ಭಾರತೀಯ ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ ಶಿವಣ್ಣ: ಚಿರಂಜೀವಿಯಿಂದ ಧ್ರುವ ಸರ್ಜಾಗೂ ಶುಭ ಕೋರಿದವರು ಯಾರು?

ಕರುನಾಡ ಚಕ್ರವರ್ತಿ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಸಿನಿಮಾರಂಗದಲ್ಲಿ ಸುಮಾರು 40 ವರ್ಷಗಳನ್ನು ಪೂರೈಸಿದ್ದಾರೆ. ಇವರ ಈ ಜರ್ನಿಗೆ ದಕ್ಷಿಣ ಭಾರತೀಯ ಚಿತ್ರರಂಗ ಶುಭಾಶಯಗಳ ಮಹಾಪೂರವನ್ನೇ ಕಳುಹಿಸಿಕೊಟ್ಟಿದೆ. ಕನ್ನಡದ ಜೊತೆಗೆ ತೆಲುಗು, ತಮಿಳು ಚಿತ್ರರಂಗದ ಗಣ್ಯರು ಸೆಂಚುರಿ ಸ್ಟಾರ್‌ ಶಿವಣ್ಣನಿಗೆ ಪ್ರೀತಿಯಿಂದ ಅವರೊಂದಿಗೆ ಕಳೆದ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಸದ್ಯ ಶಿವಣ್ಣ ಅಮೆರಿಕ ಪ್ರವಾಸದಲ್ಲಿ ಇದ್ದಾರೆ. ಖಾಸಗಿ ಕಾರ್ಯಕ್ರಮ ಹಾಗೂ ಆರೋಗ್ಯ ತಪಾಸಣೆಗೆಂದು ತೆರಳಿದ್ದಾರೆ. ಇದೇ ವೇಳೆ 40 ವರ್ಷಗಳನ್ನು ಪೂರೈಸಿರುವ ಅವರಿಗೆ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ, ನಾಗಾರ್ಜುನ, ನಾನಿ, ವಿಜಯ್ ದೇವರಕೊಂಡ, ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್, ತಮಿಳು ನಟ ಕಮಲ್ ಹಾಸನ್, ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಶುಭಾಶಗಳನ್ನು ತಿಳಿಸಿ, ಅಭಿನಂದಿಸಿದ್ದಾರೆ.

Kamal Haasan Chiranjeevi to Dhruva Sarja send wish to Shivarajkumar 40 year cinema journey

ಕಮಲ್ ಹಾಸನ್

"ನಮಸ್ಕಾರ, ತಮ್ಮ, ಮಗ ಏನು ಬೇಕಾದರೂ ಹೇಳಬಹುದು. ಯಾವಾಗ ಸಿಕ್ಕದರೂ ಅವರು ನನಗೆ ಮಗನಿದ್ದಂತೆ. ನಾನು ಅವರಿಗೆ ಚಿಕ್ಕಪ್ಪನಿದ್ದಂತೆ. ಇದನ್ನು ಈಗಾಗಲೇ ನಾನು ಹೇಳಿದ್ದೇನೆ. ಇದನ್ನು ಸುಮ್ಮನೆ ವಿಡಿಯೋ ಮಾಡುತ್ತಿದ್ದಾರೆ ಅದಕ್ಕೆ ಹೇಳಿದ್ದಾರೆ ಅಂತ ಅಂದುಕೊಳ್ಳಬೇಡಿ. 40- 45 ವರ್ಷ ಅಂದುಕೊಳ್ಳಿ, 50 ವರ್ಷ ಅಂತಾನೂ ಹೇಳಬಹುದು. ರಾಜ್‌ಕುಮಾರ್ ಅಣ್ಣ ನನಗೆ ತೋರಿಸಿರುವ ಪ್ರೀತಿ, ಅದು ನಾನು ನಿರೀಕ್ಷೆ ಮಾಡದೇ ಇರುವ ಪ್ರೀತಿ. ನಾವಿಬ್ಬರೂ ಒಂದೇ ಸ್ಟುಡಿಯೋದಿಂದ ಬಂದವರು. ಅವರ ಬೇಡರ ಕಣ್ಣಪ್ಪ ಎವಿಎಂ ಸ್ಟುಡಿಯೋ ನಿರ್ಮಾಣ ಮಾಡಿದ್ದು, ಅದು ಮುಗಿದು ತುಂಬಾ ದಿನ ಆಗಿದೆ. ಆಗ ಸಣ್ಣ ಹುಡುಗ. ಅಲ್ಲಿಂದ ಶುರುವಾಗಿದ್ದ ನಮ್ಮ ಸಂಬಂಧ ಇನ್ನೂ ಮುಂದುವರೆದಿದೆ. ಶಿವಣ್ಣ ಅವರ ಸಿನಿಮಾ ಜರ್ನಿ ಹೇಗೆ ಹೋಯ್ತು ಅಂತಾನೇ ಗೊತ್ತಿಲ್ಲ. ಶಿವಣ್ಣ ಅವರನ್ನು ಆಕ್ಟರ್ ಆಗಿ, ಫ್ಯಾನ್ಸ್ ಆಗಿ ನಾನು ಪರಿಚಯ ಮಾಡಿಕೊಂಡಿದ್ದೇನೆ. ಶಿವಣ್ಣಾ ಅವರ ಅಪ್ಪನ ಹಾದಿಯಲ್ಲಿಯೇ ಬರುತ್ತಿದ್ದಾರೆ. ಅದು ನನಗೆ ತುಂಬಾ ಖುಷಿ ಕೊಟ್ಟಿದೆ."

"ಶಿವಣ್ಣ ಚೆನ್ನಾಗಿದ್ದೀರಾ? ಯಾವಾಗಲೂ ಖುಷಿಯಾಗಿರಿ.. ಇನ್ನೂ ತುಂಬಾನೇ ಸಿನಿಮಾಗಳನ್ನು ಮಾಡಿ. ಇದೇ ತರ ಇಬ್ಬರು ಮತ್ತೆ 50ನೇ ವರ್ಷಕ್ಕೆ ಸಿಗೋಣ. ಒಟ್ಟಿಗೆ ಕೂತು ಮಾತಾಡೋಣ. ಆರೋಗ್ಯವಾಗಿ. ಎಲ್ಲರಿಗೂ ನನ್ನ ನಮಸ್ಕಾರ ತಿಳಿಸಿ." ಎಂದು ಕಮಲ್ ಹಾಸನ್ ಹೇಳಿದ್ದಾರೆ.

ಚಿರಂಜೀವಿ

"ನಾನು ಕನ್ನಡ ಕಂಠೀರವ ರಾಜ್‌ಕುಮಾರ್ ಸರ್ ಅವರೊಂದಿಗೆ ವಿಶೇಷವಾದ ಒಡನಾಟ ಹೊಂದಿದ್ದೆ. ಅವರು ನನಗೆ ತಂದೆಯ ಸಮಾನರಾಗಿದ್ದರು. ಅವರು ಸೂಪರ್‌ಸ್ಟಾರ್ ಎನ್ನುವುದಕ್ಕಿಂತ ಅವರು ದೇವರ ಸಮಾನವಾಗಿದ್ದರು. ಹೀಗಾಗಿ ಅವರ ಮೇಲೆ ನನಗೆ ವಿಶೇಷವಾದ ಗೌರವವಿದೆ. ಅವರ ಮನೆಗೆ ಹೋದಾಗ ಅವರು ನನಗೆ ತೋರಿಸಿದ ಪ್ರೀತಿಗೆ ನಾನು ಧನ್ಯ. ಹಾಗಾಗಿ ನನಗೆ ಶಿವಣ್ಣ, ಅಪ್ಪು ಹಾಗೂ ರಾಘವೇಂದ್ರ ಗೊತ್ತು. ಶಿವಣ್ಣ ಅವರ ತಂದೆಯ ಹಾದಿಯನ್ನು ತುಳಿದಿದ್ದು ಅಷ್ಟೇ ಅಲ್ಲ. ಅವರು ಜನರಿಂದಲೂ ಅಷ್ಟೇ ಪ್ರೀತಿಯನ್ನು ಗಳಸಿಇದ್ದರು. ಅವರು ಸಿನಿಮಾದಲ್ಲಿ 40 ವರ್ಷಗಳನ್ನು ಪೂರೈಸಿದ್ದಾರೆ ಅನ್ನೋದನ್ನೇ ನಂಬುವುದಕ್ಕೆ ಆಗುತ್ತಿಲ್ಲ. ಶಿವಣ್ಣ ನಿಮ್ಮದು ಎಂತಹ ಅದ್ಭುತ ಜರ್ನಿ. ಈ ಮೈಲಿಗಲ್ಲಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ನಾಗಾರ್ಜುನ

