»   » ಬೌದ್ಧ ಧರ್ಮಕ್ಕೆ ಮತಾಂತರ ಆದ ಕಮಲ್ ಹಾಸನ್ ಪುತ್ರಿ ಅಕ್ಷರಾ

ಬೌದ್ಧ ಧರ್ಮಕ್ಕೆ ಮತಾಂತರ ಆದ ಕಮಲ್ ಹಾಸನ್ ಪುತ್ರಿ ಅಕ್ಷರಾ

Posted By:
Subscribe to Filmibeat Kannada

ನಟ ಕಮಲ್ ಹಾಸನ್ ಕಿರಿಯ ಪುತ್ರಿ ಅಕ್ಷರಾ ಹಾಸನ್ ಬೌದ್ಧ ಧರ್ಮಕ್ಕೆ ಮತಾಂತರ ಆಗಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಸ್ವತಃ ಅಕ್ಷರಾ ಅವರೇ ಈ ವಿಷಯವನ್ನು ಹೇಳಿಕೊಂಡಿದ್ದಾರೆ.

ಮೊದಲಿನಿಂದಲೂ ಬೌದ್ಧ ಧರ್ಮದ ಬಗ್ಗೆ ಅಕ್ಷರಾ ಅವರಿಗೆ ಒಲವು ಇತ್ತಂತೆ. ಜೊತೆಗೆ ಬೌದ್ಧ ಧರ್ಮದ ಕಟ್ಟುಪಾಡುಗಳು ಅವರಿಗೆ ತುಂಬ ಇಷ್ಟವಾಗಿರುವುದರಿಂದ ಬೌದ್ಧ ಧರ್ಮಕ್ಕೆ ಮತಾಂತರ ಆಗಿದ್ದೆನೇ ಅಂತ ಅಕ್ಷರಾ ಹೇಳಿಕೊಂಡಿದ್ದಾರೆ.

Kamal Haasan's daughter Akshara changed her religion

ತನ್ನ ಈ ನಿರ್ಧಾರಕ್ಕೆ ಮನೆಯಲ್ಲಿ ಯಾರ ಒತ್ತಡವು ಇಲ್ಲ ಅಂತ ಅಕ್ಷರಾ ಹಾಸನ್ ಸ್ಪಷ್ಟ ಪಡಿಸಿದ್ದಾರೆ. ಹಿಂದಿಯ 'ಶಮಿತಾಭ್' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಕ್ಷರಾ ಸದ್ಯ ನಟ ಅಜಿತ್ ಜೊತೆ 'ವಿವೇಗಮ್' ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

English summary
Kamal Haasan's daughter Akshara Haasan changed her religion.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada