»   » ಕನ್ನಡ ನಿರ್ದೇಶಕರ ತಮಿಳು ಚಿತ್ರ 'ಉತ್ತಮ ವಿಲನ್'ಗೆ, 5 ಪ್ರಶಸ್ತಿ..!

ಕನ್ನಡ ನಿರ್ದೇಶಕರ ತಮಿಳು ಚಿತ್ರ 'ಉತ್ತಮ ವಿಲನ್'ಗೆ, 5 ಪ್ರಶಸ್ತಿ..!

Posted By:
Subscribe to Filmibeat Kannada

ಕನ್ನಡದ ನಟ ಕಮ್ ನಿರ್ದೇಶಕ ರಮೇಶ್ ಅರವಿಂದ್ ಅವರು ಆಕ್ಷನ್-ಕಟ್ ಹೇಳಿರುವ ತಮಿಳು ಚಿತ್ರ 'ಉತ್ತಮ ವಿಲನ್' ಲಾಸ್ ಏಂಜಲೀಸ್ ಸ್ವತಂತ್ರ್ಯ ಚಿತ್ರೋತ್ಸವದಲ್ಲಿ (ಎಲ್. ಎ.ಐ.ಎಫ್.ಎಫ್.ಎ) ಭರ್ಜರಿ 5 ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

'ಅತ್ಯುತ್ತಮ ಚಿತ್ರ', 'ಅತ್ಯುತ್ತಮ ನಟ'(ಕಮಲ್ ಹಾಸನ್), 'ಅತ್ಯುತ್ತಮ ಸಂಗೀತ'(ಗಿಬ್ರಾನ್), 'ಅತ್ಯುತ್ತಮ ಹಾಡು', ಮತ್ತು 'ಅತ್ಯುತ್ತಮ ಧ್ವನಿಗ್ರಹಣ' (ಕುನಾಲ್ ರಾಜನ್), ಪ್ರಶಸ್ತಿಗಳನ್ನು ತಮಿಳು ಚಿತ್ರ 'ಉತ್ತಮ ವಿಲನ್' ತನ್ನ ಮುಡಿಗೇರಿಸಿಕೊಂಡಿದೆ. ಜೊತೆಗೆ ವಿಶೇಷವಾಗಿ ಈ ಚಿತ್ರದ ಸಂಗೀತ ನಿರ್ದೇಶನಕ್ಕೆ ರಷ್ಯನ್ ಚಿತ್ರೋತ್ಸವದಲ್ಲೂ ಪ್ರಶಸ್ತಿ ದೊರಕಿದೆ.

Kamal Haasan's 'Uttama Villain' bags awarda at Los Angeles Independent film Fest

ಕನ್ನಡದ ಖ್ಯಾತ ನಟ ಕಮ್ ನಿರ್ದೇಶಕ ರಮೇಶ್ ಅರವಿಂದ್ ಅವರು ತಮ್ಮ ಕುಚಿಕು ಗೆಳೆಯ ನಟ ಕಮಲ್ ಹಾಸನ್ ಅವರಿಗಾಗಿಯೇ 'ಉತ್ತಮ ವಿಲನ್' ಎನ್ನುವ ವಿಭಿನ್ನ ಸಿನಿಮಾವನ್ನು ತಮಿಳು ಭಾಷೆಯಲ್ಲಿ ತಯಾರು ಮಾಡಿದ್ದರು.

'ಈ ಚಿತ್ರವನ್ನು ನಾವೆಲ್ಲ ಶ್ರದ್ದೆಯಿಂದ ಮಾಡಿದ್ದೆವು, ಆದರೆ ಚಿತ್ರ ಬಾಕ್ಸಾಫೀಸ್ ನಲ್ಲಿ ಸೋತಾಗ ಎಲ್ಲರೂ ಬೇಸರಗೊಂಡಿದ್ದೆವು. ಆದರೆ ನಾವು ಒಂದು ಒಳ್ಳೆ ಚಿತ್ರವನ್ನು ಮಾಡಿದ್ದೆವು, ಯಾವುದೇ ಫಾರ್ಮುಲಾಗಳನ್ನು ನಂಬದೇ ಮಾಡಿದ ಅಪ್ಪಟ ಚಿತ್ರ ಇದು.

Kamal Haasan's 'Uttama Villain' bags awarda at Los Angeles Independent film Fest

ಆದರೆ ಆ ಕೆಲಸ ಇವಾಗ ಫಲ ಕೊಟ್ಟಿದೆ. ಚಿತ್ರೋತ್ಸವದ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದನ್ನು ಕೇಳಿ ಸಂತೋಷಪಟ್ಟೆ. ಕಮಲ್ ಅವರು ಮೆಸೇಜ್ ಕಳಿಸಿ ಖುಷಿ ಹಂಚಿಕೊಂಡರು. ಕುನಾಲ್ ಅವರು ಈ ಎಲ್ಲಾ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಎಂದು ರಮೇಶ್ ಅರವಿಂದ್ ಅವರು ಸಂಭ್ರಮ ಹಂಚಿಕೊಂಡಿದ್ದಾರೆ.

English summary
Kamal Haasan's Uttama Villain (Pure-hearted Villain), which was released few months ago, bagged awards under four different categories in Los Angeles Film Festival Awards. It won awards for Best Film, Best Actor (Kamal Haasan), Best Original Music (Ghibran), for Best Song (Ghibran) and Best Sound Design (Kunal Rajan).
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada