ಅಜಯ್‌ ರಾವ್‌ಗೆ ವಿಚ್ಚೇದನ ಆಗುತ್ತೆ ಅಂತ ಜ್ಯೋತಿಷಿ ಹೇಳಿದ್ದೇಕೆ? ಅದು ನಿಜವಾಗಿದ್ದೇ ವಿಪರ್ಯಾಸ

ಸ್ಯಾಂಡಲ್‌ವುಡ್ ಕೃಷ್ಣ ಅಂತಲೇ ಜನಪ್ರಿಯರಾಗಿರುವ ನಟ ಅಜಯ್ ರಾವ್ ಹಾಗೂ ಪತ್ನಿ ಸ್ವಪ್ನಾ ರಾವ್ ವಿಚ್ಛೇದನ ಪಡೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಹೆಚ್ಚು ಕಡಿಮೆ 11 ವರ್ಷಗಳ ದಾಂಪತ್ಯದ ನಂತರ ಈ ಜೋಡಿ ಬೇರೆಯಾಗಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಈ ನಿರ್ಧಾರ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಈ ಸುದ್ದಿ ಹೊರ ಬಿದ್ದ ಬೆನ್ನಲ್ಲೇ ನೂರಾರು ವಿಷಯಗಳು ಹೊರಬೀಳುತ್ತಿವೆ.

ಮತ್ತೊಂದು ಸ್ಯಾಂಡಲ್‌ವುಡ್ ಜೋಡಿ ವಿಚ್ಚೇದನಕ್ಕೆ ಮುಂದಾಗಿರುವುದು ಬಹುತೇಕ ಖಚಿತವಾಗಿದೆ. ಇತ್ತೀಚೆಗೆ 'ಯುದ್ಧಕಾಂಡ' ಸಿನಿಮಾದಲ್ಲಿ ಅಜಯ್ ರಾವ್ ನಟಿಸಿದ್ದರು. ಈ ಸಿನಿಮಾ ಬಳಿಕ ಅಜಯ್ ರಾವ್ ಪತ್ನಿ ಸ್ವಪ್ನ ರಾವ್ ತಮ್ಮ ದಾಂಪತ್ಯಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ. ಈ ವೇಳೆ ಜ್ಯೋತಿಷಿಯ ಭವಿಷ್ಯವೂ ಒಂದು ಕಾರಣ ಎನ್ನಲಾಗಿದೆ.

Kannada actor Ajay Rao and Swapna divorce case astrologer prediction comes true

ಅಜಯ್ ರಾವ್ ವೈಯಕ್ತಿಕ ಬದುಕಿಗೆ 'ಯುದ್ಧಕಾಂಡ'ವೇ ಸಿನಿಮಾ ಮುಳ್ಳಾಗಿದೆ ಎಂಬ ಮಾತುಗಳು ಚಿತ್ರರಂಗದಲ್ಲಿ ಕೇಳಿ ಬರುತ್ತಿವೆ. ಈ ಸಿನಿಮಾವನ್ನು ಅಜಯ್ ರಾವ್ ಅವರೇ ನಿರ್ಮಾಣ ಮಾಡಿದ್ದರು. ಆದರೆ, ಆ ಸಿನಿಮಾ ಅಜಯ್‌ ರಾವ್‌ ಅವರಿಗೆ ಯಶಸ್ಸು ತಂದುಕೊಟ್ಟಿರಲಿಲ್ಲ. ಇಲ್ಲಿಂದಲೇ ಸಾಂಸಾರಿಕ ಜೀವನ ಹಳಿತಪ್ಪಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

'ಯುದ್ಧಕಾಂಡ' ಸಿನಿಮಾದ ಪ್ರಚಾರದ ವೇಳೆ ಅಜಯ್ ರಾವ್ ಸಂದರ್ಶವೊಂದನ್ನು ನೀಡಿದ್ದರು. ಈ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಮತ್ತು ವೃತ್ತಿ ಜೀವನದ ಏಳು-ಬೀಳುಗಳ ಬಗ್ಗೆ ಓಪನ್ ಆಗಿ ಮಾತನಾಡಿದ್ದರು. ತಮ್ಮ ಸಾಂಸಾರಿಕ ಜೀವನದ ಬಗ್ಗೆ, ಮದುವೆ ಹಾಗೂ ಸಿನಿಮಾ ಮುಹೂರ್ತಗಳ ಬಗ್ಗೆ ತಮ್ಮ ನಂಬಿಕೆ ಹಾಗೂ ದೃಷ್ಟಿಕೋನವನ್ನು ಓಪನ್ ಆಗಿ ಹೇಳಿಕೊಂಡಿದ್ದರು.

