ಸ್ಯಾಂಡಲ್‌ವುಡ್‌ನಲ್ಲಿ ಮೋಡಿ ಮಾಡ್ತಿದೆ 'ಕಪಟಿ' ಟೀಸರ್; ಡಾರ್ಲಿಂಗ್ ಕೃಷ್ಣ ಹೇಳಿದ್ದೇನು?

ಸ್ಯಾಂಡಲ್‌ವುಡ್‌ನಲ್ಲಿ ಕನ್ನಡದ ಸಿನಿಮಾದ ಟೀಸರ್ ಒಂದು ಸಖತ್ ಮೋಡಿ ಮಾಡುತ್ತಿದೆ. ಅದುವೇ 'ಕಪಟಿ'. ಈ ಸಿನಿಮಾದಲ್ಲಿ ನಟಿ ಸುಕೃತಾ ವಾಗ್ಲೆ, ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್ ಪ್ರಮುಖ ಪಾತ್ರದಲ್ಲಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಈ ಸಿನಿಮಾದ ಟೀಸರ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಖತ್ ಮೋಡಿ ಮಾಡುತ್ತಿದ್ದಾರೆ.

ಸ್ಯಾಂಡಲ್‌ವುಡ್‌ನ ಹಿರಿಯ ನಿರ್ದೇಶಕ ಕಮ್ ನಿರ್ಮಾಪಕ ದಯಾಳ್ ಪದ್ಮನಾಭನ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ರವಿಕಿರಣ್ ಹಾಗೂ ಚೇತನ್ ಎಸ್‌.ಪಿ ಜಂಟಿಯಾಗಿ ಈ ಸಿನಿಮಾವನ್ನು ನಿರ್ದೇಶನವನ್ನು ಮಾಡಿದ್ದಾರೆ. ಅಂದ್ಹಾಗೆ, ಇದು ದಯಾಳ್ ಪದ್ಮನಾಭನ್ ಅವರ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡುತ್ತಿರುವ 12ನೇ ಸಿನಿಮಾ. ಈಗಾಗಲೇ 10 ಕನ್ನಡ ಸಿನಿಮಾ ಹಾಗೂ ಎರಡು ತಮಿಳು ಸಿನಿಮಾಗಳನ್ನು ನಿರ್ಮಾಣ ಮಾಡಲಾಗಿದೆ.

Kannada actor Darling Krishna released Kapati movie teaser

ಈಗ 'ಕಪಟಿ' ಅನ್ನುವ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಇದು 'ಡಾರ್ಕ್‌ ನೆಟ್' ಹಿನ್ನೆಲೆಯನ್ನು ಆಧರಿಸಿದ ಸಿನಿಮಾ ಆಗಿದ್ದು, ಪ್ರೇಕ್ಷಕರಿಗೆ ಥ್ರಿಲ್ಲಿಂಗ್ ಅನುಭವ ನೀಡಲಾಗಿದೆ. ಕನ್ನಡದಲ್ಲಿ ಇಂತಹ ಕಥಾ ಹಂದರವನ್ನು ಹೊಂದಿರುವ ಕೆಲವೇ ಕೆಲವು ಸಿನಿಮಾಗಳು ಬಂದಿವೆ. ಅದರಲ್ಲಿ 'ಗುಲ್ಟು' ಸಿನಿಮಾ ಕೂಡ ಒಂದು. ಈಗ 'ಕಪಟಿ' ಅನ್ನುವ ಸಿನಿಮಾ ಬಂದಿದೆ.

"ಕನ್ನಡದಲ್ಲಿ 'ಗುಲ್ಟು' ಸಿನಿಮಾದ ನಂತರ ಇಂತಹ ಜಾನರ್ ಸಿನಿಮಾವೇ ಬಂದಿರಲಿಲ್ಲ. ಇನ್ನು, ಕಂಟೆಂಟ್ ಓರಿಯಂಟೆಡ್ ಸಿನಿಮಾಗಳಿಂದ ಯಾವತ್ತೂ ಯಾರಿಗೂ ನಷ್ಟವಾಗಲ್ಲ ಎಂದು ನಾನು ನಂಬಿದ್ದೇನೆ. ಆದರೆ, ಸ್ವಲ್ಪ ತಾಳ್ಮೆ ಇರಬೇಕು ಅಷ್ಟೇ. ಅದಕ್ಕೆ ಉದಾಹರಣೆ ನನ್ನ ಸಿನಿಮಾಗಳು. 'ಕಪಟಿ' ಸಿನಿಮಾವನ್ನು ಇತ್ತೀಚೆಗೆ ಸ್ನೇಹಿತರ ಜೊತೆ ನೋಡಿದೆ. ಸಿನಿಮಾ ಚೆನ್ನಾಗಿ ಬಂದಿದೆ‌. ಸಿನಿಮಾ ಆಗಸ್ಟ್ 23 ರಂದು ಬಿಡುಗಡೆಯಾಗಲಿದೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ಡಾರ್ಲಿಂಗ್ ಕೃಷ್ಣ ಅವರಿಗೆ ಧನ್ಯವಾದ" ಎಂದು ನಿರ್ಮಾಪಕ ದಯಾಳ್ ಪದ್ಮನಾಭನ್ ಹೇಳಿದ್ದಾರೆ.

ಇನ್ನು 'ಕಪಟಿ' ಸಿನಿಮಾದ ನಿರ್ದೇಶಕರು ಕೂಡ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. "ಸುಮಾರು ಏಳು ವರ್ಷಗಳ ನಂತರ ನಾವಿಬ್ಬರು ಮತ್ತೆ ನಿರ್ದೇಶಿಸಿರುವ ಸಿನಿಮಾವಿದು. ಕನ್ನಡದಲ್ಲಿ ತೀರ ವಿರಳ ಎನಿಸುವಂತಹ ಸಿನಿಮಾವಿದು. ಈ ಸಿನಿಮಾದ ಕಥೆಯನ್ನು ದಯಾಳ್ ಪದ್ಮನಾಭ್‌ಗೆ ಹೇಳಿದ ತಕ್ಷಣ ಸಿನಿಮಾ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಸಿನಿಮಾ ಅದ್ಭುತವಾಗಿ ಬಂದಿದೆ" ಎಂದು ನಿರ್ದೇಶಕರಾದ ರವಿಕಿರಣ್ ಹಾಗೂ ಚೇತನ್ ಎಸ್‌ ಪಿ ತಿಳಿಸಿದ್ದಾರೆ.

Kannada actor Darling Krishna released Kapati movie teaser

ಇನ್ನುಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸುಕೃತ ವಾಗ್ಲೆ ಕೂಡ ಸಿನಿಮಾ ಬಗ್ಗೆ ಮೆಚ್ಚುಗೆ ಮಾತುಗಳನ್ನು ಮಾಡಿದ್ದಾರೆ. "ನಾನು ಚಿತ್ರರಂಗವನ್ನು ಬಿಟ್ಟು ಉಡುಪಿಯಲ್ಲಿ ಇದ್ದೆ. ಈ ಸಿನಿಮಾ ನಿರ್ದೇಶಕರು ಕಥೆ ಹೇಳಿದ್ದನ್ನು ಕೇಳಿ ಇಷ್ಟ ಆಯ್ತು. ಹೀಗಾಗಿ ಬಹು ದಿನಗಳ ಬಳಿಕ ಮತ್ತೆ ನಟಿಸಿದ್ದೇನೆ. ಈ ಸಿನಿಮಾದಲ್ಲಿ ನನ್ನ ಪಾತ್ರ ಸಿಕ್ಕಾಪಟ್ಟೆ ವಿಭಿನ್ನವಾಗಿದೆ" ಎಂದು ನಟಿ ಸುಕೃತ ವಾಗ್ಲೆ ಹೇಳಿಕೊಂಡಿದ್ದಾರೆ. ಇದರ ಜೊತೆ ದೇವ್ ದೇವಯ್ಯ ಹಾಗೂ ಸಾತ್ವಿಕ್ ಕೃಷ್ಣನ್ ಕೂಡ 'ಕಪಟಿ' ಸಿನಿಮಾದ ಬಗ್ಗೆ ಮಾತಾಡಿದ್ದಾರೆ.

More from Filmibeat

English summary
Kannada actor Darling Krishna released Kapati movie teaser
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X