June to December 2026; ಯಾವ್ಯಾವ ತಿಂಗಳಲ್ಲಿ ಯಾವ್ಯಾವ ಕನ್ನಡ ಸಿನಿಮಾ ರಿಲೀಸ್? ಇಲ್ಲಿದೆ ಲಿಸ್ಟ್!

2026 ಕನ್ನಡ ಚಿತ್ರರಂಗಕ್ಕೆ ಲಾಭದಾಯಕವಾಗಿರಲಿಲ್ಲ. ಜನವರಿಯಿಂದ ಮೇ ತಿಂಗಳ ಅಂತ್ಯದವರೆಗೆ ಸ್ಯಾಂಡಲ್‌ವುಡ್ ಸೈಲೆಂಟ್ ಆಗಿದೆ. ಇಡೀ ದೇಶವೇ ಹಿಂತಿರುಗಿ ನೋಡುವಂತಹ ಸಿನಿಮಾಗಳು ಒಂದೇ ಒಂದು ಬಂದಿಲ್ಲ. ಮೊದಲ ಆರು ತಿಂಗಳು ರಿಲೀಸ್‌ ಆದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆದ್ದಿದ್ದಕ್ಕಿಂತ ಮಕಾಡೆ ಮಲಗಿದ್ದೇ ಹೆಚ್ಚು. ಹೀಗಾಗಿ ಕಳೆದ ವರ್ಷದಂತೆ ಈ ವರ್ಷ ಕೂಡ ಕನ್ನಡ ಚಿತ್ರರಂಗ ನಷ್ಟದಲ್ಲಿಯೇ ಇದೆ.

ಮೊದಲ ಆರು ತಿಂಗಳು ಕನ್ನಡ ಸಿನಿಮಾಗಳ ಗೆದ್ದಿದ್ದು ಅಷ್ಟಕ್ಕಷ್ಟೇ. ದುನಿಯಾ ವಿಜಯ್ 'ಲ್ಯಾಂಡ್ ಲಾರ್ಡ್', ಧ್ರುವ ಸರ್ಜಾ 'ಕೆಡಿ ದಿ ಡೆವಿಲ್' ಅಂತಹ ಸಿನಿಮಾಗಳ ಮೇಲೆ ನಂಬಿಕೆ ಇಡಲಾಗಿತ್ತು. ಆದರೆ, ಆ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ನಿರೀಕ್ಷೆ ಮಾಡಿದಷ್ಟು ಗಳಿಕೆ ಕಂಡಿಲ್ಲ. ಇವರು ಕೆಲವೇ ಕೆಲವು ಸೂಪರ್‌ಸ್ಟಾರ್‌ಗಳನ್ನು ಇಟ್ಟುಕೊಂಡು ಚಿತ್ರರಂಗವನ್ನು ನಡೆಸಬೇಕಾದ ಅನಿವಾರ್ಯತೆ ಬಂದಿದೆ.

June to December 2026 Mango Pachcha to Yash Toxic Kannada Movies release list

2026 ಅರ್ಧ ವರ್ಷ ಮುಗೀತಾ ಬಂತು. ಈ ಆರು ತಿಂಗಳಲ್ಲಿ ಕನ್ನಡದ ಸುಮಾರು 90ಕ್ಕೂ ಅಧಿಕ ಸಿನಿಮಾಗಳು ರಿಲೀಸ್ ಆಗಿವೆ. ಅದರಲ್ಲಿ ಗೆದ್ದ ಸಿನಿಮಾಗಳು ಕೇವಲ ಬೆರಳೆಣಿಕೆಯಷ್ಟು ಮಾತ್ರ. ಹೀಗಾಗಿ ಇನ್ನು ಉಳಿದ ಆರು ತಿಂಗಳಾದರೂ ಕನ್ನಡ ಚಿತ್ರರಂಗಕ್ಕೆ ಶುಕ್ರದೆಸೆ ಬರಬಹುದೇ? ಜೂನ್‌ ನಿಂದ ಡಿಸೆಂಬರ್‌ವರೆಗೂ ಯಾವ್ಯಾವ ತಿಂಗಳಲ್ಲಿ ಕನ್ನಡದ ಯಾವ್ಯಾವ ಸಿನಿಮಾಗಳು ರಿಲೀಸ್ ಆಗಬಹುದು? ತಿಳಿಯುವುದಕ್ಕೆ ಮುಂದೆ ಓದಿ.

ಜೂನ್

ಐಪಿಎಲ್ ಮುಗಿದ ಬಳಿಕ ಕನ್ನಡ ಚಿತ್ರರಂಗ ಆಕ್ಟಿವ್ ಆಗುತ್ತಿದೆ. ಜೂನ್ ತಿಂಗಳ ಮೊದಲ ವಾರ ಕನ್ನಡದಲ್ಲಿ ಎರಡು ಸಿನಿಮಾಗಳು ರಿಲೀಸ್ ಆಗುವ ನಿರೀಕ್ಷೆಯಿದೆ. ಸ್ಯಾಂಡಲ್‌ವುಡ್ ಮೂಲಗಳ ಪ್ರಕಾರ, ಜೂನ್ ಮೊದಲ ಬಾರ ಅಂದರೆ, ಜೂನ್ 4 ರಂದು ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ನಟನೆಯ 'ಮ್ಯಾಂಗೋ ಪಚ್ಚ' ರಿಲೀಸ್‌ ಆಗುತ್ತಿದೆ. ಈಗಾಗಲೇ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಇದು ಜೊತೆನೇ ರಾಮ್‌ ಚರಣ್ ಹಾಗೂ ಶಿವಣ್ಣ ನಟನೆಯ 'ಪೆದ್ದಿ' ಕೂಡ ರಿಲೀಸ್ ಆಗುತ್ತಿದೆ.

ಹಾಗೇ 'ಕೃಷ್ಣಂ ಪ್ರಣಯ ಸಖಿ' ಸಿನಿಮಾದ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಶ್ರೀನಿವಾಸ್ ರಾಜ್ ಕಾಂಬಿನೇಷನ್‌ನ 'ಬೃಂದಾವಿಹಾರಿ' ಸಿನಿಮಾ ಜೂನ್ 26ಕ್ಕೆ ರಿಲೀಸ್ ಆಗಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಇನ್ನು ಚಿತ್ರತಂಡ ಅಧಿಕೃತವಾಗಿ ಇನ್ನೂ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿಲ್ಲ.

ಜುಲೈ

ಇನ್ನು ಜುಲೈ ತಿಂಗಳಲ್ಲಿ ಕನ್ನಡದಲ್ಲಿ ಎರಡು ಸಿನಿಮಾಗಳು ರಿಲೀಸ್ ಆಗಬಹುದು. ಇಲ್ಲ ಒಂದೇ ಸಿನಿಮಾ ಬಿಡುಗಡೆಯಾಗಬಹುದು. ಸ್ಯಾಂಡಲ್‌ವುಡ್ ಮೂಲಗಳ ಪ್ರಕಾರ, ವಿನಯ್ ರಾಜ್‌ಕುಮಾರ್ ನಟನೆಯ 'ಗ್ರಾಮಾಯಣ' ಸಿನಿಮಾ ಜುಲೈ ತಿಂಗಳಲ್ಲಿ ರಿಲೀಸ್ ಆಗುವ ಸಾಧ್ಯತೆಯಿದೆ. ಅದೇ ಒಂದು ವೇಳೆ ಈ ಸಿನಿಮಾ ರಿಲೀಸ್ ಸಾಧ್ಯವಾಗದೇ ಹೋದರೆ, ದುನಿಯಾ ವಿಜಯ್ ನಿರ್ದೇಶಿಸಿರುವ ವಿನಯ್ ರಾಜ್‌ಕುಮಾರ್, ಮೊನಿಷಾ ನಟನೆಯ 'ಸಿಟಿ ಲೈಟ್ಸ್' ರಿಲೀಸ್ ಆಗಲಿದೆ.

June to December 2026 Mango Pachcha to Yash Toxic Kannada Movies release list

ಆಗಸ್ಟ್

ಇನ್ನು ಆಗಸ್ಟ್ ತಿಂಗಳಲ್ಲಿ ಸತೀಶ್ ನೀನಾಸಂ, ರಚಿತಾ ರಾಮ್ ನಟನೆಯ 'ಅಯೋಗ್ಯ 2' ಬಿಡುಗಡೆಯಾಗುವ ಸಾಧ್ಯತೆಯಿದೆ. ಇದೇ ತಿಂಗಳಲ್ಲಿ ಡಾಲಿ ಧನಂಜಯ್ ನಟನೆಯ 'ಅಣ್ಣಾ ಫ್ರಮ್ ಮೆಕ್ಸಿಕೋ' ಸಿನಿಮಾ ಬಿಡುಗಡೆಯಾಗಬಹುದು.

