ಫ್ಯಾಷನ್ ಡಿಸೈನರ್ ಜೊತೆ ಎಂಗೇಜ್ ಆದ್ರಾ ಜೆಕೆ? ಇನ್‌ಸ್ಟಾಗ್ರಾಂ ಪೋಸ್ಟ್ ಹೇಳಿದ್ದೇನು?

ಸ್ಯಾಂಡಲ್‌ವುಡ್ ನಟ ಜೆಕೆ (ಜಯರಾಂ ಕಾರ್ತಿಕ್) ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಎರಡು ದಿನಗಳ ಹಿಂದಷ್ಟೇ ನಟ ಜೆಕೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಕಿರುತೆರೆ ಹಾಗೂ ಸಿನಿಮಾ ಎರಡರಲ್ಲೂ ನಟಿ ಜನಪ್ರಿಯರಾಗಿರೋ ನಟನಿಗೆ ಅಭಿಮಾನಿಗಳು, ಹಿತೈಶಿಗಳು ಶುಭಕೋರಿದ್ದರು.

ಆದರೆ, ಈ ಮಧ್ಯೆ ಒಂದು ಪೋಸ್ಟ್ ಮಾತ್ರ ನೆಟ್ಟಿಗರಿಗೆ ವಿಶೇಷವಾಗಿ ಕಂಡಿದೆ. ಗೆಳತಿ ಕಮ್ ಫ್ಯಾಷನ್ ಡಿಸೈನರ್ ಅರ್ಪಣಾ ಸಮಂತಾ ಮಾತ್ರ ವಿಶೇಷವಾಗಿ ಶುಭಕೋರಿದ್ದರು. ಜೊತೆ ಎರಡು ಫೋಟೊಗಳನ್ನೂ ಶೇರ್ ಮಾಡಿದ್ದರು. ಇದೇ ಫೋಸ್ಟ್ ಬಗ್ಗೆ ಕಳೆದ ಎರಡು ದಿನಗಳಿಂದ ಚರ್ಚೆಯಾಗುತ್ತಿದೆ.

Kannada Actor Karthik Jayaram engaged with fashion designer Aparna Samantha

ಜೆಕೆ ಕನ್ನಡದಲ್ಲಷ್ಟೇ ಅಲ್ಲ.. ಹಿಂದಿಯ ಕಿರುತೆರೆಯಲ್ಲೂ ಮಿಂಚಿದ್ದಾರೆ. ಎರಡೂ ಭಾಷೆಯ ಧಾರಾವಾಹಿಗಳಲ್ಲೂ ನಟಿಗೆ ಅಭಿಮಾನಿಗಳ ಮನಗೆದ್ದಿದ್ದಾರೆ. ಹೀಗಾಗಿ ಜೆಕೆ ಮದುವೆ ಬಗ್ಗೆ ಅವರ ಅಭಿಮಾನಿಗಳಿಗೆ ಕುತೂಹಲ. ಅಲ್ಲದೆ ಆಗಾಗ ಇನ್‌ಸ್ಟಾಗ್ರಾಂನಲ್ಲಿ ಜೆಕೆ ಹಾಗೂ ಅಪರ್ಣಾ ಸಮಂತಾ ಇಬ್ಬರೂ ಜೊತೆಗಿರುವ ಫೋಟೊಗಳನ್ನು ಶೇರ್ ಮಾಡುತ್ತಿದ್ದರು. ಹೀಗಾಗಿ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡಿತ್ತು.

ಇದೇ ವಿಚಾರವಾಗಿ ಕೆಲವು ತಿಂಗಳ ಹಿಂದಷ್ಟೇ ಜೆಕೆ ಹಾಗೂ ಅಪರ್ಣಾ ಸಮಂತಾ ಲವ್ ಸ್ಟೋರಿ ಬಗ್ಗೆ ಗುಲ್ಲೆದ್ದಿತ್ತು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದು, ಶೀಘ್ರದಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಅನ್ನೋ ಮಾತು ಕೇಳಿ ಬಂದಿತ್ತು. ಆದರೆ, ಆಗ ಜೆಕೆ ಈ ವಿಷಯವನ್ನು ತಿರಸ್ಕರಿಸಿದ್ದರು. ಜೊತೆಗೆ ಸುಳ್ಳು ಸುದ್ದಿ ಅಂತ ಬೇಸರ ವ್ಯಕ್ತಪಡಿಸಿದ್ದರು.

