ಮಾತು ಕೊಟ್ಟಂತೆ ತುಮಕೂರಿನ ಅಭಿಮಾನಿಯನ್ನು ಹುಡುಕಿ ಭೇಟಿ ಮಾಡಿದ ಜಗ್ಗೇಶ್!

ಇದು ಎರಡು ತಿಂಗಳ ಹಿಂದಿನ ಮಾತು. ಜಗ್ಗೇಶ್ ತನ್ನ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಯೊಬ್ಬನ ಫೋಟೊವನ್ನು ಶೇರ್ ಮಾಡಿಕೊಂಡಿದ್ದರು. ಆತನ ಅಭಿಮಾನವನ್ನು ಹಾಡು ಹೊಗಳಿದ್ದರು. ತುಮಕೂರಿನ ಈ ಅಭಿಮಾನಿಯ ಅಭಿಮಾನಕ್ಕೆ ಫುಲ್ ಖುಷಿಯಾಗಿದ್ದರು.

ಅಭಿಮಾನಿಗಳ ಅಭಿಮಾನಕ್ಕೆ ಮರುಳಾಗದ ತಾರೆಯರು ಎಲ್ಲಾದರೂ ಇದ್ದಾರಾ? ಎಷ್ಟೇ ಹಣ ಬಂದರೂ, ಅಭಿಮಾನಿಗಳು ನೀಡುವ ಪ್ರೀತಿ ಎಲ್ಲವೂ ನಗಣ್ಯ. ತುಮಕೂರಿನ ಅಭಿಮಾನಿಯೊಬ್ಬ ತನ್ನ ಹೋಟೆಲ್ ತುಂಬಾ ಜಗ್ಗೇಶ್ ಫೋಟೊಗಳನ್ನು ಹಾಕಿಕೊಂಡಿದ್ದ. ಈ ಫೋಟೊಗಳನ್ನು ನವರಸ ನಾಯಕ ಜಗ್ಗೇಶ್ ತನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು.

ಆ ವೇಳೆ ಜಗ್ಗೇಶ್‌ಗೆ ತನ್ನ ಅಭಿಮಾನಿಯ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಆದರೆ, ಎಲ್ಲೇ ಇದ್ದರೂ ಪತ್ತೆ ಹಚ್ಚುವೆ. ನಿಮ್ಮನ್ನು ಹುಡುಕಿಕೊಂಡು ಬರುವೆ ಎಂದು ಮಾತು ನೀಡಿದ್ದರು. ಅದರಂತೆಯೇ ಜಗ್ಗೇಶ್ ತನ್ನ ಅಭಿಮಾನಿಯನ್ನು ಹುಡುಕಿ, ಭೇಟಿ ಮಾಡಿದ್ದಾರೆ.

ಅಭಿಮಾನಿಯನ್ನು ಭೇಟಿ ಮಾಡಿದ ಜಗ್ಗೇಶ್

ಅಭಿಮಾನಿಯನ್ನು ಭೇಟಿ ಮಾಡಿದ ಜಗ್ಗೇಶ್

ಎರಡು ತಿಂಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಜಗ್ಗೇಶ್ ಕೆಲವು ಫೋಟೊಗಳನ್ನು ಶೇರ್ ಮಾಡಿದ್ದರು. ಉದ್ಯಮಿಯಾಗಿರುವ ಅಭಿಮಾನಿ ತನ್ನ ಹೋಟೆಲ್ ತುಂಬಾ ಜಗ್ಗೇಶ್ ಹಾಗೂ ಅವರ ಪತ್ನಿಯ ಪೋಟೊವನ್ನು ಹಾಕಿಕೊಂಡಿದ್ದರು. ಅದು ಆತ್ಮೀಯರೊಬ್ಬರಿಂದ ಜಗ್ಗೇಶ್‌ಗೆ ತಲುಪಿತ್ತು. ಅಂದೇ ನಿಮ್ಮನ್ನು ಹುಡುಕಿಕೊಂಡು ಬರುತ್ತೇನೆ ಎಂದು ಹೇಳಿದ್ದರು. ಅಂದು ಕೊಟ್ಟ ಮಾತಿನಂತೆ ಇಂದು ( ಜುಲೈ) ಜಗ್ಗೇಶ್ ತನ್ನ ಅಭಿಮಾನಿಯನ್ನು ಭೇಟಿಯಾಗಿದ್ದಾರೆ.

ಅಭಿಮಾನಿ ಹೋಟೆಲ್‌ಗೆ ಭೇಟಿ

ಅಭಿಮಾನಿ ಹೋಟೆಲ್‌ಗೆ ಭೇಟಿ

ತುಮಕೂರಿನಲ್ಲಿ ಜಗ್ಗೇಶ್ ಅಭಿಮಾನಿ ಮೋಕ್ಷಿತಾ ಎನ್ನುವ ಹೋಟೆಲ್ ಅನ್ನು ನಡೆಸುತ್ತಿದ್ದಾರೆ. ಇದೇ ಹೋಟೆಲ್‌ ತುಂಬಾ ಜಗ್ಗೇಶ್ ಫೋಟೊಗಳನ್ನು ನೋಡಬಹುದು. ಈ ಹೋಟೆಲ್ ಅನ್ನು ನವರಸ ನಾಯಕ ಹುಡುಕಿಕೊಂಡು ಹೋಗಿ ಭೇಟಿ ಮಾಡಿದ್ದಾರೆ. ಈ ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ನವರಸ ನಾಯಕ ಜಗ್ಗೇಶ್ ಶೇರ್ ಮಾಡಿಕೊಂಡಿದ್ದಾರೆ.

ಜಗ್ಗೇಶ್‌ ಆರತಿ ಎತ್ತಿ ಸ್ವಾಗತ

ಜಗ್ಗೇಶ್‌ ಆರತಿ ಎತ್ತಿ ಸ್ವಾಗತ

ನವರಸ ನಾಯಕ ಜಗ್ಗೇಶ್ ಹೋಟೆಲ್‌ಗಷ್ಟೇ ಅಲ್ಲ. ತನ್ನ ಅಭಿಮಾನಿಯ ಮನೆಗೂ ಭೇಟಿ ನೀಡಿದ್ದಾರೆ. ಈ ವೇಳೆ ಅಭಿಮಾನಿಯ ಇಡೀ ಕುಟುಂಬ ಜಗ್ಗೇಶ್ ದಂಪತಿಗೆ ಆರತಿ ಎತ್ತಿ ತನ್ನ ಮನೆಗೆ ಸ್ವಾಗತ ಕೋರಿದ್ದಾರೆ. ಜಗ್ಗೇಶ್ ಕೂಡ ಅವರ ಕುಟುಂಬದೊಂದಿಗೆ ಕೆಲ ಕಾಲ ಕಳೆದ ಬಂದಿದ್ದಾರೆ. ಅಲ್ಲದೆ ಅಭಿಮಾನಿ ಕುಟುಂಬವನ್ನು ಸತ್ಕಾರ ಮಾಡಿ ಬಂದಿದ್ದಾರೆ. ಇದೇ ಸಂತಸವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಜಗ್ಗೇಶ್ ಅಭಿಮಾನಿ ಬಗ್ಗೆ ಹೇಳಿದ್ದೇನು?

ಜಗ್ಗೇಶ್ ಅಭಿಮಾನಿ ಬಗ್ಗೆ ಹೇಳಿದ್ದೇನು?

"ಸಾಮಾಜಿಕ ಜಾಲತಾಣದಲ್ಲಿ ಕೆಲ ತಿಂಗಳ ಹಿಂದೆ ತುಮಕೂರಿನಲ್ಲಿ ಅರಿಯದೆ ಮರೆಯಲ್ಲಿ ಇದ್ದ ಅಭಿಮಾನಿಯ ವಿಷಯ ತಿಳಿದು ತುಂಬ ಹರ್ಷಿತನಾಗಿ ನಿಮ್ಮ ಹುಡುಕಿ ಬರುವೆ ಎಂದು ಮಾತುಕೊಟ್ಟಿದ್ದೆ. ಅದರಂತೆ ಮಡದಿ ಸಮೇತ ಆತನ ಅನ್ನ ಸಂತರ್ಪಣೆ ಜಾಗಕ್ಕೆ ಹಾಗೂ ಆತನ ಮನೆಗೆ ಹೋಗಿ ಹರಸಿಬಂದೆ. ಪ್ರೀತಿ ಅಮರ.. ಇಂಥ ಪ್ರೀತಿ ದೈವ ಕೃಪೆ. ಪ್ರೀತಿಸಿ, ಪ್ರೀತಿ ಹಂಚಿ ನೆನಪಲ್ಲಿ ಉಳಿಯುವ ಈ ನಶ್ವರ ಜಗದಲ್ಲಿ. ಶುಭಮಸ್ತು God bless.. ನೂರ್ಕಾಲ ಸುಖವಾಗಿ ಬಾಳಿ.." ಎಂದು ಜಗ್ಗೇಶ್ ಫೇಸ್ ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಜಗ್ಗೇಶ್ ಈಗ ಫುಲ್ ಬ್ಯುಸಿ

ಜಗ್ಗೇಶ್ ಈಗ ಫುಲ್ ಬ್ಯುಸಿ

ನವರಸ ನಾಯಕ ಜಗ್ಗೇಶ್ ರಾಜ್ಯ ಸಭೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈಗ ಸಿನಿಮಾ ಜೊತೆ ಜೊತೆ ರಾಜಕೀಯದಲ್ಲೂ ಬ್ಯುಸಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿಯೂ ತನ್ನ ಅಭಿಮಾನಿಯನ್ನು ಭೇಟಿ ಮಾಡಿ ಬಂದಿದ್ದಾರೆ. ಜಗ್ಗೇಶ್ ಅವರ ಈ ನಡೆಗೆ ನೆಟ್ಟಿಗರು ಹರ್ಷ ವ್ಯಕ್ತಪಡಿಸಿದ್ದಾರೆ.

More from Filmibeat

English summary
Kannada Actor And Rajya Sabha Member Jaggesh Met His Fan In Tumkur, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X