Devara Box Office Day 1: ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ 'ದೇವರ'; ಕರ್ನಾಟಕದಲ್ಲೇನು ಕಮ್ಮಿಯಲ್ಲ!

ಟಾಲಿವುಡ್ ಯಂಗ್ ಟೈಗರ್ ಜೂ.ಎನ್‌ಟಿಆರ್ ಆರು ವರ್ಷಗಳ ಬಳಿಕ ಸಿಂಗಲ್ ಆಗಿ ಅಖಾಡಕ್ಕೆ ಇಳಿದಿದ್ದಾರೆ. ನಿರ್ದೇಶಕ ಕೊರಟಾಲ ಶಿವ ಜೊತೆ ಸೇರಿಕೊಂಡು 'ದೇವರ' ಅಂತಿರೋ ಜೂ.ಎನ್‌ಟಿಆರ್‌ ಮಾಸ್ ಪ್ರಿಯರಿಗೆ ಥಿಯೇಟರ್‌ನಲ್ಲಿ ಸಖತ್ ಮನರಂಜನೆಯನ್ನೇ ಕೊಟ್ಟಿದ್ದಾರೆ. ಈ ಕಾರಣಕ್ಕೆ ಮೊದಲ ದಿನ ಬಾಕ್ಸಾಫೀಸ್‌ನಲ್ಲೂ ಭಾರೀ ಕಲೆಕ್ಷನ್ ಆಗುತ್ತೆ ಅಂತ ನಿರೀಕ್ಷೆ ಮಾಡಲಾಗಿತ್ತು.

'ದೇವರ' ಸಿನಿಮಾದ ಅಡ್ವಾನ್ಸ್ ಬುಕಿಂಗ್ ಕ್ರೇಜಿಯಾಗಿತ್ತು. ಅಮೆರಿಕದಲ್ಲಿ ನಡೆದ ಪ್ರೀಮಿಯರ್ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು 'ದೇವರ' ಸಿನಿಮಾ ಕಮ್ಮಿ ಅಂದರೂ ವಿಶ್ವದಾದ್ಯಂತ 100 ಕೋಟಿ ರೂಪಾಯಿ ಬ್ಯುಸಿನೆಸ್ ಮಾಡಬಹುದೆಂದು ಲೆಕ್ಕಾಚಾರ ಹಾಕಲಾಗಿತ್ತು. ಅದಕ್ಕೆ ತಕ್ಕಂತೆ ಬಾಕ್ಸಾಫೀಸ್‌ನಲ್ಲಿ ಜೂ.ಎನ್‌ಟಿಆರ್ ಧೂಳೆಬ್ಬಿಸಿದ್ದಾರೆ.

Jr NTR starrer Devara worldwide and Karnataka Box Office Day 1 Report

'ದೇವರ' ಸಿನಿಮಾ ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲಾಗಿತ್ತು. ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಿತ್ತು. ನಿರೀಕ್ಷೆಯಂತೆ ಆಂಧ್ರ, ತೆಲಂಗಾಣ, ಕರ್ನಾಟಕ ಹಾಗೂ ಹಿಂದಿ ಬೆಲ್ಟ್‌ನಲ್ಲಿ ಸಿನಿಮಾ ಕಲೆಕ್ಷನ್ ಕ್ರೇಜಿಯಾಗಿರುತ್ತೆ ಅನ್ನೋದನ್ನು ನಿರೀಕ್ಷೆ ಮಾಡಲಾಗಿತ್ತು. ಟ್ರೇಡ್ ಎಕ್ಸ್‌ಪರ್ಟ್ ನಿರೀಕ್ಷೆ ಮಾಡಿದಂತೆ 'ದೇವರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮಸ್ತ್ ಕಲೆಕ್ಷನ್ ಮಾಡಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ರಿಪೋರ್ಟ್ ಹೀಗಿದೆ.

ಮೊದಲ ದಿನದ ಕಲೆಕ್ಷನ್ ಎಷ್ಟು?

ಜೂ.ಎನ್‌ಟಿಆರ್ ಸಿನಿಮಾ 'ದೇವರ' ತೆಲುಗು ರಾಜ್ಯದಲ್ಲಿ ಬಂಪರ್ ಕಲೆಕ್ಷನ್ ಮಾಡಿದೆ. ಮೊದಲ ದಿನವೇ ಚಿತ್ರಮಂದಿರಗಳು ಹೌಸ್‌ಫುಲ್ ಪ್ರದರ್ಶನ ಕಂಡಿವೆ. ಫ್ಯಾನ್ಸ್ ಶೋ ಹಾಗೂ ಸ್ಪೆಷಲ್ ಶೋಗಳ ಟಿಕೆಟ್‌ಗಳೆಲ್ಲವೂ ಹೌಸ್‌ಫುಲ್ ಆಗಿವೆ. ಹೀಗಾಗಿ ಕೇವಲ ತೆಲುಗು ರಾಜ್ಯಗಳಾದ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ 'ದೇವರ' ಬಾಕ್ಸಾಫೀಸ್‌ ಕಲೆಕ್ಷನ್ 65 ಕೋಟಿ ರೂಪಾಯಿಗೂ ಅಧಿಕ ಆಗಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ ಲೆಕ್ಕ ಹಾಕಿದ್ದಾರೆ.

