"ನಟರ ಮನೆಗಳಿಗೆ ನಿರ್ಮಾಪಕರು ಕಾಂಡೋಮ್ ತಗೊಂಡು ಹೋಗ್ತಾರೆ" ಚಂದ್ರಚೂಡ್ ಹೇಳಿಕೆಗೆ ತಣ್ಣಗಾದ ನಿರ್ಮಾಪಕರು!

ಕಿಚ್ಚ ಸುದೀಪ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಹಿರಿಯ ಪತ್ರಕರ್ತ, ಬರಹಗಾರ, ಸಿನಿಮಾ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇತ್ತೀಚೆಗೆ ಅವರದ್ದೇ ಯೂಟ್ಯೂಬ್‌ ಚಾನೆಲ್ ಚಕ್ರವರ್ತಿ ಅಖಾಡದಲ್ಲಿ 'ಜನನಾಯಗನ್' ಸಿನಿಮಾ ಬಗ್ಗೆ ಮಾತಾಡುವ ಭರಾಟೆಯಲ್ಲಿ ನಿರ್ಮಾಪಕರ ಬಗ್ಗೆ ವಿವಾದತ್ಮಕ ಹೇಳಿಕೆಯೊಂದನ್ನು ನೀಡಿದ್ದರು. ಅದೇ ಈಗ ಅವರನ್ನು ಪೇಚಿಗೆ ಸಿಲುಕಿದೆ.

ಈ ವಿಡಿಯೋದಲ್ಲಿ ಚಕ್ರವರ್ತಿ ಚಂದ್ರಚೂಡ್ ನಿರ್ಮಾಪಕರ ವಿರುದ್ಧ ಅವಹೇಳನಕಾರಿಯಾಗಿ ಟೀಕೆ ಮಾಡಿದ್ದಾರೆಂದು ಪ್ರಡ್ಯೂಸರ್ಸ್ ಕಿಡಿಕಾರುತ್ತಿದ್ದಾರೆ. ಹೀಗಾಗಿ ನಿರ್ಮಾಪಕರು ಒಟ್ಟಾಗಿದ್ದು, ಚಂದ್ರಚೂಡ್ ವಿರುದ್ಧ ತಿರುಗಿಬಿದ್ದಿದ್ದಾರೆ. ಸ್ಯಾಂಡಲ್‌ವುಡ್‌ನ ಹಿರಿಯ ನಿರ್ಮಾಪಕ ಕೆ.ಮಂಜು, ಉದಯ್ ಮೆಹ್ತಾ ಸೇರಿದಂತೆ ಹಲವು ಮಂದಿ ಚಕ್ರವರ್ತಿ ಚಂದ್ರಚೂಡ್ ಹೇಳಿಕೆಯನ್ನು ಖಂಡಿಸಿದ್ದಾರೆ.

K Manju and producer association opposed Chakravarthy Chandrachud controversial Comment

ಚಕ್ರವರ್ತಿ ಚಂದ್ರಚೂಡ್ ದಳಪತಿ ವಿಜಯ್ 'ಜನ ನಾಯಗನ್' ಸಿನಿಮಾವನ್ನು ಟೀಕಿಸುವ ಭರಾಟೆಯಲ್ಲಿ ನಿರ್ಮಾಪಕರನ್ನು ಎಳೆದು ತಂದಿದ್ದರು. ಸಿನಿಮಾ ನಟರಿಗೆ ಕೆಲ ನಿರ್ಮಾಪಕರು ಕಾಂಡೋಮ್ ಸಪ್ಲೈ ಮಾಡುತ್ತಾರೆಂಬ ಹೇಳಿಕೆ ನಿರ್ಮಾಪಕರ ಕಣ್ಣು ಕೆಂಪಗೆ ಮಾಡಿದೆ. ಈ ಹೇಳಿಕೆ ವಿವಾದಕ್ಕೆ ಎಡೆ ಮಾಡಿಕೊಡುತ್ತಿದ್ದಂತೆ ಚಂದ್ರಚೂಡ್ ಸ್ಪಷ್ಟನೆ ಕೊಟ್ಟಿದ್ದಾರೆ. ಆದರೂ ನಿರ್ಮಾಪಕರು ತಣ್ಣಗಾಗುವಂತೆ ಕಾಣುತ್ತಿಲ್ಲ. ಇವರ ವಿರುದ್ಧ ದೂರು ಕೂಡ ದಾಖಲಾಗಿದೆ. ಹಾಗಿದ್ದರೆ, ಯಾರೆಲ್ಲ ಏನೇನು ಮಾತಾಡಿದೆ ಎಂದು ನೋಡುವುದಾರೇ,

