'ಅಬ್ಬಬ್ಬ' ಸ್ಯಾಂಡಲ್‌ವುಡ್‌ನಲ್ಲೊಂದು ಕಾಮಿಡಿ ಸಿನಿಮಾ

ಕೆ ಎಂ ಚೈತನ್ಯ ಮತ್ತೊಂದು ಮಜಕೊಡುವ ಕಥೆಯೊಂದಿಗೆ ಬಂದಿದ್ದಾರೆ. 'ಆ ದಿನಗಳು' ಸೇರಿದಂತೆ ಹಲವು ಅದ್ಭುತ ಸಿನಿಮಾಗಳನ್ನು ನಿರ್ದೇಶಿಸಿರುವ ಚೈತನ್ಯ ಗಂಭೀರ ಸಿನಿಮಾದ ಜೊತೆಗೆ ಹಾಸ್ಯ ಸಿನಿಮಾಗಳನ್ನೂ ನಿರ್ದೇಶಿಸಿದ್ದರು. ಸ್ಯಾಂಡಲ್‌ವುಡ್‌ನ ಈ ಜನಪ್ರಿಯ ನಿರ್ದೇಶಕ ಸಂಪೂರ್ಣ ಹಾಸ್ಯಮಯ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಅದುವೇ 'ಅಬ್ಬಬ್ಬ'.

'ಅಬ್ಬಬ್ಬ' ಒಂದು ಪಕ್ಕಾ ಕಾಮಿಡಿ ಸಿನಿಮಾ. ಇತ್ತೀಚೆಗೆ ಸಂಪೂರ್ಣ ಹಾಸ್ಯ ಪ್ರಧಾನ ಕಮ್ಮಿಯಾಗಿದ್ದರೂ, ಕನ್ನಡದಲ್ಲಿ ಆಗೊಂದು ಈಗೊಂದು ಸಿನಿಮಾ ಬಿಡುಗಡೆಯಾಗಿ ಜನರ ಮನಗೆದ್ದಿದೆ. ಕೆ ಎಂ ಚೈತನ್ನು ತಮ್ಮ ನಿರ್ದೇಶನದ ಸಿನಿಮಾ ಮೂಲಕ ಜನರಿಗೆ ಮತ್ತೆ ರಸದೌತಣ ನೀಡಲು ಮುಂದಾಗಿದ್ದಾರೆ. 'ಅಬ್ಬಬ್ಬ' ಸಿನಿಮಾ ಮುಂದಿನ ತಿಂಗಳು 1ನೇ ತಾರೀಕಿನಂದು ಬಿಡುಗಡೆಯಾಗಲಿದೆ.

ಬೆಂಗಳೂರಿನಲ್ಲಿ ಮೀರಾಮಾರ್ ಎಂಬ ಜಾಹೀರಾತು ನಿರ್ಮಾಣ ಸಂಸ್ಥೆ 'ಅಬ್ಬಬ್ಬ' ಸಿನಿಮಾವನ್ನು ನಿರ್ಮಿಸುತ್ತಿದೆ. ಆನ್ ಆಗಸ್ಟೇನ್ ಹಾಗೂ ವಿವೇಕ್ ಥಾಮಸ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.‌ ಆನ್ ಆಗಸ್ಟೇನ್ ಸುಪ್ರಸಿದ್ದ ಮಲಯಾಳಂ ನಟಿಯಾಗಿದ್ದು, ಸಾಕಷ್ಟು ಮಲೆಯಾಳಂ ಸಿನಿಮಾಗಳಲ್ಲಿ ಈ ನಟಿ ನಟಿಸಿದ್ದಾರೆ. ಇವರಿಬ್ಬರ ನಿರ್ಮಾಣದಲ್ಲಿ ಮೂಡಿಬಂದಿರುವ ಮೊದಲ ಚಿತ್ರ 'ಅಬ್ಬಬ್ಬ'.

 K M Chaitanya Director New Comedy Movie Abbabba Releasing On July 1st

'ಅಬ್ಬಬ್ಬ' ಸಿನಿಮಾದ ಪ್ರಮುಖ ಪಾತ್ರದಲ್ಲಿ ಲಿಖಿತ್ ಶೆಟ್ಟಿ ನಟಿಸಿದ್ದಾರೆ. ಈಗಾಗಲೇ ಪುನೀತ್ ರಾಜ್‌ಕುಮಾರ್ ನಿರ್ಮಿಸಿದ್ದ 'ಫ್ಯಾಮಿಲಿ ಪ್ಯಾಕ್' ಚಿತ್ರದ ಮೂಲಕ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಲಿಖಿತ್ ಶೆಟ್ಟಿಗೆ ಜೋಡಿಯಾಗಿ ಅಮೃತ ಅಯ್ಯಂಗಾರ್ ನಟಿಸಿದ್ದಾರೆ. ಅಜಯ್ ರಾಜ್, ತಾಂಡವ್ ರಾಮ್, ಧನರಾಜ್ ಆಚಾರ್ ಮುಂತಾದವರು 'ಅಬ್ಬಬ್ಬ' ಸಿನಿಮಾದ ಪ್ರಮುಖ ತಾರಾಬಳಗದಲ್ಲಿದ್ದಾರೆ.

ಅಂದ್ಹಾಗೆ 'ಅಬ್ಬಬ್ಬ' ಸಿನಿಮಾವನ್ನು ಬೆಂಗಳೂರು ಹಾಗೂ ತುಮಕೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಜೂನ್ 6ನೇ ತಾರೀಕಿನಂದು 'ಅಬ್ಬಬ್ಬ' ಸಿನಿಮಾದ ಟ್ರೈಲರ್ ಬಿಡುಗಡೆಯಾಗಲಿದೆ. ಜುಲೈ ಒಂದರಂದು ಸಿನಿಮಾ ರಿಲೀಸ್ ಆಗುತ್ತಿದೆ ಎಂದು ನಿರ್ದೇಶಕ ಕೆ.ಎಂ.ಚೈತನ್ಯ ತಿಳಿಸಿದ್ದಾರೆ.

 K M Chaitanya Director New Comedy Movie Abbabba Releasing On July 1st

'ಅಬ್ಬಬ್ಬ' ಸಿನಿಮಾಗೆ ಮನೋಹರ್ ಜೋಶಿ ಛಾಯಾಗ್ರಹಣವಿದ್ದರೆ, ದೀಪಕ್ ಅಲೆಕ್ಸಾಂಡರ್ ಟ್ಯೂನ್ ಹಾಕಿದ್ದಾರೆ. ಹರಿದಾಸ್ ಕೆ.ಜಿ.ಎಫ್ ಈ ಚಿತ್ರದ ಎಡಿಟರ್. ವಿಶ್ವಾಸ್ ಕಶ್ಯಪ್ ಈ ಸಿನಿಮಾದ ಆರ್ಟ್ ಡೈರೆಕ್ಟರ್. ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ದೀಪಕ್ ಅಲೆಕ್ಸಾಂಡರ್‌ಗೆ ಸಂಗೀತ ನಿರ್ದೇಶಕರಾಗಿ ಇದು ಮೊದಲ ಸಿನಿಮಾ.

More from Filmibeat

English summary
K M Chaitanya Director New Comedy Movie Abbabba Releasing On July 1st, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X