Kabzaa 2: ಪಾರ್ಟ್ 2ಗೆ 'ಶಿವಣ್ಣ' ಒಪ್ಪಿಕೊಂಡ್ರಾ? ಯಶ್, ಪವನ್ ಕಲ್ಯಾಣ್ ಇರುತ್ತಾರಾ? ಆರ್.ಚಂದ್ರು ಕೊಟ್ಟ ಸುಳಿವೇನು?

2023ರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ತೆರೆಕಂಡಿದೆ. ನಿರ್ದೇಶಕ ಕಮ್ ನಿರ್ಮಾಪಕ ಆರ್ ಚಂದ್ರು ಸಿನಿಮಾ ಮಾಡಿರೋ ವ್ಯಾಪಾರದ ಬಗ್ಗೆ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಸಿನಿಮಾ ರಿಲೀಸ್‌ಗೂ ಮುನ್ನವೇ ಲಾಭದಲ್ಲಿರೋದಾಗಿ ಹೇಳಿಕೊಂಡಿದ್ದಾರೆ.

'ಕಬ್ಜ' ಪಾರ್ಟ್ 1 ಬಳಿಕ 'ಕಬ್ಜ 2'ಗೂ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಈ ಗ್ಯಾಪ್‌ನಲ್ಲಿಯೇ 'ಕಬ್ಜ 2'ಗೆ ಯಾರು? ಶಿವಣ್ಣ ಲೀಡ್‌ ರೋಲ್‌ನಲ್ಲಿ ಇರುತ್ತಾರಾ? ನಿರ್ದೇಶಕ ಆರ್ ಚಂದ್ರು ಪ್ಲ್ಯಾನ್ ಏನು? ಅನ್ನೋದನ್ನು ಈಗ ರಿವೀಲ್ ಮಾಡಿದ್ದಾರೆ.

ಮೂರು ವರ್ಷಗಳಿಂದ 'ಕಬ್ಜ' ಸಿನಿಮಾ ಮಾಡಿರೋ ಆರ್‌. ಚಂದ್ರು ಪಾರ್ಟ್ 2ಗೆ ಕೊಂಚ ಬ್ರೇಕ್ ತೆಗೆದುಕೊಳ್ತಿದ್ದಾರೆ. ಈಗಾಗಲೇ ಕಥೆ ಮಾಡಿಕೊಂಡಿರೋ ಚಂದ್ರು ಎರಡು-ಮೂರು ವಾರಗಳ ಬಳಿಕ 'ಕಬ್ಜ 2' ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿದ್ದಾರೆ. ಇದೇ ವೇಳೆ 'ಕಬ್ಜ 2'ನಲ್ಲಿ ಶಿವಣ್ಣ ಇರುತ್ತಾರಾ? ಯಶ್, ಪವನ್ ಕಲ್ಯಾಣ್ ಬರ್ತಾರೆ ಅನ್ನೋ ಬಗ್ಗೆ ಚಂದ್ರು ಏನಂದ್ರು? ಅನ್ನೋ ಡಿಟೈಲ್ಸ್ ಇಲ್ಲಿದೆ.

'ಕಬ್ಜ 2'ನಲ್ಲಿ ಶಿವಣ್ಣ ಇರುತ್ತಾರಾ?

'ಕಬ್ಜ 2' ಅನೌನ್ಸ್ ಮಾಡುತ್ತಿದ್ದಂತೆ ಆರ್‌ ಚಂದ್ರು ಈಗಾಗಲೇ ಶೂಟಿಂಗ್ ಮಾಡಿಕೊಂಡಿದ್ದಾರೆ ಅನ್ನೋ ಗುಲ್ಲೆದ್ದಿತ್ತು. ಆದರೆ, ಈ ಬಗ್ಗೆ ಚಂದ್ರು ಸ್ಪಷ್ಟನೆ ಕೊಟ್ಟಿದ್ದಾರೆ. ಇದೇ ವೇಳೆ ಪಾರ್ಟ್ 2ಗೆ ಶಿವಣ್ಣ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಾ? ಅನ್ನೋ ಬಗ್ಗೆನೂ ಮಾಹಿತಿ ನೀಡಿದ್ದಾರೆ.

Kabzaa 2: Who Will Act in Part 2? What R. Chandru Says About Yash, Shivarajkumar, and Pawan Kalyan

"ನಾನು ಶೂಟ್ ಮಾಡಿಟ್ಟುಕೊಂಡಿಲ್ಲ. ಪಾರ್ಟ್ 1 ನೋಡಿ ಪಾರ್ಟ್ 2 ಮಾಡೋಣ ಅಂತ ಕಥೆಯನ್ನು ರೆಡಿ ಇಟ್ಟುಕೊಂಡಿದ್ದೇನೆ. ಪಾರ್ಟ್ 2ಗೆ ಶಿವಣ್ಣ ಯಾವಾಗ ಅಂತ ಕೇಳುತ್ತಿದ್ದಾರೆ. ಶಿವಣ್ಣ ಸರ್ ಶೂಟಿಂಗ್‌ನಲ್ಲಿ ಇದ್ದರು. ಇವತ್ತು ನೈಟ್ ಬರುತ್ತಿದ್ದಾರೆ. ನರ್ತಕಿ ಥಿಯೇಟರ್‌ಗೆ ಶಿವಣ್ಣನ ಕರೆದುಕೊಂಡು ಬರುತ್ತೇವೆ. ಸಿನಿಮಾ ತೋರಿಸುತ್ತೇನೆ." ಎಂದು ಆರ್‌ ಚಂದ್ರು ಹೇಳಿದ್ದಾರೆ.

'ಕಬ್ಜ 2' ನೆಕ್ಸ್ಟ್‌ ಲೆವೆಲ್‌ನಲ್ಲಿರುತ್ತೆ

ಶಿವರಾಜ್‌ಕುಮಾರ್ ಜೊತೆ ಕಥೆಯ ಬಗ್ಗೆ ನಿರ್ದೇಶಕ ಆರ್ ಚಂದ್ರು ಚರ್ಚೆ ಮಾಡಬೇಕಿದೆ. ಇತ್ತ ಶಿವಣ್ಣ ಸಿನಿಮಾ ನೋಡಿದ ಬಳಿಕ 'ಕಬ್ಜ 2'ನಲ್ಲಿ ನಟಿಸಬೇಕಾ? ಬೇಡ್ವಾ ಅನ್ನೋದನ್ನು ನಿರ್ಧಾರ ಮಾಡುವ ಸಾಧ್ಯತೆ ಇದೆ. ಇದೇ ವೇಳೆ ಯಶ್ ಹಾಗೂ ಪವನ್ ಕಲ್ಯಾಣ್ ಹೆಸರುಗಳು ಓಡಾಡುತ್ತಿವೆ. ಅಲ್ಲದೆ ಬಾಲಿವುಡ್‌ನ ಸೂಪರ್‌ಸ್ಟಾರ್ ಒಬ್ಬರು ನಟಿಸುತ್ತಾರೆ ಅನ್ನೋ ಸುದ್ದಿನೂ ಓಡಾಡಿತ್ತು. ಈ ಎಲ್ಲಾ ಸುದ್ದಿಗಳ ಬಗ್ಗೆ ಆರ್‌ ಚಂದ್ರು ಹೇಳಿದ್ದಿಷ್ಟು.

"ಶಿವಣ್ಣ ಬಂದ್ಮೇಲೆ ಕಥೆ ಬಗ್ಗೆ ಚರ್ಚೆ ಮಾಡ್ತೀವಿ. ಸ್ವಲ್ಪ ಸಮಯ ಕೊಡಿ. ಪಾರ್ಟ್ 1 ಏನು ನೋಡಿದ್ದೀರಿ. ಪಾರ್ಟ್ 2 ನೆಕ್ಸ್ಟ್‌ ಲೆವೆಲ್‌ಗೆ ಕೊಡುವ ಎಲ್ಲಾ ಪ್ರಯತ್ನ ಮಾಡುತ್ತೇನೆ. ಕಬ್ಜ 2 ನಿಮ್ಮ ಜೊತೆ ಮಾತಾಡಿಯೇ ಮುಂದಕ್ಕೆ ಹೋಗುತ್ತೇನೆ. ಮುಚ್ಚು ಮರೆ ಏನೂ ಮಾಡಲ್ಲ. ತಲೆಯಲ್ಲಿ ಇರೋದು ಇತ್ತು ಹೇಳುತ್ತೇನೆ . ಆದರೆ, ನಾಳೆ ಏನೋ ಬದಲಾವಣೆ ಆಗುತ್ತೆ. ಇವೆಲ್ಲ ಅದಕ್ಕೆನೇ ಈಗ ಬೇಡ " ಎಂದಿದ್ದಾರೆ ಆರ್. ಚಂದ್ರು.

