ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಸಾಧು ಕೋಕಿಲಾ; ಸ್ಟೈಲಿಶ್ ಲುಕ್ ಕೊಟ್ಟ ಹಾಸ್ಯ ನಟ

ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ನಟ, ನಿರ್ದೇಶಕ, ಸಂಗೀತ ನಿರ್ದೇಶಕ ಸಾಧು ಕೋಕಿಲಾ ಪ್ರತಿಷ್ಠಿತ ಕಾನ್ಸ್‌ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿದ್ದಾರೆ. ಪ್ರತಿ ಬಾರಿಯಂತೆ ಫ್ರಾನ್ಸ್‌ನಲ್ಲಿ ಈ ಸಿನಿಮೋತ್ಸವ ನಡೆಯುತ್ತಿದೆ. ಇಲ್ಲಿ ಈ ಬಾರಿ ಕನ್ನಡದ ನಟಿಯರನ್ನು ನೋಡಿದ್ದೇ ಹೆಚ್ಚು ಆದ್ರೀಗ ಸಾಧು ಕೋಕಿಲಾ ಕೂಡ ಈ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದಾರೆ.

Kannada actor and music director Sadhu Kokila did attend the Cannes Film Festival in France

ಸಾಧು ಕೋಕಿಲಾ ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫಿಲ್ಮ್ ಫೆಸ್ಟಿವಲ್‌ ಬಂದಿರುವ ಹಲವು ಇಂಟ್ರೆಸ್ಟಿಂಗ್ ಸಿನಿಮಾಗಳನ್ನು ನೋಡಿ ಎಂಜಾಯ್ ಮಾಡಿದ್ದಾರೆ. ರೆಡ್ ಕಾರ್ಪೆಟ್‌ ಮೇಲೆ ವಾಕ್ ಮಾಡಿ ಎಂಜಾಯ್ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಟನಾಗಿ, ಸಂಗೀತ ನಿರ್ದೇಶಕನಾಗಿ ಹಾಗೂ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಸಾಧು ಕೋಕಿಲಾ ತಮ್ಮ ಕನಸನ್ನು ಈಡೇರಿಸಿಕೊಂಡಿದ್ದಾರೆ.

ಸಾಧು ಕೋಕಿಲಾ ಕಾನ್ಸ್ ಫೆಸ್ಟಿವಲ್‌ಗೆ ಹೋದ ಫೋಟೋಗಳನ್ನು ಹಾಕುತ್ತಿದ್ದಂತೆ ಅಭಿಮಾನಿಗಳು ಕಮೆಂಟ್‌ಗಳನ್ನು ಮಾಡುವುದಕ್ಕೆ ಶುರು ಮಾಡಿದ್ದಾರೆ. ಕೆಲವರು ಸಾಧು ಕೋಕಿಲಾ ಅವರಿಗೆ ವಿಶ್ ಮಾಡುತ್ತಿದ್ದಾರೆ. ಸಾಧು ಕೋಕಿಲಾ ಕೂಡ ಅಷ್ಟೇ ಖುಷಿಯಲ್ಲಿ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿ ಎಂಜಾಯ್ ಮಾಡಿದ್ದಾರೆ. ಕೆಲವು ಪ್ರಮುಖ ಸಿನಿಮಾಗಳನ್ನು ನೋಡಿ ಖುಷಿಪಟ್ಟಿದ್ದಾಗಿ ತಿಳಿಸಿದ್ದಾರೆ.

ಈ ಬಾರಿ ಸ್ಯಾಂಡಲ್‌ವುಡ್‌ನಿಂದ ಇಬ್ಬರು ನಟಿಯರಿಗೆ ಕಾನ್ಸ್‌ನಿಂದ ಆಹ್ವಾನ ಬಂದಿತ್ತು. ಕನ್ನಡ ನಟಿ ಪ್ರಣೀತಾ ಸುಭಾಷ್ ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದರು. ಇವರೊಂದಿಗೆ 'ಲಕ್ಷ್ಮಿ ಬಾರಮ್ಮ' ನಟಿ ದಿಶಾ ಮದನ್ ಅವರಿಗೆ ಕಾನ್ಸ್ ಫೆಸ್ಟಿವಲ್‌ನಲ್ಲಿ ಆಹ್ವಾನವಿತ್ತು. ಸ್ಯಾಂಡಲ್‌ವುಡ್‌ನಿಂದ ಈಗಾಗಲೇ ಇಬ್ಬರು ನಟಿಯರು ಪ್ರತಿನಿಧಿಸಿದ್ದರು. ಸಾಧು ಕೋಕಿಲಾ ಎಂಟ್ರಿ ಕೊಟ್ಟಿದ್ದು ಅವರ ಅಭಿಮಾನಿಗಳಿಗೆ ಸರ್ಪ್ರೈಸ್.

