»   » ಗೋಹತ್ಯೆ ಬಗ್ಗೆ ನಟ ಜಗ್ಗೇಶ್ ಏನು ಹೇಳಿದರು ಗೊತ್ತಾ.?

ಗೋಹತ್ಯೆ ಬಗ್ಗೆ ನಟ ಜಗ್ಗೇಶ್ ಏನು ಹೇಳಿದರು ಗೊತ್ತಾ.?

Posted By: ಒನ್ಇಂಡಿಯಾ ಪ್ರತಿನಿಧಿ
Subscribe to Filmibeat Kannada

ಸದ್ಯಕ್ಕೆ ದೇಶದೆಲ್ಲೆಡೆ ಗೋಹತ್ಯೆ ಕುರಿತು ಚರ್ಚೆ ನಡೆಯುತ್ತಿದೆ. ಟ್ವಿಟ್ಟರ್ ಮತ್ತು ಫೇಸ್ ಬುಕ್ಕಿನಲ್ಲೂ ಕೂಡ ಇದರ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕೆಲವು ಸೆಲಿಬ್ರಿಟಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲಿ ನವರಸ ನಾಯಕ ಜಗ್ಗೇಶ್ ಕೂಡ ಒಬ್ಬರು.

ಅರೋನ್ ಅಬ್ರಹಾಂ ಎನ್ನುವರು ''ಮತ್ತೊಬ್ಬರ ಆಹಾರಪದ್ಧತಿಯನ್ನು ನೆಪವಾಗಿಟ್ಟುಕೊಂಡು ಮತ್ತೊಬ್ಬರನ್ನು ಏಕೆ ನೋಯಿಸುತ್ತೀರಿ? ಸತ್ತ ಹಸುವಿನಿಂದ ತಯಾರಿಸಿದ ಪದಾರ್ಥಗಳನ್ನು ನಿಮಗೆ ಬಳಸದೆ ಇರಲು ಸಾಧ್ಯವೇ?'' ಎಂದು ಟ್ವೀಟ್ ಮಾಡಿದ್ದರು. [ಬಾಂಬ್ ಹಾಕಿದ್ದು ಬುಲೆಟ್ ಪ್ರಕಾಶ್, ಖಡಕ್ ಉತ್ತರ ಕೊಟ್ಟಿದ್ದು ಜಗ್ಗೇಶ್.!]

Kannada Actor Jaggesh speaks about Cow Slaughter ban

ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ನಟ ಜಗ್ಗೇಶ್, "ಸಾಹೇಬ್ರೆ, ತಾಳ್ಮೆಯಿರಲಿ. ಬಹುಸಂಖ್ಯಾತ ಭಾವನೆಗೆ ಪ್ರಶ್ನೆ ಬೇಡ. ನಮ್ಮದು ಶಾಂತಿ ಸಂಸ್ಕೃತಿ ಮೂಲಮಂತ್ರ ಬೋಧಿಸಿದ ಸನಾತನದೇಶ. ನಮ್ಮ ನಡೆ ನಮ್ಮ ಸಂಸ್ಕೃತಿಯ ಬಗ್ಗೆ ವಿಶ್ವ ಮೆಚ್ಚಿದೆ" ಎಂದು ಹೇಳಿದ್ದಾರೆ.

ಇದರ ಜೊತೆ ಮತ್ತೊಬ್ಬರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಜಗ್ಗೇಶ್, ''ಪ್ರಚಾರ ಪ್ರಿಯರು! ಜನ್ಮಕೊಟ್ಟವರನ್ನೇ ಕೊಲ್ಲೋ ಕಲಿಗಾಲದಲ್ಲಿ ಹಾಲು ಕೊಡೋ ಹಸು ಯಾವ ಲೆಕ್ಕ ಅವರಿಗೆ. ಪಾಪದಕೊಡ ತುಂಬಲಿ. ಬೇಡಿದರು ಅಂತವರ ರಕ್ಷಿಸಲು ಯಾರು ಇರೋಲ್ಲಾ. ಪಾಪಿಚಿರಾಯು!'' ಎಂದು ಭಾವುಕರಾಗಿ ಉತ್ತರಿಸಿದ್ದಾರೆ.[ಗೋಹತ್ಯೆ ಮಾಡುವುದು ಕೆಂಪೇಗೌಡರನ್ನು ಅವಮಾನಿಸಿದಂತೆ]

ಮೊದಲಿನಿಂದಲೂ ಸಾಮಾಜಿಕ ಸಮಸ್ಯೆಗಳಿಗೆ ತಮ್ಮ ಟ್ವೀಟ್ ಮೂಲಕ ಉತ್ತರಿಸುತ್ತಿರುವ ಜಗ್ಗೇಶ್, ಈಗ ಗೋಹತ್ಯೆಯ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ಇದರ ಬಗ್ಗೆ ಉಳಿದ ಸೆಲಿಬ್ರಿಟಿಗಳು ಏನು ಹೇಳುತ್ತಾರೋ ಕಾಡು ನೋಡಬೇಕು...

English summary
Kannada Actor Jaggesh has reacted in Twitter about Cow Slaughter ban in India.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada