ರಾಜ್ ಬಿ ಶೆಟ್ಟಿಯಂತೆ ಕುದುರೆ ಏರಿ ಬಂದ ಜೂನಿಯರ್ 'ಟೋಬಿ': "ಟೋಬಿ ತಮ್ಮ ಗೋಬಿ" ಎಂದ ನೆಟ್ಟಿಗರು!

ಕಳೆದ ತಿಂಗಳಷ್ಟೇ ರಾಜ್‌ ಬಿ ಶೆಟ್ಟಿ ನಟನೆಯ 'ಟೋಬಿ' ಸಿನಿಮಾ ರಿಲೀಸ್ ಆಗಿದೆ. ರಾಜ್‌ ಬಿ ಶೆಟ್ಟಿಯ ಅಭಿನಯ ಕಂಡು ಸಿನಿಪ್ರಿಯರು ಬೆಚ್ಚಿಬಿದ್ದಿದ್ದರು. ಅದರಲ್ಲೂ 'ಟೋಬಿ'ಯ ಕ್ಲೈಮ್ಯಾಕ್ಸ್ ದೃಶ್ಯಕ್ಕೆ ಪ್ರೇಕ್ಷಕರೇ ಮೂಕವಿಸ್ಮಿತರಾಗಿದ್ದು ಅಷ್ಟೇ ನಿಜ.

'ಟೋಬಿ' ಸಿನಿಮಾ ನೋಡಿದವರು ಕ್ಲೈಮ್ಯಾಕ್ಸ್ ದೃಶ್ಯವನ್ನಂತೂ ಮರೆಯುವುದಕ್ಕೆ ಸಾಧ್ಯವೇ ಇಲ್ಲ. ರಾಜ್‌ ಬಿ ಶೆಟ್ಟಿ ಕುದುರೆ ಮೇಲೆ ಏರಿ ಬರುವ ದೃಶ್ಯ ಸಿನಿಮಾ ಪ್ರಮುಖ ಭಾಗದಲ್ಲಿ ಒಂದು. ಸಿನಿಮಾದ ಕೊನೆಯಲ್ಲಿ ರಾಜ್‌ ಬಿ ಶೆಟ್ಟಿ ಕುದುರೆ ಏರಿವಂತೆ ವ್ಯಕ್ತಿಯೊಬ್ಬ ಏರಿ ಬಂದಿದ್ದಾನೆ. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Junior Raj B Shetty in Toby Avatar found in Udupi Vittal Pindi Festival video viral

ಜೂನಿಯರ್ ರಾಜ್ ಬಿ ಶೆಟ್ಟಿಯಂತೆ ಕಾಣುತ್ತಿರುವ ವ್ಯಕ್ತಿ ಟೋಬಿ ಲುಕ್ ಕೊಟ್ಟಿದ್ದೇಕೆ? 'ಟೋಬಿ'ಯಂತೆಯೇ ಕುದುರೆ ಏರಿ ಬಂದಿದ್ದು ಎಲ್ಲಿ? ವಿಡಿಯೋದಲ್ಲಿ ಏನಿದೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಉಡುಪಿಯಲ್ಲಿ ವಿಟ್ಲ ಪಿಂಡಿ ಬಲು ಜೋರು

ಕರ್ನಾಟಕದ ಕರಾವಳಿ ಭಾಗವಾಗಿರೋ ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ನಾನಾ ರೀತಿಯ ವೇಷ ತೊಟ್ಟು ನಗರದೆಲ್ಲಡೆ ಹೆಜ್ಜೆ ಹಾಕುತ್ತಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಹೋಗುತ್ತಾರೆ. ಇದು ಹಿಂದಿನಿಂದಲೂ ಆಚರಣೆ ಮಾಡಿಕೊಂಡು ಬಂದಿರುವ ಪದ್ಧತಿ. ಅಂದ್ಹಾಗೆ ವಿಟ್ಲ ಪಿಂಡಿ ಹಬ್ಬವನ್ನು ಮೊಸರು ಕುಡಿಕೆ ಹಬ್ಬ ಅಂತಲೂ ಕರೆಯುತ್ತಾರೆ. ಇದೇ ಹಬ್ಬದಲ್ಲಿ ಜೂನಿಯರ್ ಟೋಬಿ ಕಾಣಿಸಿಕೊಂಡಿದ್ದಾನೆ.

