For Quick Alerts
  ALLOW NOTIFICATIONS  
  For Daily Alerts

  ದೀಪಿಕಾ 'ತಲೆ' ಬಗ್ಗೆ ಕಾಳಜಿ ತೋರಿದ ಕಮಲ್ ಹಾಸನ್.!

  By Bharath Kumar
  |

  'ಪದ್ಮಾವತಿ' ಚಿತ್ರದಲ್ಲಿ 'ರಾಣಿ ಪದ್ಮಾವತಿ' ಪಾತ್ರ ನಿರ್ವಹಿಸಿರುವ ದೀಪಿಕಾ ಪಡುಕೋಣೆಯ ತಲೆ ಕತ್ತರಿಸಿದವರಿಗೆ 5 ಕೋಟಿ, 10 ಕೋಟಿ ಬಹುಮಾನ ನೀಡುತ್ತೇವೆ ಎಂದು ರಜಪೂತ ಪ್ರತಿಭಟನಕಾರರು ಘೋಷಿಸಿದ್ದರು.

  ಇದಕ್ಕೆ ದೇಶಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದ್ದು, ದೀಪಿಕಾ ಪಡುಕೋಣೆ ಬೆಂಬಲಕ್ಕೆ ನಟ-ನಟಿಯರು ಹಾಗೂ ಸಾಮಾಜಿಕ ಹೋರಾಟಗಾರು ನಿಂತಿದ್ದರು. ಈಗ ತಮಿಳು ನಟ ಸೂಪರ್ ಸ್ಟಾರ್ ಕಮಲ್ ಹಾಸನ್ ಕೂಡ ದೀಪಿಕಾ ಪರ ನಿಲುವು ತೋರಿದ್ದಾರೆ.

  'ಪದ್ಮಾವತಿ' ಬೆಂಬಲಕ್ಕೆ ನಿಂತ ಸಿಎಂ, ಡಿಕೆಶಿ ಮತ್ತು ಸ್ಯಾಂಡಲ್ ವುಡ್

  ದೀಪಿಕಾ ತಲೆಗೆ ಬೆಲೆ ಕಟ್ಟಿದ್ದವರಿಗೆ ನೇರವಾಗಿ ತಿರುಗೇಟು ನೀಡಿರುವ ಕಮಲ್ ಹಾಸನ್ ತಮ್ಮ ಟ್ವಿಟ್ಟರ್ ಮೂಲಕ 'ಪದ್ಮಾವತಿ' ವಿರುದ್ಧದ ಹೋರಾಟಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

  ದೀಪಿಕಾ ಪಡುಕೋಣೆ ತಲೆ ಕತ್ತರಿಸಿದ್ರೆ 5 ಕೋಟಿ ಬಹುಮಾನ

  ''ದೀಪಿಕಾ ತಲೆಯನ್ನು ನಾನು ರಕ್ಷಿಸಬೇಕು ಎಂದುಕೊಂಡಿದ್ದೇನೆ. ಅವರ ದೇಹಕ್ಕಿಂತ ಹೆಚ್ಚಾಗಿ ಅವರನ್ನ ಗೌರವಿಸುತ್ತೇವೆ. ಅವರ ಸ್ವಾತಂತ್ರ್ಯವನ್ನು ಗೌರವಿಸಬೇಕು. ಇದನ್ನು ಯಾರೂ ಬೇಡ ಎನ್ನಲ್ಲ. ಬಹಳಷ್ಟು ಮಂದಿ ನನ್ನ ಸಿನಿಮಾಗಳನ್ನು ವಿರೋಧಿಸಿದರು. ಯಾವುದೇ ಕ್ಷೇತ್ರದಲ್ಲಾಗಬಹುದು ಉಗ್ರವಾದ ಧೋರಣೆ ಒಳ್ಳೆಯದಲ್ಲ. ಎಚ್ಚೆತ್ತುಕೋ ಭಾರತ.. ಕೇಳಿಸಿಕೊಳ್ಳುತ್ತಿದ್ದೀಯಾ ಭಾರತ ಮಾತೆ'' ಎಂದು ಟ್ವೀಟ್ ಮಾಡಿದ್ದಾರೆ.

  English summary
  Tamil superstar Kamal Haasan too wants Deepika Padukone’s head, but unlike few leaders, he wants the actress’s head “saved”. ಪದ್ಮಾವತಿ ವಿವಾದದ ಬಗ್ಗೆ ತಮಿಳು ಸೂಪರ್ ಸ್ಟಾರ್ ಕಮಲ್ ಹಾಸನ್ ಕಾಮೆಂಟ್ ಮಾಡಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X