ಆಪ್ತರೊಂದಿಗೆ ಮತ್ತೆ ತಿರುಪತಿಗೆ ಭೇಟಿ ಕೊಟ್ಟು ತಿಮ್ಮಪ್ಪನ ದರ್ಶನ ಪಡೆದ ದರ್ಶನ್
ಒಬ್ಬರ ನಟನಿಗೆ ಒಂದೊಂದು ದೇವರ ಮೇಲೆ ನಂಬಿಕೆ. ದರ್ಶನ್‌ಗೆ ಮೊದಲಿನಿಂದಲೂ ತಿರುಪತಿ ತಿಮ್ಮಪ್ಪನ ಮೇಲೆ ಎಲ್ಲಿಲ್ಲದ ನಂಬಿಕೆ. ಯಾವುದೇ ಹೊಸ ಸಿನಿಮಾ ಆರಂಭ ಆದಾಗ ಇಲ್ಲವೇ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಭೇಟಿ ಕೊಡುತ್ತಲೇ ಇರುತ್ತಾರೆ. ಈಗ ಮತ್ತೆ ತಿರುಪತಿಯಲ್ಲಿ ಆಪ್ತರೊಂದಿಗೆ ದರ್ಶನ್ ತಿಮ್ಮಪ್ಪನ ದರ್ಶನ ಮಾಡಿದ್ದಾರೆ.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಪ್ತರೊಂದಿಗೆ ತಿರುಪತಿಗೆ ಭೇಟಿ ನೀಡಿದ್ದರು. 'ಕ್ರಾಂತಿ' ಸಿನಿಮಾ ಪ್ರಚಾರ ಆರಂಭ ಮಾಡುವುದಕ್ಕೂ ಮುನ್ನ ತಿಮ್ಮಪ್ಪನ ದರ್ಶನ ಮಾಡಿ ಬಂದಿದ್ದರು. ಆ ವೇಳೆ ದರ್ಶನ್ ಆತ್ಮೀಯರಾಗಿದ್ದ ಸಚ್ಚಿದಾನಂದ ಹಾಗೂ ಎಂಎಲ್‌ಎ ಸತೀಶ್ ರೆಡ್ಡಿ ಕೂಡ ಚಾಲೆಂಜಿಂಗ್ ಸ್ಟಾರ್‌ಗೆ ಜೊತೆಯಾಗಿದ್ದರು.

ಈಗ ಮತ್ತೆ ಚಾಲೆಂಜಿಂಗ್ ಸ್ಟಾರ್ ತಿರುಪತಿಯಲ್ಲಿ ಭೇಟಿ ಕೊಟ್ಟಿದ್ದಾರೆ. ಈ ಬಾರಿ ಕೂಡ ಆತ್ಮೀಯ ಗೆಳೆಯರಾಗಿರುವ ಸಚ್ಚಿದಾನಂದ ಜೊತೆಯಾಗಿದ್ದಾರೆ. ಇವರೊಂದಿಗೆ 'ಮೆಜೆಸ್ಟಿಕ್' ಸಿನಿಮಾದ ನಿರ್ಮಾಪಕ ಎಂ ಜಿ ರಾಮಮೂರ್ತಿ ಕೂಡ ಜೊತೆಯಾಗಿದ್ದರು. ಆದರೆ, ತಿಮ್ಮಪ್ಪ ಸನ್ನಿಧಾನಕ್ಕೆ ಸುಮ್ಮನೆ ಭೇಟಿ ಕೊಟ್ಟಿದ್ರಾ? ಅಥವಾ ಯಾವುದಾದರೂ ವಿಶೇಷ ಕಾರಣವಿತ್ತಾ? ಅನ್ನೋದು ಗೊತ್ತಾಗಿಲ್ಲ. ಈ ಫೋಟೊಗಳನ್ನು ದರ್ಶನ್ ಅಭಿಮಾನಿಗಳು ಶೇರ್ ಮಾಡಿಕೊಂಡಿದ್ದು, ಇವು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿದ್ದ 55ನೇ ಸಿನಿಮಾ 'ಕ್ರಾಂತಿ' ಬಿಡುಗಡೆಯಾಗಿದೆ. ಸದ್ಯ ಓಟಿಟಿಯಲ್ಲೂ ಈ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ವಿ.ಹರಿಕೃಷ್ಣ ನಿರ್ದೇಶಿಸಿದ್ದ 'ಕ್ರಾಂತಿ' ತೆರೆಕಂಡ ಬೆನ್ನಲ್ಲೇ 56ನೇ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ತರುಣ್ ಸುಧೀರ್ ನಿರ್ದೇಶಿಸುತ್ತಿರುವ ಈ ಸಿನಿಮಾಗೆ 'ಕಾಟೇರ' ಅನ್ನೋ ಟೈಟಲ್ ಫಿಕ್ಸ್ ಮಾಡಲಾಗಿದೆ.
'ಕಾಟೇರ' ಸಿನಿಮಾವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಭರದಿಂದ ಸಾಗಿದೆ. ಈ ಮಧ್ಯೆನೇ ದರ್ಶನ್ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಬಂದಿದ್ದಾರೆ. ಅಂದ್ಹಾಗೆ ಈ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಕನಸಿನ ರಾಣಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಹುಟ್ಟುಹಬ್ಬದಂದು ನಾಲ್ಕೈದು ಸಿನಿಮಾ ಅನೌನ್ಸ್ ಆಗಿವೆ. ಆ ಸಿನಿಮಾಗಳೆಲ್ಲಾ ಯಾವಾಗ ಸೆಟ್ಟೇರುತ್ತೆ ಅನ್ನೋದು ಕುತೂಹಲ ಅಭಿಮಾನಿಗಳಲ್ಲಿದೆ.


Click it and Unblock the Notifications











