»   » ಅಕ್ಷರಾಳ ಧರ್ಮ ಮತಾಂತರದ ಬಗ್ಗೆ ಕಮಲ್ ಹಾಸನ್ ಹೇಳಿದ್ದೇನು?

ಅಕ್ಷರಾಳ ಧರ್ಮ ಮತಾಂತರದ ಬಗ್ಗೆ ಕಮಲ್ ಹಾಸನ್ ಹೇಳಿದ್ದೇನು?

Posted By:
Subscribe to Filmibeat Kannada

ಕಾಲಿವುಡ್ ನ ಖ್ಯಾತ ನಟ ಕಮಲ್ ಹಾಸನ್ ಪುತ್ರಿ ಅಕ್ಷರಾ ಹಾಸನ್ ಬೌದ್ಧ ಧರ್ಮಕ್ಕೆ ಮತಾಂತರ ಆಗಿದ್ದಾರೆ. ಮೊದಲಿನಿಂದಲೂ ಈ ಧರ್ಮದ ಬಗ್ಗೆ ಒಲವು ಹೊಂದಿದ್ದ ಕಾರಣದಿಂದ ಮತಾಂತರ ಗೊಂಡಿರುವ ಬಗ್ಗೆ ಸ್ವತಃ ಅಕ್ಷರಾ ಹಾಸನ್ ರವರೇ ಸಂದರ್ಶನ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದರು. ಅಂದಹಾಗೆ ಮಗಳ ಮತಾಂತರದ ಬಗ್ಗೆ ನಟ ಕಮಲ್ ಹಾಸನ್ ಪ್ರತಿಕ್ರಿಯಿಸಿದ್ದಾರೆ.

ಬೌದ್ಧ ಧರ್ಮಕ್ಕೆ ಮತಾಂತರ ಆದ ಕಮಲ್ ಹಾಸನ್ ಪುತ್ರಿ ಅಕ್ಷರಾ

Kamal Haasan’s reaction to Akshara Haasan’s Conversion To A Buddhist

ತಮ್ಮ ಮುದ್ದಿನ ಕಿರಿಯ ಪುತ್ರಿ ಅಕ್ಷರಾ ಹಾಸನ್ ಬೌದ್ಧ ಧರ್ಮಕ್ಕೆ ಮತಾಂತರ ಆಗಿರುವ ಬಗ್ಗೆ ನಟ ಕಮಲ್ ಹಾಸನ್ ಯಾವ ರೀತಿ ಪ್ರತಿಕ್ರಿಯಿಸಬಹುದು ಎಂಬ ಪ್ರಶ್ನೆ ಅವರ ಅಭಿಮಾನಿ ವಲಯದಲ್ಲೂ ಕಾಡುತ್ತಿತ್ತು. ಆ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. 'ಹಾಯ್.. ಅಕ್ಷು.. ನೀನು ನಿನ್ನ ಧರ್ಮವನ್ನು ಬದಲಿಸಿದೆಯಾ? ಹಾಗೆ ಮಾಡಿದ್ದರು ಸಹ ನಿನ್ನನ್ನು ಪ್ರೀತಿಸುತ್ತೇನೆ. ನನ್ನ ಪ್ರೀತಿಗೆ ಯಾವುದೇ ಧರ್ಮದ ನಿಬಂಧನೆಗಳು ಇಲ್ಲ. ನಿನ್ನ ಜೀವನವನ್ನು ಎಂಜಾಯ್ ಮಾಡು. ನಿನ್ನ ಪ್ರೀತಿಯೂ ಸಹ ಹಾಗೆ ಇರಲಿ' ಎಂದು ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ.

ಕಮಲ್ ಹಾಸನ್ ರವರ ಮೇಲಿನ ಟ್ಟೀಟ್‌ಗೆ ಪ್ರತಿಕ್ರಿಯಿಸಿರುವ ಮಗಳು ಅಕ್ಷರಾ ಹಾಸನ್, 'ಹಾಯ್ ಬಾಪುಜಿ.. ಇಲ್ಲ.. ನಾನು ಇನ್ನೂ ಸಹ ನಾಸ್ತಿಕಳಾಗಿಯೇ ಇದ್ದೇನೆ. ಆದರೂ ನಾನು ಬೌದ್ಧ ಧರ್ಮದ ಜೀವನ ಶೈಲಿಯನ್ನು ಮತ್ತು ನನ್ನ ವೈಯಕ್ತಿಕ ಜೀವನ ಶೈಲಿಯನ್ನು ಇಷ್ಟಪಡುತ್ತೇನೆ' ಎಂದು ಟ್ಟೀಟಿಸಿದ್ದಾರೆ.

ಮಗಳು ಬೌದ್ಧ ಧರ್ಮಕ್ಕೆ ಮತಾಂತರ ಆಗಿರುವುದಕ್ಕೆ ಯಾವುದೇ ರೀತಿ ನಿರ್ಬಂಧ ಹೇರದೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ಕಮಲ್ ಹಾಸನ್ ರವರ ಟ್ವೀಟ್ ಅವರ ಅಭಿಮಾನಿಗಳಿಂದ 2 ಕ್ಕು ಹೆಚ್ಚು ಬಾರಿ ರೀಟ್ವೀಟ್ ಆಗಿದ್ದು, 13 ಸಾವಿರಕ್ಕೂ ಹೆಚ್ಚು ಲೈಕ್ ಪಡೆದಿದೆ.

English summary
Kamal Haasan’s reaction to Akshara Haasan’s Conversion To A Buddhist
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada