'ಕಾಳಿ ಟೈಟಲ್ ನನ್ನ ಬ್ಯಾನರ್‌ನಲ್ಲಿ ರಿಜಿಸ್ಟರ್ ಆಗಿದೆ'- ಅಂಬಿ ಬರ್ತ್‌ಡೇ ದಿನವೇ ಲಾಂಚ್!

ಕಳೆದ ಕೆಲವು ದಿನಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಒಂದು ಟೈಟಲ್‌ ಬಗ್ಗೆ ಚರ್ಚೆಯಾಗುತ್ತಿದೆ. ಇಬ್ಬರು ನಿರ್ದೇಶಕರು ಒಂದೇ ಟೈಟಲ್ ಹಿಂದೆ ಬಿದ್ದಿದಾರೆ ಸುದ್ದಿ ಜೋರಾಗೇ ಹರಿದಾಡುತ್ತಿತ್ತು. ಆ ಟೈಟಲ್ ಮತ್ಯಾವುದೂ ಅಲ್ಲ 'ಕಾಳಿ'. ಇದೇ ಟೈಟಲ್‌ಗಾಗಿ ಇಬ್ಬರು ನಿರ್ದೇಶಕರು ಪೈಪೋಟಿ ನಡೆಸುತ್ತಿದ್ದಾರೆ ಅಂತ ಬಿಸಿ ಬಿಸಿ ಚರ್ಚೆಯಾಗುತ್ತಿತ್ತು.

'ಪೈಲ್ವಾನ್' ನಿರ್ದೇಶಕ ಕೃಷ್ಣ ಹಾಗೂ 'ಜೋಗಿ' ನಿರ್ದೇಶಕ ಪ್ರೇಮ್ ಇಬ್ಬರೂ ಹೊಸ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಅಭಿಷೇಕ್ ಅಂಬರೀಶ್‌ಗೆ ಪೈಲ್ವಾನ್ ಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಇತ್ತ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಜೋಗಿ ಡೈರೆಕ್ಟ್ ಮಾಡುತ್ತಿದ್ದಾರೆ. ಇವರಿಬ್ಬರೂ 'ಕಾಳಿ' ಟೈಟಲ್ ಮೇಲೆ ಕಣ್ಣಿಟ್ಟಿದ್ದಾರೆ ಅನ್ನೋದು ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿ.

ಇದೇ ವಿಚಾರವಾಗಿ ಇಬ್ಬರೂ ನಿರ್ದೇಶಕರನ್ನು ಫಿಲ್ಮಿ ಬೀಟ್ ಸಂಪರ್ಕಿಸಲಾಗಿತ್ತು. ಜೋಗಿ ಪ್ರೇಮ್ ಪ್ರತಿಕ್ರಿಯೆ ಸಿಕ್ಕಿಲ್ಲ. ಆದರೆ, 'ಪೈಲ್ವಾನ್' ನಿರ್ದೇಶಕ ಕೃಷ್ಣ ಫಿಲ್ಮ್ ಬೀಟ್ ಜೊತೆ ಸಿನಿಮಾ ಬಗ್ಗೆ ಹಾಗೂ ಟೈಟಲ್ ಬಗ್ಗೆ ಎದ್ದಿರುವ ಊಹಾ-ಪೋಹಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಹಾಗಿದ್ದರೆ, 'ಕಾಳಿ' ಟೈಟಲ್ ಬಗ್ಗೆ ಪೈಲ್ವಾನ್ ಕೃಷ್ಣ ಹೇಳಿದ್ದೇನು? ತಿಳಿಯಲು ಮುಂದೆ ಓದಿ.

'ಕಾಳಿ' ಟೈಟಲ್ ಬಗ್ಗೆ ಏನಿದು ಗೊಂದಲ?

'ಕಾಳಿ' ಟೈಟಲ್ ಬಗ್ಗೆ ಏನಿದು ಗೊಂದಲ?