Jr NTR starrer Devara worldwide and Karnataka Box Office Day 1 Report

ಓವರ್‌ಸೀಸ್ ಮಾರ್ಕೆಟ್ ಹೇಗಿದೆ?

'ದೇವರ' ಸಿನಿಮಾಗೆ ಓವರ್‌ಸೀಸ್‌ನಲ್ಲಿ ಕ್ರೇಜ್ ಹೆಚ್ಚಿತ್ತು. ಅಡ್ವಾನ್ಸ್ ಬುಕಿಂಗ್‌ಗೆ ಅಮೆರಿಕದಲ್ಲೂ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ವಿದೇಶದ ಹಲವು ಭಾಗಗಳಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಲಾಗಿತ್ತು. ಅಮೆರಿಕ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಜೂ.ಎನ್‌ಟಿಆರ್ ಸಿನಿಮಾ 45 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 'ದೇವರ' ಸಿನಿಮಾದ ಕ್ರೇಜ್‌ಗೆ ಸಿನಿಮಾ ಮಂದಿ ಶಾಕ್ ಆಗಿದ್ದಾರೆ.

ಕರ್ನಾಟಕದ ಕಲೆಕ್ಷನ್ ಎಷ್ಟು?

ಕರ್ನಾಟಕದಲ್ಲಿ 'ದೇವರ' ಸಿನಿಮಾ 300ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ತೆಲುಗು ವರ್ಷನ್ 145 ಸ್ಟ್ರೀನ್‌ಗಳಲ್ಲಿ ರಿಲೀಸ್ ಆಗಿದ್ದರೆ, ಹಿಂದಿ ವರ್ಷನ್ 45 ಸ್ಕ್ರೀನ್, ತಮಿಳು 30 ಸ್ಕ್ರೀನ್ ಹಾಗೂ ಕನ್ನಡ ವರ್ಷನ್ ಅನ್ನು 80 ಸ್ಕ್ರೀನ್‌ಗಳಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಬಿಡುಗಡೆ ಮಾಡಿತ್ತು. ವಿತರಕರ ವಲಯದಲ್ಲಿ 'ದೇವರ' ಕರ್ನಾಟಕದ ಕಲೆಕ್ಷನ್ 10 ಕೋಟಿ ರೂಪಾಯಿಗೂ ಅಧಿಕ ಆಗಿದೆ ಎನ್ನಲಾಗುತ್ತಿದೆ. ಅದೇ ಇನ್ನೊಂದು ವರ್ಗ 5 ರಿಂದ 6 ಕೋಟಿ ರೂಪಾಯಿ ಎಂದು ಲೆಕ್ಕ ಹೇಳುತ್ತಿದೆ.

ವಿಶ್ವದಾದ್ಯಂತ ಎಷ್ಟಾಗಿದೆ ಕಲೆಕ್ಷನ್?

ತಮಿಳುನಾಡು ಹಾಗೂ ಕೇರಳದಲ್ಲಿ 'ದೇವರ' ಸಿನಿಮಾಗೆ ಅಷ್ಟೊಂದು ಒಳ್ಳೆಯ ರೆಸ್ಪಾನ್ಸ್ ಸಿಕ್ಕಿಲ್ಲ. 2 ಕೋಟಿಯಿಂದ 3 ಕೋಟಿ ರೂಪಾಯಿ ಕಲೆಕ್ಷನ್ ಆಗಿರಬಹುದೆಂದು ಅಂದಾಜಿಸಲಾಗಿದೆ. ಹಾಗೇ ಹಿಂದಿ ಮಾರ್ಕೆಟ್‌ನಲ್ಲೂ 10 ಕೋಟಿ ರೂಪಾಯಿ ಮೇಲೆ ಕಲೆಕ್ಷನ್ ಆಗಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಒಟ್ಟು ವಿಶ್ವದಾದ್ಯಂತ ಈ ಸಿನಿಮಾ 135 ಕೋಟಿಯಿಂದ 145 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ.

More from Filmibeat

English summary
Jr.NTR starrer Devara worldwide and Karnataka Box Office Day 1 Report:
Read more about: ntr box office filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X