»   » 'ಮಸಾಲೆ ದೋಸೆ ಸೌಮ್ಯ' ಎಂಬ ಟೈಟಲ್ ನ ಜಗ್ಗೇಶ್ ಯಾಕ್ ರಿಜಿಸ್ಟರ್ ಮಾಡ್ಸಿದ್ರು?

'ಮಸಾಲೆ ದೋಸೆ ಸೌಮ್ಯ' ಎಂಬ ಟೈಟಲ್ ನ ಜಗ್ಗೇಶ್ ಯಾಕ್ ರಿಜಿಸ್ಟರ್ ಮಾಡ್ಸಿದ್ರು?

Posted By:
Subscribe to Filmibeat Kannada

'ನೀರ್ ದೋಸೆ' ಸವಿಯಲು ಪ್ರೇಕ್ಷಕರು ಥಿಯೇಟರ್ ಗಳತ್ತ ಇನ್ನೂ ಮುಗಿಬೀಳುತ್ತಿರುವಾಗಲೇ, 'ಮಸಾಲೆ ದೋಸೆ' ಬಗ್ಗೆ ನಟ ಜಗ್ಗೇಶ್ ಯೋಚನೆ ಮಾಡಿದ್ದಾರೆ.

ಅರ್ಥಾತ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ 'ಮಸಾಲೆ ದೋಸೆ ಸೌಮ್ಯ' ಅಂತ ನವರಸ ನಾಯಕ ಜಗ್ಗೇಶ್ ಟೈಟಲ್ ರಿಜಿಸ್ಟರ್ ಮಾಡಿಸಿರುವ ಸುದ್ದಿಯನ್ನ ನಿನ್ನೆಯಷ್ಟೇ ನಾವೇ ನಿಮಗೆ ಹೇಳಿದ್ವಿ. ['ನೀರ್ ದೋಸೆ' ಬಿಡಿ ಇನ್ಮುಂದೆ 'ಮಸಾಲೆ ದೋಸೆ' ತಿನ್ನೋ ಕಾಲನೂ ಬರುತ್ತೆ]

ಅಲ್ಲಿಗೆ, 'ಮಸಾಲೆ ದೋಸೆ ಸೌಮ್ಯ' ಹೆಸರಿನಲ್ಲಿ ಜಗ್ಗೇಶ್ ಸಿನಿಮಾ ಮಾಡಬಹುದು ಎಂಬ ಕುತೂಹಲ ಅವರ ಅಭಿಮಾನಿಗಳ ತಲೆಯಲ್ಲಿ ಕೊರೆಯುತ್ತಿತ್ತು. ಆ ಕುತೂಹಲಕ್ಕೆ ಖುದ್ದು ಜಗ್ಗೇಶ್ ಈಗ ಬ್ರೇಕ್ ಹಾಕಿದ್ದಾರೆ. ಮುಂದೆ ಓದಿ.....

'ಮಸಾಲೆ ದೋಸೆ ಸೌಮ್ಯ' ಬಗ್ಗೆ ಕ್ಲಾರಿಟಿ ಕೊಟ್ಟ ಜಗ್ಗೇಶ್

'ಮಸಾಲೆ ದೋಸೆ ಸೌಮ್ಯ' ಎಂಬ ಶೀರ್ಷಿಕೆಯನ್ನ ಫಿಲ್ಮ್ ಚೇಂಬರ್ ನಲ್ಲಿ ನಟ ಜಗ್ಗೇಶ್ ನೋಂದಣಿ ಮಾಡಿಸಿದ್ದು ಯಾಕೆ ಅಂತ ಖುದ್ದು ಅವರೇ ವಿವರಣೆ ನೀಡಿದ್ದಾರೆ.