'ಕೆಜಿಎಫ್' ಯಾಕೆ ಪ್ರೇರಣೆ?

"ನಾನು ಯಾರು ಸಿನಿಮಾ ಮಾಡಿದ್ರೂ ಪ್ರೇರಣೆಯಾಗಿ ತೆಗೆದುಕೊಳ್ಳುತ್ತೇನೆ. ಒಳ್ಳೆಯದನ್ನು ಯಾರು ಮಾಡಿದ್ರೂ ತೆಗೆದುಕೊಳ್ಳುತ್ತೇನೆ. ನನಗೆ ಯಶ್ ಸರ್ ಅಂತಲ್ಲ. ಸುದೀಪ್ ಸರ್ ಅಂತಲ್ಲ. ದರ್ಶನ್ ಸರ್ ಅಂತಲ್ಲ. ಉಪೇಂದ್ರ ಸರ್ ಅಂತಲ್ಲ. ಒಳ್ಳೆಯದನ್ನು ಒಬ್ಬ ಲೈಟ್ ಮ್ಯಾನ್ ಮಾಡಿದ್ರೂ ತೆಗೆದುಕೊಳ್ಳುತ್ತೇನೆ. ಕೆಜಿಎಫ್ ಯಾಕೆ ಪ್ರೇರಣೆ ಅಂದರೆ, ಇಡೀ ಚಿತ್ರರಂಗಕ್ಕೆ ಅವರೊಂದು ರೋಲ್ ಮಾಡಲ್." ಎಂದು ಆರ್. ಚಂದ್ರು ಅಭಿಪ್ರಾಯ ಪಟ್ಟಿದ್ದಾರೆ.

Kabzaa 2: Who Will Act in Part 2? What R. Chandru Says About Yash, Shivarajkumar, and Pawan Kalyan

"ಪ್ಯಾನ್ ಇಂಡಿಯಾ ಸಿನಿಮಾ ಮಾಡೋದು ಅಷ್ಟು ಸುಲಭ ಅಲ್ಲ. ನಾನು ಮಾಡಿದ್ದೇನೆ. ನನಗೆ ಗೊತ್ತಾಗುತ್ತಿದೆ. ಅವರು ಅದೇ ಎಫರ್ಟ್ ಹಾಕಿದ್ದಾರಲ್ಲ. ಅಷ್ಟು ಹಣ ಹಾಕಬೇಕು. ರಾತ್ರಿಯೆಲ್ಲ ನಿದ್ದೆಗೆಡಬೇಕು. ಎಲ್ಲಾ ದೇಶಗಳ, ರಾಜ್ಯಗಳ ಕಾಪಿ ತೆಗೆಯಬೇಕು. ಆ ನೋವು ನನಗೆ ಗೊತ್ತಿದೆ. ಅದನ್ನು ಮಾಡಿದ್ದಕ್ಕೆ ನಾನು ಅಷ್ಟು ಹೊಗಳುತ್ತೇನೆ." ಎಂದು ಚಂದ್ರು ಮನದಾಳದ ಮಾತನ್ನು ಹೊರ ಹಾಕಿದ್ದಾರೆ.

More from Filmibeat

English summary
Kabzaa 2: Who Will Act in Part 2? What R. Chandru Says About Yash, Shivarajkumar, and Pawan Kalyan. He aslo revealed that why he took inspiration from KGF 2,Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X