"ಭಯೋತ್ಪಾದಕರಿಗೆ ಭಾರತ ತಕ್ಕ ಉತ್ತರ ಕೊಟ್ಟಿದೆ"; 'ಆಪರೇಷನ್ ಸಿಂಧೂರ ' ಬಗ್ಗೆ ಡಾಲಿ ಪ್ರತಿಕ್ರಿಯೆ
ಪೆಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ಅಟ್ಟಹಾಸಕ್ಕೆ ಭಾರತ ಪ್ರತೀಕಾರ ತೀರಿಸಿಕೊಂಡಿತ್ತು. ಅದಕ್ಕಾಗಿ 'ಆಪರೇಷನ್ ಸಿಂಧೂರ' ಕಾರ್ಯಚರಣೆ ಮಾಡಿತ್ತು. ಪಾಕಿಸ್ತಾನದಲ್ಲಿ ಉಗ್ರರಿಗೆ ನೆಲೆಗಳನ್ನು ಹುಡುಕಿ ಧ್ವಂಸ ಮಾಡಲಾಗಿತ್ತು. ಭಾರತದ ಈ ದಿಟ್ಟ ನಡೆಯನ್ನು ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡಿತ್ತು. ಭಾರತದ ಪ್ರತಿರೋಧವನ್ನು ತಡೆಯಲಾರದೆ ಸದ್ಯ ಪಾಕ್ ಕಂಗಾಲಾಗಿದೆ.
ಭಾರತದ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ಆರಂಭ ಆಗಿದೆ. ಗಡಿಯಲ್ಲಿ ಪಾಕಿಸ್ತಾನದ ಕ್ಷಿಪಣಿಗಳನ್ನು ಭಾರತ ಹೊಡೆದು ಉರುಳಿಸಿದೆ. ಸದ್ಯ ಜಮ್ಮು ಕಾಶ್ಮೀರ, ಪಂಜಾಬ್, ಗುಜರಾತ್ ಸೇರಿದಂತೆ ಹಲವು ಭಾಗಗಳಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣ ಆಗಿದೆ. ಭಾರತದ ನಡೆಸುತ್ತಿರುವ ದಾಳಿಗೆ ಪಾಕಿಸ್ತಾನ ಕಂಗಾಲಾಗಿ ಹೋಗಿದೆ.

ಭಾರತದ ನಡೆಸಿದ 'ಆಪರೇಷನ್ ಸಿಂಧೂರ'ಕ್ಕೆ ಭಾರತೀಯರು ಮೆಚ್ಚುಗೆ ಸೂಚಿಸಿದ್ದರು. ಭಾರತೀಯ ಸೇನೆ ಹಾಗೂ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದರು. ಹಾಗೇ ಡಾಲಿ ಧನಂಜಯ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಭಯೋತ್ಪಾದಕರ ವಿರುದ್ಧ ಭಾರತ ಸರ್ಕಾರ ಸಾರಿರುವ ಸಮರಕ್ಕೆ ಡಾಲಿ ಧನಂಜಯ್ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಇದು ಎಲ್ಲರೂ ಖುಷಿ ಪಡುವಂತಹ ವಿಷಯ ಎಂದು ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಡಾಲಿ ಧನಂಜಯ್ 'ಆಪರೇಷನ್ ಸಿಂಧೂರ'ದ ಕಾರ್ಯಚರಣೆಯನ್ನು ಮೆಚ್ಚಿಕೊಂಡಿದ್ದಾರೆ. ಭಯೋತ್ಪಾದಕರಿಗೆ ಭಾರತ ತಕ್ಕ ಉತ್ತರವನ್ನೇ ಕಟ್ಟಿದೆ. ಈ ಕಾರ್ಯಾಚರಣೆ ಖುಷಿ ಪಡುವಂತದ್ದು" ಎಂದು ಡಾಲಿ ಧನಂಜಯ್ ಭಾರತೀಯ ಸೇನೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ. ಭಾರತದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಪ್ರತಿ ಬಾರಿ ಉಗ್ರರು ದಾಳಿ ಮಾಡಿದಾಗಲೂ ಉತ್ತರ ಕೊಟ್ಟಿದ್ದೇವೆ. ಇಂತಹ ಉತ್ತರ ಕೊಡಲೇಬೇಕು. ಈಗ 'ಆಪರೇಷನ್ ಸಿಂಧೂರ' ಬಳಿಕ ಭಯೋತ್ಪಾದಕರಿಗೆ ಖಡಕ್ ಸಂದೇಶ ರವಾನೆ ಮಾಡಿದ್ದಾಗಿದೆ. ಉಗ್ರರಿಗೆ ಭಾರತದ ಒಳ್ಳೆಯ ಉತ್ತರವನ್ನ ಕೊಟ್ಟಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಡಾಲಿ ಧನಂಜಯ್ ಭಯೋತ್ಪಾದನೆಯ ವಿರುದ್ಧ ಭಾರತ ನಡೆಯನ್ನು ಮೆಚ್ಚಿಕೊಂಡಿದ್ದಾರೆ. ಅದರಲ್ಲೂ ಸೇನೆಯ ದಿಟ್ಟತನಕ್ಕೆ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಇದೇ ವೇಳೆ ಬಾಲಿವುಡ್ ಗಾಯಕ ಸೋನು ನಿಗಂ ಬಗ್ಗೆನೂ ಪ್ರತಿಕ್ರಿಯೆ ನೀಡಿದ್ದಾರೆ. ಸಂಗೀತ ಸಂಜೆಯಲ್ಲಿ ಕನ್ನಡ ಹಾಡನ್ನು ಹಾಡುವಂತೆ ಕೇಳಿದ ಸಂದರ್ಭದಲ್ಲಿ ಕನ್ನಡಿಗರನ್ನು ಪೆಹಲ್ಗಾಮ್ ಉಗ್ರರ ಘಟನೆಗೆ ಹೋಲಿಸಿದಂತೆ ಮಾತಾಡಿದ್ದರು. ಇದರಿಂದ ಕರ್ನಾಟಕ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಆ ಬಗ್ಗೆನೂ ಡಾಲಿ ಧನಂಜಯ್ ಪ್ರತಿಕ್ರಿಯೆ ನೀಡಿದ್ದಾರೆ.
ಕನ್ನಡ ನಾಡು, ನುಡಿ ಅಂತ ಬಂದಾಗ ಎಲ್ಲರೂ ಜೊತೆಯಾಗಿ ನಿಲ್ಲಬೇಕು. ಆ ಸಂದರ್ಭದಲ್ಲಿ ಸೋನು ನಿಗಂ ಪ್ರತಿಕ್ರಿಯೆ ಬೇರೆ ರೀತಿ ಕೇಳಿಸಿರಬಹುದು. ತಪ್ಪಾಗಿಯೂ ಪ್ರತಿಕ್ರಿಯಿಸಿರುವ ಸಾಧ್ಯತೆನೂ ಇದೆ. ಆದರೆ, ಕನ್ನಡದ ವಿಷಯ ಬಂದಾಗ ಎಲ್ಲೂ ಕನ್ನಡ ಭಾಷೆಯ ಪರವಾಗಿಯೇ ನಿಲ್ಲುತ್ತೇವೆ. ಕನ್ನಡನೇ ನಮ್ಮ ಅನ್ನ, ಅದೇ ನಮ್ಮ ಜೀವ ಎಂದಿದ್ದಾರೆ. ಹಾಗೇ ಸೋನು ನಿಗಂ ಕೂಡ ಕನ್ನಡ ಭಾಷೆಯ ಬಗ್ಗೆ ಕಾಳಜಿ ಇಟ್ಟುಕೊಂಡಿರುವ ಗಾಯಕ. ಅವರು ಕನ್ನಡ ಚಿತ್ರರಂಗಕ್ಕೂ ಕೊಡುಗೆಯನ್ನು ಕೊಟ್ಟಿದ್ದಾರೆ. ಅವರ ಹಾಡುಗಳನ್ನು ನಾವು ಇಷ್ಟಪಟ್ಟಿದ್ದೇವೆ ಎಂದು ಹೇಳಿದ್ದಾರೆ.


Click it and Unblock the Notifications











