ಬರ್ತಿದೆ ದಕ್ಷಿಣ ಭಾರತದ ದಂತಕಥೆ 'ಚಕ್ರವರ್ತಿ ಇಮ್ಮಡಿ ಪುಲಕೇಶಿ' ಬಯೋಪಿಕ್; ಏನಿದರ ಹೈಲೈಟ್?
ಭಾರತೀಯ ಚಿತ್ರರಂಗದಲ್ಲಿ ಬಯೋಪಿಕ್ ಸಿನಿಮಾಗಳು ನಿರ್ಮಾಣ ಆಗುತ್ತಲೇ ಇವೆ. ಅದರಲ್ಲೂ ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಬಯೋಕಿಕ್ ಸಿನಿಮಾಗಳ ನಿರ್ಮಾಣ ಹೆಚ್ಚಿದೆ. ಕನ್ನಡದಲ್ಲಿ ಆತ್ಮಚರಿತ್ರೆಯ ಸಿನಿಮಾಗಳು ಬರೋದೇ ಕಮ್ಮಿಯಾಗಿದೆ. ಆದ್ರೀಗ ಕನ್ನಡದಲ್ಲೂ ಒಂದು ಐತಿಹಾಸ ಕಮ್ ಬಯೋಪಿಕ್ ಸಿನಿಮಾವೊಂದು ಸೆಟ್ಟೇರಿದೆ. ಅದುವೇ 'ಇಮ್ಮಡಿ ಪುಲಿಕೇಶಿ' ಜೀವನ ಧಾರದ
6 ನೇ ಶತಮಾನದ ಭಾರತವನ್ನು ಆಳಿದ ಚಾಲುಕ್ಯ ಸಾಮ್ರಾಜ್ಯದ ದೊರೆ, ದಕ್ಷಿಣ ಭಾರತದ ದಂತಕಥೆ 'ಚಕ್ರವರ್ತಿ ಇಮ್ಮಡಿ ಪುಲಿಕೇಶಿ' ಅವರ ಜೀವನ ಚರಿತ್ರೆಯನ್ನು ತೆರೆಮೇಲೆ ತರುವುದಕ್ಕೆ ಸಕಲ ಸಿದ್ಧತೆಗಳು ಆಗುತ್ತಿವೆ. ಈ ದೊರೆಯ ಪರಂಪರೆಯನ್ನು ಆಧರಿಸಿದ ಮಹಾಕಾವ್ಯ ಸಿನಿಮಾವಾಗಿ ಬರುತ್ತಿದೆ. ಸದ್ಯಕ್ಕೀಗ ಈ ಸಿನಿಮಾಗೆ 'ಎರೆಯ' ಎಂದು ಟೈಟಲ್ ಇಡಲಾಗಿದೆ.

ಇಮ್ಮಡಿ ಪುಲಿಕೇಶಿ ಜೀವನ ಚರಿತ್ರೆಯನ್ನು ಆಧರಿಸಿದ 'ಎರೆಯ' ಸಿನಿಮಾವನ್ನು ವಿಂಗ್‌ಸ್ಪ್ಯಾನ್ ಮೋಷನ್ ಪಿಕ್ಚರ್ಸ್ LLP ನಿರ್ಮಾಣ ಮಾಡುತ್ತಿದೆ. ಈ ಮೂಲಕ ಒಂದು ಅಭೂತಪೂರ್ವ ಸಿನಿಮಾ ಸಾಹಸಗಾಥೆಗೆ ಮುನ್ನುಡಿಯನ್ನು ಬರೆಯುತ್ತಿದೆ. ಸುನೀತ್ ಜಾವಡೇಕರ್ ಮತ್ತು ನಿವೇದಿತಾ ಕೊಠಾರೆ 'ಎರೆಯ' ಸಿನಿಮಾ ನಿರ್ಮಾಣ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಹಾಗಿದ್ದರೆ, ಸಿನಿಮಾದ ವಿಶೇಷತೆಗಳೇನು ಅಂತ ನೋಡುವುದಾರೇ,
'ಎರೆಯ' ಸಿನಿಮಾದಲ್ಲಿ ಚಕ್ರವರ್ತಿ ಇಮ್ಮಡಿ ಪುಲಿಕೇಶಿಯ ಸಾಹಸ, ಚಾತುರ್ಯ ಮತ್ತು ಅದ್ವಿತೀಯ ಆಡಳಿತಸೂತ್ರಗಳನ್ನು ಹೇಳಾಗುತ್ತಿದೆ. ಅಷ್ಟೇ ಅಲ್ಲದೆ ವಿಶಾಲ ಸಾಮ್ರಾಜ್ಯವನ್ನು ಆಳಿದ ಅವರ ಆಳ್ವಿಕೆಯನ್ನು ಶೂಟಿಂಗ್ ಮಾಡುತ್ತಿದ್ದಾರೆ . ಇಮ್ಮಡಿ ಪುಲಿಕೇಶಿಯ ಕಾಲವನ್ನು ಇತಿಹಾಸದಲ್ಲಿ ಒಂದು ಸುವರ್ಣಯುಗ ಎಂದೇ ಹೇಳಲಾಗುತ್ತದೆ. ಡಾ. ಭೂಷನ್ ಶಾನಭಾಗ್ ಅವರ ಆಳವಾದ ಸಂಶೋಧನೆಯನ್ನು ಆಧರವಾಗಿಟ್ಟುಕೊಂಡು ಚಿತ್ರಕಥೆಯನ್ನು ಹೆಣೆಯಲಾಗಿದೆ.