ಸ್ಯಾಂಡಲ್‌ವುಡ್‌ನಲ್ಲಿ 'ಕಾಳಿ' ಟೈಟಲ್ ಬಗ್ಗೆ ಚರ್ಚೆ ಶುರುವಾಗಿತ್ತು. ಧ್ರುವ ಸರ್ಜಾ ಸಿನಿಮಾಗೆ ಜೋಗಿ ಪ್ರೇಮ್ 'ಕಾಳಿ' ಎಂದು ಟೈಟಲ್ ಇಡಲು ಮುಂದಾಗಿದ್ದಾರೆ ಎನ್ನಲಾಗಿತ್ತು. ಇದೇ ವೇಳೆ ಅಭಿಷೇಕ್ ಅಂಬರೀಶ್ ಸಿನಿಮಾಗೂ ನಿರ್ದೇಶಕ ಕೃಷ್ಣ 'ಕಾಳಿ' ಟೈಟಲ್ ಅನ್ನೇ ಅಂತಿಮಗೊಳಿಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಇಬ್ಬರೂ ಒಂದೇ ಟೈಟಲ್ ಅನ್ನು ಇಡುವುದು ಅಸಾಧ್ಯ. ಹೀಗಾಗಿ 'ಕಾಳಿ' ಟೈಟಲ್ ಯಾರ ಬಳಿ ಇದೆ? ಕುತೂಹಲಕ್ಕೆ ಕೃಷ್ಣ ತೆರೆ ಎಳೆದಿದ್ದಾರೆ.

ನಿರ್ದೇಶಕ ಕೃಷ್ಣ ಬಳಿಯಿದೆ 'ಕಾಳಿ' ಟೈಟಲ್

ನಿರ್ದೇಶಕ ಕೃಷ್ಣ ಬಳಿಯಿದೆ 'ಕಾಳಿ' ಟೈಟಲ್

'ಕಾಳಿ' ಟೈಟಲ್ ಬಗ್ಗೆ ನಿರ್ದೇಶಕ ಕೃಷ್ಣ ಫಿಲ್ಮಿ ಬೀಟ್‌ಗೆ ಕ್ಲಾರಿಟಿ ಕೊಟ್ಟಿದ್ದಾರೆ. " ಕಾಳಿ ಸಿನಿಮಾದ ಟೈಟಲ್‌ ನನ್ನ ಬ್ಯಾನರ್‌ನಲ್ಲಿ ರಿಜಿಸ್ಟರ್ ಆಗಿದೆ. ಹೀಗಾಗಿ ಆ ಟೈಟಲ್‌ ನನ್ನ ಬಳಿಯೇ ಇದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಕಳೆದ ಕೆಲವು ದಿನಗಳಿಂದ ಕೆಲವು ಊಹಾ-ಪೋಹಗಳು ಹರಿದಾಡುತ್ತಿದೆ ಎಂಬುದನ್ನು ನನ್ನ ಆಪ್ತರು ಗಮನಕ್ಕೆ ತಂದಿದ್ದಾರೆ. ಆದರೆ, ಇದರ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ನಾವು ನಮ್ಮ ಸಿನಿಮಾಗೆ ಈ ಟೈಟಲ್ ಬೇಕೆಂದೇ ರಿಜಿಸ್ಟರ್ ಮಾಡಿದ್ದೇವೆ. ಸಮಯ ಬಂದಾಗ ಆ ಟೈಟಲ್ ಅನ್ನು ರಿವೀಲ್ ಮಾಡುತ್ತೇವೆ. " ಎಂದು ಪ್ರತಿಕ್ರಿಯಿಸಿದ್ದಾರೆ.

'ಕಾಳಿ' ಟೈಟಲ್ ಯಾಕೆ ಬೇಕು?

'ಕಾಳಿ' ಟೈಟಲ್ ಯಾಕೆ ಬೇಕು?