"ಡಿಯರ್ ಶಿವಣ್ಣ.. ಎಂಥಾ ನೆನಪಿನಲ್ಲಿ ಉಳಿಯುವ ಮೈಲಿಗಲ್ಲು. 40 ವರ್ಷದ ಸಿನಿಮಾ ಜರ್ನಿ ಅನ್ನೋದು ಅಷ್ಟು ಸುಲಭ ಅಲ್ಲ. ಅದನ್ನು ನೀವು ಕ್ರೇಜಿಯಾಗಿ, ಸುಲಭವಾಗಿ ಮಾಡಿದ್ದೀರ. ನನಗೆ ಗೊತ್ತು ಸಾಕಷ್ಟು ನಟರು ಇಂತಹದ್ದೊಂದು ಕನಸನ್ನು ಕಾಣುತ್ತಿದ್ದಾರೆ. ನಾನು ನಿಮ್ಮಲ್ಲಿ ತುಂಬಾನೇ ಇಷ್ಟ ಪಡೋದು ನೀವೊಬ್ಬ ಉತ್ತಮ ವ್ಯಕ್ತಿ. ನಿಮ್ಮ ಜೊತೆ ಹಲವು ಬಾರಿ ಮಾತಾಡಿದ್ದೇನೆ. ಆ ವೇಳೆ ಎಲ್ಲಾ ನೀವು ಒಳ್ಳೆಯದನ್ನೇ ಹೇಳಿದ್ದೀರಿ. ಹಂಬಲ್‌ನೆಸ್ ಅನ್ನೋದು ಕೇವಲ ನಿಮ್ಮಲ್ಲಿ ಅಷ್ಟೇ ಅಲ್ಲ. ನಿಮ್ಮ ಇಡೀ ಕುಟುಂಬದಲ್ಲಿ ನೋಡಿದ್ದೇನೆ. ಅಪ್ಪ, ನೀವು, ಪುನೀತ್ ನಿಮ್ಮ ಕುಟುಂಬದ ಎಲ್ಲರೂ ಅಷ್ಟೇ. ಇದೊಂದು ಅದ್ಭುತ ಅನುಭವ. ಶಿವಣ್ಣ ನಿಮ್ಮೊಂದಿಗೆ ನಾನು ಸಿನಿಮಾದಲ್ಲಿ ನಟಿಸಿಲ್ಲ. ಆದರೆ, ಜಾಹೀರಾತಿನಲ್ಲಿ ನಟಿಸಿದ್ದೇನೆ. ಅದೊಂದು ಅದ್ಭುತ ನೆನಪು. ಆದಷ್ಟು ಬೇಗ ನಿಮ್ಮೊಂದಿಗೆ ಸಿನಿಮಾದಲ್ಲಿ ಕೆಲಸ ಮಾಡುವುದಕ್ಕೆ ಎದುರು ನೋಡುತ್ತಿದ್ದೇನೆ" ಎಂದು ನಾಗಾರ್ಜುನ ಹೇಳಿದ್ದಾರೆ.

ನಾನಿ

"ಶಿವಣ್ಣ ಸಿನಿಮಾದಲ್ಲಿ 40 ವರ್ಷಗಳನ್ನು ಪೂರೈಸಿದ್ದಾರೆ ಎನ್ನುವುದೇ ಒಂದು ಮೈಲಿಗಲ್ಲು. ಅವರಿಗಿಂತ ಹೆಚ್ಚಾಗಿ ನಾವು ಸೆಲೆಬ್ರೆಟ್ ಮಾಡಬೇಕು. ಯಾಕಂದ್ರೆ ಅವರು ಸಿನಿಮಾಗಾಗಿ ತುಂಬಾ ಕೆಲಸ ಮಾಡಿದ್ದಾರೆ. ಅವರು ಕೇವಲ ಸಿನಿಮಾ ಅಷ್ಟೇ ಅಲ್ಲ. ಬೇರೆ ಭಾಷೆಯ ಕಲಾವಿದರ ಜೊತೆನೂ ಇದ್ದಾರೆ. ಯಾವಾಗ ಬೆಂಗಳೂರಿಗೆ ಬಂದರೂ, ಅವರು ಮನೆಯಲ್ಲಿರುವಂತಹ ವಾತಾವರಣವನ್ನು ಸೃಷ್ಟಿಸುತ್ತಾರೆ. ನಾನು ಪ್ರತಿಬಾರಿ ಅಲ್ಲಿಗೆ ಹೋದಾಗ ಭೇಟಿ ಮಾಡುತ್ತೇನೆ."