ಸೆಪ್ಟೆಂಬರ್

ಈ ತಿಂಗಳಲ್ಲಿ ಕನ್ನಡದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ '666 ಆಪರೇಷನ್ ಡ್ರೀಮ್ ಥಿಯೇಟರ್' ರಿಲೀಸ್ ಆಗುವ ಸಾಧ್ಯತೆಯಿದೆ. ಶಿವರಾಜ್‌ಕುಮಾರ್ ಹಾಗೂ ಡಾಲಿ ಧನಂಜಯ್ ನಟನೆಯ ಈ ಸಿನಿಮಾವನ್ನು ಹೇಮಂತ್ ಎಂ ರಾವ್ ನಿರ್ದೇಶನ ಮಾಡಿದ್ದಾರೆ.

ಅಕ್ಟೋಬರ್

ಅಕ್ಟೋಬರ್‌ ತಿಂಗಳಲ್ಲಿಯೂ ಎರಡು ಸಿನಿಮಾಗಳು ರಿಲೀಸ್ ಆಗಬಹುದೆಂದು ನಿರೀಕ್ಷೆ ಮಾಡಲಾಗಿದೆ. ಶ್ರೀನಿ ನಟನೆಯ 'ಬೀರಬಲ್ 2' ರಿಲೀಸ್ ಆಗಬಹುದೆಂದು ನಿರೀಕ್ಷೆ ಮಾಡಲಾಗಿದೆ. ಅದೇ ಇನ್ನೊಂದು ಕಡೆ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಪಿನಾಕ' ರಿಲೀಸ್ ಆದರೂ ಅಚ್ಚರಿಯಿಲ್ಲ.

ನವೆಂಬರ್

ಈ ತಿಂಗಳಲ್ಲಿ ಶಿವಣ್ಣ ನಟನೆಯ ಮತ್ತೊಂದು ಸಿನಿಮಾ 'ಬೇಲ್' ರಿಲೀಸ್ ಆಗುವ ಸಾಧ್ಯತೆಯಿದೆ. ಪವನ್ ಒಡೆಯರ್ ಈಗಾಗಲೇ ಈ ಸಿನಿಮಾದ ಕೊನೆಯ ಹಂತದ ಶೂಟಿಂಗ್ ಅನ್ನು ಮುಗಿಸಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ, ನವೆಂಬರ್ ಹೊತ್ತಿಗೆ ಸಿನಿಮಾ ಬಿಡುಗಡೆ ಮಾಡಬಹುದು.

ಡಿಸೆಂಬರ್

ಈ ವರ್ಷ ಕೂಡ ಡಿಸೆಂಬರ್ ಸ್ಯಾಂಡಲ್‌ವುಡ್‌ಗೆ ಲಕ್ಕಿ ಆಗುವ ಸಾಧ್ಯತೆಯಿದೆ. ಕೊನೆಯ ತಿಂಗಳಲ್ಲಿ ಯಶ್ ನಟನೆಯ 'ಟಾಕ್ಸಿಕ್' ರಿಲೀಸ್ ಆಗುವ ಸಾಧ್ಯತೆಯಿದೆ. ಈ ವರ್ಷದ ಕ್ರಿಸ್‌ಮಸ್‌ಗೆ 'ಟಾಕ್ಸಿಕ್' ರಿಲೀಸ್ ಅನ್ನು ಟಾರ್ಗೆಟ್ ಮಾಡಲಾಗಿದೆ ಎನ್ನಲಾಗುತ್ತಿದೆ. ಕ್ರಿಸ್‌ಮಸ್ ರಜೆ, ಹೊಸ ವರ್ಷ ಹಾಗೂ ಯಶ್ ಬರ್ತ್‌ಡೇಯನ್ನು ದೃಷ್ಠಿಯಲ್ಲಿ ಇಟ್ಟುಕೊಂಡು ಸಿನಿಮಾ ರಿಲೀಸ್ ಮಾಡಲಾಗುತ್ತಿದೆ ಎನ್ನಲಾಗಿದೆ.

English summary
June to December 2026 Mango Pachcha to Yash Toxic Kannada Movies release list.
Read more about: kannada movies yash ganesh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X