ಚಿಕ್ಕಣ್ಣ ಜೊತೆ ಖಡಕ್ ಲುಕ್ ಕೊಟ್ಟ ತೆಲುಗಿನ ಸ್ಟಾರ್ ಕಾಮಿಡಿಯನ್ ಸುನಿಲ್; ಇನ್ಮುಂದೆ 'ಜೋಡೆತ್ತು'ಗಳದ್ದೇ ದರ್ಬಾರ್

ಮಂಡ್ಯಕ್ಕೂ 'ಜೋಡೆತ್ತು'ಗಳಿಗೂ ಒಂಥರಾ ಬಿಡಲಾರದ ನಂಟು. ಒಂದಲ್ಲ ಒಂದು ರೀತಿಯಲ್ಲಿ 'ಜೋಡೆತ್ತು' ಅನ್ನೋ ಪದ ಮಂಡ್ಯ ಜನರ ಜೊತೆ ತಳುಕು ಹಾಕಿಕೊಳ್ಳುತ್ತಲೇ ಇರುತ್ತೆ. ಅದರಲ್ಲೂ ಸಿನಿಮಾದವರ ಜೊತೆ ಈ ಹೆಸರು ತಳುಕು ಹಾಕಿಕೊಳ್ಳುತ್ತಲೇ ಇರುತ್ತೆ. ಸುಮಲತಾ ಅಂಬರೀಶ್ ಗೆಲ್ಲಿಸುವುದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ 'ಜೋಡೆತ್ತು'ಗಳಾಗಿದ್ದನ್ನು ನೋಡಿದ್ದೇವೆ.

'ಜೋಡೆತ್ತು'ಗಳು ಅಖಾಡಕ್ಕೆ ಇಳಿದು ಜನರ ಮನಸ್ಸನ್ನು ಕದ್ದಿದ್ದವು ಕೂಡ. ಈಗ ಮತ್ತೆ ಚಿತ್ರರಂಗದಲ್ಲಿ 'ಜೋಡೆತ್ತು' ಸದ್ದು ಮಾಡುತ್ತಿದೆ. ಹಾಗಂತ ಇಲ್ಲಿ ದರ್ಶನ್ ಹಾಗೂ ಯಶ್ ಮತ್ತೆ ಒಟ್ಟಾದರಾ? ಎಂದುಕೊಳ್ಳಬೇಡಿ. ಅದು ಸದ್ಯಕ್ಕೆ ಸಾಧ್ಯವಿಲ್ಲ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಸದ್ಯ ಇದೇ ಟೈಟಲ್ ಅನ್ನು ಇಟ್ಕೊಂಡು 'ಜೋಡೆತ್ತು' ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ. ಜೋಡೆತ್ತಿನ ಕಾಂಬಿನೇಷನ್ ಗಮನ ಸೆಳೆಯುತ್ತಿದೆ.

Kannada actor Chikkanna new movie Jodettu with Telugu star comedian Sunil is a village drama

'ಉಪಾಧ್ಯಕ್ಷ' ಸಿನಿಮಾ ಮೂಲಕ ಹೀರೋ ಆಗಿ ಬಡ್ತಿ ಪಡೆದಿರುವ ಚಿಕ್ಕಣ್ಣ ಒಂದರ ಹಿಂದೊಂದು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. 'ಉಪಾಧ್ಯಕ್ಷ' ಸಕ್ಸಸ್ ಬಳಿಕ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ವಿಶೇಷ ಅಂದರೆ, ಈ ಸಿನಿಮಾದಲ್ಲಿ ಇವರ ಎದುರು ನಿಲ್ತಿರೋದು ಮತ್ತೊಬ್ಬ ಸ್ಟಾರ್‌ ಕಾಮಿಡಿಯನ್ ಸುನಿಲ್. ಇವರಿಬ್ಬರ ಕಾಂಬಿನೇಷನ್‌ನಲ್ಲಿ 'ಜೋಡೆತ್ತು' ಸೆಟ್ಟೇರಿದೆ.

ಚಿಕ್ಕಣ್ಣ ಹೀರೋ ಆದ್ಮೇಲೆ ಸಣ್ಣ-ಪುಟ್ಟ ಪಾತ್ರಗಳಲ್ಲಿ ನಟಿಸಿದ್ದು ತೀರಾ ಕಡಿಮೆ. ಲೀಡ್‌ ರೋಲ್‌ಗಳನ್ನು ಹೆಚ್ಚಾಗಿ ಹುಡುಕುತ್ತಿದ್ದಾರೆ. ಅದು ಸೋಲೋ ಹೀರೋನೂ ಆಗಿರಬಹುದು. ಇಲ್ಲವೇ ಮಲ್ಟಿಸ್ಟಾರರ್ ಆದರೂ ಆಗಿರಬಹುದು. ಚಿಕ್ಕಣ್ಣ ನಾಯಕನಾಗಿಯೇ ತೆರೆಮೇಲೆ ಕಾಣಿಸಿಕೊಳ್ಳುವುದಕ್ಕೆ ಇಷ್ಟ ಪಡುತ್ತಿದ್ದಾರೆ. ಈ ಪ್ರಯತ್ನದಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರಿದೆ. ಅದುವೇ 'ಜೋಡೆತ್ತು'.

ಕನ್ನಡದ ಕಾಮಿಡಿ ಕಿಂಗ್ ಚಿಕ್ಕಣ್ಣ ಹೀರೋ ಆಗಿ ನಟಿಸುತ್ತಿರುವ ನಾಲ್ಕನೇ ಸಿನಿಮಾವಿದು. ಈ ಸಿನಿಮಾ ಅಪೋಸಿಟ್ ಆಗಿ ಅಖಾಡಕ್ಕೆ ಇಳಿದಿದರೋದು ತೆಲುಗಿನ ಸ್ಟಾರ್ ಕಾಮಿಡಿಯನ್ ಸುನಿಲ್. ತೆಲುಗು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಹಾಸ್ಯ ಪಾತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದರು. ಇತ್ತೀಚೆಗೆ ವಿಲನ್ ರೋಲ್‌ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸೀರಿಸ್‌ನಲ್ಲಿ ಸುನಿಲ್ ವಿಲನ್ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.

ಕಳೆದ ವರ್ಷ ರಿಲೀಸ್ ಆಗಿದ್ದ ಕಿಚ್ಚ ಸುದೀಪ್ ಸಿನಿಮಾ 'ಮ್ಯಾಕ್ಸ್'ನಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿಯೇ ನಟಿಸಿ ಕನ್ನಡಿಗರ ಮನಗೆದ್ದಿದ್ದರು. ಈಗ 'ಜೋಡೆತ್ತು' ಸಿನಿಮಾ ಮೂಲಕ ಮತ್ತೊಮ್ಮೆ ಖಡಕ್ ಲುಕ್‌ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಮೇಲ್ನೋಟಕ್ಕೆ ಇವರ ಪಾತ್ರ ಖಳನಾಯಕನಂತೆ ಕಂಡರೂ, ಹಾಸ್ಯ ಝಲಕ್ ಇದ್ದೇ ಇರುತ್ತೆ. ಅದರಲ್ಲೂ ಚಿಕ್ಕಣ್ಣ ಹಾಗೂ ಸುನಿಲ್ ಕಾಂಬಿನೇಷನ್ ಜನರಿಗೆ ಯಾವ ಮಟ್ಟಿಗೆ ಮನರಂಜನೆ ನೀಡಬಹುದು? ಅನ್ನೋ ಕುತೂಹಲ ಮೂಡಿದೆ.

'ಜೋಡೆತ್ತು' ಸಿನಿಮಾವನ್ನು ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಇಂದು (ಅಕ್ಟೋಬರ್ 5) 'ಜೋಡೆತ್ತು' ಸಿನಿಮಾ ಸೆಟ್ಟೇರಿದ್ದು, ಪ್ರೇಕ್ಷಕರು ಈ ಜೋಡಿಯನ್ನು ನೋಡುವುದಕ್ಕೆ ಕಾತುರದಿಂದ ಕಾಯುತ್ತಿದ್ದಾರೆ. ಇದೇ ವೇಳೆ ಚಿಕ್ಕಣ್ಣ ಮದುವೆ ತಯಾರಿ ಕೂಡ ನಡೆಸುತ್ತಿರುವುದರಿಂದ ಈ ಸಿನಿಮಾ ಯಾವಾಗ ಸೆಟ್ಟೇರುತ್ತೆ? ಯಾವಾಗ ರಿಲೀಸ್ ಆಗುತ್ತೆ? ಅನ್ನೋ ಮಾಹಿತಿ ಸದ್ಯಕ್ಕಂತೂ ಇಲ್ಲ. ಆದರೆ, ಇಬ್ಬರು ಹಾಸ್ಯ ನಟರ ಕಾಂಬಿನೇಷನ್‌ ಸಿನಿಮಾ ಪ್ರೇಕ್ಷಕರನ್ನು ನಗುವಿನ ಅಲೆಯಲ್ಲಿ ತೇಲಿಸುತ್ತಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ. ಸದ್ಯ ಇಬ್ಬರ ಕಾಂಬಿನೇಷನ್ ಚಿಕ್ಕದೊಂದು ತುಣುಕು ರಿಲೀಸ್ ಆಗಿದೆ.

More from Filmibeat

English summary
Kannada actor Chikkanna and popular Telugu comedian Sunil upcoming village drama movie Jodettu. Both comedy stars share screen space for the first time. The film promises laughter and emotions.
Read more about: chikkanna movies comedy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X