ವಿಜಯ್ ದೇವೆರಕೊಂಡ

"ಶಿವಣ್ಣ ಈ ಇಂಡಸ್ಟ್ರಿಯಲ್ಲಿ 40 ವರ್ಷಗಳನ್ನು ಪೂರೈಸಿದ್ದೀರಿ. ನನಗೆ ನೀವು 7 ವರ್ಷಗಳಿಂದ ಗೊತ್ತು. ನಿಮ್ಮ ಮನೆಯಲ್ಲಿ ನೀವು ನನಗೆ ಕೊಟ್ಟ ಅಪ್ಪುಗೆ, ನೀವು ಹೇಳಿಕೆ ಕಥೆಗಳು ನೆನಪಿದೆ. ನಿಮ್ಮನ್ನು ಒಂದು ವರ್ಷದ ಹಿಂದೆ ಭೇಟಿ ಮಾಡಿದ್ದೆ. ವೇದಿಕೆ ಮೇಲೆ ಹೈದರಾಬಾದ್‌ನಲ್ಲಿ ಭೇಟಿ ಮಾಡಿದ್ದೆ. ನೀವು ನನ್ನನ್ನು ಅದೇ ಅಪ್ಪುಗೆಯಲ್ಲಿ ಸ್ವೀಕರಿಸಿದ್ರಿ."

ಧ್ರುವ ಸರ್ಜಾ

"ಅಣ್ಣ ನನ್ನ ವಯಸ್ಸು 35. ನೀವು ಚಿತ್ರರಂಗಕ್ಕೆ ಬಂದು 40 ವರ್ಷ ಆಗಿದೆ. ನಾನು ಹೇಳುತ್ತಿದ್ದ ಅಣ್ಣ ವಿಶ್ ಮಾಡುವಷ್ಟು ದೊಡ್ಡವನಲ್ಲ ಅಂತ. ಆದರೂ ಪೀಡಿಸುತ್ತಿದ್ದಾರೆ. ನಿಜವಾಗಿಯೂ ನಾನು ನಿಮ್ಮ ಅಭಿಮಾನಿಯಾಗು ತುಂಬಾನೇ ಇಷ್ಟ ಪಡುತ್ತೇನೆ. ನಮ್ಮ ಕುಟುಂಬ ಹಾಗೂ ನನ್ನ ವಿಐಪಿಗಳ ಕಡೆಯಿಂದ ನಿಮಗೆ ಆಲ್‌ ದಿ ಬೆಸ್ಟ್. ಆ ಭಗವಂತ ನಿಮಗೆ ಆಯಸ್ಸು ಆರೋಗ್ಯ ಕೊಡಲಿ, ಈಗಾಗಲೇ ಎಜರ್ಜಿ ಭಯಂಕರ ಕೊಟ್ಟಿದ್ದಾರೆ. ನೀವು ಎಷ್ಟೋ ಜನಕ್ಕೆ ಪ್ರೇರಣೆ. ಸಾಕಷ್ಟು ಜನ ಹೊಸಬರಿಗೆ ಪ್ರೇರಣೆ ಎಂದರೆ ನೀವೇ. ಇನ್ನೂ ಜಾಸ್ತಿ ಜನಕ್ಕೆ ಮೋಟಿವೇಟ್ ಮಾಡಿ. " ಎಂದು ಧ್ರುವ ಸರ್ಜಾ ವಿಶ್ ಮಾಡಿದ್ದಾರೆ.

