ಈ ವಾರ ಬರೋಬ್ಬರಿ 5 ಸಿನಿಮಾ ರಿಲೀಸ್; ಯಾವುದು ನೋಡ್ತೀರಾ? ಯಾವುದು ಬಿಡ್ತೀರಾ?

ಕನ್ನಡದಲ್ಲಿ ನಿಧಾನವಾಗಿ ಒಳ್ಳೊಳ್ಳೆ ಸಿನಿಮಾ ರಿಲೀಸ್ ಆಗುತ್ತಿವೆ. 'ಸು ಫ್ರಮ್ ಸೋ' ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದ ಬಳಿಕ 'ಏಳುಮಲೆ' ಕೂಡ ಪ್ರೇಕ್ಷಕರಿಗೆ ಕಿಕ್ ಕೊಟ್ಟಿತ್ತು. ಈ ಎರಡು ಸಿನಿಮಾಗಳ ಯಶಸ್ಸಿನ ಬೆನ್ನಲ್ಲೇ 'ಕಾಂತಾರ ಚಾಪ್ಟರ್ 1' ರಿಲೀಸ್‌ಗೆ ರೆಡಿಯಾಗಿದೆ. ಈ ಗ್ಯಾಪ್‌ನಲ್ಲಿ ಕನ್ನಡದಲ್ಲಿ ಯುವ ಪ್ರತಿಭೆಗಳ ಸಿನಿಮಾಗಳು, ಸ್ಮಾಲ್ ಬಜೆಟ್ ಸಿನಿಮಾಗಳು ಥಿಯೇಟರ್‌ಗೆ ಲಗ್ಗೆ ಇಡುತ್ತಿವೆ.

ಈ ವಾರ (ಸೆಪ್ಟೆಂಬರ್ 19) ಕನ್ನಡದಲ್ಲಿ ಬರೋಬ್ಬರಿ 5 ಸಿನಿಮಾಗಳು ರಿಲೀಸ್ ಆಗುತ್ತಿವೆ. ಸ್ಯಾಂಡಲ್‌ವುಡ್‌ನಲ್ಲಿ 'ಕಾಂತಾರ ಚಾಪ್ಟರ್ 1' ಬಿಟ್ಟರೆ ಸ್ಟಾರ್‌ ಸಿನಿಮಾಗಳು ಸದ್ಯಕ್ಕೆ ರಿಲೀಸ್ ಆಗುತ್ತಿಲ್ಲ. ಹೀಗಾಗಿ ಹೊಸಬರು ಅಖಾಡಕ್ಕೆ ಇಳಿಯುತ್ತಿದ್ದಾರೆ. ಇತ್ತೀಚೆಗೆ ಹೊಸಬರ ಸಿನಿಮಾಗಳು, ಸ್ಮಾಲ್ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತಿವೆ. ಹಾಗಿದ್ದರೆ, ಸೆಪ್ಟೆಂಬರ್ 19ರಂದು ರಿಲೀಸ್ ಆಗುತ್ತಿರುವ ಆ 5 ಸಿನಿಮಾಗಳು ಯಾವುವು ಅನ್ನೋದನ್ನು ನೋಡೋಣ.

Kamal Sridevi to Khali Dabba 5 new Kannada Movie released this week September 19th 2025
ಕಮಲ್ ಶ್ರೀದೇವಿ

ಈ ವಾರ ರಿಲೀಸ್ ಆಗುತ್ತಿರುವ ಸಿನಿಮಾಗಳಲ್ಲಿ 'ಕಮಲ್ ಶ್ರೀದೇವಿ' ಟೈಟಲ್‌ನಿಂದಲೇ ಗಮನ ಸೆಳೆದಿದೆ. ವಿಭಿನ್ನ ಕಂಟೆಂಟ್ ಅನ್ನು ಇಟ್ಟುಕೊಂಡು ಈ ತಂಡ ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ. ಟೀಸರ್, ಟ್ರೈಲರ್ ಅಂತೂ ಪ್ರಾಮಿಸಿಂಗ್ ಆಗಿದೆ. ಇದು ಪ್ರೇಕ್ಷಕರನ್ನು ಥಿಯೇಟರ್‌ಗೆ ಕರೆದುಕೊಂಡು ಬರುತ್ತಾ? ಅನ್ನೋದು ನೋಡಬೇಕಿದೆ. ಈ ಸಿನಿಮಾದಲ್ಲಿ ಚೆಲುವರಾಯಸ್ವಾಮಿ ಪುತ್ರ ಸಚಿನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಂಗೀತ ಭಟ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕಿಶೋರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿ.ಎ.ಸುನಿಲ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ.

