ಅಪ್ಪನ ಆಸೆ ಈಡೇರಿಸಲು ಮುಂದಾದ ಜಿಮ್ ರವಿ; 101 ಜನರಿಗೆ ಕಾಶಿಯಾತ್ರೆ

ಜಿಮ್ ರವಿ ಅನ್ನೋ ಹೆಸರು ಸಿನಿಮಾರಂಗಕ್ಕಷ್ಟೇ ಅಲ್ಲ, ಸಿನಿಪ್ರಿಯರಿಗೆಲ್ಲ ಗೊತ್ತು. ಬಾಡಿ ಬಿಲ್ಡರ್ ಆಗಿ, ನಟನಾಗಿ ಗುರುತಿಸಿಕೊಂಡಿರುವ ಜಿಮ್ ರವಿ ಕನ್ನಡ ಚಿತ್ರರಂಗದಲ್ಲಿ ಚಿರಪರಿಚಿತ. ಕೋಲಾರ ಮೂಲದ ಎ.ಕೆ‌.ರವಿ ಅಥವಾ ಜಿಮ್ ರವಿ ಇತ್ತೀಚೆಗೆ 'ಪುರುಷೋತ್ತಮ' ಎಂಬ ಚಿತ್ರದಲ್ಲಿ ನಾಯಕನಾಗೂ ನಟಿಸಿದ್ದರು.

ಸಾಕಷ್ಟು ನಟರೊಂದಿಗೆ ಜಿಮ್ ರವಿಗೆ ಉತ್ತಮ ಒಡನಾಡವಿದೆ. ಕೆಲ ಸೂಪರ್‌ಸ್ಟಾರ್‌ಗಳಿಗೆ ಜಿಮ್ ರವಿ ಬಾಡಿ ಬಿಲ್ಡ್ ಮಾಡುವುದಕ್ಕೆ ಸಲಹೆಗಳನ್ನು ನೀಡಿದ್ದೂ ಇದೆ. ಸಿನಿಮಾ ಹಾಗೂ ಬಾಡಿ ಬಿಲ್ಡಿಂಗ್ ಕ್ಷೇತ್ರದ ಈ ಜನಪ್ರಿಯರ ವ್ಯಕ್ತಿ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ತನ್ನ ತಂದೆಯ ಆಸೆಯನ್ನು ಈಡೇರಿಸುವುದಕ್ಕೆ ಮುಂದಾಗಿದ್ದಾರೆ.

Kannada actor Gym Ravi is taking 101 people on a Kashi Yatra to fulfill his father s wish

ಜಿಮ್ ರವಿ ಕೇವಲ ಸಿನಿಮಾ, ಬಾಡಿ ಬಿಲ್ಡಿಂಗ್ ಅಷ್ಟೇ ಅಲ್ಲ ಸಮಾಜ ಮುಖಿ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಆದರೆ, ಇದೂವರೆಗೂ ಮಾಡಿದ ಕೆಲಸಗಳನ್ನು ಪ್ರಚಾರಕ್ಕೆ ಬಳಸಿಕೊಂಡಿಲ್ಲ. ಈಗ ಜಿಮ್ ರವಿ ಮತ್ತೊಂದು ಮಹತ್ತರವಾದ ಕಾರ್ಯಕ್ಕೆ ಮುಂದಾಗಿದ್ದಾರೆ. ತಮ್ಮ ತಂದೆಯ ಆಸೆಯಂತೆ 101 ಜನರನ್ನು ಕಾಶಿಯಾತ್ರೆ ಮಾಡಿಸುವುದಕ್ಕೆ ಹೊರಟಿದ್ದಾರೆ. ಈ ಬಗ್ಗೆ ಮಾಹಿತಿಯನ್ನು ಜಿಮ್ ರವಿ ಹಂಚಿಕೊಂಡಿದ್ದಾರೆ.

ಕೋಲಾರದಿಂದ ಬೆಂಗಳೂರಿಗೆ ಬಂದು ಟೌನ್ ಹಾಲ್‌ನಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಜಿಮ್ ರವಿ ಮೊದಲ ಬಹುಮಾನ ಗೆದ್ದಿದ್ದರು. ಹಾಗಂತ ಜಿಮ್ ರವಿಯವರದ್ದು ಆಗರ್ಭ ಶ್ರೀಮಂತ ಕುಟುಂಬವೇನು ಆಗಿರಲಿಲ್ಲ. ದಿನ ಮುದ್ದೆ ತಿನ್ನುತ್ತಿದ್ದವರಿಗೆ ಹಬ್ಬಗಳಲ್ಲಿ ಮಾತ್ರ ಅನ್ನ ತಿನ್ನುತ್ತಿದ್ದರು. ಇವರಿಗೆ ತಾಯಿಯೇ ಆದರ್ಶ. "ಒಬ್ಬರ ಸುಖಕ್ಕೆ ನೀನು ಆಗದಿದ್ದರೂ ‌ಪರವಾಗಿಲ್ಲ. ಕಷ್ಟದಲ್ಲಿ ಅವರ ಜೊತೆಗಿರು. ಹಿರಿಯರ ಮುಂದೆ ಕೈ ಕಟ್ಟಿ ನಿಲ್ಲು‌ ಅಂತ‌ ಅಮ್ಮ ಹೇಳಿಕೊಟ್ಟಿದ್ದರು. ಹೀಗೆ ಜೀವನ ಸಾಗುತ್ತಿದ್ದಾಗ ಅಮ್ಮ ನಮ್ಮನ್ನು ಬಿಟ್ಟು ಹೋದರು." ಎಂದು ಜಿಮ್ ರವಿ ಭಾವುಕರಾಗಿದ್ದಾರೆ.

ಹಾಗೇ ಜಿಮ್ ರವಿಯ ಅಮ್ಮ ನಿಧನ ಹೊಂದಿದ ಬಳಿಕ ಅಪ್ಪ ಮಗನ ಬಳಿಗೆ ಬಂದು ನಿಮ್ಮ ಅಮ್ಮನ ಸಾವಿನಿಂದ ಬಹಳ ದು:ಖವಾಗಿದೆ. ಹಾಗಾಗಿ ನನ್ನನ್ನು ಕಾಶಿ‌ಯಾತ್ರೆಗೆ ಕರೆದುಕೊಂಡು ಹೋಗು ಎಂದರು. ಆಗ ನನ್ನ ಹತ್ತಿರ ಆಗ ದುಡ್ಡು ಇರಲ್ಲ. ಆ ವೇಳೆ ತಂದೆಗೆ ಏರು ದ್ವನಿಯಲ್ಲಿ ಈಗ ಅದೆಲಾ ಆಗಲ್ಲ ಅಂದಿದ್ದರು. ಕೆಲವು ತಿಂಗಳ ನಂತರ ಮತ್ತೆ ಕೇಳಿದ್ದರು. ಆಗ ಜಿಮ್ ರವಿ ಅವರ ತಂದೆಗೆ ವಿಮಾನದಲ್ಲಿ ಕರೆದುಕೊಂಡು ಹೋಗುತ್ತೇನೆ ಅಂತ ಹೇಳಿ ಸಮಾಧಾನ ಮಾಡಿದ್ದರು.‌ ಕೆಲವು ದಿನಗಳ ನಂತರ ಅವರ ಫ್ರೆಂಡ್ಸ್ ಬಳಿಕ ಸಾಲ ಮಾಡಿ ಅಪ್ಪನ ಕಾಶಿಯಾತ್ರೆಗೆ ವಿಮಾನದ ಟಿಕೆಟ್ ಬುಕ್ ಮಾಡಿದ್ದರು.‌

"ಆ ವಿಷಯ ಅಪ್ಪನಿಗೆ ಫೋನ್ ಮಾಡು ಹೇಳುತ್ತೇನೆ. ಅವರು ಖುಷಿಯಾಗುತ್ತಾರೆ‌. ಆದರೆ, ವಿಧಿಯೇ ಬೇರೆ ಇರುತ್ತೆ‌. ನಾನು ಈ ವಿಷಯ ತಿಳಿಸಿದ ಕೆಲವೇ ಗಂಟೆಗಳಲ್ಲೇ ಅಪ್ಪ ನಮ್ಮನ್ನು ಬಿಟ್ಟು ಹೋದರು. ಅವರ ಕಾಶಿ ಯಾತ್ರೆಯ ಆಸೆಯೂ ಅವರ ಜೊತೆಗೆ ಹೋಗಿ ಬಿಟ್ಟಿತು. ಅದೇ ದಿನ ನಾನು ನಿರ್ಧಾರ ತೆಗೆದುಕೊಂಡೆ. ನಮ್ಮ ಅಪ್ಪನ ಆಸೆ ಈಡೇರಿಸಲು, ಕಾಶಿಯಾತ್ರೆ ಮಾಡಲು ಸಾಧ್ಯವಿಲ್ಲದ್ದ ಕೆಲವು ಆಸಕ್ತರಿಗೆ ನಮ್ಮ ಅಪ್ಪನ ಹೆಸರಿನಲ್ಲಿ ಕಾಶಿಯಾತ್ರೆ ಮಾಡಿಸಬೇಕು" ಎಂದು ಕೊಂಡಿದ್ದಾಗಿ ಹೇಳಿದ್ದಾರೆ.