ನೆಲ್ಸನ್ ದಿಲೀಪ್‌ಕುಮಾರ್

"ಮೊದಲಿಗೆ ಭಾರತೀಯ ಸಿನಿಮಾದಲ್ಲಿ 40 ವರ್ಷ ಆಗಿದ್ದಕ್ಕೆ ಅಭಿನಂದನೆಗಳು ಸರ್. 40 ವರ್ಷ ಆಗಿದ್ದರೂ ಟಾಪ್‌ನಲ್ಲಿ ಇರುವುದೇ ದೊಡ್ಡ ಸಾಧನೆ. ಇದು ನಿಜಕ್ಕೂ ಸ್ಪೂರ್ತಿ ಪಡೆಯುವ ವಿಚಾರ. ನಾನು ನಿಮ್ಮನ್ನು ಮೊದಲ ಬಾರಿ ಭೇಟಿ ಮಾಡಿದ್ದು ಇನ್ನೂ ನೆನಪಿದೆ. ಬೀಸ್ಟ್ ಸೆಟ್‌ನಲ್ಲಿ ನಾನು ನಿಮ್ಮನ್ನು ನೋಡಿದೆ. ಯಾರಿವರು ಹೀಗಿದ್ದಾರಲ್ಲ ಅಂತ ಅನಿಸಿತ್ತು. ನಿಮ್ಮ ಕರೀಷ್ಮಾ ಅಷ್ಟು ಅಟ್ರ್ಯಾಕ್ಟೀವ್ ಆಗಿತ್ತು. ಆಗಲೇ ನನಗೆ ನಿಮ್ಮೊಂದಿಗೆ ಒಂದು ಸೀನ್‌ನಲ್ಲಾದರೂ ಕೆಲಸ ಮಾಡಬೇಕು ಎನ್ನುವ ಆಸೆಯಿತ್ತು. ಜೈಲರ್‌ನಲ್ಲಿ ಕಾಸ್ಟ್ ಮಾಡಿ ಅದು ತುಂಬಾನೇ ಇಷ್ಟ ಆಗಿತ್ತು ಅಂತ ಹೇಳಿದ್ದೆ. ಆದರೆ, ನಿಮ್ಮನ್ನು ನೋಡಿದ ಮೇಲೆ ಜೈಲರ್‌ನಲ್ಲಿ ನಿಮ್ಮ ಪ್ರೆಸೆನ್ಸ್ ಇಷ್ಟ ಆಗುತ್ತೆ ಎಂದು ನನಗೆ ಗೊತ್ತಿರಲಿಲ್ಲ. ಮತ್ತೊಮ್ಮೆ ಒಟ್ಟಿಗೆ ಸೇರಿ ಇನ್ನು ಅದ್ಭುತವಾಗಿ ಸೀನ್ ಅನ್ನು ಮಾಡೋಣ.

ದೇವಿಶ್ರೀ ಪ್ರಸಾದ್

"ನಮಸ್ಕಾರ ಶಿವಣ್ಣ ಚೆನ್ನಾಗಿದ್ದೀರ. ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ್ದಕ್ಕೆ ಅಭಿನಂದನೆಗಳು. ನೀವು ಹಾಗೂ ನಿಮ್ಮ ಕುಟುಂಬ ಗೊತ್ತು ಎನ್ನುವುದೇ ಹೆಮ್ಮೆ. ಎಲ್ಲರಿಗೂ ನೀವು ತೋರಿಸುತ್ತಿರುವ ಪ್ರೀತಿ, ಪ್ರೋತ್ಸಾಹ, ಜನರಿಗಾಗಿ ನೀವು ಮಾಡುತ್ತಿರುವ ಒಳ್ಳೆಯ ಕೆಲಸ ಎಲ್ಲದೂ ನನಗೆ ಖುಷಿಯನ್ನು ಕೊಟ್ಟಿದೆ. ನೀವು ಕೇವಲ ಸ್ಟಾರ್ ಅಷ್ಟೇ ಅಲ್ಲ. ನೀವು ಒಂದು ಪ್ರೇರಣೆ. ನೀವು ಲೆಜೆಂಡ್ ಆಗಿದ್ದರೂ, ನಿಮ್ಮ ಸರಳತೆ, ನೀವು ತೋರುವ ಪ್ರೀತಿ ಎಲ್ಲವೂ ಜನರು ನಿಮ್ಮನ್ನು ಇಷ್ಟಪಡುವುದಕ್ಕೆ ಕಾರಣ. ನೀವು ನಟರಷ್ಟೇ ಅಲ್ಲದೆ ಗಾಯಕರು ಕೂಡ ಹೌದು. ನಿಮ್ಮ ಕಂಠದಿಂದ ಸಾಕಷ್ಟು ಬ್ಲಕ್ ಬಸ್ಟರ್ ಹಾಡು ಬಂದಿದೆ. ನೀವು ನಿಜಕ್ಕೂ ಅದ್ಭುತ" ಎಂದು ಹೇಳಿದ್ದಾರೆ. ನೀವು ನನ್ನ ಮ್ಯೂಸಿಕ್ ಅನ್ನು ಇಷ್ಟ ಪಡುತ್ತೀರ ಎನ್ನುವುದು ನನ್ನ ಮೈಜುಂ ಎನಿಸುತ್ತೆ."

More from Filmibeat

English summary
Kamal Haasan, Chiranjeevi to Dhruva Sarja send wish to Shivarajkumar 40 year cinema journey;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X