇ ದಿನ 5 ಕೋಟಿ ರೂ. ಮೂರನೇ ದಿನ 5 ಕೋಟಿ ರೂ. ನಾಲ್ಕನೇ ದಿನ 2 ಕೋಟಿ ರೂ. ಐದನೇ ದಿನ 2 ಕೋಟಿ ರೂ. ಆರನೇ ದಿನ 3 ಕೋಟಿ ರೂ. ಒಟ್ಟು 28 ರಿಂದ 30 ಕೋಟಿ ರೂ. ಕಲೆಕ್ಷನ್ ಆಗಿರಬಹುದೆಂದು ಕರ್ನಾಟಕದ ವಿತರಕರ ಲೆಕ್ಕ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.
6 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?
ಜೂ.ಎನ್‌ಟಿಆರ್ 'ದೇವರ' ಸಿನಿಮಾ ಒಟ್ಟು ಆರು ದಿನಗಳಲ್ಲಿ 200 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಆರು ದಿನಗಳಲ್ಲಿ ಭಾರತದ ಒಟ್ಟು ಗಳಿಕೆ 2007 ಕೋಟಿ ರೂಪಾಯಿ ಎಂದು ಅಂದಾಜು ಹಾಕಲಾಗುತ್ತಿದೆ. ಮೊದಲ ದಿನ 82.5 ಕೋಟಿ ರೂ., 2ನೇ ದಿನ 38.2 ಕೋಟಿ ರೂ., 3ನೇ ದಿನ 39.9 ಕೋಟಿ ರೂ., ನಾಲ್ಕನೇ ದಿನ 12.75 ಕೋಟಿ ರೂ., ಐದನೇ ದಿನ 14 ಕೋಟಿ ರೂ., 6ನೇ ದಿನ 20.50 ಕೋಟಿ ರೂ. ಕಲೆಕ್ಷನ್ ಆಗಿದೆ.
ಹಿಂದಿ ಏರಿಯಾ ಬಂಪರ್ ಕಲೆಕ್ಷನ್
ಜೂ.ಎನ್‌ಟಿಆರ್‌ಗೆ ಹಿಂದಿ ಬೆಲ್ಟ್‌ನಲ್ಲಿ ಹೇಗೆ ರೆಸ್ಪಾನ್ಸ್ ಸಿಗುತ್ತೆ ಅನ್ನೋ ಕುತೂಹಲವಿತ್ತು. ಆದ್ರೀಗ 'ದೇವರ'ಗೆ ಹಿಂದಿ ಏರಿಯಾಗಳಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಆರನೇ ದಿನ ಕೂಡ ಸಿನಿಮಾ 6 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಒಟ್ಟು ಆರು ದಿನಗಳಲ್ಲಿ ಈ ಸಿನಿಮಾ 40.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ವಿಶ್ವದಾದ್ಯಂತ 'ದೇವರ' ಕಲೆಕ್ಷನ್ ಎಷ್ಟು?
ವಿಶ್ವದಾದ್ಯಂತ ಬಾಕ್ಸಾಫೀಶ್‌ನಲ್ಲಿ 'ದೇವರ' ಸಿನಿಮಾಗೆ ಉತ್ತರ ಕಲೆಕ್ಷನ್ ಆಗಿದೆ. ಭಾರತದಲ್ಲಿ 207 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದರೆ. ವರ್ಲ್ಡ್‌ವೈಡ್ ಕಲೆಕ್ಷನ್ 370 ಕೋಟಿ ರೂಪಾಯಿ ದಾಟಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಹೇಳುತ್ತಿದ್ದಾರೆ. ಈ ವಾರದ ಅಂತ್ಯದ ಒಳಗೆ 400 ಕೋಟಿ ರೂಪಾಯಿ ಕಲೆಕ್ಷನ್ ದಾಟಬಹುದು ಎಂದು ಹೇಳಲಾಗಿದೆ.


Click it and Unblock the Notifications