ಅಭಿಷೇಕ್ ಅಂಬರೀಶ್ ನಟಿಸುತ್ತಿರುವ ಈ ಸಿನಿಮಾ 90 ದಶಕದ ಕಥೆ ಎನ್ನಲಾಗಿದೆ. ಹೀಗಾಗಿ ಆ ಕಥೆಗೆ 'ಕಾಳಿ' ಸೂಕ್ತ ಎನ್ನುತ್ತಾರೆ ಕೃಷ್ಣ. " ಅಭಿಷೇಕ್ ಅಂಬರೀಶ್ ಹಾಗೂ ಸೂರಿ ಸಿನಿಮಾ ಇಷ್ಟರೊಳಗೆ ಮುಗಿಯಬೇಕಿತ್ತು. ಆದರೆ, ಕೊರೊನಾದಿಂದಾಗಿ ಸ್ವಲ್ಪ ತಡವಾಗಿದೆ. ಇಲ್ಲದೆ ಹೋಗಿದ್ದರೆ, ಇಷ್ಟರೊಳಗೆ ಸಿನಿಮಾ ಟೈಟಲ್ 'ಕಾಳಿ' ಎಂದು ರಿವೀಲ್ ಮಾಡುತ್ತಿದ್ದೆವು. ಆದರೆ, ಆ ಸಿನಿಮಾ ಕೆಲ ಬಾಕಿ ಇದ್ದಿದ್ದರಿಂದ ಟೈಟಲ್ ರಿವೀಲ್ ಮಾಡಿರಲಿಲ್ಲ. ಇದು 90ರ ದಶಕದ ಕಥೆಯಾಗಿದ್ದರಿಂದ 'ಕಾಳಿ' ಟೈಟಲ್ ಸೂಕ್ತ ಎನಿಸಿದ್ದಕ್ಕೆ ರಿಜಿಸ್ಟರ್ ಮಾಡಿಸಿದ್ದೇವೆ." ಎನ್ನುತ್ತಾರೆ ಪೈಲ್ವಾನ್ ನಿರ್ದೇಶಕ.

ಅಂಬಿ ಬರ್ತ್‌ಡೇಯಂದೇ ಹೊಸ ಸಿನಿಮಾ

ಅಂಬಿ ಬರ್ತ್‌ಡೇಯಂದೇ ಹೊಸ ಸಿನಿಮಾ

ಅಭಿಷೇಕ್ ಅಂಬರೀಶ್ ಹಾಗೂ ಕೃಷ್ಣ ಕಾಂಬಿನೇಷನ್‌ ಸಿನಿಮಾವನ್ನು ಶೀಘ್ರವೇ ಲಾಂಚ್ ಆಗಲಿದೆ. (ಮೇ 29)ರಂದು ರೆಬಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬವಿದೆ. ಈ ದಿನದಂದು ಅಭಿಷೇಕ್ ಅಂಬರೀಶ್ ಹೊಸ ಸಿನಿಮಾ ಲಾಂಚ್ ಆಗುತ್ತಿದೆ. ಕೃಷ್ಣ ಆ ವಿಶೇಷ ದಿನದಂದು 'ಕಾಳಿ' ಟೈಟಲ್ ಲಾಂಚ್ ಮಾಡಲು ನಿರ್ಧರಿಸಿದ್ದಾರೆ. ಒಂದು ವೇಳೆ ಜೋಗಿ ಪ್ರೇಮ್ 'ಕಾಳಿ' ಟೈಟಲ್‌ ಇಷ್ಟಪಟ್ಟಿದ್ದು ನಿಜವೇ ಆಗಿದ್ದರೆ, ಆ ಟೈಟಲ್ ಸಿಗುವ ಸಾಧ್ಯತೆಯಿಲ್ಲ.

More from Filmibeat

English summary
Kaali Title For Abhishek Ambareesh Or Dhruva Sarja Director Krishna Reaction, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X