ಸಾಧು ಕೋಕಿಲಾ ಕಾನ್ಸ್‌ ಫೆಸ್ಟಿವಲ್‌ನಲ್ಲಿ ಭಾಗವಹಿಸಿ ಕ್ಷಣಗಳನ್ನು ನೆನೆದು ಮೂರು ಫೋಟೊಗಳು ಹಾಕಿ, ಜೊತೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. "77ನೇ ಕಾನ್ಸ್ ಚಲನಚಿತ್ರೋತ್ಸದಲ್ಲಿ ವಿಭಿನ್ನ ಪ್ರತಿಭೆಯ ಫಿಲಂ ಮೇಕರ್ಸ್, ಅದ್ಭುತ ಕಂಟೆಂಟ್‌ಗಳು ಮತ್ತು ಹೊಸ ಪೀಳಿಗೆಯ ಚಿತ್ರಗಳನ್ನು ನೋಡಿ, ವೈಭವದ ರೆಡ್ ಕಾರ್ಪೆಟ್ ಸಂಭ್ರಮಕ್ಕೆ ಸಾಕ್ಷಿಯಾದ ಕ್ಷಣ" ಎಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ನೆಟ್ಟಿಗರು ಸಾಧು ಕೋಕಿಲಾ ಅವರಿಗೆ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ, " ಗ್ರೀನ್ ಅಂತ ಕನ್ನಡ ಸಿನಿಮಾ ನೋಡಿದ್ರಾ? ಅತ್ಯುತ್ತಮ ಭಾರತದ ಸಿನಿಮಾ ಪ್ರಶಸ್ತಿ ಗೆದ್ದಿದೆ." ಎಂದಿದ್ದಾರೆ. ಮತ್ತೊಬ್ಬರು "ಚಿಕ್ಕ ವಯಸ್ಸಿನಿಂದ ನಿಮ್ಮ ಕಾಮಿಡಿಗಳೊಂದಿಗೆ ನಗು ನಗುತ್ತ ವಿಸ್ಮಯೊಂದಿಗೆ ಇಂದು ನಿಮ್ಮನ್ನು ಕಂಡಿದ್ದೇನೆ" ಎಂದು ಹೇಳಿ ಖುಷಿ ಪಟ್ಟಿದ್ದಾರೆ. ಅಭಿಮಾನಿಗಳು ಕೂಡ ಕಾನ್ಸ್ ಪೆಸ್ಟಿವಲ್‌ನಲ್ಲಿ ಭಾಗವಹಿಸಿದ್ದಕ್ಕೆ ಖುಷಿ ಪಟ್ಟಿದ್ದಾರೆ.

ಇನ್ನು ಸಾಧು ಕೋಕಿಲಾ ಕನ್ನಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿದ್ದಾರೆ. ಇವರ ನೇತೃತ್ವದಲ್ಲಿ ಈಗಾಗಲೇ ಬೆಂಗಳೂರು ಚಲನ ಚಿತ್ರೋತ್ಸವ ಕೂಡ ನಡೆದಿದೆ. ಆರಂಭದಲ್ಲಿ ವಿವಾದ ಎದ್ದಿದ್ದರೂ, ನಂತರ ಸುಗಮವಾಗಿ ಸಾಗಿತ್ತು. ಸಾಧು ಕೋಕಿಲಾ ಕೂಡ ವಿವಾದಗಳನ್ನು ಬಗೆಹರಿಸುವ ಪ್ರಯತ್ನ ಮಾಡಿದ್ದರು. ವಿವಾದಗಳನ್ನು ಹೊರತು ಪಡಿಸಿ, ಈ ಬಾರಿಯ ಚಿತ್ರೋತ್ಸವದಲ್ಲಿ ಸಾಧು ಕೋಕಿಲಾ ಸಾಕಷ್ಟು ಗಣ್ಯರನ್ನು ಚಿತ್ರೋತ್ಸವಕ್ಕೆ ಕರೆದು ಗಮನ ಸೆಳೆದಿದ್ದರು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X