ಚಕ್ರವರ್ತಿ ಚಂದ್ರಚೂಡ್ ತಮ್ಮ ಚಕ್ರವರ್ತಿ ಅಖಾಡ ಯೂಟ್ಯೂಬ್ ಚಾನೆಲ್‌ನಲ್ಲಿ ಕೆಲವು ಗಂಭೀರ ವಿಷಯಗಳ ಬೆಳಕು ಚೆಲ್ಲುತ್ತಾರೆ. ಈ ಬಾರಿ ವಿಷಯ ಜನನಾಯಗನ್ ಆಗಿತ್ತು. ಕೆವಿಎನ್‌ ಪ್ರೊಡಕ್ಷನ್ ನಿರ್ಮಾಣದ ಈ ಸಿನಿಮಾಗೆ ಸುಮಾರು ₹500 ಕೋಟಿಯಷ್ಟು ಹಣ ಸುರಿದು, ಈ ವಿವಾದದಲ್ಲಿ ಸಿಕ್ಕಿಕೊಂಡಿಡೆ. ಅಲ್ಲದೆ ತಮಿಳುನಾಡಿನ ರಾಜಕೀಯ ವೈಷಮ್ಯದಲ್ಲಿ ಕೆವಿಎನ್ ಸಿಕ್ಕಿಕೊಂಡಿದ್ದರ ಬಗ್ಗೆ ಮಾತಾಡಿದ್ದರು. ಈ ವೇಳೆ ಅವರು ಹೇಳಿದ ಕೆಲವು ವಿಷಯಗಳ ಮೇಲೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

"ಹೀರೋಗಳ ವಿಚಾರ ಬಂದರೆ, ಕೆಲವು ನಿರ್ಮಾಪಕರು ಅವರ ಮನೆಯ ಕಮೋಡ್ ಕೂಡ ಚಿನ್ನದಲ್ಲಿ ರೆಡಿ ಮಾಡುತ್ತಾರೆ. ಹಾಗೇ ಅವರ ಮನೆಗೂ ಕಾಂಡೋಮ್ ತೆಗೆದುಕೊಂಡು ಹೋಗುತ್ತಾರೆ. ಅದೇ ತಂತ್ರಜ್ಞರು, ಲೈಟ್ ಬಾಯ್ಸ್, ಪ್ರೊಕ್ಷಡನ್ ಹುಡುಗರು, ರೈಟರ್‌ಗಳಿಗೆ ಸರಿಯಾಗಿ ಹಣ ಕೊಡಲ್ಲ." ಎಂದು ಚಕ್ರವರ್ತಿ ಚಂದ್ರಚೂಡ ತಮ್ಮ ವಿಡಿಯೋದಲ್ಲಿ ಹೇಳಿಕೊಂಡಿದ್ದರು.

K Manju and producer association opposed Chakravarthy Chandrachud controversial Comment

ಚಕ್ರವರ್ತಿ ಚಂದ್ರಚೂಡ್ ಕೊಟ್ಟ ಹೇಳಿಕೆಯನ್ನು ಯಾವಾಗ ವೈರಲ್ ಆಗುವುದಕ್ಕೆ ಶುರುವಾಗಿವೆ. ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕೆ.ಮಂಜು ಕೂಡ ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. "ನವೆಂಬರ್‌ನಿಂದ ಜನವರಿ ಈ ಮೂರು ತಿಂಗಳಲ್ಲಿ ಸುಮಾರು ₹200 ರಿಂದ ₹250 ಕೋಟಿ ಲಾಸ್ ಆಗಿದೆ. ಇದನ್ನು ಯಾರು ಕೊಡುತ್ತಾರೆ? ಚಂದ್ರಚೂಡ್ ಏನಾದರೂ ಬಂದು ಸಿನಿಮಾ ಮಾಡಿದ್ದಾರಾ? ಕೂತು ಬರೆದು ಹಣ ಎಣಿಸಿಕೊಂಡು ಹೋಗುತ್ತಾರೆ. ಯಾಕೆ, ಇದನ್ನೆಲ್ಲ ಅರಿತುಕೊಂಡು ಮಾತಾಡಬೇಕಲ್ವಾ? ಬೇರೆ ಭಾಷೆಯ ನಿರ್ಮಾಪಕರ ಬಗ್ಗೆ ಯಾಕೆ ಮಾತಾಡಬೇಕು?" ಕೆ ಮಂಜು ಕಿಡಿಕಾರಿದ್ದಾರೆ.

ಈ ಸಂಬಂಧ ನಿರ್ಮಾಪಕ ಸಂಘದ ಸದಸ್ಯರು ಸಭೆ ಸೇರಿ ಚಕ್ರವರ್ತಿ ಚಂದ್ರಚೂಡ್ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಕೆಲವು ನಿರ್ಮಾಪಕರು ದೂರನ್ನು ಸಲ್ಲಿಸಿದ್ದಾರೆ. ಹೀಗಾಗಿ ಚಕ್ರವರ್ತಿ ಚಂದ್ರಚೂಡ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೊಲೀಸರು ದೂರಿನ ಪ್ರತಿಯನ್ನು ಸ್ವೀಕರಿಸಿದ್ದಾರೆ. ಹೀಗಾಗಿ ಚಂದ್ರಚೂಡ್‌ಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಚಂದ್ರಚೂಡ್ ತಮ್ಮ ವಿಡಿಯೋ ಸ್ಪಷ್ಟೀಕರಣ ಕೊಡುವ ಪ್ರಯತ್ನ ಮಾಡಿದರೂ ನಿರ್ಮಾಪಕರು ತಣ್ಣಗಾಗಲಿಲ್ಲ.

More from Filmibeat

English summary
K Manju and producer association opposed Chakravarthy Chandrachud controversial Comment.
Read more about: k manju sandalwood controversy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X