ಈಗ ಮತ್ತೆ ಇವರಿಬ್ಬರ ಡೇಟಿಂಗ್ ವಿಷಯ ಚರ್ಚೆಯಾಗುತ್ತಿದೆ. ಮೇ 1ರಂದು ಜಯರಾಂ ಕಾರ್ತಿಕ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆ ದಿನ ಅಪರ್ಣಾ ಸಮಂತಾ ತಮ್ಮ ಇನ್‌ಸ್ಟಾಗ್ರಾಂ ಎರಡು ಫೋಟೊಗಳನ್ನು ಶೇರ್ ಮಾಡಿ, ಪೋಸ್ಟ್ ಮಾಡಿದ್ದರು. ಈಗ ಅದೇ ಪೋಸ್ಟ್ ಇಬ್ಬರು ಪ್ರೀತಿಯಲ್ಲಿ ಬಿದ್ದಿರೋ ಬಗ್ಗೆ ಅಧಿಕೃತವಾಗಿ ಸುಳಿವು ಸಿಕ್ಕಂತಾಗಿದೆ.

ಅಪರ್ಣಾ ಸಮಂತಾ ಇನ್‌ಸ್ಟಾಗ್ರಾಂನಲ್ಲಿ " ನನ್ನ ಪ್ರೀತಿಗೆ ಹ್ಯಾಪಿ ಬರ್ತ್‌ಡೇ.. ಅತೀ ಹೆಚ್ಚು ಪ್ರೀತಿಸುವ ಬಾಯ್‌ಫ್ರೆಂಡ್ ಹಾಗೂ ಸ್ನೇಹಿತನಾಗಿದ್ದಕ್ಕೆ ಧನ್ಯವಾದಗಳು." ಎಂದು ಬರೆದುಕೊಂಡಿದ್ದರು. ಇದನ್ನೇ ನೋಡಿ ಇಬ್ಬರೂ ಡೇಟಿಂಗ್ ಮಾಡುತ್ತಿರೋದು ಪಕ್ಕಾ ಎಂದು ಹೇಳುತ್ತಿದ್ದಾರೆ. ಆದರೆ, ಜೆಕೆ ಅಧಿಕೃತವಾಗಿ ತಮ್ಮ ಡೇಟಿಂಗ್ ವಿಷಯ ಬಹಿರಂಗ ಪಡಿಸುವವರೆಗೂ ಏನೂ ಹೇಳುವಂತಿಲ್ಲ.

ಜಯರಾಂ ಕಾರ್ತಿಕ್ ಕನ್ನಡ ಕಿರುತೆರೆ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು. 'ಅಶ್ವಿನಿ ನಕ್ಷತ್ರ' ಜೆಕೆಗೆ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಬಳಿಕ ಬಿಗ್ ಬಾಸ್ ಮೂಲಕ ಮತ್ತಷ್ಟು ಜನಪ್ರಿಯರಾದರು. ಕನ್ನಡದ ಜೊತೆ ಜೊತೆಗೆ ಹಿಂದಿ ಧಾರಾವಾಹಿಗಳಲ್ಲೂ ನಟಿಸಿ ಜನಮನಗೆದ್ದಿದ್ದಾರೆ. ಹಿಂದಿ ಕಿರುತೆರೆಯಲ್ಲಿ ರಾವಣ ಅವತಾರದಲ್ಲಿ ಜನಪ್ರಿಯರಾಗಿದ್ದಾರೆ.

More from Filmibeat

English summary
Kannada Actor Karthik Jayaram engaged with fashion designer Aparna Samantha, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X