For Quick Alerts
  ALLOW NOTIFICATIONS  
  For Daily Alerts

  ಬಾಂಬ್ ಹಾಕಿದ್ದು ಬುಲೆಟ್ ಪ್ರಕಾಶ್, ಖಡಕ್ ಉತ್ತರ ಕೊಟ್ಟಿದ್ದು ಜಗ್ಗೇಶ್.!

  By Naveen
  |

  ನಿನ್ನೆ (ಮೇ 23) ಬುಲೆಟ್ ಪ್ರಕಾಶ್ ಸಿಡಿಸಿದ್ದ ಟ್ವೀಟ್ ಬಾಂಬ್ ಗಳು ಗಾಂಧಿನಗರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಠಿಸಿತ್ತು.

  ''ಕನ್ನಡದ ದೊಡ್ಡ ನಟನ ಸಣ್ಣತನವನ್ನು ನಿಮಗೆ ಪರಿಚಯ ಮಾಡಿಸುತ್ತೇನೆ, ಚಿತ್ರರಂಗದಲ್ಲಿನ ಮನಸ್ತಾಪ, ಗುಂಪುಗಾರಿಕೆ ಭಿನ್ನಾಭಿಪ್ರಾಯಕ್ಕೆ ಕಾರಣ ಯಾರು ಅಂತ ಮಾಧ್ಯಮಗಳಿಗೆ ನಾಳೆ ಹೇಳ್ತೀನಿ'' ಅಂತ ಬುಲೆಟ್ ಪ್ರಕಾಶ್ ನಿನ್ನೆ ಟ್ವೀಟ್ ಮಾಡಿದ್ದರು.[ದೊಡ್ಡ ನಟನ ಸಣ್ಣತನ ಇಂದು ಬಯಲು: ಬುಲೆಟ್ ಪ್ರಕಾಶ್ ರಿಂದ ಮಹಾ ಸ್ಫೋಟ.!]

  ನಿನ್ನೆ ಟ್ವೀಟ್ ಮಾಡಿ ಬಾಂಬ್ ಹಾಕಿ ಇಂದು ಸೈಲೆಂಟ್ ಆಗಿ ಯೂ ಟರ್ನ್ ಹೊಡೆದು ಬಿಟ್ಟಿದ್ದಾರೆ ಬುಲೆಟ್ ಪ್ರಕಾಶ್. ಇದರ ನಡುವೆಯೇ ನವರಸ ನಾಯಕ ಜಗ್ಗೇಶ್ ಬುಲೆಟ್ ಮಾತಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ. ಮುಂದೆ ಓದಿ....

  ಅಭಿಮಾನಿಯ ಪ್ರಶ್ನೆ

  ಅಭಿಮಾನಿಯ ಪ್ರಶ್ನೆ

  ಬುಲೆಟ್ ಪ್ರಕಾಶ್ ವಿಷಯವನ್ನು ಅಭಿಮಾನಿಯೊಬ್ಬರು ಟ್ವಿಟ್ಟರ್ ನಲ್ಲಿ ಜಗ್ಗೇಶ್ ಗೆ ಪ್ರಶ್ನಿಸಿದ್ದರು. ಚಿತ್ರರಂಗದ ಗುಂಪುಗಾರಿಕೆ ಬಗ್ಗೆ, ದೊಡ್ಡ ನಟನ ಬಗ್ಗೆ ಬುಲೆಟ್ ಪ್ರಕಾಶ್ ಆಡಿದ ಮಾತಿಗೆ ನೀವೇನು ಹೇಳುತ್ತೀರಾ ಎಂದು ಅಭಿಮಾನಿಯೊಬ್ಬರು ಜಗ್ಗೇಶ್ ಗೆ ಕೇಳಿದ್ದರು. ಆಗ ಜಗ್ಗೇಶ್ ಕೊಟ್ಟ ಉತ್ತರ...

  ಜಗ್ಗೇಶ್ ಉತ್ತರ

  ಜಗ್ಗೇಶ್ ಉತ್ತರ

  ಅಭಿಮಾನಿಯ ಪ್ರಶ್ನೆಗೆ ನಟ ಜಗ್ಗೇಶ್ ಟ್ವಿಟ್ಟರ್ ನಲ್ಲಿ ಉತ್ತರಿಸಿದ್ದಾರೆ. ಚಿತ್ರರಂಗದ ಇಂದಿನ ಸ್ಥಿತಿಯನ್ನು ಕೇಳಿಸಿಕೊಂಡು ನಾನು ನಗುತ್ತೇನೆ ಅಂತ ಹೇಳಿದ್ದಾರೆ.[ಬುಲೆಟ್ ಪ್ರಕಾಶ್ ಸಿಡಿಸಿದ 'ಬಾಂಬ್' ಬೆಳಗಾಗುವಷ್ಟರಲ್ಲಿ 'ಠುಸ್' ಆಯ್ತು]

  ಎಲ್ಲರ ನಡೆ ಕಂಡಿದ್ದೇನೆ

  ಎಲ್ಲರ ನಡೆ ಕಂಡಿದ್ದೇನೆ

  ''34 ವರ್ಷ ನಾನು ಚಿತ್ರರಂಗದಲ್ಲಿ ನಡೆದು ಬಂದಿದ್ದೇನೆ. ಬಹುತೇಕರ ಬದುಕಿನ ಗುಣ, ನಡತೆ, ನಡೆದು ಬಂದ ಹಾದಿ ನಾನು ಕಂಡಿದ್ದೇನೆ'' - ಜಗ್ಗೇಶ್, ನಟ

  ಮೌನ

  ಮೌನ

  ''ಅಂದಿನವರ ಒಗ್ಗಟ್ಟು, ಇಂದಿನವರ ವೈಯಕ್ತಿಕ ನಡೆ ನೋಡಿ ಸಾಕಾಗಿ ಮೌನ'' - ಜಗ್ಗೇಶ್, ನಟ

  ಜಗ್ಗೇಶ್ ಮಾತಿನ ಅರ್ಥ ಏನು?

  ಜಗ್ಗೇಶ್ ಮಾತಿನ ಅರ್ಥ ಏನು?

  ಇದನ್ನೆಲ್ಲ ಕೇಳಿಸಿಕೊಂಡು ನಾನು ನಗುತ್ತೇನೆ. ನಾನು ಚಿತ್ರರಂಗದಲ್ಲಿ 34 ವರ್ಷ ಕಳೆದಿದ್ದು, ಅನೇಕರ ನಡತೆ ಕಂಡಿದ್ದೇನೆ. ಅಂದಿನ ಕಾಲದಲ್ಲಿ ಚಿತ್ರರಂಗದಲ್ಲಿ ಒಗ್ಗಟ್ಟು ಇತ್ತು. ಆದರೆ ಇಂದಿನವರ ವೈಯಕ್ತಿಕ ನಡೆ ನೋಡಿ ಮೌನವಾಗಿರಬೇಕು ಎಂಬುದು ಜಗ್ಗೇಶ್ ರವರ ಮಾತಿನ ಅರ್ಥ.

  English summary
  Kannada Actor Jaggesh has taken his twitter account to express his opinion on Bullet Prakash tweet controversy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X