ಜಿಮ್ ರವಿ ತಂದೆ ನಿಧನರಾಗಿ ಹದಿನಾಲ್ಕು ವರ್ಷಗಳಾಗಿದೆ. ಅಂದಿನಿಂದ ಇಲ್ಲಿವರೆಗೂ ಹುಂಡಿ ಇಟ್ಟು ದುಡ್ಡು ಕೂಡಿ ಹಾಕುತ್ತಿದ್ದರು. ಹತ್ತು, ಇಪ್ಪತ್ತು ರೂಪಾಯಿಯಿಂದ ಹಿಡಿದು ಸಾವಿರ ರೂಪಾಯಿಗಳವರೆಗೂ ಹುಂಡಿಯಲ್ಲಿ ಹಾಕುತ್ತಿದ್ದರು. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ವಾಣಿಜ್ಯ ತೆರೆಗೆ ಅಧಿಕಾರಿಗಳಾದ ಜಗನ್ನಾಥ್ ಹಾಗೂ ಕುಟುಂಬದವರ ಮಾರ್ಗದರ್ಶನದಲ್ಲಿ ಈಗ ಜುಲೈ 2 ನೇ ತಾರೀಖು ರಾಜ್ಯದ ವಿವಿಧ ಕಡೆಗಳಿಂದ ಸುಮಾರು 80 ಜನ ಅಶಕ್ತರನ್ನು ನಾನೇ ಖುದ್ದಾಗಿ ಭೇಟಿ ಮಾಡಿ ಅವರ ಜೊತೆ 101 ಜನರ ತಂಡ ಪಯಣ ಬೆಳೆಸುತ್ತಿದ್ದೇವೆ. ಅವರ ಊರಿನಿಂದ ಬರುವ ಪ್ರಯಾಣದ ವೆಚ್ಚದಿಂದ ಹಿಡಿದು ಎಲ್ಲಾ ವ್ಯವಸ್ಥೆಯನ್ನು ಜಿಮ್ ರವಿ ಮಾಡುವುದಕ್ಕೆ ಮುಮದೆ ಬಂದಿದ್ದಾರೆ.

ಜುಲೈ 2 ರ ಬೆಳಗ್ಗೆ ಬೆಂಗಳೂರಿನ ವಿಮಾನ ನಿಲ್ದಾಣದಿಂದ ಅಯೋಧ್ಯೆಯ ರಾಮ ಜನ್ಮಭೂಮಿಗೆ ಪಯಣ ಬೆಳೆಸಲಿದ್ದು, ಬಳಿಕ ಪ್ರಯಾಗರಾಜ್, ಅನಂತರ ಕಾಶಿ ಕರೆದುಕೊಂಡು ಹೋಗಲಾಗುತ್ತೆ. ಒಟ್ಟು ಮೂರು ದಿನಗಳ ಯಾತ್ರೆ ಇದಾಗಿದೆ. "ಎಲ್ಲಾ ಕಡೆ ಎಸಿ ವಾಹನ ಹಾಗೂ ಎಸಿ ಕೊಠಡಿ ವ್ಯವಸ್ಥೆ ಮಾಡಲಾಗಿದೆ‌. ನಮ್ಮ ಜೊತೆಗೆ ವೈದ್ಯರು ಹಾಗು ಸ್ವಯಸೇವಕರು ಇರುತ್ತಾರೆ. ಆಹ್ವಾನಿಸಿದ ಅತಿಥಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು." ಎಂದು ಜಿಮ್ ರವಿ ಭರವಸೆ ಕೊಟ್ಟಿದ್ದಾರೆ.

More from Filmibeat

English summary
Kannada actor Gym Ravi is taking 101 people on a Kashi Yatra to fulfill his father's wish.
Read more about: sandalwood actor kashi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X