ಮೊಸರು ಕುಡಿಕೆ ಹಬ್ಬದಲ್ಲಿ ಜೂನಿಯರ್ 'ಟೋಬಿ'

ಉಡುಪಿಯ ಮೊಸರು ಕುಡಿಕೆ ಹಬ್ಬದಲ್ಲಿ 'ಟೋಬಿ' ವೇಷ ಧರಿಸಿ ಬಂದಿರೋ ವ್ಯಕ್ತಿಯನ್ನು ನೋಡಿದರೆ, ಥೇಟ್ ರಾಜ್‌ ಬಿ ಶೆಟ್ಟಿಯಂತೆಯೇ ಕಾಣುತ್ತಾರೆ. ಜೂನಿಯರ್ ರಾಜ್ ಬಿ ಶೆಟ್ಟಿ ಅಂತ ನಿಸ್ಸಂದೇಹವಾಗಿ ಹೇಳಬಹುದು. ಇನ್ನು 'ಟೋಬಿ' ಸಿನಿಮಾದ ಕೊನೆಯಲ್ಲಿ ಬರುವಂತೆಯೇ ಜೂನಿಯರ್ ರಾಜ್ ಬಿ ಶೆಟ್ಟಿ ಕುದುರೆ ಏರಿ ಸೀರಿಯಸ್ ಆಗಿ 'ಟೋಬಿ' ಲುಕ್ ಕೊಟ್ಟು ಗಮನ ಸೆಳೆದಿದ್ದಾರೆ. ಕಿಕ್ಕಿರಿದು ಸೇರಿದ್ದ ಜನರ ಮಧ್ಯೆ ಅದೇ ಗಂಭೀರ ಲುಕ್ ಕೊಟ್ಟು ಮನ ಸೆಳೆದಿದ್ದಾರೆ.

ಯಾರಿದು ಜೂನಿಯರ್ 'ಟೋಬಿ'?

ರಾಜ್‌ ಬಿ ಶೆಟ್ಟಿಯಂತೆ ಕಾಣುವ ಈ ವ್ಯಕ್ತಿ ಉಡುಪಿಯಲ್ಲಿ ಪ್ರತ್ಯಕ್ಷ ಆಗಿದ್ದಾರೆ. 'ಟೋಬಿ' ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಈ ವ್ಯಕ್ತಿಯ ಹಿನ್ನೆಲೆ ಇನ್ನಷ್ಟೆ ಗೊತ್ತಾಗಬೇಕಿದೆ. ಸದ್ಯ ಉಡುಪಿಯ ವಿಟ್ಲ ಪಿಂಡಿ ಹಬ್ಬದಲ್ಲಿ ರಾಜ್ ಬಿ ಶೆಟ್ಟಿ ಅವತಾರಿಯಾಗಿ ಗಮನ ಸೆಳೆದಿದ್ದಾರೆ. ಉಡುಪಿಯ ಜನರು ಕೂಡ ಜೂನಿಯರ್ 'ಟೋಬಿ'ಯನ್ನು ಕಂಡು ಖುಷಿ ಪಟ್ಟಿದ್ದಾರೆ. ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.


ಜೂ. ಟೋಬಿ ಕಂಡು ನೆಟ್ಟಿಗರು ಏನಂದ್ರು?

ಜೂನಿಯರ್ ಟೋಬಿಯನ್ನು ಕಂಡು ನೆಟ್ಟಿಗರು ಥ್ರಿಲ್ ಆಗಿದ್ದಾರೆ. ಅದರಲ್ಲೂ ರಾಜ್‌ ಬಿ ಶೆಟ್ಟಿಯಂತೆಯೇ ಸೀರಿಯಸ್ ಲುಕ್ ಕೊಟ್ಟಿದ್ದಕ್ಕೆ ಮೆಚ್ಚುಗೆಯನ್ನೂ ಸೂಚಿಸಿದ್ದಾರೆ. " ಇಷ್ಟೊಂದು ಜನರ ಮಧ್ಯೆ ಹೀಗೆ ಗಂಭೀರವಾಗಿ ಲುಕ್ ಕೊಡುವುದು ಅಷ್ಟೊಂದು ಸುಲಭವಲ್ಲ." ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಅದೇ ಮತ್ತೊಬ್ಬರು " ಇವರ ಪ್ರತಿಕ್ರಿಯೆ ಕಿಲ್ಲಿಂಗ್ ಆಗಿದೆ" ಎಂದು ಹೇಳಿದ್ದಾರೆ. ಮತ್ತೊಬ್ಬರು " ಟೋಬಿ 144 ಪಿಕ್ಸೆಲ್ ಇರಬಹುದು. ಆದರೆ ಎಕ್ಸ್‌ಪ್ರೆಷನ್ ಕಿಲ್ಲಿಂಗ್ ಆಗಿದೆ" ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಕ್ರಿಯೇಟಿವ್ ಆಗಿ " ಇವರು ಟೋಬಿ ತಮ್ಮ ಗೋಬಿ" ಎಂದು ಕಮೆಂಟ್ ಮಾಡುತ್ತಿದ್ದಾರೆ.

More from Filmibeat

English summary
Viral Junior Raj B Shetty in Udupi in Vittal Pindi Festival.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X