'ಗಜಪಡೆ' ಹರ್ಷನ ಮೇಲೆ ಹೋಟೆಲ್​​ ಹುಡುಗರಿಂದ ಹಲ್ಲೆ

By Pavithra

Recommended Video

ಗಜಪಡೆ ಹರ್ಷನಿಗೆ ಯಾಕ್ ಹಿಂಗ್ ಆಯ್ತು...!! | Filmibeat Kannada

'ವರ್ಧನ', 'ಗಜಪಡೆ', 'ರಾಜಾಹುಲಿ' ಸೇರಿದಂತೆ ಸಾಕಷ್ಟು ಸಿನಿಮಾಗಳ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದ ನಟ ಹರ್ಷ ಮೇಲೆ ಹೋಟೆಲ್ ಹುಡುಗರು ಹಲ್ಲೆ ಮಾಡಿದ್ದಾರೆ.

ನಟ ಹರ್ಷ ಸ್ನೇಹಿತನ ಮದುವೆಗಾಗಿ ಮೈಸೂರಿಗೆ ತೆರಳಿದ್ದರಂತೆ. ಸ್ನೇಹಿತರ ಜೊತೆ ಮೈಸೂರಿನಿಂದ ವಾಪಸ್​ ಬರುವಾಗ ಖಾಸಗಿ ಹೋಟೆಲ್ ನಲ್ಲಿ ಊಟಕ್ಕಾಗಿ ತೆರಳಿದ್ದಾರೆ. ನಾಗಮಂಗಲದ ಬೆಳ್ಳೂರ್​ ಕ್ರಾಸ್​ ಬಳಿ ಇರುವ ಹೋಟೆಲ್ ನಲ್ಲಿ ಊಟಕ್ಕೆ ಹೋಗಿದ್ದಾರೆ.

ಊಟ ಸರ್ವ್​ ಮಾಡುವ ವಿಚಾರಕ್ಕೆ ಆರಂಭದಲ್ಲಿ ಮಾತಿನ ಚಕಮಕಿ ಶುರುವಾಗಿದೆ. ನಂತರ ಹೋಟೆಲ್​ ಹುಡುಗರು ಹಾಗು ಹರ್ಷನ ಸ್ನೇಹಿತರ ಮಧ್ಯೆ ಜೋರಾಗಿಯೇ ಗಲಾಟೆ ಆಗಿದೆ. ಮಾತು ಮಿತಿ ಮೀರಿ ಹೋಟೆಲ್​​ ಹುಡುಗರಿಂದ ನಟ ಹರ್ಷನ ಮೇಲೆ ದಾಳಿ ಮಾಡಿದ್ದಾರೆ.

kannada actor harsha attacked by hotel boys

ಹೋಟೆಲ್ ಹುಡುಗರು ಎಲ್ಲರು ಸೇರಿಕೊಂಡು ನಟ ಹರ್ಷ ಹಾಗು ಸ್ನೇಹಿತರನ್ನು ಗೃಹ ಬಂಧನದಲ್ಲಿರಿಸಿ ಟಾರ್ಚ್​ರ್ ನೀಡಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ. ನಂತರ ಹರ್ಷ ತಮ್ಮ ಮನೆಯವರಿಗೆ ಫೋನ್ ಮೂಲಕ ಈ ವಿಚಾರ ತಿಳಿಸಿದ್ದಾರೆ ನಂತರ ನಾಗಮಂಗಲಕ್ಕೆ ಬಂದ ಹರ್ಷದ ತಂದೆ ಮತ್ತು ಸಹೋದರ ಅವರನ್ನು ಅಲ್ಲಿಂದ ಬಿಡಿಸಿಕೊಂಡು ಬಂದಿದ್ದಾರೆ.

ಆದರೆ ಈ ವಿಚಾರವಾಗಿ ಎಲ್ಲಿಯೂ ದೂರು ದಾಖಲಾಗಿಲ್ಲ ಎನ್ನುವುದು ಗೊಂದಲಕ್ಕೆ ಕಾರಣವಾಗಿದೆ. ಒಟ್ಟಾರೆ ಮಾತು ಮಿತಿ ಮೀರಿ ಹಲ್ಲೆ ಆಗಿರುವುದು ನಿಜ ಎನ್ನುವುದನ್ನು ಮೂಲಗಳಿಂದ ತಿಳಿದು ಬಂದಿದೆ.

More from Filmibeat

English summary
kannada actor harsha attacked by hotel boys at mysore road.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X