ನಮ್ಮ ಟ್ವೀಟ್ ನ ರೀಟ್ವೀಟ್ ಮಾಡಿ ವಿವರಣೆ ನೀಡಿದ ಜಗ್ಗೇಶ್

'ಮಸಾಲೆ ದೋಸೆ ಸೌಮ್ಯ' ಎಂಬ ಟೈಟಲ್ ನ ಜಗ್ಗೇಶ್ ರಿಜಿಸ್ಟರ್ ಮಾಡಿಸಿದ್ದಾರೆ ಎಂಬ ವರದಿ ಆಧರಿಸಿ ಒನ್ಇಂಡಿಯಾ ಕನ್ನಡ/ಫಿಲ್ಮಿಬೀಟ್ ಕನ್ನಡ ಮಾಡಿದ್ದ ಟ್ವೀಟ್ ನ ಜಗ್ಗೇಶ್ ರೀಟ್ವೀಟ್ ಮಾಡಿ, ಅದಕ್ಕೆ ವಿವರಣೆ ನೀಡಿದ್ದಾರೆ.

ಟೈಟಲ್ ನಲ್ಲಿ ಕಿಕ್ ಇದೆ.!

''ಮಸಾಲೆ ದೋಸೆ ಸೌಮ್ಯ'...ಟೈಟಲ್ ನಲ್ಲಿ ಕಿಕ್ ಇದೆ. ಯಾರೋ ಈ ಟೈಟಲ್ ಹಿಡಿಯುವ ಸೂಚನೆ ಸಿಕ್ತು. ನಮ್ದು ನಮ್ಮ ಹತ್ರನೇ ಇರಲಿ ಅಂತ ರಿಜಿಸ್ಟರ್ ಮಾಡಿಸಿದೆ'' ಅಂತ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಯಾಕ್ಬೇಕು? ಒತ್ತಿದೆ!

''ಒಮ್ಮೊಮ್ಮೆ ನಮಗರಿಯದೆ ಕೆಲ ಚಿತ್ರದ ಮಾತುಗಳು ಟೈಟಲ್ ಗೆ ಸೂಕ್ತವಾಗಿಬಿಡುತ್ತದೆ. ಯಾರು ಮೊದಲು ಬೆಲ್ ಒತ್ತುತ್ತಾನೆ, ಅವನೇ ಬುದ್ಧಿವಂತ. ನೋಡ್ದೆ ಯಾಕ್ಬೇಕು! ಕಿಕ್ ಇದೆ ಒತ್ತಿದೆ!!'' ಅಂತ ಜಗ್ಗೇಶ್ ಮತ್ತೊಂದು ಟ್ವೀಟ್ ಕೂಡ ಮಾಡಿದ್ದಾರೆ.

ಸಿನಿಮಾ ಮಾಡ್ತಾರಾ?

ಸದ್ಯಕ್ಕೆ ಟೈಟಲ್ ಬಗ್ಗೆ ಮಾತ್ರ ವಿವರಣೆ ನೀಡಿದ್ದಾರೆ ಹೊರತು, ಅದೇ ಟೈಟಲ್ ನಡಿ ಸಿನಿಮಾ ಮಾಡುವ ಸೂಚನೆಯನ್ನ ಜಗ್ಗೇಶ್ ನೀಡಿಲ್ಲ. ಹೀಗಾಗಿ ಈಗಲೇ ಅಂತೆ-ಕಂತೆ ಪುರಾಣಗಳು ಬೇಡ.

ಟೈಟಲ್ ಯಾವಾಗ ರಿಜಿಸ್ಟರ್ ಆಗಿತ್ತು?

'ನೀರ್ ದೋಸೆ' ಸಿನಿಮಾ ಬಿಡುಗಡೆ ಆದ ದಿನವೇ ಗುರುರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಪರಿಮಳ ಜಗ್ಗೇಶ್ ಅವರು, ದಂಪತಿ ಸಮೇತ ಹೋಗಿ 'ಮಸಾಲೆ ದೋಸೆ ಸೌಮ್ಯ' ಎಂಬ ಶೀರ್ಷಿಕೆ ನೋಂದಾಯಿಸಿ ಬಂದಿದ್ದರು.

English summary
Kannada Actor Jaggesh has taken his twitter account to clarify as to why he registered a title called 'Masala Dose Soumya' in KFCC.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada