»   » ಭೇಟಿಗೆ ಬಂದ 'ಅಭಿಮಾನಿ'ಯನ್ನ ದೂರ ತಳ್ಳಿದ ಕಮಲ್

ಭೇಟಿಗೆ ಬಂದ 'ಅಭಿಮಾನಿ'ಯನ್ನ ದೂರ ತಳ್ಳಿದ ಕಮಲ್

Posted By:
Subscribe to Filmibeat Kannada
Kamal Haasan manhandles a fan | Viral Video | Filmibeat Kannada

ಖಾಸಗಿ ಕಾರ್ಯಕ್ರಮದ ನಿಮಿತ್ತ ನಟ ,ನಿರ್ದೆಶಕ ಕಮಲ್ ಹಾಸನ್ ಇತ್ತೀಚಿಗಷ್ಟೇ ಬೆಂಗಳೂರಿಗೆ ಭೇಟಿ ನೀಡಿದ್ದರು. ಇದೇ ವೇಳೆಯಲ್ಲಿ ಕಮಲ್ ರನ್ನ ನೋಡಲು ಸಾಕಷ್ಟು ಅಭಿಮಾನಿಗಳು ಸೇರಿದ್ದರು. ಕಮಲ್ ಹೊರಗಡೆ ಬರುತಿದ್ದ ಹಾಗೆ ಅಭಿಮಾನಿಯೊಬ್ಬರು ಕಮಲ್ ಹಾಸನ್ ಹತ್ತಿರ ಮುನ್ನುಗ್ಗಿದ್ದಾರೆ. ಇದೇ ಸಮಯದಲ್ಲಿ ಕಮಲ್ ಹಾಸನ್ ಜೊತೆಯಲ್ಲಿ ನಟ, ನಿರ್ದೇಶಕ ರಮೇಶ್ ಅರವಿಂದ್ ಕೂಡ ಇದ್ದರು. ಮೊದಲಿಗೆ ಅಭಿಮಾನಿಯನ್ನ ರಮೇಶ್ ಅರವಿಂದ್ ದೂರಕ್ಕೆ ತಳ್ಳಿದ್ದಾರೆ.

ಇಷ್ಟಾದರೂ ಬಿಡದ ಅಭಿಮಾನಿ ಕಮಲ್ ಹಾಸನ್ ಹತ್ತಿರ ಬರುತಿದ್ದಂತೆ ಕಾಲಿಗೆ ಬೀಳಲು ಮುಂದಾಗಿದ್ದಾರೆ. ಇದನ್ನ ನೋಡಿದ ಕಮಲ್, ಆ ಅಭಿಮಾನಿಯನ್ನ ತಳ್ಳಿ ವೇಗವಾಗಿ ತಮ್ಮ ಕಾರ್ ನತ್ತ ಹೋಗಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಎರಡು ದಿನಗಳ ಹಿಂದೆ ನಡೆದಿರುವ ಈ ಘಟನೆಗೆ ಕಮಲ್ ಅಭಿಮಾನಿಗಳು ಸ್ಪಷ್ಟನೆ ನೀಡಲು ಮುಂದಾಗಿದ್ದಾರೆ.

kamal haasan pushes fan video of incident goes viral on social media

ಕಮಲ್ ಹಾಸನ್ ಅಭಿಮಾನಿಯನ್ನ ತಳ್ಳಿಲ್ಲ. ಅಲ್ಲಿದ್ದ ಪೋಲಿಸರು ಅಭಿಮಾನಿಯನ್ನ ತಳ್ಳಿರೋದು ಎನ್ನುತ್ತಿದ್ದಾರೆ. ಒಟ್ಟಾರೆ ಈ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಚರ್ಚೆಗೆ ಅನುವು ಮಾಡಿಕೊಟ್ಟಿದೆ.

English summary
kamal haasan pushed away the fan come to meet , the incident happened in Bangalore,know the incident video goes viral ಕಮಲ್ ಹಾಸನ್ ರನ್ನ ಭೇಟಿ ಮಾಡಲು ಬಂದ ಅಭಿಮಾನಿಯನ್ನ ದೂರ ತಳ್ಳಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ .

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada