ಕನ್ನಡಿಗರನ್ನು ಕೆಣಕಿದ ಕಮಲ್ ಹಾಸನ್; 'ಥಗ್ ಲೈಫ್' ಚಿತ್ರ ಬಿಡುಗಡೆಗೆ ಕಂಟಕ

ತಮಿಳಿನಿಂದ ಕನ್ನಡ ಹುಟ್ಟಿದ್ದು ಎನ್ನುವ ಕಮಲ್ ಹಾಸನ್ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಕನ್ನಡ ಪರ ಸಂಘಟನೆಗಳು ಕಮಲ್ ಹಾಸನ್ ಕ್ಷಮೆಗೆ ಆಗ್ರಹಿಸಿವೆ. ಕರ್ನಾಟಕದಲ್ಲಿ 'ಥಗ್ ಲೈಫ್' ಚಿತ್ರ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ತಮಿಳಿಗಿಂತಲೂ ಬಹಳ ಹಳೆಯದ್ದು ಕನ್ನಡ. ಸ್ವತಂತ್ರ ಲಿಪಿ, ಶಾಸ್ತ್ರೀಯ ಸ್ಥಾನಮಾನ ಹೊಂದಿರುವ ಭಾಷೆ ಕನ್ನಡ. ತಮಿಳಿನಿಂದ ಕನ್ನಡ ಭಾಷೆ ಹುಟ್ಟಿಲ್ಲ. ತಮಿಳು ಕನ್ನಡಕ್ಕಿಂತ ಹಳೆಯ ಭಾಷೆ ಎನ್ನಲು ಯಾವುದೇ ಆಧಾರಗಳಿಲ್ಲ. ಕನ್ನಡ ಭಾಷೆಯನ್ನು ಕಮಲ್ ಹಾಸನ್ ಅವಮಾನಿಸಿದ್ದಾರೆ ಎಂದು ಆಕ್ರೋಶ ಹೆಚ್ಚಾಗಿದೆ. ಹೇಳಿಕೆ ಖಂಡಿಸಿ ಪ್ರತಿಭಟನೆ ಕೂಡ ನಡೀತಿದೆ.

Kamal Haasan Sparks Outrage in Karnataka Over Kannada-Tamil Language Remark Thug Life Release Threatened

ಸದ್ಯ ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮಣಿರತ್ನಂ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮಣಿರತ್ನಂ ಜೊತೆ ಸೇರಿ ಕಮಲ್ ಹಾಸನ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆಗೆ ಆಗಲಿದೆ. ಮುಂದಿನ ವಾರವೇ ಸಿನಿಮಾ ತೆರೆಗೆ ಬರಬೇಕಿದೆ. ಇಂತಹ ಸಮಯದಲ್ಲೇ ಕಮಲ್ ಹಾಸನ್ ಹೇಳಿಕೆ ಕರ್ನಾಟಕದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಇದು ಸಿನಿಮಾ ಬಿಡುಗಡೆ ಮೇಲೆ ಕೂಡ ಪರಿಣಾಮ ಬೀರಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಛೇರಿ ಎದುರು ಪ್ರವೀಣ್ ಶೆಟ್ಟಿ ಕರವೇ ಬಣ ಹಾಗೂ ಡಾ.ರಾಜ್ ಕುಮಾರ್ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ. ಕಮಲ್ ಹಾಸನ್ ಫೋಟೊಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಮಲ್ ಕ್ಷಮೆ ಕೇಳದ ಹೊರತು 'ಥಗ್ ಲೈಫ್' ಸಿನಿಮಾ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಕಮಲ್ ಹಾಸನ್ ವಿರುದ್ದ ಕ್ರಮ ಕೈಗೊಳ್ಳುವಂತೆ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.

ಕರವೇ ನಾರಾಯಣ ಗೌಡ್ರು 'X' ಖಾತೆಯಲ್ಲಿ ಕಮಲ್ ಹಾಸನ್ ಹೇಳಿಕೆ ಖಂಡಿಸಿ ಸುದೀರ್ಘ ಪತ್ರ ಬರೆದಿದ್ದಾರೆ. "ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಅವರು ಕನ್ನಡ ಭಾಷೆಯು ತಮಿಳಿನಿಂದ ಉಗಮವಾಯಿತು ಎಂದು ನೀಡಿರುವ ಹೇಳಿಕೆ ಸಂಪೂರ್ಣ ಸುಳ್ಳು, ದುರುದ್ದೇಶಪೂರಿತ ಮತ್ತು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತಹದ್ದಾಗಿದೆ. ಈ ಹೇಳಿಕೆ ಅವರ ಅಜ್ಞಾನವನ್ನು ಬಯಲುಗೊಳಿಸುತ್ತದೆ. ಕನ್ನಡ ಮತ್ತು ತಮಿಳು ಭಾಷೆಗಳು ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ್ದರೂ, ಇವು ತಮ್ಮದೇ ಆದ ಸ್ವತಂತ್ರ ಇತಿಹಾಸ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಹೊಂದಿವೆ" ಎಂದು ಬರೆದುಕೊಂಡಿದ್ದಾರೆ.

ಕನ್ನಡ ಭಾಷೆಯ ಇತಿಹಾಸದ ಬಗ್ಗೆ ನಾರಾಯಣ ಗೌಡ್ರು ತಿಳಿ ಹೇಳಿದ್ದಾರೆ. "ಕನ್ನಡ ಭಾಷೆಗೆ ಸುಮಾರು 4600-5000 ವರ್ಷಗಳ ಇತಿಹಾಸವಿದೆ. ಭಾಷಾಶಾಸ್ತ್ರೀಯ ಅಧ್ಯಯನಗಳ ಪ್ರಕಾರ, ದ್ರಾವಿಡ ಭಾಷೆಗಳು ಮೂಲ ದ್ರಾವಿಡ ಭಾಷೆಯಿಂದ (ಪ್ರೊಟೊ-ದ್ರಾವಿಡಿಯನ್) ಸುಮಾರು 2500-3000 ಕ್ರಿ.ಪೂ. ಆಸುಪಾಸಿನಲ್ಲಿ ಕವಲೊಡೆದಿವೆ. ಅಶೋಕನ ಕಾಲದ ಪ್ರಾಕೃತ ಶಾಸನಗಳಲ್ಲಿ (ಕ್ರಿ.ಪೂ. 3ನೇ ಶತಮಾನ) ಕರ್ನಾಟಕದಲ್ಲಿ ಕಂಡುಬಂದ ಕೆಲವು ಶಾಸನಗಳು ಕನ್ನಡದ ಆದಿಪದಗಳ ಬಳಕೆಯನ್ನು ಸೂಚಿಸುತ್ತವೆ. ಕನ್ನಡದ ಲಿಖಿತ ರೂಪಕ್ಕೆ 2000 ವರ್ಷಗಳ ಇತಿಹಾಸವಿದ್ದು, ಇದಕ್ಕೂ ಮುಂಚಿನ 2000 ವರ್ಷಗಳ ಭಾಷಿಕ ಇತಿಹಾಸವನ್ನು ಒಳಗೊಂಡಂತೆ, ಕನ್ನಡ ನುಡಿಯ ಒಟ್ಟಾರೆ ಇತಿಹಾಸ 4600 ವರ್ಷಗಳಿಗೂ ಹೆಚ್ಚಿನದಾಗಿದೆ" ಎಂದಿದ್ದಾರೆ.

ಮೊದಲಿಗೆ 'ಥಗ್ ಲೈಫ್' ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಆದರೆ ಈಗ ತೆಲುಗು ಹಾಗೂ ಹಿಂದಿ ಭಾಷೆಗಳಿಗೆ ಮಾತ್ರ ಡಬ್ ಮಾಡಿ ಬಿಡುಗಡೆ ಮಾಡುತ್ತಿದ್ಧಾರೆ. ಕನ್ನಡ ವರ್ಷನ್ ಬಿಡುಗಡೆ ಚಿತ್ರತಂಡ ಮುಂದಾಗಿಲ್ಲ. ಕನ್ನಡ ಟ್ರೈಲರ್ ಕೂಡ ರಿಲೀಸ್ ಆಗಿಲ್ಲ.

More from Filmibeat

English summary
Kamal Haasan's claim that Kannada originated from Tamil has triggered widespread protests in Karnataka.
Read more about: kamal haasan kannada tamil
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X