ಕನ್ನಡದಲ್ಲಿ ಮೈಲಿಗಲ್ಲಾಗಲಿರುವ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು 'ಆ ದಿನಗಳು' ಖ್ಯಾತಿಯ ನಿರ್ದೇಶಕರಾದ ಕೆ.ಎಂ. ಚೈತನ್ಯ ನಿರ್ದೇಶನ ಮಾಡುತ್ತಿದ್ದಾರೆ. ಕೆ.ಎಂ. ಚೈತನ್ಯ ಕನ್ನಡದಲ್ಲಿ ಸುಮಾರು 8 ಯಶಸ್ವಿ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. 'ಆ ದಿನಗಳು' ಸಿನಿಮಾ ಮೂಲಕ ಖ್ಯಾತಿಗಳಿಸಿದ್ದ ಕೆ.ಎ ಚೈತನ್ಯ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾಗೂ ಮುನ್ನ ವಿನೋದ್ ಪ್ರಭಾಕರ್ ನಟನೆಯ 'ಬಲರಾಮನ ದಿನಗಳು' ಈ ವರ್ಷ ಬಿಡುಗಡೆಯಾಗಲಿದೆ. 'ಎರೆಯ' ದೊಂದಿಗೆ, ಇತಿಹಾಸದ ಪುಟಗಳಲ್ಲಿ ಕಂಡ ಭಾರತದ ಭವ್ಯತೆಯನ್ನು ಬಿಂಬಿಸುವ ಸಿನಿಮಾ ಆಗುತ್ತಿದೆ.
'ಎರೆಯ' ನಿರ್ಮಾಪಕರು ನಿರ್ಮಿಸುತ್ತಿರುವ ಮೂರು ಸಿನಿಮಾಗಳ ಪ್ರಾಜೆಕ್ಟ್ ಇದು. ಈ ಸಿನಿಮಾದಲ್ಲಿ ಕೇ ಕೇ ಮೆನನ್, ಜಿಮ್ಮಿ ಶೇರ್ಗಿಲ್, ಜಾಕಿ ಶ್ರಾಫ್, ಪಂಕಜ್ ತ್ರಿಪಾಠಿ ಮುಂತಾದ ಅದ್ಭುತ ನಟರ ಅಭಿನಯವಿದ್ದ 'ಫಾಮಸ್ ಹಾಗೂ ದಿವಂಗತ ರಾಜೇನ್ ಕೊಥಾರಿ ಅವರ ನಿರ್ದೇಶನದಲ್ಲಿ ಓಂ ಪುರಿ, ಸತೀಶ್ ಶಾ, ಸುಪ್ರಿಯಾ ಪಾಠಕ್ ಮುಂತಾದವರು ನಟಿಸಿದ್ದಾರೆ "ಪಂಗಾ ನಾ ಲೋ" ಅವರ ಇನ್ನಿತರೆ ಚಿತ್ರಗಳಾಗಿವೆ. 'ಫಾಮಸ್' ಅನ್ನು ಆಸಕ್ತರು ಅಮೆಜಾನ್ ಪ್ರೈಮ್‌ನಲ್ಲಿ ನೋಡಬಹುದು.
ಪ್ಯಾನ್-ಇಂಡಿಯಾ ಪ್ರೇಕ್ಷಕರ ಮನಸೂರೆಗೊಳ್ಳಲು ಬೃಹತ್ ಪ್ರಮಾಣದಲ್ಲಿ ತೆರೆಯ ಮೇಲೆ ಬರಲಿರುವ "ಎರೆಯ" ಚಿತ್ರವನ್ನು ಹಿಂದಿ ಜೊತೆಗೆ ಎಲ್ಲಾ ಪ್ರಮುಖ ದಕ್ಷಿಣ ಭಾರತೀಯ ಭಾಷೆಗಳಲ್ಲೂ ನಿರ್ಮಿಸಲಾಗುವುದು. ಇದು ಜಗತ್ತಿನಾದ್ಯಂತ ಇರುವ ಸಿನಿಮಾಸಕ್ತರನ್ನು ತಲುಪುವ ಗುರಿ ಹೊಂದಿದೆ. ಈ ಚಿತ್ರವು ರಾಷ್ಟ್ರದ ಎಲ್ಲಾ ಭಾಗಗಳಿಂದ ಬಂದ ಉತ್ಕೃಷ್ಟ ತಾರಾಬಳಗವನ್ನು ಒಳಗೊಂಡಿದ್ದು, ಅತ್ಯಂತ ನುರಿತ ತಂತ್ರಜ್ಞರ ತಂಡ ಇದನ್ನು ತೆರೆಗೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಚಿತ್ರದ ಪ್ರಮುಖ ನಟರ ಆಯ್ಕೆ ಮತ್ತು ತಾಂತ್ರಿಕ ತಂಡದ ವಿವರಗಳನ್ನು ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. ಬಹು ಹೆಸರಾಂತ ನಟವರ್ಗವನ್ನೊಳಗೊಂಡ ಈ ಸಿನಿಮಾ ವರ್ಷದ ಅಂತ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆಯಿದೆ. "ಎರೆಯ" ಸಿನಿಮಾ ಇತಿಹಾಸದ ಪುಟಗಳಲ್ಲಿ ಕಳೆದುಹೋದ ಭಾರತದ ಶ್ರೇಷ್ಠ ಚಕ್ರವರ್ತಿಯೊಬ್ಬರ ಪರಂಪರೆಯನ್ನು ಆಚರಿಸುವ ಒಂದು ಮುಖ್ಯ ಚಿತ್ರವಾಗಲಿದೆ.


Click it and Unblock the Notifications