ಅಜಯ್ ರಾವ್ ಸಂದರ್ಶನದಲ್ಲಿ ತಮ್ಮ ಮದುವೆಯ ಮುಹೂರ್ತದ ಬಗ್ಗೆ ಪ್ರಸ್ತಾಪ ಮಾಡಿದ್ದರು. "ನಾನು ಮದುವೆಯಾದ ಮುಹೂರ್ತವೇ ಸರಿಯಿರಲಿಲ್ಲ. ನನ್ನ ನಿರ್ಮಾಣ ಸಂಸ್ಥೆ ಮೂಲಕ 'ಕೃಷ್ಣ ಲೀಲಾ' ಸಿನಿಮಾ ಮಾಡಿ ಸೆಟ್ಟೇರಿದ ಮುಹೂರ್ತ ಕೂಡ ಸರಿಯಾಗಿರಲಿಲ್. 'ಯುದ್ಧಕಾಂಡ' ಸಿನಿಮಾವನ್ನು ಯಾವ ಮುಹೂರ್ತದಲ್ಲಿ ಆರಂಭ ಮಾಡಿದೆ ಅನ್ನೋದೇ ಗೊತ್ತಿಲ್ಲವೆಂದು ಹೇಳಿಕೊಂಡಿದ್ದರು. ಈ ವೇಳೆ "ಈ ಹಿಂದೆಯೇ ಒಬ್ಬ ಜ್ಯೋತಿಷಿ ಕೆಟ್ಟ ಮುಹೂರ್ತದಲ್ಲಿ ವಿವಾಹವಾಗಿದ್ದೀಯಾ, ಒಂದು ವರ್ಷವೂ ಮದುವೆ ಉಳಿಯುವುದಿಲ್ಲ, ಡಿವೋರ್ಸ್ ಆಗುತ್ತೆ" ಎಂದು ಹೇಳಿದ್ದರು ಎಂದು ಆ ಮಾತನ್ನು ನೆನೆಪಿಸಿಕೊಂಡಿದ್ದರು.

ಸ್ವಪ್ನಾ ಅವರನ್ನು ನಟ ಅಜಯ್ ರಾವ್ 2014ರಲ್ಲಿ ಪ್ರೀತಿಸಿ ವಿವಾಹವಾಗಿದ್ದರು. ಅಜಯ್ ರಾವ್ ಮತ್ತು ಸ್ವಪ್ನ ಅವರದ್ದು ಸುಮಾರು 11 ವರ್ಷಗಳ ದಾಂಪತ್ಯ ಜೀವನ. ಅಜಯ್ ರಾವ್ ಸಂದರ್ಶನದಲ್ಲಿ ಹೇಳಿಕೊಂಡಂತೆ ಜ್ಯೋತಿಷಿಗಳು ನುಡಿದಂತೆ ಒಂದೇ ವರ್ಷಕ್ಕೆ ವಿಚ್ಛೇದನ ಆಗದಿದ್ದರೂ, ಅವರು ಹೇಳಿದ ಭವಿಷ್ಯ ಈಗ ನಿಜವಾಗುತ್ತಿದೆ. "ನಾನು ಯಾವುದೇ ಮುಹೂರ್ತಗಳನ್ನು ನೋಡುವುದಿಲ್ಲ. ನನಗೂ ಜ್ಯೋತಿಷ್ಯ ನೋಡುವುದಕ್ಕೆ ಬರುತ್ತೆ. ಸಿನಿಮಾ ಎಲ್ಲಾ ಮುಗಿದ ನಂತರ ಅದು ಸರಿಯಾದ ಮುಹೂರ್ತ ಅಲ್ಲವೆಂದು ಗೊತ್ತಾಯಿತು. ಕೃಷ್ಣಾರ್ಪಣಮಸ್ತು ಅಂದೆ ಅಷ್ಟೇ" ಎಂದು ಅಜಯ್ ರಾವ್ ಈ ಹಿಂದೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

Kannada actor Ajay Rao and Swapna divorce case astrologer prediction comes true

ಕೆಲವೇ ತಿಂಗಳ ಹಿಂದೆ ಅಜಯ್ ರಾವ್ ನಿರ್ಮಾಣದ 'ಯುದ್ಧಕಾಂಡ' ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾ ಮೇಲೆ ಅಜಯ್ ರಾವ್ ಭಾರಿ ನಿರೀಕ್ಷೆ ಇರಿಸಿಕೊಂಡಿದ್ದರು. ಆದರೆ, ಸಿನಿಮಾ ನಿರೀಕ್ಷೆಗೆ ತಕ್ಕಂತೆ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಈ ಸಿನಿಮಾಗಾಗಿ 4-5 ಕೋಟಿ ರೂಪಾಯಿ ಹಣ ಸುರಿದು ಅಜಯ್ ರಾವ್ ಅವರು ಸಿನಿಮಾ ಮಾಡಿದ್ದರು. ಈ ಸಿನಿಮಾಗಾಗಿ ತಮ್ಮ ಇಷ್ಟದ ಬಿಎಂಡಬ್ಲ್ಯು ಕಾರನ್ನೇ ಮಾರಾಟ ಮಾಡಿದ ವಿಡಿಯೋ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು.

ಬಿಎಂಡಬ್ಲ್ಯು ಕಾರು ಮಾರಾಟ ಮಾಡುವ ವೇಳೆ ಅವರ ಮಗಳು ಕಾರಿನ ಮುಂದೆ ನಿಂತು ಅಳುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅದು ಅಜಯ್ ರಾವ್ ಅವರಿಗೆ ಬೇಸರ ತರಿಸಿತ್ತು. ಅಜಯ್ ರಾವ್, ವಿಡಿಯೋ ವೈರಲ್ ಮಾಡಿದ್ದಕ್ಕೆ ಬೇಸರವನ್ನು ಹೊರ ಹಾಕಿದ್ದರು.

More from Filmibeat

English summary
Kannada actor Ajay Rao and Swapna divorce case astrologer prediction comes true.
Read more about: ajay rao divorce
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X