ಅರಸಯ್ಯನ ಪ್ರೇಮ ಪ್ರಸಂಗ

ಈ ವಾರ ರಿಲೀಸ್ ಆಗುತ್ತಿರುವ ಮತ್ತೊಂದು ಸ್ಮಾಲ್ ಬಜೆಟ್ ಸಿನಿಮಾ 'ಅರಸಯ್ಯನ ಪ್ರೇಮ ಪ್ರಸಂಗ'. ಹಾಸ್ಯ ಸಿನಿಮಾಗಳನ್ನು ಇಷ್ಟಪಡುವವರಿಗೆ ಇದು ಇಷ್ಟ ಆಗಬಹುದು. ಹಾಸ್ಯ ನಟ ಮಹಾಂತೇಶ್ ಹಿರೇಮಠ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗುಬಹುದು. ಇವರೊಂದಿಗೆ ಈ ಸಿನಿಮಾದಲ್ಲಿ ಮೇಘಶ್ರೀ ರಾಜೇಶ್, ರಶ್ಮಿಕಾ ಕೂಡ ನಟಿಸಿದ್ದಾರೆ. ಜೆ.ವಿ.ಆರ್. ದೀಪು ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.

Kamal Sridevi to Khali Dabba 5 new Kannada Movie released this week September 19th 2025

ಖಾಲಿ ಡಬ್ಬ

'ಕಮಲ್ ಶ್ರೀದೇವಿ', 'ಅರಸಯ್ಯನ ಪ್ರೇಮ ಪ್ರಸಂಗ' ಜೊತೆಗೆ ಮತ್ತೊಂದು ಸ್ಮಾಲ್ ಬಜೆಟ್ ಸಿನಿಮಾ ರಿಲೀಸ್ ಆಗುತ್ತಿದೆ. ಅದುವೇ 'ಖಾಲಿ ಡಬ್ಬ'. ಇದು ಕೂಡ ಹೊಸಬರ ಸಿನಿಮಾ. ರಾಮ್ ಗುಡಿ, ಆದ್ಯಾ ಪ್ರಿಯಾ, ಹರಿತ , ಕುರಿ ಪ್ರತಾಪ್, ವಿ. ನಾಗೇಂದ್ರ ಪ್ರಸಾದ್ ಅಭಿನಯಿಸಿರುವ ಈ ಸಿನಿಮಾವನ್ನು ಕೆ. ಪ್ರಕಾಶ್ ನಿರ್ದೇಶನ ಮಾಡಿದ್ದಾರೆ. ವಿ. ನಾಗೇಂದ್ರ ಪ್ರಸಾದ್ ಅವರೇ ಸಾಹಿತ್ಯ ಬರೆದು, ಸಂಗೀತ ನೀಡಿರುವುದು ವಿಶೇಷ.

ಜೊತೆಯಾಗಿ ಹಿತವಾಗಿ

ಎ.ಆರ್.ಕೃಷ್ಣ ನಿರ್ದೇಶಿಸಿರು ಮತ್ತೊಂದು ಯುವ ಪ್ರತಿಭೆಗಳ ಸಿನಿಮಾ 'ಜೊತೆಯಾಗಿ ಹಿತವಾಗಿ'. ಅಗಸ್ತ್ಯ ಹಾಗೂ ಸುವರ್ತ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಾರ ಬಿಡುಗಡೆಯಾಗುತ್ತಿರುವ ಹೊಸಬರ ಸಿನಿಮಾದಲ್ಲಿ ಇದು ಕೂಡ ಒಂದು.

ಸೋಲ್‌ಮೇಟ್ಸ್‌

ಸೆಪ್ಟೆಂಬರ 19ರಂದು ರಿಲೀಸ್ ಆಗುತ್ತಿರುವ ಸ್ಮಾಲ್ ಬಜೆಟ್ ಸಿನಿಮಾಗಳಲ್ಲಿ 'ಸೋಲ್‌ಮೇಟ್ಸ್' ಕೂಡ ಒಂದು. ಶ್ರೀಜಿತ್ ಸೂರ್ಯ, ಪ್ರಸನ್ನ ಶೆಟ್ಟಿ, ಯಶ್ ಶೆಟ್ಟಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶಂಕರ್ ಪಿ.ವಿ. ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಐದು ಸಿನಿಮಾಗಳು ಈ ವಾರ ಬಿಡುಗಡೆಯಾಗುತ್ತಿದ್ದು, ಪ್ರೇಕ್ಷಕರು ಯಾವ ಸಿನಿಮಾ ನೋಡುತ್ತಾರೆ? ಯಾವುದನ್ನು ಗೆಲ್ಲಿಸುತ್ತಾರೆ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಸದ್ಯ 'ಕಮಲ್ ಶ್ರೀದೇವಿ' ಹಾಗೂ 'ಅರಸಯ್ಯನ ಪ್ರೇಮ ಪ್ರಸಂಗ' ಸಿನಿಮಾಗಳು ತಕ್ಕ ಮಟ್ಟಿಗೆ ಪ್ರಚಾರವನ್ನು ಮಾಡಿವೆ.

More from Filmibeat

English summary
Kamal Sridevi to Khali Dabba 5 new Kannada Movie released this week September 19th 2025.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X