ಜಗ್ಗೇಶ್ ಬಹುದಿನಗಳ ಕನಸು ಈಡೇರಿತು..!

By Suneel

ಎಲ್ಲಾ ನವರಸಗಳನ್ನು ಅರೆದು ಕುಡಿದಿರುವ ನಟ ಜಗ್ಗೇಶ್ ಅವರು ಪ್ರಸ್ತುತ ಕರ್ನಾಟಕ ಜನತೆಗೆ ತಿಳಿದಿರುವಂತೆ ಕಾಮಿಡಿ ಕಿಲಾಡಿಗಳನ್ನು ಆಯ್ಕೆ ಮಾಡುವಲ್ಲಿ ಬ್ಯುಸಿ ಆಗಿದ್ದಾರೆ. ಇದರ ಮಧ್ಯೆ ತಮ್ಮ ಬಹಳ ದಿನದ ಪರಿಶ್ರಮ ಪೂರ್ಣವಾಗಿ ಈಡೇರಿತು ಎಂದು ಹೇಳಿಕೊಂಡಿದ್ದಾರೆ.['ಮಸಾಲೆ ದೋಸೆ ಸೌಮ್ಯ' ಎಂಬ ಟೈಟಲ್ ನ ಜಗ್ಗೇಶ್ ಯಾಕ್ ರಿಜಿಸ್ಟರ್ ಮಾಡ್ಸಿದ್ರು?]

ಅದೇನಪ್ಪಾ ಅದು, ಅಂತಹ ಪರಿಶ್ರಮ. ಜಗ್ಗೇಶ್ ಅವರ ಆ ನನಸಾದ ಕನಸು ಯಾವುದು? ಎಂಬ ಪ್ರಶ್ನೆ ಎಲ್ಲರಿಗೂ ಕಾಡದೇ ಇರದು ಅಲ್ವಾ.. ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ..

ಜಗ್ಗೇಶ್ ಪರಿಶ್ರಮ ಜನತೆಗೆ ಅರ್ಪಣೆ

ಜಗ್ಗೇಶ್ ಪರಿಶ್ರಮ ಜನತೆಗೆ ಅರ್ಪಣೆ

ಕಿರುತೆರೆಯಲ್ಲಿ ಬ್ಯುಸಿ ಆಗಿರುವ ಜಗ್ಗೇಶ್ ಸಡೆನ್‌ ಆಗಿ ಒಂದು ಮಾಹಿತಿ ನೀಡಿದ್ದಾರೆ. ಅವರ ಬಹಳ ದಿನದ ಶ್ರಮವನ್ನು ಪೂರ್ಣವಾಗಿ ಜನತೆಗೆ ಅರ್ಪಣೆ ಮಾಡುತ್ತಿದ್ದಾರಂತೆ. ಜಗ್ಗೇಶ್ ಬಹಳ ದಿನಗಳ ಕಾಲ ಪರಿಶ್ರಮ ಪಟ್ಟಿದ್ದು 'ಜಗ್ಗೇಶ್ ಕನ್ವೆನ್ಷನಲ್ ಹಾಲ್' ನಿರ್ಮಾಣ ಮಾಡಲಿಕ್ಕೆ.

ಸಾರ್ವಜನಿಕರಿಗೆ ಲಭ್ಯ

ಸಾರ್ವಜನಿಕರಿಗೆ ಲಭ್ಯ

ಹೌದು, ಜಗ್ಗೇಶ್ ಅವರು 'ಜಗ್ಗೇಶ್ ಕನ್ವೆನ್ಷನಲ್ ಹಾಲ್' ಅನ್ನು ನಿರ್ಮಾಣ ಮಾಡಿದ್ದು, ಇದರ ಉದ್ಘಾಟನೆ ಜನವರಿ 29 ಕ್ಕೆ ಆಗುತ್ತಿದೆ. ನಂತರ ಸಾರ್ವಜನಿಕರಿಗೆ ಲಭ್ಯ ಎಂದು ತಿಳಿಸಿದ್ದಾರೆ.

ಜಗ್ಗೇಶ್ ಕನ್ವೆನ್ಷನಲ್ ಹಾಲ್

ಜಗ್ಗೇಶ್ ಕನ್ವೆನ್ಷನಲ್ ಹಾಲ್

ಜಗ್ಗೇಶ್ ಅವರ ಕನ್ವೆನ್ಷನಲ್ ಹಾಲ್ 500 ಜನ ಕೂರಲು ಬ್ಯಾಂಕ್ವೆಟ್ ಆಸನಗಳನ್ನು, 500 ಜನರು ಒಮ್ಮೆ ಊಟಕ್ಕೆ ಕೂರಬಹುದಾದ ಹಾಲ್ ಅನ್ನು ಹೊಂದಿದೆ. 2500 ಜನರಿಗೆ ಅಡುಗೆ ಮಾಡಲು ಸಾಮಗ್ರಿಗಳು, ವಿಶಾಲ ಅಡುಗೆ ಕೊಠಡಿ, 14 ಸುಸಜ್ಜಿತ ರೂಮ್‌ ಗಳು, ವಾಹನ ನಿಲುಗಡೆಗೆ 20,000 ಅಡಿ ಪಾರ್ಕಿಂಗ್ ವ್ಯವಸ್ಥೆ ಹೊಂದಿದೆ.

'ಜಗ್ಗೇಶ್ ಕನ್ವೆನ್ಷನಲ್ ಹಾಲ್' ವಿಳಾಸ

'ಜಗ್ಗೇಶ್ ಕನ್ವೆನ್ಷನಲ್ ಹಾಲ್' ವಿಳಾಸ

ವಿಳಾಸ ನಂ.6, 21 ನೇ ಮುಖ್ಯರಸ್ತೆ, ಕಾವೇರಿ ಬಡಾವಣೆ, ವಿಜಯನಗರ 3ನೇ ಹಂತ, ವಿಜಯನಗರ ಹೆರಿಟೇಜ್ ಕ್ಲಬ್ ಎದುರು. ಹುಣಸೂರು ರಸ್ತೆ, ಮೈಸೂರು (ಐಶ್ವರ್ಯ ಪೆಟ್ರೋಲ್ ಬಂಕ್ ಎಡ ತಿರುವು, ಜೋಡಿ ಬೇವಿನ ಮರದ ಹತ್ತಿರ ಬಲತಿರುವು).

More from Filmibeat

English summary
Kannada actor Jaggesh's Builded a Conventional Hall at Mysuru. Named 'Jaggesh Conventional Hall' Opening on January 29th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X